ಜಪಾನ್ಓಪನ್: ಶ್ರೀಕಾಂತ್, ಪ್ರಣಯ್ ಪ್ರಿ-ಕ್ವಾರ್ಟರ್ ಫೈನಲ್ ಗೆ
ಆಕರ್ಷಿ ಕಶ್ಯಪ್ ಔಟ್
ಟೋಕಿಯೊ: ಭಾರತದ ಶಟ್ಲರ್ಗಳಾದ ಕಿಡಂಬಿ ಶ್ರೀಕಾಂತ್ ಹಾಗೂ ಎಚ್.ಎಸ್. ಪ್ರಣಯ್ ಬಿಡಬ್ಲ್ಯುಎಫ್ ಜಪಾನ್ ಓಪನ್ನಲ್ಲಿ ಪುರುಷರ ಸಿಂಗಲ್ಸ್ ಸ್ಪರ್ಧಾವಳಿಯಲ್ಲಿ ಶುಭಾರಂಭ ಮಾಡಿದ್ದು ಪ್ರಿ-ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದ್ದಾರೆ.
ಮಂಗಳವಾರ ಶ್ರೇಷ್ಠ ಫಾರ್ಮ್ ಪ್ರದರ್ಶಿಸಿದ ಶ್ರೀಕಾಂತ್ ಪುರುಷರ ಸಿಂಗಲ್ಸ್ ನಲ್ಲಿ ತೈವಾನ್ನ ಚೌ ಟಿಯೆನ್-ಚೆನ್ರನ್ನು 21-13, 21-13 ಗೇಮ್ಗಳ ಅಂತರದಿಂದ ಮಣಿಸಿದರು. ಅದೇ ರೀತಿ ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ಪ್ರಣಯ್ ತನ್ನ ಕೌಶಲ್ಯ ಹಾಗೂ ಪರಾಕ್ರಮವನ್ನು ಪ್ರದರ್ಶಿಸಿ ಚೀನಾದ ಲಿ ಶಿಫೆಂಗ್ರನ್ನು 21-17, 21-13 ಅಂತರದಿಂದ ಮಣಿಸಿ ಅಂತಿಮ-16ರ ಸುತ್ತು ತಲುಪಿದ್ದಾರೆ.
ಮಹಿಳೆಯರ ಸಿಂಗಲ್ಸ್ನಲ್ಲಿ ಭಾರತದ ಆಟಗಾರ್ತಿ ಆಕರ್ಷಿ ಕಶ್ಯಪ್ ಸೋಲನುಭವಿಸಿದರು. ಆಕರ್ಷಿ ತನ್ನ ಚೊಚ್ಚಲ ಪಂದ್ಯದಲ್ಲಿ ಜಪಾನ್ನ ಬಲಿಷ್ಠ ಎದುರಾಳಿ ಅಕಾನೆ ಯಮಗುಚಿಯವರನ್ನು ಎದುರಿಸಿದರು.
ಹೋರಾಟವನ್ನು ನೀಡಿದ ಹೊರತಾಗಿಯೂ ಆಕರ್ಷಿ, ಯಮಗುಚಿ ಅವರ ಶಕ್ತಿಶಾಲಿ ಪ್ರದರ್ಶನವನ್ನು ಮೀರಿ ನಿಲ್ಲಲಾಗದೆ 17-21, 17-21 ನೇರ ಗೇಮ್ಗಳ ಅಂತರದಿಂದ ಸೋತಿದ್ದಾರೆ.ಪುರುಷರ ಸಿಂಗಲ್ಸ್ ಸ್ಪರ್ಧೆಯ ಮುಂದಿನ ಸುತ್ತಿನಲ್ಲಿ ಶ್ರೀಕಾಂತ್ ಹಾಗೂ ಪ್ರಣಯ್ ಪರಸ್ಪರ ಮುಖಾಮುಖಿ ಯಾಗಲಿದ್ದಾರೆ.
ಮಹಿಳೆಯರ ಡಬಲ್ಸ್ನಲ್ಲಿ ಟ್ರೀಸಾ ಜೋಡಿ ಹಾಗೂ ಪುಲ್ಲೆಲ ಗಾಯತ್ರಿ ಗೋಪಿಚಂದ್ ಜಪಾನ್ ಜೋಡಿ ಸಯಾಕಾ ಹೊಬಾರಾ ಹಾಗೂ ಸಯೆಝ್ ವಿರುದ್ಧ ಮೊದಲ ಗೇಮ್ನ್ನು 11-21 ಅಂತರದಿಂದ ಸೋತಿದ್ದರೂ 21-15, 21-14 ಅಂತರದಿಂದ ಜಯ ಸಾಧಿಸಿ ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.