ಬಜೆಟ್ 2025 | ಯಾವುದು ಅಗ್ಗ, ಯಾವುದು ದುಬಾರಿ?

ಹೊಸದಿಲ್ಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಸಂಸತ್ತಿನಲ್ಲಿ ಸತತ ಎಂಟನೇ ಬಾರಿಗೆ ಕೇಂದ್ರ ಮುಂಗಡಪತ್ರವನ್ನು ಮಂಡಿಸಿದ್ದಾರೆ. ಇದರೊಂದಿಗೆ ಅವರು ಅತ್ಯಂತ ಹೆಚ್ಚಿನ,10 ಮುಂಗಡಪತ್ರಗಳನ್ನು ಮಂಡಿಸಿರುವ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿಯವರ ದಾಖಲೆಯನ್ನು ಸಮೀಪಿಸಿದ್ದಾರೆ.
ಸೀತಾರಾಮನ್ ಅವರು ಕೆಲವು ವಸ್ತುಗಳ ಮೇಲಿನ ತೆರಿಗೆಗಳನ್ನು ಹೆಚ್ಚಿಸಿದ್ದರೆ ಕೆಲವು ವಸ್ತುಗಳ ಮೇಲಿನ ತೆರಿಗೆಗಳನ್ನು ಇಳಿಸಿದ್ದಾರೆ.
ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇ.6ಕ್ಕೆ ಮತ್ತು ಪ್ಲಾಟಿನಂ ಮೇಲೆ ಶೇ.6.4ಕ್ಕೆ ಇಳಿಸಲಾಗಿದೆ.
ಯಾವುದು ಅಗ್ಗ?
►ಮೊಬೈಲ್ ಫೋನ್‌ಗಳು: ಮೊಬೈಲ್ ಫೋನ್ ಬ್ಯಾಟರಿ ಉತ್ಪಾದನೆಯಲ್ಲಿ ಬಳಕೆಯಾಗುವ 28 ಹೆಚ್ಚುವರಿ ಸರಕುಗಳನ್ನು ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಗೆ ಸೇರಿಸಲಾಗಿದೆ.
►ಔಷಧಿ: ಇನ್ನೂ 37 ಔಷಧಿಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ತೆಗೆದುಹಾಕಲಾಗಿದೆ.
►ಜೀವರಕ್ಷಕ ಔಷಧಿಗಳು: ಕ್ಯಾನ್ಸರ್ ಮತ್ತು ಅಪರೂಪದ ಕಾಯಿಲೆಗಳ ಚಿಕಿತ್ಸೆಯಲ್ಲಿ ಬಳಸುವ 36 ಔಷಧಿಗಳಿಗೂ ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ.
►ಕಚ್ಚಾ ವಸ್ತುಗಳು: ಕೋಬಾಲ್ಟ್ ಉತ್ಪನ್ನಗಳು,ಎಲ್‌ಇಡಿ,ಸೀಸ,ಸತುವು,ಲೀಥಿಯಂ-ಅಯಾನ್ ಬ್ಯಾಟರಿ ಸಕ್ಯೆಾಪ್ ಮತ್ತು 12 ಪ್ರಮುಖ ಖನಿಜಗಳು
►ಹಡಗು ನಿರ್ಮಾಣ: ಹಡಗು ನಿರ್ಮಾಣದಲ್ಲಿ ಬಳಕೆಯಾಗುವ ಕಚ್ಚಾ ವಸ್ತುಗಳ ಮೇಲಿನ ವಿನಾಯಿತಿ ಇನ್ನೂ 10 ವರ್ಷ ವಿಸ್ತರಣೆ
►ಕರಕುಶಲ ವಸ್ತುಗಳು: ಕರಕುಶಲ ವಸ್ತುಗಳ ರಫ್ತು ಉತ್ತೇಜಿಸಲು ಹೊಸ ಯೋಜನೆ
►ಚರ್ಮ: ವೆಟ್ ಬ್ಲ್ಯೂ ಲೆದರ್‌ಗೆ ಮೂಲ ಕಸ್ಟಮ್ಸ್ ಸುಂಕದಿಂದ ಸಂಪೂರ್ಣ ವಿನಾಯಿತಿ. ಚರ್ಮದ ಜಾಕೆಟ್,ಶೂಗಳು,ಬೆಲ್ಟ್,ಪರ್ಸ್ ಅಗ್ಗವಾಗಲಿವೆ.
►ವಿದ್ಯುತ್ ಚಾಲಿತ ವಾಹನ(ಇವಿ)ಗಳು: ಇವಿ ಬ್ಯಾಟರಿ ತಯಾರಿಕೆಯಲ್ಲಿ ಬಳಕೆಯಾಗುವ ಇನ್ನೂ 35 ಸರಕುಗಳು ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಗೆ ಸೇರ್ಪಡೆ
►ಫ್ರೋಝನ್ ಫಿಷ್ ಪೇಸ್ಟ್: ಕಸ್ಟಮ್ಸ್ ಸುಂಕ ಶೇ.30ರಿಂದ ಶೇ.5ಕ್ಕೆ ಇಳಿಕೆ
ಯಾವುದು ದುಬಾರಿ?
ಇಂಟರ್‌ಆ್ಯಕ್ಟಿವ್ ಫ್ಲ್ಯಾಟ್ ಪ್ಯಾನೆಲ್ ಡಿಸ್‌ಪ್ಲೇ: ಮೂಲ ಕಸ್ಟಮ್ಸ್ ಸುಂಕ ಶೇ.10ರಿಂದ ಶೇ.20ಕ್ಕೆ ಏರಿಕೆ. ಇದು ಟಿವಿಗಳು ಮತ್ತು ಮೊಬೈಲ್ ಫೋನ್‌ಗಳನ್ನು ದುಬಾರಿಯಾಗಿಸಲಿದೆ.