ಹಿಂದಿ ಭಾಷೆ ಬಳಕೆಗೆ ಉತ್ತೇಜನ ನೀಡಲು ವಿಶ್ವಸಂಸ್ಥೆಗೆ 1 ದಶಲಕ್ಷ ಡಾಲರ್ ದೇಣಿಗೆ ನೀಡಿದ ಭಾರತ
ವಿಶ್ವಸಂಸ್ಥೆ: ವಿಶ್ವಸಂಸ್ಥೆಯಲ್ಲಿ ಹಿಂದಿ ಭಾಷೆ ಬಳಕೆಗೆ ಉತ್ತೇಜನ ನೀಡಲು ಭಾರತ 1 ದಶಲಕ್ಷ ಡಾಲರ್ ಕೊಡುಗೆ ನೀಡಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ರುಚಿರಾ ಕಾಂಬೋಜ್ ಸೋಮವಾರ ಹೇಳಿದ್ದಾರೆ.
ವಿಶ್ವಸಂಸ್ಥೆಯ ಜಾಗತಿಕ ಸಂವಹನ ವಿಭಾಗದ ಅಧೀನ ಪ್ರಧಾನ ಕಾರ್ಯದರ್ಶಿ ಮೆಲಿಸ್ಸಾ ಫ್ಲೆಮಿಂಗ್‍ಗೆ 1 ದಶಲಕ್ಷ ಡಾಲರ್ ಮೊತ್ತದ ಚೆಕ್ ಅನ್ನು ಸೋಮವಾರ ಹಸ್ತಾಂತರಿಸಲಾಗಿದೆ. ಹಿಂದಿ ಭಾಷೆಯಲ್ಲಿ ಸುದ್ಧಿ ಮತ್ತು ಮಲ್ಟಿಮೀಡಿಯಾ ವಿಷಯವನ್ನು ಮುಖ್ಯವಾಹಿನಿಗೆ ತರಲು ವಿಶ್ವಸಂಸ್ಥೆಯ ಪ್ರಯತ್ನಗಳು ಭಾರತದಲ್ಲಿ ಮತ್ತು ಹಿಂದಿ ಮಾತನಾಡುವ ಜನರು ವಾಸಿಸುವ ದೇಶಗಳಲ್ಲಿ ಮೆಚ್ಚುಗೆ ಗಳಿಸಿದೆ ಎಂದು ರುಚಿರಾ ಕಾಂಬೋಜ್ ಹೇಳಿದ್ದಾರೆ.
ಯುಎನ್ ನ್ಯೂಸ್, ಟ್ವಿಟರ್, ಇನ್‍ಸ್ಟಾಗ್ರಾಮ್ ಮತ್ತು ಫೇಸ್‍ಬುಕ್ ವೇದಿಕೆಗಳ ಮೂಲಕ ಹಾಗೂ ವಿಶ್ವಸಂಸ್ಥೆಯ ಸಾಪ್ತಾಹಿಕ ಸುದ್ಧಿಪ್ರಸಾರ- ಹಿಂದಿ ಆಡಿಯೊ ಬುಲೆಟಿನ್ ಮೂಲಕ ವಿಶ್ವಸಂಸ್ಥೆಯಲ್ಲಿ ಹಿಂದಿ ಸುದ್ಧಿ ಪ್ರಸಾರವಾಗುತ್ತಿದೆ.
Next Story