ವಿಶ್ವ ಚೆಸ್ ಚಾಂಪಿಯನ್ ಗುಕೇಶ್ ಬಹುಮಾನದಲ್ಲಿ 4.67 ಕೋಟಿ ರೂ. ತೆರಿಗೆ ಕಡಿತ!; ಟೀಕೆಗೆ ಗುರಿಯಾದ ನಿರ್ಮಲಾ ಸೀತರಾಮನ್
ತೆರಿಗೆ ಇಲಾಖೆ ಆಟವಾಡದೆಯೇ ಆಟವನ್ನು ಗೆದ್ದಿದೆ ಎಂದ ಜನರು
ನಿರ್ಮಲಾ ಸೀತಾರಾಮನ್ , ಡಿ.ಗುಕೇಶ್ | PC : ANI
ಹೊಸದಿಲ್ಲಿ: ವಿಶ್ವ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಚೀನಾದ ಡಿಂಗ್ ಲಿರೆನ್ ರನ್ನು ಮಣಿಸಿ ಭಾರತದ ಡಿ.ಗುಕೇಶ್ ವಿಶ್ವ ಚೆಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದರು. ಈ ಐತಿಹಾಸಿಕ ಗೆಲುವಿಗೆ ಡಿ. ಗುಕೇಶ್ ಗೆ ಭಾರೀ ಪ್ರಶಂಸೆ ವ್ಯಕ್ತವಾದರೆ, ಇನ್ನೊಂದೆಡೆ ಗುಕೇಶ್ ಗೆಲುವಿನ ಮೊತ್ತದಲ್ಲಿ ಬಹುಪಾಲು ತೆರಿಗೆ ಪಾಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಟೀಕಿಸಿದ್ದಾರೆ.
ಗುಕೇಶ್ ಗೆಲುವಿನ ಬಳಿಕ ಎಕ್ಸ್ ನಲ್ಲಿ "@nsitharaman, @nsitharamanoffc, @IncomeTaxIndia ಮತ್ತು @FinMinIndia ಯಾವುದೇ ಶ್ರಮವಿಲ್ಲದೆ 5 ಕೋಟಿ ಗಳಿಸುತ್ತಿದೆ. ಗುಕೇಶ್ ಬಹುಮಾನವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲಿದ್ದಾರೆ" ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಟೀಕಿಸಿದ್ದಾರೆ.
ವಿಶ್ವ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಗುಕೇಶ್ ಅವರು ಒಟ್ಟು 11.45 ಕೋಟಿ ರೂ. ಬಹುಮಾನವನ್ನು ಗೆದ್ದುಕೊಂಡಿದ್ದಾರೆ. ಆದರೆ ಅವರ ಬಹುಮಾನದ ಮೊತ್ತದಿಂದ 4.67 ಕೋಟಿ ತೆರಿಗೆ ಕಡಿತವಾಗಲಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ 10 ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸುವವರಿಗೆ ಆದಾಯ ತೆರಿಗೆ ದರವು 30% ಇದೆ. ಹೆಚ್ಚುವರಿಯಾಗಿ 5 ಕೋಟಿಗಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳಿಗೆ 4% ಆರೋಗ್ಯ ಮತ್ತು ಶಿಕ್ಷಣದ ಸೆಸ್ ಜೊತೆಗೆ 37% ವರೆಗೆ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುತ್ತದೆ. ಆದ್ದರಿಂದ ಗುಕೇಶ್ ಅವರ ಬಹುಮಾನದ ಹಣಕ್ಕೆ ತೆರಿಗೆ ವಿಧಿಸಿದರೆ, ಅವರ ಬಹುಮಾನದ ಮೊತ್ತದ ಮೇಲೆ 4.67 ಕೋಟಿ ಕೋಟಿಗೂ ಹೆಚ್ಚು ತೆರಿಗೆ ಹಣ ಕಡಿತವಾಗಲಿದೆ. ಈ ಬಗ್ಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಸಾಮಾಜಿಕ ಜಾಲತಾಣಗಳ ಬಳಕೆದಾರರು ವ್ಯಾಪಕವಾಗಿ ಟೀಕಿಸಿದ್ದಾರೆ.
ಓರ್ವ ಎಕ್ಸ್ ಬಳಕೆದಾರರು "ಅದನ್ನು TDS ಎಂದು ಕರೆಯಲಾಗುತ್ತದೆ: ʼಟ್ಯಾಕ್ಸ್ ಡಿಡಕ್ಟಡ್ ಬೈ ಸೀತಾರಾಮನ್ʼ(ಸೀತಾರಾಮನ್ ಅವರಿಂದ ತೆರಿಗೆ ಕಡಿತ!) ಎಂದು ಬರೆದುಕೊಂಡಿದ್ದಾರೆ. ಇನ್ನೊಬ್ಬರು ಅದನ್ನು "ತೆರಿಗೆ ಭಯೋತ್ಪಾದನೆ" ಎಂದು ಕರೆದಿದ್ದಾರೆ.
ಮತ್ತೋರ್ವ ಎಕ್ಸ್ ಬಳಕೆದಾರʼ ಗುಕೇಶ್ ಟ್ರೋಫಿಯನ್ನು ತೆರಿಗೆ ಇಲಾಖೆಯೊಂದಿಗೆ ಹಂಚಿಕೊಳ್ಳಬೇಕುʼ, ʼಅವರು ಜಂಟಿ ವಿಜೇತರುʼ ಎಂದು ವ್ಯಂಗ್ಯವಾಡಿದ್ದಾರೆ.
Gukesh must share the trophy with tax department :) They are the joint winners.
— Manas Muduli (@manas_muduli) December 13, 2024
ಭಾರತೀಯ ತೆರಿಗೆ ಇಲಾಖೆ ಇಲ್ಲಿ ನಿಜವಾದ ಗ್ರ್ಯಾಂಡ್ ಮಾಸ್ಟರ್ ಆಗಿರುವಂತೆ ತೋರುತ್ತಿದೆ ಎಂದು ಮತ್ತೋರ್ವ ಎಕ್ಸ್ ಬಳಕೆದಾರರು ವ್ಯಂಗ್ಯವಾಡಿದ್ದಾರೆ.
Looks like the Indian Tax Dept is the real Grandmaster here, making all the right moves without even touching a chessboard Mazza hi mazza
— ☀️ (@PsychMomTots) December 13, 2024
ʼತೆರಿಗೆ ಇಲಾಖೆಯ ಚೆಸ್ ಆಟʼ: ತೆರಿಗೆ ಇಲಾಖೆ ಯಾವಾಗಲೂ ಬಹುಮಾನ, ಸಂಬಳ ಅಥವಾ ಲಾಭದ ಶೇರ್ ತೆಗೆದುಕೊಳ್ಳುತ್ತದೆ ಎಂದು ಮತ್ತೋರ್ವರು ಹೇಳಿದ್ದಾರೆ.
Tax Dept's chess game: Always winning, always taking a piece of the prize/salary/profits!
— Amit Misra (@amit6060) December 13, 2024
ಮತ್ತೋರ್ವರು ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ʼತೆರಿಗೆ ಇಲಾಖೆ ವಾಸ್ತವವಾಗಿ ಆಟವಾಡದೆಯೇ ಆಟವನ್ನು ಗೆದ್ದಿದೆʼ ಎಂದು ಹೇಳಿದ್ದಾರೆ.