ಯುಪಿಎಸ್ಸಿ ಮೈನ್ ಫಲಿತಾಂಶ ಪ್ರಕಟ: ಆದಿತ್ಯ ಶ್ರೀವಾಸ್ತವಗೆ ಪ್ರಥಮ ಸ್ಥಾನ, ಅನಿಮೇಶ್ ಪ್ರಧಾನ್ ದ್ವಿತೀಯ
Photo credit: ThePrint
ಹೊಸದಿಲ್ಲಿ: ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ಸಿ) ಮೈನ್ 2023 ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು. ಆದಿತ್ಯ ಶ್ರೀವಾಸ್ತವ ಮತ್ತು ಅನಿಮೇಶ್ ಪ್ರಧಾನ್ ಅವರು ಅಖಿಲ ಭಾರತ ಮಟ್ಟದಲ್ಲಿ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಿಗಳಾಗಿದ್ದಾರೆ. ತೃತೀಯ ಸ್ಥಾನದಲ್ಲಿ ದೊನುರು ಅನನ್ಯ ರೆಡ್ಡಿ ಅವರಿದ್ದಾರೆ.
ಒಟ್ಟು 1016 ಅಭ್ಯರ್ಥಿಗಳು ಈ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ನೇಮಕಾತಿಗೆ ಅರ್ಹರಾಗಿದ್ದಾರೆ. ಅರ್ಹಗೊಂಡವರಲ್ಲಿ 347 ಸಾಮಾನ್ಯ ವರ್ಗಗಳ ಅಭ್ಯರ್ಥಿಗಳು, 116 ಆರ್ಥಿಕವಾಗಿ ಹಿಂದುಳಿದ ಅಭ್ಯರ್ಥಿಗಳು, 303 ಒಬಿಸಿ, 165 ಪರಿಶಿಷ್ಟ ಜಾತಿ ಮತ್ತು 86 ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿದ್ದಾರೆ.
ಫಲಿತಾಂಶವನ್ನು ಆಯೋಗದ ಅಧಿಕೃತ ವೆಬ್ಸೈಟ್ upsc.gov.in. ನಲ್ಲಿ ನೋಡಬಹುದಾಗಿದೆ.
ಯುಪಿಎಸ್ಸಿ ಮೈನ್ ಪರೀಕ್ಷೆ ಕಳೆದ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ನಡೆದಿತ್ತು.
Next Story