ವಕೀಲರ ಹತ್ಯೆ ಪ್ರಕರಣ: ಆಗಸ್ಟ್ 9ರವರೆಗೆ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ಗೆ ಬಂಧನದಿಂದ ರಕ್ಷಣೆ
ಇಸ್ಲಮಾಬಾದ್: ಪ್ರಮುಖ ವಕೀಲರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್‌ಖಾನ್ ಸೋಮವಾರ ಸುಪ್ರೀಂಕೋರ್ಟ್‌ನ ಎದುರು ವಿಚಾರಣೆಗೆ ಹಾಜರಾಗಿದ್ದು, ಇಮ್ರಾನ್‌ರನ್ನು ಆಗಸ್ಟ್ 9ರವರೆಗೆ ಬಂಧಿಸಬಾರದು ಎಂದು ಸುಪ್ರೀಂಕೋರ್ಟ್ ಅಧಿಕಾರಿಗಳಿಗೆ ಸೂಚಿಸಿದೆ.
ಬಲೂಚಿಸ್ತಾನ ಪ್ರಾಂತದ ರಾಜಧಾನಿ ಕ್ವೆಟಾದಲ್ಲಿ ಜೂನ್ 6ರಂದು ಅಪರಿಚಿತ ವ್ಯಕ್ತಿಗಳು ಹಿರಿಯ ನ್ಯಾಯವಾದಿ ಅಬ್ದುಲ್ ರಝಾಕ್‌ರನ್ನು ಹತ್ಯೆ ಮಾಡಿದ್ದರು. ರಝಾಕ್‌ರ ಪುತ್ರ ನೀಡಿದ ದೂರಿನಂತೆ ಅದರ ಮರುದಿನ ಪೊಲೀಸರು ಇಮ್ರಾನ್‌ಖಾನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ವಿಶ್ವಾಸಮತದಲ್ಲಿ ಸೋಲುವುದು ಖಚಿತವಾದೊಡನೆ ಇಮ್ರಾನ್‌ಖಾನ್ ರಾಷ್ಟ್ರೀಯ ಅಸೆಂಬ್ಲಿಯನ್ನು ವಿಸರ್ಜಿಸುವ ಘೋಷಣೆ ಮಾಡಿದ್ದು ಇದು ದೇಶದ್ರೋಹದ ಕೃತ್ಯವಾಗಿದ್ದು ಇಮ್ರಾನ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನ್ಯಾಯವಾದಿ ಅಬ್ದುಲ್ ರಝಾಕ್ ಪ್ರಕರಣ ದಾಖಲಿಸಿದ್ದರು.
ಈ ಕಾರಣಕ್ಕೆ ರಝಾಕ್‌ರ ಹತ್ಯೆಗೆ ಇಮ್ರಾನ್‌ಖಾನ್ ಪ್ರಚೋದನೆ ನೀಡಿದ್ದಾರೆ ಎಂದು ರಝಾಕ್ ಅವರ ಪುತ್ರ ನ್ಯಾಯಾಲಯಕ್ಕೆ ದೂರು ನೀಡಿದ್ದರು.