"ನಿಮಗೆ ಸಾಧ್ಯವಾಗದಿದ್ದರೆ ನಾವು ಮಾಡುತ್ತೇವೆ": ಕೇಂದ್ರವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ಕೋಸ್ಟ್ ಗಾರ್ಡ್ ಮಹಿಳಾ ಅಧಿಕಾರಿಗಳಿಗೆ ಖಾಯಂ ಆಯೋಗ ವಿಚಾರ
ಹೊಸದಿಲ್ಲಿ: ಮಹಿಳಾ ಕೋಸ್ಟ್ ಗಾರ್ಡ್ ಅಧಿಕಾರಿಗಳಿಗೆ ಖಾಯಂ ಆಯೋಗ ಅನುಮೋದಿಸುವ ಕುರಿತಂತೆ ಕೇಂದ್ರಕ್ಕೆ ಇಂದು ಕೊನೆಯ ಎಚ್ಚರಿಕೆ ನೀಡಿದ ಸುಪ್ರೀಂ ಕೋರ್ಟ್ “ಮಹಿಳೆಯರನ್ನು ಬಿಟ್ಟುಬಿಡಲು ಸಾಧ್ಯವಿಲ್ಲ,” ಎಂದಿದೆ ಹಾಗೂ “ನಿಮಗೆ ಮಾಡಲು ಸಾಧ್ಯವಾಗದೇ ಇದ್ದರೆ ನಾವು ಮಾಡುತ್ತೇವೆ,” ಎಂದು ಹೇಳಿದೆ.
“ಕಾರ್ಯಾತ್ಮಕತೆ ಮುಂತಾದ ವಾದವು ಈ ವರ್ಷ ನಿಲ್ಲದು. ನಿಮಗಾಗದೇ ಇದ್ದರೆ ನಾವು ಮಾಡುತ್ತೇವೆ. ಅದನ್ನು ಪರಿಗಣಿಸಿ,” ಎಂದು ಕೇಂದ್ರ ಪರ ವಕೀಲ, ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರನ್ನುದ್ದೇಶಿಸಿ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು. ಕೋಸ್ಟ್ ಗಾರ್ಡ್‌ಗೆ ಅಫಿಡವಿಟ್ ಸಲ್ಲಿಸಲು ಸೂಚಿಸುವುದಾಗಿ ಕೇಂದ್ರದ ಪರ ವಕೀಲರು ಹೇಳಿದರು.
ಮುಂದಿನ ವಿಚಾರಣೆಯನ್ನು ಮಾರ್ಚ್ 1ಕ್ಕೆ ನಿಗದಿಪಡಿಸಲಾಗಿದೆ. ಕೋಸ್ಟ್ ಗಾರ್ಡ್‌ನ ಮಹಿಳಾ ಅಧಿಕಾರಿಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿ ಸುಪ್ರೀಂ ಕೋರ್ಟ್ ಮೇಲಿನಂತೆ ಹೇಳಿದೆ.
Next Story