ವ್ಯಾಗ್ನರ್ ಗುಂಪಿಗೆ ನೂತನ ಮುಖ್ಯಸ್ಥರ ಆಯ್ಕೆ
ಮಾಸ್ಕೊ: ರಶ್ಯ ಸೇನೆಯ ವಿರುದ್ಧ ವಿಫಲ ಸಂಕ್ಷಿಪ್ತ ದಂಗೆಯ ನೇತೃತ್ವ ವಹಿಸಿದ್ದ ವ್ಯಾಗ್ನರ್ ಗುಂಪಿನ ಮುಖಂಡ ಯೆವ್ಗಿನಿ ಪ್ರಿಗೊಝಿನ್ರ ಸ್ಥಾನದಲ್ಲಿ ವ್ಯಾಗ್ನರ್ ಪಡೆಯನ್ನು ಮುನ್ನಡೆಸಲು ನೂತನ ಮುಖ್ಯಸ್ಥರನ್ನಾಗಿ ಹಿರಿಯ ಯೋಧ ಆಂಡ್ರೆಯ್ ತ್ರೊಶೆವ್ರನ್ನು ರಶ್ಯ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಆಯ್ಕೆ ಮಾಡಿರುವುದಾಗಿ ವರದಿಯಾಗಿದೆ.
ವಿಫಲ ದಂಗೆಯ ಬಳಿಕ ಪ್ರಿಗೊಝಿನ್ ಹಾಗೂ ಇತರ ಹಿರಿಯ ವ್ಯಾಗ್ನರ್ ಯೋಧರನ್ನು ಭೇಟಿಯಾಗಿದ್ದ ಪುಟಿನ್, . ಬೆಲಾರುಸ್ಗೆ ತೆರಳುವುದು, ತ್ರೊಶೆವ್ ನೇತೃತ್ವದಡಿ ಕಾರ್ಯನಿರ್ವಹಿಸುವುದು ಸೇರಿದಂತೆ ಹಲವು ಆಯ್ಕೆಗಳನ್ನು ಇರಿಸಿದ್ದರು ಎಂದು ವರದಿಯಾಗಿದೆ. ರಶ್ಯ ಸೇನೆಯ ನಿವೃತ್ತ ಕರ್ನಲ್ ಆಗಿರುವ ತ್ರೊಶೆವ್, ವ್ಯಾಗ್ನರ್ ಗುಂಪಿನ ಸ್ಥಾಪಕ ಕಾರ್ಯನಿರ್ವಾಹಕ ನಿರ್ದೇಶಕರಲ್ಲಿ ಒಬ್ಬರಾಗಿದ್ದಾರೆ.
ಸೋವಿಯತ್ ಒಕ್ಕೂಟದ ಅವಧಿಯಲ್ಲಿ ಅಫ್ಘಾನಿಸ್ತಾನದಲ್ಲಿ ನಡೆದಿದ್ದ ಯುದ್ಧ, ಚೆಚೆನ್ ಯುದ್ಧದಲ್ಲಿ ರಶ್ಯ ಸೇನೆಯ ಪರ ಹೋರಾಡಿದ್ದ ತ್ರೊಶೆವ್, ರಶ್ಯದ ಆಂತರಿಕ ಸಚಿವಾಲಯದ ಕ್ಷಿಪ್ರ ಕಾರ್ಯಪಡೆಯ ಕಮಾಂಡರ್ ಆಗಿಯೂ ಕಾರ್ಯನಿರ್ವಹಿಸಿದ್ದರು.