ಸಿಬ್ಬಂದಿ ಮುಖ್ಯಸ್ಥನನ್ನು ಲೈಂಗಿಕ ಜೀತವಾಗಿ ಬಳಸಿಕೊಂಡ ಅಮೆರಿಕ ಸೆನೆಟ್ ಸದಸ್ಯೆ: ದೂರು ದಾಖಲು
PC:x.com/64Cardinal3
ವಾಷಿಂಗ್ಟನ್: ವಿವಾಹಿತ ಪುರುಷನಾದ ಸಿಬ್ಬಂದಿ ಮುಖ್ಯಸ್ಥನನ್ನು ಲೈಂಗಿಕ ಜೀತಕ್ಕೆ ಬಳಸಿಕೊಂಡ ಆರೋಪ ಹೊರಿಸಿ ಕ್ಯಾಲಿಫೋರ್ನಿಯಾ ರಾಜ್ಯ ಸೆನೆಟ್ ಸದಸ್ಯೆ ಮೇರಿ ಅಲ್ವರಡೊ ಗಿಲ್ ವಿರುದ್ಧ ದಾವೆ ಹೂಡಲಾಗಿದೆ. ಗಿಲ್ ಅವರ ಸಿಬ್ಬಂದಿ ಮುಖ್ಯಸ್ಥರಾಗಿ ಸೇವೆಯಲ್ಲಿದ್ದ ಅವಧಿಯಲ್ಲಿ ಚಡ್ ಕಾಂಡಿಟ್ ಎಂಬ ವ್ಯಕ್ತಿ ಈ ದಾವೆ ಹೂಡಿದ್ದು, ಅನಪೇಕ್ಷಿತ ಲೈಂಗಿಕತೆ ಮತ್ತು ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ.
"ನನ್ನ ಉದ್ಯೋಗ ಭದ್ರತೆಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ಹಲವು ವರ್ಷಗಳಿಂದ ಅನಪೇಕ್ಷಿತ ಲೈಂಗಿಕ ಚಟುವಟಿಕೆಗಳಲ್ಲಿ ನನ್ನನ್ನು ತೊಡಗಿಸಿಕೊಳ್ಳಲಾಗಿದ್ದು, ಈ ಬಗ್ಗೆ ತೀರಾ ಒತ್ತಡದ ಅನುಭವ ನನಗಾಗುತ್ತಿತ್ತು. ಮುಖ ಮೈಥುನ (ಓರಲ್ ಸೆಕ್ಸ್) ಬಗ್ಗೆ ಒಲವು ಹೊಂದಿದ್ದ ಗಿಲ್, ಇದನ್ನು ಅಧಿಕಾರದ ದರ್ಪವಾಗಿ ಬಳಸಿಕೊಂಡಿದ್ದರು ಎಂದು ಆಪಾದಿಸಿದ್ದಾರೆ. ಉದ್ಯೋಗಿ ಕಳೆದುಕೊಂಡ ವೇತನ, ದುಡಿಯುವ ಸಾಮರ್ಥ್ಯ ನಷ್ಟ, ಉದ್ಯೋಗಿ ಪ್ರಯೋಜನಗಳು ಮತ್ತು ಭಾವನಾತ್ಮಕ ಒತ್ತಡಗಳಿಗೆ ಹಣಕಾಸು ಪರಿಹಾರವನ್ನು ಕೋರಿದ್ದಾರೆ.
ಅಧಿಕಾರ ಮತ್ತು ಪ್ರಭುತ್ವವನ್ನು ದುರುಪಯೋಗಪಡಿಸಿಕೊಂಡ ಗಿಲ್, ಅಶ್ಲೀಲ, ನಿಯಂತ್ರಣ ಮತ್ತು ಲೈಂಗಿಕ ಪ್ರಾಬಲ್ಯದ ಕಿರುಕುಳ ನೀಡುತ್ತಿದ್ದರು ಎಂದು ಸೆಕ್ರೆಮೆಂಟೊ ಕೌಂಟಿ ಸುಪೀರಿಯರ್ ಕೋರ್ಟ್ ನಲ್ಲಿ ಹೂಡಿದ ದಾವೆಯಲ್ಲಿ ಆಪಾದಿಸಲಾಗಿದೆ.
ಸೆನೆಟ್ ಸದಸ್ಯೆ ವಾಹನದಲ್ಲೂ ಸೇರಿದಂತೆ ಸಿಬ್ಬಂದಿ ಮುಖ್ಯಸ್ಥನಿಂದ ಪದೇ ಪದೇ ಮುಖ ಮೈಥುನಕ್ಕೆ ಆಗ್ರಹಿಸುತ್ತಿದ್ದರು. ಇದು ಬೆನ್ನಿನ ಗಾಯಕ್ಕೂ ಕಾರಣವಾಗಿದೆ ಎಂದು ಹೇಳಿದ್ದಾರೆ. ಬೆನ್ನು ನೋವನ್ನೇ ನೆಪವಾಗಿಟ್ಟುಕೊಂಡು ಸೆನೆಟರ್ ನ ಲೈಂಗಿಕ ಬಯಕೆಗಳನ್ನು ನಿರಾಕರಿಸುತ್ತಿದ್ದೆ. ಆದರೆ ಅಸಮರ್ಪಕ ನಡವಳಿಕೆ ಆರೋಪದಲ್ಲಿ ಶಿಸ್ತು ಕ್ರಮದ ನೋಟಿಸ್ ನೀಡಿದ್ದರು ಎಂದು ಹೇಳಲಾಗಿದೆ.