ಪಾಕಿಸ್ತಾನ: ಸೇನಾನೆಲೆ ಮೇಲೆ ಉಗ್ರರ ದಾಳಿ; 12 ಯೋಧರ ಮೃತ್ಯು
Photo : NDTV.com
ಇಸ್ಲಮಾಬಾದ್ : ಪಾಕಿಸ್ತಾನದ ಪ್ರಕ್ಷುಬ್ಧ ನೈಋತ್ಯ ಬಲೂಚಿಸ್ತಾನ್ ಪ್ರಾಂತದಲ್ಲಿ ಸೇನೆಯ ನೆಲೆಯೊಂದರ ಮೇಲೆ ಉಗ್ರರು ನಡೆಸಿದ ದಾಳಿ ಮತ್ತು ಆ ಬಳಿಕ ನಡೆದ ಗುಂಡಿನ ಚಕಮಕಿಯಲ್ಲಿ 12 ಯೋಧರು ಹಾಗೂ ಒಬ್ಬ ನಾಗರಿಕ ಮೃತಪಟ್ಟಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.
ಬಲೂಚಿಸ್ತಾನ್ ಪ್ರಾಂತದ ಝೋಬ್ ಜಿಲ್ಲೆಯಲ್ಲಿನ ಸೇನಾನೆಲೆಗೆ ಶನಿವಾರ ಬೆಳಿಗ್ಗೆ ಐವರು ಉಗ್ರರು ನುಸುಳಲು ಪ್ರಯತ್ನಿಸಿದಾಗ ಭದ್ರತಾ ಪಡೆ ಅವರನ್ನು ತಡೆದಿದೆ. ಈ ಸಂದರ್ಭ ಉಗ್ರರ ಗುಂಡಿನ ದಾಳಿಯಲ್ಲಿ 12 ಯೋಧರು ತೀವ್ರ ಗಾಯಗೊಂಡಿದ್ದು ಬಳಿಕ ಮೃತಪಟ್ಟಿದ್ದಾರೆ. ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿ ಸಂದರ್ಭ ಓರ್ವ ಮಹಿಳೆ ಸಾವನ್ನಪ್ಪಿದ್ದು ಇತರ 5 ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
ಆದರೆ, 9 ಯೋಧರು ಸಾವನ್ನಪ್ಪಿದ್ದು ದಾಳಿ ನಡೆಸಿದ ಎಲ್ಲಾ ಉಗ್ರರನ್ನೂ ಹತ್ಯೆ ಮಾಡಲಾಗಿದೆ ಎಂದು ಸೇನಾಪಡೆ ಹೇಳಿಕೆ ನೀಡಿದೆ. ತೆಹ್ರೀಕೆ ಜಿಹಾದ್ ಪಾಕಿಸ್ತಾನ್ ಎಂಬ ಭಯೋತ್ಪಾದಕ ಸಂಘಟನೆ ಈ ಕೃತ್ಯದ ಹೊಣೆ ವಹಿಸಿಕೊಂಡಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Next Story