ಮರೆ ಮೋಸದ ಬಜೆಟ್
PC: PTI
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2024-25ರ ಸಾಲಿನ ಬಜೆಟ್ ಮಂಡಿಸಿದ್ದಾರೆ.
►ಇದರ ಸಾರಾಂಶ
►ಒಟ್ಟು ವೆಚ್ಚ- 48.21 ಲಕ್ಷ ಕೋಟಿ ರೂ. (2023-24-45 ಲಕ್ಷ ಕೋಟಿ ರೂ.)
►ರೆವಿನ್ಯೂ ವೆಚ್ಚ- 37 ಲಕ್ಷ ಕೋಟಿ ರೂ.(2023-24ರಲ್ಲಿ-35 ಲಕ್ಷ ಕೋಟಿ, ಪರಿಷ್ಕೃತ ವೆಚ್ಚ 35.40)
►ಬಂಡವಾಳ ವೆಚ್ಚ- 11.11 ಲಕ್ಷ ಕೋಟಿ ರೂ.
►(2023-24ರಲ್ಲಿ -10 ಲಕ್ಷ ಕೋಟಿ ರೂ., ಪರಿಷ್ಕೃತ ವೆಚ್ಚ 9.50)
►ಜಿಡಿಪಿಯ- ಶೇ.3.4
►ವಿತ್ತೀಯ ಕೊರತೆ - ಜಿಡಿಪಿಯ
►ಶೇ.4.9(16.14 ಲಕ್ಷ ಕೋಟಿ ರೂ.)
ಹಣದುಬ್ಬರ ಶೇ.4
►ಒಟ್ಟು ಆದಾಯ- 32.07 ಲಕ್ಷ ಕೋಟಿ ರೂ.
►ರೆವಿನ್ಯೂ- 31.29 ಲಕ್ಷ ಕೋಟಿ ರೂ.(ತೆರಿಗೆ ರೆವಿನ್ಯೂ- 25.83 ಲಕ್ಷ ಕೋಟಿ ರೂ.
►ತೆರಿಗೆಯೇತರ ರೆವಿನ್ಯೂ-5.45 ಲಕ್ಷ ಕೋಟಿ ರೂ.)
►(2023-24ರಲ್ಲಿ-26.32 ಲಕ್ಷ ಕೋಟಿ ರೂ., ಪರಿಷ್ಕೃತ 26.99)
►ಸಾಲ- 16.91 ಲಕ್ಷ ಕೋಟಿ (2023-24ರಲ್ಲಿ-18.70 ಲಕ್ಷ ಕೋಟಿ ರೂ. ಪರಿಷ್ಕೃತ 17.90)
ಆದರೆ ಈ ಬಾರಿ ಮರೆ ಮೋಸದ, ದಿಕ್ಕಿಲ್ಲದ ಯೋಜನೆಗಳನ್ನು ಪ್ರಕಟಿಸಿದ್ದಾರೆ. ಈ ಯೋಜನೆಯ ಮೂಲಕ ಯುವಜನತೆ ಮತ್ತು ಉದ್ಯೋಗದ ಕುರಿತು ತಾವು ಏನೋ ಸಾಧಿಸಿದ್ದೇವೆಂದು ಬಿಜೆಪಿಯವರು ಯದ್ವಾತದ್ವಾ ಎದೆ ತಟ್ಟಿಕೊಳ್ಳುತ್ತಿದ್ದಾರೆ. ಆದರೆ ಅದರ ಹೂರಣ ನೋಡಿದಾಗ ನಯಾಪೈಸಯಷ್ಟು ಉಪಯೋಗ ವಿಲ್ಲವೆಂದು ಮನದಟ್ಟಾಗುತ್ತದೆ
►ಹಣಕಾಸು ಸಚಿವರು ಹೇಳಿದ್ದು
(ಈ ಯೋಜನೆಗಳನ್ನು ನೇರವಾಗಿ ಕಾಂಗ್ರೆಸ್ ಪ್ರಣಾಳಿಕೆಯ ಅಂಪ್ರೆಟಿಸ್ ಯೋಜನೆ, employment linked schemeಗಳಿಂದ ಕದ್ದಿದ್ದಾರೆ)
ಉದ್ಯೋಗ ಕ್ಷೇತ್ರ ಯೋಜನೆ ‘ಎ’-
ಮೊದಲ ಬಾರಿಗೆ ಉದ್ಯೋಗ ಸೇರುವವರಿಗೆ (ಔಪಚಾರಿಕ ವಲಯದಲ್ಲಿ) ಒಂದು ತಿಂಗಳ ವೇತನವನ್ನು-ಮೂರು ಹಂತಗಳಲ್ಲಿ ಪಾವತಿಸಲಾಗುವುದು. ಆದರೆ ಗರಿಷ್ಠ ಮೊತ್ತ ರೂ. 15,000 ಮಾತ್ರ.
►(ಪ್ರತಿ ತಿಂಗಳು 1 ಲಕ್ಷ ರೂ. ಒಳಗೆ ಸಂಬಳ ಇರಬೇಕು)
ವಿಶ್ಲೇಷಣೆ: ಪ್ರತೀ ತಿಂಗಳು ರೂ. 5,000 ಆಧಾರದಲ್ಲಿ ಮೊದಲ ಮೂರು ತಿಂಗಳು ಮಾತ್ರ ಕೊಡುತ್ತಾರೆ, ನಂತರ ಏನು? ಇದು ಖಾಯಂ ನೌಕರಿಗೆ ಮಾತ್ರ ಅನ್ವಯವಾಗುವುದಾದರೆ ಮಾಲಕರು ಖಾಯಂ ನೇಮಕಾತಿ ಯಾಕೆ ಮಾಡಿಕೊಳ್ಳುತ್ತಾರೆ? ಇಲ್ಲಿ ಉದ್ಯೋಗ ಸೃಷ್ಟಿ ಎಲ್ಲಿದೆ? ಇದನ್ನು ಯಾರಾದರೂ ಉದ್ಯೋಗ ಅವಕಾಶ ಯೋಜನೆ ಅಂತ ಕರೆಯುತ್ತಾರೆ.
ಮೊದಲ ಬಾರಿಗೆ ಉದ್ಯೋಗ ಸೇರುವವರಿಗೆ -ನಿರ್ದಿಷ್ಟ ಸ್ಕೇಲ್ ಇನ್ಸೆಂಟಿವ್ನ್ನು ಮಾಲಕ, ಉದ್ಯೋಗಿ- ಇಪಿಎಫ್ ಇರುವವರಿಗೆ ಕೊಡುತ್ತಾರಂತೆ
ವಿಶ್ಲೇಷಣೆ : ಇದರ ಹಿಂದು ಮುಂದು ಏನಂತ ಯಾರಿಗೂ ಗೊತ್ತಿಲ್ಲ. ಮಾಲಕರು, ಉದ್ಯೋಗಿಗಳು ತಮಗೆ ಸಿಗುವ ಇನ್ಸೆಂಟಿವ್ಗಾಗಿ ಯಾವ ನಿಬಂಧನೆಗಳನ್ನು ಪಾಲಿಸಬೇಕು?
ಉದ್ಯೋಗ ಕ್ಷೇತ್ರ ಯೋಜನೆ ‘ಸಿ’ -
ಎರಡು ವರ್ಷಗಳ ಕಾಲ ಮಾಲಕರಿಗೆ ಅವರ ಇಪಿಎಫ್ ಕೊಡುಗೆಯಲ್ಲಿ 3,000 ಮರು ಪಾವತಿ ಮಾಡುತ್ತಾರಂತೆ (ಪ್ರತಿ ತಿಂಗಳ ಸಂಬಳ 1 ಲಕ್ಷದ ರೂ. ಒಳಗೆ ಇರಬೇಕು)
ವಿಶ್ಲೇಷಣೆ: ಇಪಿಎಫ್ಗೆ ರೂ. 3,000ರೂ. ಮರು ಪಾವತಿಸುತ್ತಾರೆ ಎನ್ನುವ ಕಾರಣಕ್ಕೆ ಮಾಲಕ ಸುಖಾಸುಮ್ಮನೆ ನೇಮಕಾತಿ ಮಾಡಿಕೊಳ್ಳುತ್ತಾರಾ? ಮೇಲಿನ ಅತಿ ಸಣ್ಣ ಮೊತ್ತಕ್ಕಾಗಿ ಹೊಸಬರಿಗೆ ವೇತನ ಕೊಡುತ್ತಾರಾ? ಇದು ಉದ್ಯೋಗ ಸೃಷ್ಟಿ ಅಂತ ಹೇಳುವುದಾದರೆ ಇದಕ್ಕಿಂತ ವಿಡಂಬನೆ ಮತ್ತು ದುರಂತ ಮತ್ತೊಂದಿಲ್ಲ.
ಇಂಟರ್ನ್ಶಿಪ್ ವೇತನ 12 ತಿಂಗಳಿಗೆ ರೂ. 5,000 ಕೊಡುತ್ತಾರಂತೆ.
ವಿಶ್ಲೇಷಣೆ: ಇದು ಕಳೆದ ಐವತ್ತು ವರುಷಗಳಿಂದ ಜಾರಿಯಲ್ಲಿರುವ ಅಪ್ರೆಂಟಿಶಿಪ್ ಯೋಜನೆಯ ನಕಲು ರೂಪವಷ್ಟೇ. ಈ ಯೋಜನೆಯನ್ನು ಉದ್ದೇಶಪೂರ್ವಕವಾಗಿ ವಿಫಲಗೊಳಿಸಿದ ಮೋದಿ ಸರಕಾರ ಈಗ ಇಂಟರ್ನ್ಶಿಪ್ ವೇತನ ಎಂದು ನಾಟಕವಾಡುತ್ತಿದೆೆ.
ಇದೂ ಸಹ ಉದ್ಯೋಗ ಸೃಷ್ಠಿಯಲ್ಲ. 12 ತಿಂಗಳ ನಂತರ ಮುಂದೇನು?
ಕೇಂದ್ರ ಸರಕಾರದ ವಿವಿಧ ಇಲಾಖೆಗಳಲ್ಲಿ 9 ಲಕ್ಷ ಹುದ್ದೆಗಳು ಖಾಲಿ ಇದೆಯೆಂದು ಹೇಳುತ್ತಾರೆ. ಇದರ ನೇಮಕಾತಿ ಕುರಿತು ಯಾವುದೇ ರೀತಿಯಲ್ಲಿ ಮಾತನಾಡದೆ ಮೇಲಿನಂತೆ ದಿಕ್ಕು ದೆಸೆಯಿಲ್ಲದ ಉದ್ಯೋಗ ಸೃಷ್ಟಿಯ ಮಾತನಾಡುತ್ತಾರೆ ಎಂದರೆ ಇದು ವಂಚನೆಯಲ್ಲವೇ?
ಇನ್ನು ಮುಂದಿನ ಐದು ವರ್ಷಗಳಲ್ಲಿ 20 ಲಕ್ಷ ಯುವಜನತೆಗೆ ಕೌಶಲ್ಯ ತರಬೇತಿ ಕೊಡುತ್ತಾರಂತೆ.
ತಮಾಷೆಯೆಂದರೆ 2015ರಲ್ಲಿ ಜಾರಿಗೆ ಬಂದ ಈ ಯೋಜನೆ ಮೂಲಕ 2023ರವರೆಗೆ 1.4 ಕೋಟಿ ಯುವಜನತೆಗೆ ಕೌಶಲ್ಯ ತರಬೇತಿ ಕೊಟ್ಟಿದ್ದೇವೆಂದು ಇಲಾಖೆಯ ವೆಬ್ ಸೈಟ್ ನಲ್ಲಿ ಹೇಳುತ್ತಾರೆ. ಇವರಲ್ಲಿ ಕೇವಲ 2.68 ಲಕ್ಷ ಜನತೆಗೆ ಮಾತ್ರ ಉದ್ಯೋಗ ದೊರಕಿದೆ. ಅಂದರೆ ಕೌಶಲ್ಯ ತರಬೇತಿ ಪಡೆದ 1.14 ಕೋಟಿ ಜನಸಂಖ್ಯೆ ಯುವಜನತೆಗೆ ಉದ್ಯೋಗ ದೊರಕಿಲ್ಲ.
ಇದು ಈ ಯೋಜನೆಯ ಹಣೆಬರಹ. ಇದೊಂದು ಜೋಕ್. ಈಗಾಗಲೇ ಐಟಿಐ, ಡಿಪ್ಲೊಮಾ, ಜಿಟಿಟಿಸಿ,
ಎನ್ ಟಿ ಟಿಎಫ್ ಮತ್ತು ಇತರ ನಿರ್ದಿಷ್ಟ ವಲಯ ತರಬೇತಿ ಕಾಲೇಜು, ಕೋರ್ಸ್ಗಳಿದ್ದವು. ಈ ಮೂಲಕ ಲಕ್ಷಾಂತರ ಯುವಜನತೆ ಕೌಶಲ್ಯ ತರಬೇತಿ ಪಡೆಯುತ್ತಿದ್ದರು. ಆದರೆ ಮೋದಿ ಸರಕಾರ ಈ ಕೋರ್ಸುಗಳನ್ನು ಸಬಲೀಕರಣಗೊಳಿಸದೆ ತಮ್ಮದೇ ಕೌಶಲ್ಯ ತರಬೇತಿ ಎನ್ನುವ ವಿಫಲ ಯೋಜನೆ ಜಾರಿಗೊಳಿಸಲು ಮುಂದಾಗಿ ಎಡವಿದ್ದಾರೆ, ಯುವಜನತೆಗೂ ದ್ರೋಹ ಮಾಡಿದೆ.
ಕಳೆದ ೯ ವರ್ಷಗಳಲ್ಲಿ 1.4 ಕೋಟಿ ಜನತೆಗೆ ಕೌಶಲ್ಯ ತರಬೇತಿ ಕೊಟ್ಟವರು ಮುಂದಿನ ಐದು ವರ್ಷಗಳಲ್ಲಿ ಕೇವಲ 20 ಲಕ್ಷ ಯುವಜನತೆಗೆ ತರಬೇತಿ ಕೊಡುತ್ತಾರಂತೆ. ಅಂದರೆ ಈ ಯೋಜನೆಯೇ ವಿಫಲ ಎಂದು ಸ್ವತಃ ಸರಕಾರವೇ ಹೇಳುತ್ತಿದೆಯಲ್ಲವೇ? ಆದರೂ ಮೂಗಿಗೆ ತುಪ್ಪ ಸವರಿದರೆೆ ಎಂದರೆ ಯಾರು ನಂಬುತ್ತಾರೆ?
ಮತ್ತು ಅನೇಕ ಕುಶಲಕರ್ಮಿಗಳು ಭಾರತ ತೊರೆದು ಯುದ್ಧಪೀಡಿತ ಇಸ್ರೇಲ್, ರಶ್ಯಗೆ ಉದ್ಯೋಗ ಅರಸಿ ವಲಸೆ ಹೋಗುತ್ತಿದ್ದಾರೆ. ಇದು ಏನನ್ನು ಸೂಚಿಸುತ್ತದೆ?
ಈ ಬಜೆಟ್ ಕುರಿತು ಕೆಲವು ಪ್ರಶ್ನೆಗಳು
2023-24ರ ಬಜೆಟ್ ನಲ್ಲಿ 17.90 ಲಕ್ಷ ಕೋಟಿ ಸಾಲವನ್ನು ತೆಗೆದುಕೊಂಡಿದ್ದರು. ಇದರಲ್ಲಿ12 ಲಕ್ಷ ಕೋಟಿ ರೂ. ತೆರಿಗೆ ಕಟ್ಟುತ್ತಿದ್ದಾರೆ. ಅಂದರೆ ಉಳಿಯುವುದು ಕೇವಲ 5 ಲಕ್ಷ ಕೋಟಿ ರೂ.. ಸರಕಾರವು ಈ ಹಣವನ್ನು ಮೂಲಭೂತ ಸೌಕರ್ಯಕ್ಕೆ ಬಳಸಿಕೊಳ್ಳುವುದಾಗಿ ಹೇಳಿದೆ. ಆದರೆ ಇವರ ಮೂಲಭೂತ ಸೌಕರ್ಯದ ಉದಾಹರಣೆಯಾಗಿ ಪ್ರಗತಿ ಮೈದಾನ ಸುರಂಗ ಮಾರ್ಗವನ್ನು ತೆಗೆದುಕೊಂಡರೆ ಅದು ವಿಫಲವಾಗಿದೆ. ಅಂದರೆ ಸಾಲ ತೆಗೆದುಕೊಂಡು ಕಟ್ಟಿದ ಕಾಮಗಾರಿ ವ್ಯರ್ಥವಾಗಿದೆ, ಇದನ್ನು ಪ್ರಶ್ನಿಸಬೇಕಲ್ಲವೇ? ಹಾಗೇ ಸಾಲ ಪಡೆದ ಕೋಟಿಗಟ್ಟಲೆ ಮೊತ್ತ ಎಲ್ಲಿ ಹೋಯಿತು? ಈ ಬಾರಿ 16.91 ಲಕ್ಷ ಕೋಟಿ ರೂ. ಸಾಲ ಮಾಡುವುದಾಗಿ ಹೇಳಿದ್ದಾರೆ. ಅಂದರೆ ಮತ್ತಷ್ಟು ಪ್ರಗತಿ ಮೈದಾನಗಳು, ಬಿಹಾರದ ರೀತಿ ಮುರಿದು ಬೀಳುವ ಸೇತುವೆಗಳನ್ನು ಕಟ್ಟುವುದಕ್ಕೆ ಸಾಲ ಮಾಡುತ್ತಿದ್ದಾರೆಯೇ? ಯಾಕೆ ಯಾರೊಬ್ಬರೂ ಪ್ರಶ್ನಿಸುತ್ತಿಲ್ಲ? ಈ ವಿಷವರ್ತುಲದ ಕೊನೆ ಎಂದು?
2019ರಲ್ಲಿ ಶೇ.8ರಷ್ಟು ಕಾರ್ಪೊರೇಟ್ ತೆರಿಗೆ ಕಡಿತಗೊಳಿಸಿದ ನಂತರ ಐದು ವರ್ಷಗಳಲ್ಲಿ 8 ಲಕ್ಷ ಕೋಟಿ ರೂ. ನಷ್ಟವಾಗಿದೆ ಮತ್ತು ಬಂಡವಾಳಿಗರ ಜೇಬಿಗೆ ರೊಕ್ಕ ಬಂದ ನಂತರವೂ ಉತ್ಪಾದನೆ ಸಾಮರ್ಥ್ಯ ಯಾಕೆ ಹೆಚ್ಚಾಗಲಿಲ್ಲ? ಯಾಕೆ ಇಂದಿಗೂ ಉತ್ಪಾದನೆಯು ಜಿಡಿಪಿಯ ಶೇ.15ರಷ್ಟಿದೆ? ಯಾಕೆ ಉದ್ಯೋಗ ಸೃಷ್ಟಿಯಾಗಲಿಲ್ಲ? ಯಾಕೆ ಬೇಡಿಕೆ ಹೆಚ್ಚಲಿಲ್ಲ? ಯಾಕೆ ಕ್ರೂನಿ ಬಂಡವಾಳಶಾಹಿಗಳ ಸಂಪತ್ತು ಶೇ.120ರಷ್ಟು ಹೆಚ್ಚಾಗಿದೆ? ಆದರೂ ಸಹ ಈ ಬಾರಿ ಕಾರ್ಪೊರೇಟ್ ತೆರಿಗೆ ಹೆಚ್ಚಿ ಸಲಿಲ್ಲವೇಕೆ? ಆಮದು, ರಫ್ತು ನೀತಿಯೇನು? |wbgh ghie| ಹೆಚ್ಚಾಗುತ್ತಿದೆ ಯಾಕೆ?
ಈ ಬಾರಿಯೂ ಈಗಾಗಲೇ ಮೂರು ವರ್ಷ ತಡವಾಗಿರುವ ಜನಗಣತಿ ನಡೆಸುವ ಕುರಿತು ಯಾಕೆ ಮಾತನಾಡಲಿಲ್ಲ? ಅದಕ್ಕೆ ಅಗತ್ಯವಿರುವ ಅಂದಾಜು 25,000 ಕೋಟಿ ರೂ. ಅನುದಾನ ಪ್ರಕಟಿಸಲಿಲ್ಲ?
ಇತರ ಪ್ರಕಟಣೆಗಳು
ಎಂಎಸ್ಎಂಇ ವಲಯಕ್ಕಾಗಿ ಯಂತ್ರ ಖರೀದಿಗೆ ಸಾಲ, ತಂತ್ರಜ್ಞಾನ ಬೆಂಬಲ. ಎಸ್ಐಡಿಬಿಐ 24 ಬ್ರಾಂಚ್ಗಳು ತೆರೆಯುವುದು. ಆದರೆ ಜಿಡಿಪಿಗೆ ಶೇ.30 ಕೊಡುಗೆಯಿರುವ ಎಂಎಸ್ಎಂಇಗೆ ಯಾವುದೇ ಬೆಂಬಲವಿಲ್ಲ
ಮುದ್ರಾ ಸಾಲ- ರೂ.10 ಲಕ್ಷದಿಂದ 20 ಲಕ್ಷಕ್ಕೆ ಏರಿಕೆ
ಉನ್ನತ ಶಿಕ್ಷಣ- ರೂ. 10 ಲಕ್ಷದವರೆಗೆ ಸಾಲ
ವಿಶ್ಲೇಷಣೆ : ಸರಕಾರ ಸಾರ್ವಜನಿಕ ಬಂಡವಾಳ ಹೂಡಿಕೆಯಿಂದ ಹೊರ ಬರಲು ಹವಣಿಸುತ್ತಿದೆ.ಜಿಡಿಪಿಯ ಶೇ.6ರಷ್ಟು ಶಿಕ್ಷಣಕ್ಕೆ ಹಂಚಿಕೆ ಮಾಡಲು ವಿಫಲವಾಗಿರುವ ಸರಕಾರ ಈ ರೀತಿ ಸಾಲದ ಮಾಫಿಯಾ ಸೃಷ್ಟಿಸುತ್ತಿದೆ. ಸರಕಾರದ ಬೇಜವಾಬ್ದಾರಿಯಿಂದ ವಿದ್ಯಾರ್ಥಿಗಳು ಸಾಲದ ಸುಳಿಯಲ್ಲಿ ಸಿಲುಕುತ್ತಾರೆ.
ಉಳಿದಂತೆ
►ತೆರಿಗೆ ವೆಚ್ಚ- 11.90 ಲಕ್ಷ ಕೋಟಿ ರೂ.
►ಸಬ್ಸಿಡಿ ವೆಚ್ಚ- 3.81 ಲಕ್ಷ ಕೋಟಿ ರೂ.
►ಕೃಷಿ- 1.52 ಲಕ್ಷ ಕೋಟಿ , ಉದ್ಯೋಗ, ಕೌಶಲ್ಯ- 2 ಲಕ್ಷ ಕೋಟಿ ರೂ.
►ಶಿಕ್ಷಣ- 1.25 ಲಕ್ಷ ಕೋಟಿ
►(2022-23-1.12ಲಕ್ಷ ಕೋಟಿ ರೂ.)
►ಆರೋಗ್ಯ- 89,287 ಕೋಟಿ ರೂ.
►ಗ್ರಾಮೀಣಾಭಿವೃದ್ಧಿ- 2.65 ಲಕ್ಷ ಕೋಟಿ ರೂ.
►ರಕ್ಷಣಾ ವಲಯ -4.56 ಲಕ್ಷ ಕೋಟಿ ರೂ.
►ನರೇಗಾ- 86,000 ಕೋಟಿ ರೂ.
►ಪಿಎಂ ಆವಾಸ್ ಯೋಜನ -30,171 ಕೋಟಿ ರೂ.
►ಪಿಎಂಜಿಎಸ್ ಯೋಜನ -19,000 ಕೋಟಿ ರೂ.
ಕೈಗಾರಿಕಾ ಕಾರ್ಮಿಕರಿಗೆ ಪಿಪಿಪಿ ಮಾದರಿಯಲ್ಲಿ ಮನೆಗಳು
ಮಹಿಳೆ ಮತ್ತು ಬಾಲಕಿಯರ ಬೆಂಬಲ- 3 ಲಕ್ಷ ಕೋಟಿ ರೂ. ನರೇಗಾ ಯೋಜನೆಗೆ ಮತ್ತೆ ಮತ್ತೆ ಆರ್ಥಿಕ ಅನುದಾನ ಹಂಚಿಕೆ ಮಾಡುತ್ತಿಲ್ಲ. ಒಟ್ಟಾರೆ ಯಾವುದೇ ಹೊಸತನವಿಲ್ಲದ ನಿರಾಶೆಗೊಳಿಸುವ ಬಜೆಟ್. ನಿರ್ಮಲಾ ಸೀತಾರಾಮನ್ ರಂತಹ ಹಣಕಾಸು ಸಚಿವರು ತಮ್ಮ ಜವಾಬ್ದಾರಿ ಏನು ಎಂಬುದನ್ನು ಅರಿತಿಲ್ಲ, ಅವರ ಆರ್ಥಿಕ ನೀತಿಗೂ ಯಾವುದೇ ತಳಬುಡವಿಲ್ಲ ಎಂದು ಇದರಿಂದ ಸಾಬೀತಾಗುತ್ತದೆ.