Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ...

ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಸುತ್ತಮುತ್ತ..

ಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರುಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರು25 April 2025 11:52 AM IST
share
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯ ಸುತ್ತಮುತ್ತ..
ಮಾಧ್ಯಮಗಳ ವರದಿಗಳ ಪ್ರಕಾರ ಸುಮಾರು 20 ನಿಮಿಷಗಳ ಕಾಲ ಭಯೋತ್ಪಾದಕರು ಗುಂಡುಗಳನ್ನು ಹಾರಿಸಿದ್ದಾರೆ. ನಮ್ಮ ಭದ್ರತಾ ಕಾವಲು ಪಡೆಯವರು ಎಲ್ಲಿದ್ದರು? ಅವರ ಪ್ರತಿಕ್ರಿಯೆ ಏನಾಗಿತ್ತು? ಸೂಕ್ತವಾದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತೇ? ಸತ್ಯ ಸಂಗತಿ ಏನು? ಈ ದಾಳಿಗೆ ಸಂಬಂಧಿಸಿದಂತೆ ಬೇಹುಗಾರಿಕಾ ಇಲಾಖೆಯ ವೈಫಲ್ಯಗಳಿವೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಸೂಕ್ಷ ಉತ್ತರಗಳನ್ನು ನಮ್ಮ ಯೂನಿಯನ್ ಸರಕಾರ ನೀಡಬೇಕು. ಅದು ಅದರ ಕರ್ತವ್ಯ ಕೂಡ ಹೌದು.

ಎಪ್ರಿಲ್‌22, 2025ರಂದು ಅಪರಾಹ್ನ ಕಾಶ್ಮೀರ್‌ನ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನ ಬೈಸರನ್‌ಹುಲ್ಲುಗಾವಲು ಪ್ರದೇಶದಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಪ್ರವಾಸಿಗಳು ಹತರಾಗಿದ್ದಾರೆ(ಈ ಬರಹವನ್ನು ಬರೆಯುವ ವೇಳೆಗೆ). ಈ ದುರಂತದಲ್ಲಿ ಕರ್ನಾಟಕದ ಮೂವರು ಭಯೋತ್ಪಾದಕರ ಗುಂಡುಗಳಿಗೆ ಬಲಿಯಾಗಿದ್ದಾರೆ. ಸ್ಥಳದಲ್ಲೇ 16 ಮಂದಿ ತಮ್ಮ ಕೊನೆಯುಸಿರನ್ನು ಎಳೆದಿದ್ದಾರೆ. ಮಿಕ್ಕವರು ಆಸ್ಪತ್ರೆಗೆ ಹೋಗುವಾಗ ಮೃತರಾಗಿದ್ದಾರೆ. ಲಷ್ಕರೆ ತಯ್ಯಿಬಾದ ಒಂದು ಉಪಶಾಖೆಯಾದ ‘ದಿ ರೆಸಿಸ್ಟನ್ಸ್ ಫ್ರಂಟ್’ ಎಂಬ ಸಂಘಟನೆ ಈ ಭಯೋತ್ಪಾದನಾ ಕೃತ್ಯವನ್ನು ಎಸಗಿರುವುದಾಗಿ ಘೋಷಿಸಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಭಾರತಕ್ಕೆ ನಾಲ್ಕು ದಿನಗಳ ಭೇಟಿಯ ಸಂದರ್ಭದಲ್ಲಿ ಈ ದಾಳಿ ನಡೆದಿದೆ.

ಭಯೋತ್ಪಾದಕರ ಈ ಅಮಾನುಷ ಕೃತ್ಯವನ್ನು ದೇಶಾದ್ಯಂತ ಅನೇಕ ರಾಜಕೀಯ ಪಕ್ಷಗಳು, ಸಂಸ್ಥೆಗಳು ಮತ್ತು ನಾಗರಿಕರು ಪ್ರತಿರೋಧಿಸಿ, ಕಠಿಣ ಪದಗಳಲ್ಲಿ ಖಂಡಿಸಿದ್ದಾರೆ. ಅಮೆರಿಕದ ಟ್ರಂಪ್‌ನಿಂದ ರಶ್ಯದ ಪುಟಿನ್‌ವರೆಗೆ ಅನೇಕ ವಿಶ್ವ ನಾಯಕರು ಭಯೋತ್ಪಾದಕರ ಹೀನ ದಾಳಿಯನ್ನು ನಿಂದಿಸಿದ್ದಾರೆ. ಫೆಲೆಸ್ತೀನ್‌ನ ಗಾಝಾ ಪಟ್ಟಿಯಲ್ಲಿ ಸುಮಾರು 51,000 ಫೆಲೆಸ್ತೀನಿಯರ ಜನಾಂಗೀಯ ಹತ್ಯೆಗೆ ಕಾರಣವಾಗಿರುವ ಇಸ್ರೇಲಿನ ಪ್ರಧಾನಿ ಬೆಂಜಮಿನ್ ನೆತನ್ಯಾಹು ಕೂಡ ಪಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡವನ್ನು ಖಂಡಿಸಿದ್ದಾರೆ!

ಕಳೆದ ಸುಮಾರು ನಾಲ್ಕು ದಶಕಗಳಿಂದ ಕಾಶ್ಮೀರದಲ್ಲಿ ನಾಗರಿಕರ ಮೇಲೆ ದಾಳಿಗಳಾಗಿವೆ. ಆದರೆ 2008ರಲ್ಲಿ ನಡೆದ ಮುಂಬೈ ಭಯೋತ್ಪಾದನಾ ದಾಳಿಯ ತರುವಾಯ ಇಷ್ಟು ಮಟ್ಟದಲ್ಲಿ ಸಾವು ಸಂಭವಿಸಿರಲಿಲ್ಲ. ಇದುವರೆಗಿನ ದಾಳಿಗಳನ್ನು ಪರಿಗಣಿಸಿದರೆ, ಹೆಚ್ಚಿನವು ಮಿಲಿಟರಿ ನೆಲೆ, ತಾಣಗಳ ಮೇಲೆ ನಡೆದಿರುವುದು ತಿಳಿದು ಬರುತ್ತದೆ. ಈ ನಿಟ್ಟಿನಲ್ಲಿ ಭಯೋತ್ಪಾದಕರು ತಮ್ಮ ಕಾರ್ಯತಂತ್ರದಲ್ಲಿ ಬದಲಾವಣೆಯನ್ನು ಮಾಡಿಕೊಂಡಿರುವರೇನೋ ಎಂದೆನಿಸುತ್ತದೆ. ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಒಂದು ಸುದ್ದಿಯ ಅನ್ವಯ ಭಯೋತ್ಪಾದಕರು ಹಿಂದೂಗಳನ್ನು ಗುರುತಿಸಿ ಹತಗೈದಿದ್ದಾರೆ. ಆದರೆ ಅನೇಕ ವರ್ಷಗಳಿಂದ ಕಾಶ್ಮೀರದಲ್ಲಿ ಮುಸಲ್ಮಾನರು ಕೂಡ ಅಧಿಕ ಸಂಖ್ಯೆಯಲ್ಲಿ ಭಯೋತ್ಪಾದಕರ ಹಿಂಸೆಯಿಂದ ಹತರಾಗಿದ್ದಾರೆ ಎಂಬುದು ಗಮನೀಯ ಅಂಶ.

ಕಾಶ್ಮೀರದಲ್ಲಿ ಜರುಗಿರುವ ಭಯೋತ್ಪಾದನಾ ಚಟುವಟಿಕೆಗಳು ಹಾಗೂ ದಾಳಿಗಳ ಹಿಂದೆ ನಿಸ್ಸಂಶಯವಾಗಿ ಪಾಕಿಸ್ತಾನದ ಕೈವಾಡವಿದೆ. ಅದು ಈ ಪ್ರದೇಶ(ಕಾಶ್ಮೀರ)ದಲ್ಲಿರುವ ಪ್ರತ್ಯೇಕತಾವಾದಿ ಭಯೋತ್ಪಾದನಾ ಗುಂಪುಗಳಿಗೆ ಕುಮ್ಮಕ್ಕು ನೀಡುತ್ತ ಬಂದಿದೆ. ಪಾಕಿಸ್ತಾನದ ಒಳಗೇ ಅಲ್ಲಿನ ಪ್ರಭುತ್ವವನ್ನು ನಾನಾ ಕಾರಣಗಳಿಗೆ ವಿರೋಧಿಸುವ ಹಲವು ಬಂಡುಕೋರ ಗುಂಪುಗಳಿವೆ. ಇವು ಅಲ್ಲಿ ಭಯೋತ್ಪಾದನಾ ಕೃತ್ಯಗಳನ್ನು ಎಸಗುತ್ತ ಬಂದಿವೆ. ವಾಸ್ತವ ಹೀಗಿದ್ದರೂ ಪಾಕಿಸ್ತಾನ ಕಾಶ್ಮೀರದಲ್ಲಿ ಮೂಗು ತೂರಿಸಿ ಭಯೋತ್ಪಾದನಾ ಗುಂಪುಗಳಿಗೆ ಬೆಂಬಲವನ್ನು ನೀಡುತ್ತ ಬಂದಿದೆ. ಹೀಗಾಗಿ ಅದು Rogue State ಆಗಿದೆ. ಇದಕ್ಕೆ ತಕ್ಕ ಪಾಠವನ್ನು ಭಾರತ ಕಲಿಸಬೇಕು. ಇದು jingoismನಿಂದ ಉಂಟಾದ ಅಭಿಪ್ರಾಯವಲ್ಲ!

ಕಾಶ್ಮೀರದಲ್ಲಿ ಅನುಚ್ಛೇದ 370ನ್ನು ರದ್ದು ಗೊಳಿಸಿದ ತರುವಾಯ ಅಲ್ಲಿ ಶಾಂತಿ, ಸುಭದ್ರತೆ ನೆಲಸಿದೆ ಎಂದು ಸಂಯುಕ್ತ(ಯೂನಿಯನ್)ಸರಕಾರ ಸಾರುತ್ತ ಬಂದಿದೆ. ಪ್ರಧಾನ ಮಂತ್ರಿ ಮೋದಿ, ಗೃಹ ಮಂತ್ರಿ ಅಮಿತ್‌ಶಾ ಮತ್ತು ರಕ್ಷಣಾ ಮಂತ್ರಿ ರಾಜನಾಥ್‌ಸಿಂಗ್ ಮತ್ತಿತರರು ಕೂಡ ಇದೇ ವರಸೆಯಲ್ಲಿ ಮಾತನಾಡುತ್ತ ಬಂದಿದ್ದಾರೆ. 2019ರ ನಂತರ ಭಯೋತ್ಪಾದನಾ ಚಟುವಟಿಕೆಗಳು ಕಡಿಮೆಯೆಂದು ಕಂಡರೂ ಆದರೆ ಅಲ್ಲಿ ನಿಜಾರ್ಥದಲ್ಲಿ ಶಾಂತಿ ನೆಲೆಸಿದೆ ಎಂದು ತೀರ್ಮಾನಿಸುವುದು ಉತ್ಪ್ರೇಕ್ಷೆಯಾಗುತ್ತದೆ. ಏಕೆಂದರೆ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಇಂತಹ ಚಟುವಟಿಕೆಗಳು ಕಡಿಮೆಯಾಗಿದ್ದರೂ, ಅಲ್ಲಲ್ಲಿ ಭಯೋತ್ಪಾದನಾ ಕೃತ್ಯಗಳು ನಡೆಯುತ್ತ ಬಂದಿರುವುದನ್ನು ಮಾಧ್ಯಮಗಳ ವರದಿಗಳು ತಿಳಿಸುತ್ತವೆ.

ಈ ನಿಟ್ಟಿನಲ್ಲಿ, ಕೆಳಕಂಡ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದ್ದು, ಈಗಲೂ ಕೇಳಿ ಬರುತ್ತಿವೆ. ಇವುಗಳನ್ನು ವಿರೋಧ ಪಕ್ಷಗಳು ಕೇಳಿದಾಗ, ಅವುಗಳ ದೇಶ ಪ್ರೇಮವನ್ನೇ ಪ್ರಶ್ನಿಸಲಾಯಿತು ಹಾಗೂ ಅವು ಭಯೋತ್ಪಾದನೆಗೆ ಪರೋಕ್ಷ ರೀತಿಯಲ್ಲಿ ಸಮರ್ಥನೆಯನ್ನು ನೀಡುತ್ತಿವೆ ಎಂದು ಕೇಂದ್ರದಲ್ಲಿ ನಮ್ಮನ್ನು ಆಳುತ್ತಿರುವ ಪ್ರಭುಗಳು ಅಂಬುಗಳನ್ನು ಒಗೆದರು! ಆದರೂ ಅವುಗಳ ಬಗೆಗೆ ಸೂಕ್ತವಾದ ಬಗೆಯಲ್ಲಿ ಉತ್ತರಗಳನ್ನು ನೀಡುವ ಉತ್ತರದಾಯಿತ್ವ ನಮ್ಮ ಯೂನಿಯನ್ ಸರಕಾರಕ್ಕೆ ಇದೆ. ಅವೆಂದರೆ:

ಅ) ಫೆಬ್ರವರಿ 14, 2019ರಂದು ತುಂಬ ಭದ್ರತೆಯಿದ್ದ ಶ್ರೀನಗರ-ಜಮ್ಮು ಹೆದ್ದಾರಿಯ ಪುಲ್ವಾಮಾ ಬಳಿ ನಮ್ಮ ದೇಶದ ಪ್ಯಾರಾ ಮಿಲಿಟರಿ ಪಡೆಯ 78 ವಾಹನಗಳ ಮೇಲೆ ಸುಮಾರು 300 ಕೆಜಿ ಆರ್‌ಡಿಎಕ್ಸ್ ಇದ್ದ ಒಂದು ಕಾರನ್ನು ಭಯೋತ್ಪಾದಕರು ಚಲಾಯಿಸಿದರು. ಪರಿಣಾಮ: 40 ಯೋಧರ ಮಾರಣ ಹೋಮ. ಅಂತಹ ಸೂಕ್ಷ್ಮ ಪ್ರದೇಶದಲ್ಲಿ ಒಮ್ಮೆಗೆ ಇಷ್ಟೊಂದು ಬೆಂಗಾವಲು ಪಡೆಗಳನ್ನು ಯಾವ ಕಾರಣಕ್ಕಾಗಿ ರವಾನಿಸಲಾಗುತ್ತಿತ್ತು ಎಂಬ ಪ್ರಶ್ನೆಗೆ ಇದುವರೆಗೆ ಸೂಕ್ತ ಉತ್ತರ ದೊರೆತಿಲ್ಲ.

ಆ) ಸುಮಾರು 300 ಕೆಜಿ ಆರ್‌ಡಿಎಕ್ಸ್ ಸಾಗಾಟ ಮಾಡುವ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯ ತಪಾಸಣೆ ಇರಲಿಲ್ಲವೆ?

ಇ) 2020ರಲ್ಲಿ ದವಿಂದರ್‌ಸಿಂಗ್ ಎಂಬ ಡಿವೈಎಸ್‌ಪಿ ಭಯೋತ್ಪಾದಕರ ಜೊತೆ ಜೀಪಿನಲ್ಲಿ ಪಯಣಿಸುತ್ತಿದ್ದಾಗ, ತಪಾಸಣೆಗೆ ಒಳಪಟ್ಟು ಸಿಕ್ಕಿ ಬಿದ್ದಿದ್ದ. ನಮ್ಮ ದೇಶದ ಸಂಸತ್ ಮೇಲೆ ಜರುಗಿದ ದಾಳಿಯಲ್ಲಿದ್ದ ಮುಹಮ್ಮದ್ ಎಂಬ ಭಯೋತ್ಪಾದಕನಿಗೆ ಸಹಾಯ ಮಾಡಲು ಅಫ್ಝಲ್‌ಗುರುವಿಗೆ ಅಪ್ಪಣೆ ನೀಡಿದ್ದ ಎಂಬ ವಿಷಯ ತರುವಾಯ ಅಫ್ಝಲ್ ಗುರುವಿನ ಬಳಿ ದೊರಕಿದ ಪತ್ರದ ಮೂಲಕ ಬಹಿರಂಗಗೊಂಡಿತ್ತು. 2001ರ ಸಂಸತ್ ದಾಳಿಯಲ್ಲಿ ಹತರಾದ ಐವರು ಭಯೋತ್ಪಾದಕರ ಪೈಕಿ ಈ ಮುಹಮ್ಮದ್‌ಕೂಡ ಒಬ್ಬನಾಗಿದ್ದ! ಕಾಶ್ಮೀರಿಯಾಗಿರದಿದ್ದ ಈ ಮುಹಮ್ಮದ್‌ಗೆ ಅಫ್ಝಲ್‌ಗುರುವಿಗೆ ಪರಿಚಯ ಮಾಡಿಸಿದ್ದೇ ಈ ದವಿಂದರ್‌ಸಿಂಗ್! ಇಂತಹ ದೇಶದ್ರೋಹದ ಕೃತ್ಯಗಳನ್ನು ಎಸಗಿದ ದವಿಂದರ್‌ಸಿಂಗ್ ತುಂಬ ವರ್ಷಗಳ ಕಾಲ ಕಾಶ್ಮೀರದ ಪೊಲೀಸ್ ಇಲಾಖೆಯ ದೊಡ್ಡ ದೊಡ್ಡ ಸ್ಥಾನಗಳನ್ನು ಅಲಂಕರಿಸಿದ್ದ. ಈತನ ಹಿಂದೆ ಯಾವ ಶಕ್ತಿಗಳು ಕೆಲಸ ಮಾಡಿದ್ದವು? ಪುಲ್ವಾಮಾ ದಾಳಿಯಲ್ಲಿ ಆತನ ಕೈವಾಡವಿತ್ತೇ ಎಂಬ ಪ್ರಶ್ನೆ ಇಂದಿಗೂ ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆ.

ಅಲ್ಲದೆ ಪ್ರಸ್ತುತ ಪಹಲ್ಗಾಮ್‌ನ ಭಯೋತ್ಪಾದನಾ ದಾಳಿ ನಡೆದ ಹುಲ್ಲುಗಾವಲಿನಲ್ಲಿ ಸುಮಾರು 2,000 ಪ್ರವಾಸಿಗಳು ಇದ್ದರು ಎನ್ನಲಾಗಿದೆ. ಮಾಧ್ಯಮಗಳ ವರದಿಗಳ ಪ್ರಕಾರ ಸುಮಾರು 20 ನಿಮಿಷಗಳ ಕಾಲ ಭಯೋತ್ಪಾದಕರು ಗುಂಡುಗಳನ್ನು ಹಾರಿಸಿದ್ದಾರೆ. ನಮ್ಮ ಭದ್ರತಾ ಕಾವಲು ಪಡೆಯವರು ಎಲ್ಲಿದ್ದರು? ಅವರ ಪ್ರತಿಕ್ರಿಯೆ ಏನಾಗಿತ್ತು? ಸೂಕ್ತವಾದ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತೇ? ಸತ್ಯ ಸಂಗತಿ ಏನು? ಈ ದಾಳಿಗೆ ಸಂಬಂಧಿಸಿದಂತೆ ಬೇಹುಗಾರಿಕಾ ಇಲಾಖೆಯ ವೈಫಲ್ಯಗಳಿವೆಯೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಸೂಕ್ಷ ಉತ್ತರಗಳನ್ನು ನಮ್ಮ ಯೂನಿಯನ್ ಸರಕಾರ ನೀಡಬೇಕು. ಅದು ಅದರ ಕರ್ತವ್ಯ ಕೂಡ ಹೌದು.

share
ಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರು
ಮ.ಶ್ರೀ. ಮುರಳಿ ಕೃಷ್ಣ, ಬೆಂಗಳೂರು
Next Story
X