ಶೇನ್ ವಾರ್ನ್ ಸಾವಿಗೆ ಕೋವಿಡ್ ಲಸಿಕೆ ಕಾರಣವಿರಬಹುದು: ಆತಂಕ ವ್ಯಕ್ತಪಡಿಸಿದ ವೈದ್ಯ
ಶೇನ್ ವಾರ್ನ್ (PTI)
ಲಂಡನ್: ವಿಶ್ವದ ಖ್ಯಾತ ಕ್ರಿಕೆಟಿಗ ಶೇನ್ ವಾರ್ನ್ ಕಳೆದ ವರ್ಷ ದಿಢೀರನೇ ಸಾವಿಗೀಡಾಗಲು ಕೋವಿಡ್ ಲಸಿಕೆ ಕಾರಣ ಇರಬಹುದು ಎಂಬ ಆತಂಕ ನಮಗೆ ಇದೆ ಎಂದು ಬ್ರಿಟನ್ನ ಭಾರತೀಯ ಮೂಲದ ಖ್ಯಾತ ವೈದ್ಯ ಹಾಗೂ ಆಸ್ಟ್ರೇಲಿಯಾದ ತಜ್ಞ ವೈದ್ಯರೊಬ್ಬರು ಹೇಳಿಕೆ ನೀಡಿದ್ದಾರೆ.
ಶೇನ್ ವಾರ್ನ್ ಅವರು ಒಂಬತ್ತು ತಿಂಗಳ ಹಿಂದೆ ಕೋವಿಡ್ ಎಂಆರ್ಎನ್ಎ ಲಸಿಕೆ ಪಡೆದ ಹಿನ್ನೆಲೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಡಾ. ಅಸೀಂ ಮಲ್ಹೋತ್ರಾ ಮತ್ತು ಆಟ್ರೇಲಿಯಾ ವೈದ್ಯಕೀಯ ಪ್ರೊಫೆಸರ್ಗಳ ಸಂಘದ ಅಧ್ಯಕ್ಷ ಡಾ.ಚಾಲ್ರ್ಸ್ ನೀಲ್ ಹೇಳಿಕೆ ಪ್ರಕಾರ, ಮರಣೋತ್ತರ ಪರೀಕ್ಷೆಯಿಂದ ತಿಳಿದು ಬರುವಂತೆ ವಾರ್ನ್ (52) ಸಾವಿಗೆ ಹೃದ್ರೋಗ ಕಾರಣ."ನಮ್ಮ ಸಂಶೋಧನೆ ಪ್ರಕಾರ, ಎಂಆರ್ಎನ್ಎ ಲಸಿಕೆಯು ಕ್ಷಿಪ್ರ ಗತಿಯಲ್ಲಿ ಹೃದ್ರೋಗ ವರ್ಧಿಸಲು ಕಾರಣವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಇದುವರೆಗೆ ಪತ್ತೆಯಾಗದ ಮಂದ ಸ್ವರೂಪದ ಹೃದ್ರೋಗಿಗಳಲ್ಲಿ ಈ ಸಾಧ್ಯತೆ ಹೆಚ್ಚು ಎಂದು ಹೇಳಿದ್ದಾರೆ. 52ನೇ ವಯಸ್ಸಿನಲ್ಲೇ ಈ ಖ್ಯಾತ ಕ್ರಿಕೆಟರ್ ದಿಢೀರನೇ ಹೃದಯ ವೈಫಲ್ಯದಿಂದ ಸಾವಿಗೀಡಾಗಿರುವುದು ಅಸಹಜ ಎಂದು ಅವರು ಪ್ರತಿಪಾದಿಸಿದ್ದಾರೆ.
ಆದಾಗ್ಯೂ ಇತ್ತೀಚಿನ ವರ್ಷಗಳಲ್ಲಿ ವಾರ್ನ್ ಆರೋಗ್ಯಕರ ಜೀವನಶೈಲಿ ಹೊಂದಿರಲಿಲ್ಲ. ಅಧಿಕ ದೇಹತೂಕ ಹಾಗೂ ಧೂಮಪಾನದಿಂದಾಗಿ ಸಮಸ್ಯೆ ಎದುರಿಸುತ್ತಿದ್ದರು. ಪಿಫಿಜರ್ ಕಂಪನಿಯ ಎಂಆರ್ಎನ್ಎ ಕೋವಿಡ್ ಲಸಿಕೆ ಪಡೆದ ಬಳಿಕ ಅವರ ಸೌಮ್ಯ ಪ್ರಮಾಣದ ಹೃದಯ ಸಮಸ್ಯೆ ಕ್ಷಿಪ್ರವಾಗಿ ಹೆಚ್ಚಿರುವ ಸಾಧ್ಯತೆ ಇದೆ ಎಂದಿದ್ದಾರೆ.