ಮಧ್ಯಸ್ಥಿಕೆ ಕಾನೂನಿನಲ್ಲಿ ಸುಧಾರಣೆಗಳ ಶಿಫಾರಸಿಗಾಗಿ ಕೇಂದ್ರದಿಂದ ಸಮಿತಿ ರಚನೆ
Formation of Committee by Center to recommend reforms in Arbitration Law
Photo: PTI
ಹೊಸದಿಲ್ಲಿ: ಭಾರತವನ್ನು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಕೇಂದ್ರವನ್ನಾಗಿ ಮಾಡಲು ಒತ್ತು ನೀಡುತ್ತಿರುವ ನಡುವೆಯೇ ಸರಕಾರವು ನ್ಯಾಯಾಲಯಗಳ ಮೇಲಿನ ಹೊರೆಯನ್ನು ತಗ್ಗಿಸುವ ಉದ್ದೇಶದಿಂದ ಮಧ್ಯಸ್ಥಿಕೆ ಮತ್ತು ರಾಜಿ ಕಾಯ್ದೆಯಲ್ಲಿ ಸುಧಾರಣೆಗಳನ್ನು ಶಿಫಾರಸು ಮಾಡಲು ಮಾಜಿ ಕಾನೂನು ಕಾರ್ಯದರ್ಶಿ ಟಿ.ಕೆ.ವಿಶ್ವನಾಥನ್ ಅವರ ನೇತೃತ್ವದಲ್ಲಿ ತಜ್ಞರ ತಂಡವೊಂದನ್ನು ರಚಿಸಿದೆ.
ಕೇಂದ್ರ ಕಾನೂನು ಸಚಿವಾಲಯದಲ್ಲಿನ ಕಾನೂನು ವ್ಯವಹಾರಗಳ ಇಲಾಖೆಯು ಸ್ಥಾಪಿಸಿರುವ ತಜ್ಞರ ಸಮಿತಿಯು ಅಟಾರ್ನಿ ಜನರಲ್ ಎನ್.ವೆಂಕಟರಮಣಿ ಅವರನ್ನೂ ಒಳಗೊಂಡಿದೆ.
ಕಾನೂನು ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ರಾಜೀವ ಮಣಿ,ಕೆಲವು ಹಿರಿಯ ವಕೀಲರು,ಖಾಸಗಿ ಕಾನೂನು ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಶಾಸಕಾಂಗ ಇಲಾಖೆ,ನೀತಿ ಆಯೋಗ,ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ,ರೈಲ್ವೆ ಮತ್ತು ಸಿಪಿಡಬ್ಲುಡಿ ಪ್ರತಿನಿಧಿಗಳು ಸಮಿತಿಯ ಇತರ ಸದಸ್ಯರಾಗಿದ್ದಾರೆ. ತನ್ನ ವರದಿಯನ್ನು 30 ದಿನಗಳಲ್ಲಿ ಸಲ್ಲಿಸುವಂತೆ ಸಮಿತಿಗೆ ಸೂಚಿಸಲಾಗಿದೆ.
Next Story