Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತದಿಂದಲೂ ಪೆಗಾಸಸ್ ವಿರುದ್ಧ ಕಠಿಣ...

ಭಾರತದಿಂದಲೂ ಪೆಗಾಸಸ್ ವಿರುದ್ಧ ಕಠಿಣ ಕ್ರಮ ನಿರೀಕ್ಷಿಸಲು ಸಾಧ್ಯವೇ?

ಎಸ್. ಸುದರ್ಶನ್ಎಸ್. ಸುದರ್ಶನ್1 Feb 2025 2:52 PM IST
share
ಭಾರತದಿಂದಲೂ ಪೆಗಾಸಸ್ ವಿರುದ್ಧ ಕಠಿಣ ಕ್ರಮ ನಿರೀಕ್ಷಿಸಲು ಸಾಧ್ಯವೇ?
ಸ್ಪೈವೇರ್ ಇತ್ಯಾದಿಗಳು ಇಂದು ಮಕ್ಕಳ ಆಟಿಕೆಯಂತಾಗಿವೆ. ವಾಕಿಟಾಕಿ ಮತ್ತು ಪೇಜರ್‌ಗಳಂತಹ ಸಾಧನಗಳು ದೂರದಿಂದಲೇ ಸ್ಫೋಟಗೊಳಿಸಲಾದ ಇತ್ತೀಚಿನ ಪ್ರಕರಣಗಳನ್ನು ನೆನಪು ಮಾಡಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ ಭಾರತ ಸರಕಾರ ಸ್ಪೈವೇರ್ ಬಳಕೆಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ? ಆದರೆ ಸಾರ್ವಜನಿಕರು ಆನ್‌ಲೈನ್ ಭದ್ರತೆ, ಗೌಪ್ಯತೆ ಎಂಬುದೊಂದು ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗುತ್ತದೆ. ಇದು ಅರ್ಥವಾಗದಿದ್ದರೆ, ಬ್ಯಾಂಕ್ ಖಾತೆ ಮಾತ್ರ ಖಾಲಿ ಯಾಗುವುದಿಲ್ಲ. ಜೊತೆಗೇ ಚಾರಿತ್ರ್ಯಕ್ಕೂ ಹೊಡೆತ ಬಿದ್ದೀತು.

ವಿಶ್ವದ ಅತ್ಯಂತ ಅಪಾಯಕಾರಿ ಕಣ್ಗಾವಲು ಸಾಧನ ಪೆಗಾಸಸ್ ಮತ್ತೊಮ್ಮೆ ಸುದ್ದಿಯಲ್ಲಿದೆ.

ಪೆಗಾಸಸ್ ತಯಾರಕ ಇಸ್ರೇಲಿ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಕಂಪ್ಯೂಟರ್ ವಂಚನೆ ಮತ್ತು ಅಕ್ರಮ ಹ್ಯಾಕಿಂಗ್‌ಗಾಗಿ ತಪ್ಪಿತಸ್ಥ ಎಂದು ಅಮೆರಿಕ ನ್ಯಾಯಾಲಯ ತೀರ್ಪು ನೀಡಿದೆ.

ವಿರೋಧಿ ಧ್ವನಿಗಳನ್ನು ನಿಗ್ರಹಿಸಲು ಪೆಗಾಸಸ್ ಮೂಲಕ ಭಾರತ ಸಹಿತ ಹಲವು ದೇಶಗಳಲ್ಲಿ ಅನೇಕ ಪತ್ರಕರ್ತರು, ಕಾರ್ಯಕರ್ತರು, ವಿರೋಧ ಪಕ್ಷದ ನಾಯಕರ ಧ್ವನಿಯನ್ನು ದಮನಿಸಲಾಗಿದೆ ಅಥವಾ ಅವರ ವೃತ್ತಿಜೀವನವನ್ನು ಹಾಳು ಮಾಡಲಾಗಿದೆ. ಈಗ ವಿಶ್ವದಲ್ಲಿ ಮೊದಲ ಬಾರಿಗೆ ಈ ಸ್ಪೈವೇರ್‌ನ ಮಾಲಕರು ಅದರಿಂದ ಉಂಟಾದ ನಷ್ಟಕ್ಕೆ ಪರಿಹಾರ ನೀಡಬೇಕಾಗಿದೆ.

ಈ ಆಯುಧ ವಾಕ್ ಸ್ವಾತಂತ್ರ್ಯದ ಮೇಲೆ ಉಂಟು ಮಾಡಿರುವ ಗಾಯಗಳನ್ನು ಯಾವುದೇ ಇತ್ಯರ್ಥ ಅಥವಾ ಕೋರ್ಟ್ ಪ್ರಕರಣದಿಂದ ಸರಿದೂಗಿಸಲು ಸಾಧ್ಯವಿಲ್ಲ. ಆದರೆ ಕನಿಷ್ಠ ಒಂದು ಹೊಣೆಗಾರಿಕೆಯನ್ನು ನಿಗದಿಪಡಿಸಲಾಗುತ್ತಿದೆ.

ಆದರೆ ಭಾರತ ಸೇರಿದಂತೆ ಅನೇಕ ದೇಶಗಳ ಸರಕಾರಗಳು ಈ ವಿಷಯದ ಬಗ್ಗೆ ಸರಿಯಾದ ತನಿಖೆಗೆ ಅವಕಾಶ ನೀಡಲಿಲ್ಲ.

ಈ ಪೆಗಾಸಸ್ ವಿಶ್ವದ ಅತ್ಯಂತ ಅಪಾಯಕಾರಿ ಸಾಧನವಾಗಿದೆ, ಆಯುಧವಾಗಿದೆ. ಪೆಗಾಸಸ್ ಒಂದು ಮಿಲಿಟರಿ ದರ್ಜೆಯ ಕಣ್ಗಾವಲು ಸಾಧನವಾಗಿದ್ದು, ಅದು ಒಮ್ಮೆ ಮೊಬೈಲ್ ಒಳಗೆ ಬಂದರೆ ಅದರ ಸಂಪರ್ಕಗಳು, ಸಂದೇಶಗಳು, ಫೋನ್ ಮತ್ತು ಲೈವ್ ಸ್ಥಳ ಸೇರಿದಂತೆ ಆ ಸಾಧನದ ಎಲ್ಲಾ ಡೇಟಾಗಳಿಗೂ ಅಕ್ಸೆಸ್ ಪಡೆಯುತ್ತದೆ.

ಭಾರತದಲ್ಲಿ ಇಷ್ಟೊಂದು ಗದ್ದಲದ ನಂತರವೂ, ಯಾವುದೇ ನ್ಯಾಯಾಲಯ ಅಥವಾ ತನಿಖಾ ಸಂಸ್ಥೆ ಎನ್‌ಎಸ್‌ಒ ಅನ್ನು ಏಕೆ ವಿಚಾರಣೆಗೆ ಒಳಪಡಿಸಲಿಲ್ಲ ಎಂಬುದು ನಿಗೂಢವಾಗಿಯೇ ಉಳಿದಿದೆ.

ಮೆಕ್ಸಿಕನ್ ಪತ್ರಕರ್ತ ಸಿಸಿಲಿಯೊ ಪಿನೆಟ್ಟಾ ತನ್ನ ಊರಿನಲ್ಲಿ ಕಾರ್‌ವಾಶ್ ಮಾಡಿಸಲು ಕಾದು ನಿಂತಿದ್ದಾಗ ಇದ್ದಕ್ಕಿದ್ದಂತೆ ಒಂದು ಗುಂಪು ಗುಂಡು ಹಾರಿಸಿ ಕೊಂದು ಬಿಡುತ್ತದೆ. ಭಾರತದ ಬಸ್ತರ್‌ನಲ್ಲಿ ಮುಕೇಶ್ ಚಂದ್ರಾಕರ್ ಅವರ ಪ್ರಭಾವಶಾಲಿ ವರದಿಗಾರಿಕೆಯಂತೆ, ಸಿಸಿಲಿಯೊ ಒಬ್ಬ ನಿರ್ಭೀತ, ಸ್ವತಂತ್ರ ತನಿಖಾ ವರದಿಗಾರನಾಗಿದ್ದರು. ಆತ ಕಾರ್ಯನಿರ್ವಹಿಸುತ್ತಿದ್ದ ಸ್ಥಳ ಮಾದಕವಸ್ತು ದಂಧೆಕೋರರ ತಾಣವಾಗಿತ್ತು. ಸಿಸಿಲಿಯೊ ವರದಿಗಳು ದಿನದಿಂದ ದಿನಕ್ಕೆ ಹೆಚ್ಚು ಹೆಚ್ಚು ದಿಟ್ಟತನದಿಂದ ಬಂದವು. ವಾಸ್ತವವಾಗಿ, ಸಾವಿಗೆ ಕೆಲವೇ ಗಂಟೆಗಳ ಮೊದಲು ಕೂಡ ಅವರು ಆ ಕುರಿತಾಗಿಯೇ ಬಹಿರಂಗಪಡಿಸಿದ್ದರು.

ಅವರ ಮರಣದ 5 ವರ್ಷಗಳ ನಂತರ, ಅವರ ಮೊಬೈಲ್ ಫೋನ್‌ನಲ್ಲಿ ಪೆಗಾಸಸ್ ಸ್ಪೈವೇರ್ ಇಡಲಾಗಿತ್ತು ಎಂದು ತಿಳಿದುಬಂದಿದೆ.

ಸಿಸಿಲಿಯೊ ದುಷ್ಕರ್ಮಿಗಳ ಟಾರ್ಗೆಟ್ ಆಗಿದ್ದರು.ಕೊಲೆಗಾರರು ಸಿಸಿಲಿಯೊ ಅವರ ಲೈವ್ ಲೊಕೇಶನ್ ಅನ್ನು ಫೋನ್‌ನಲ್ಲಿನ ಸ್ಪೈವೇರ್ ಮೂಲಕ ಟ್ರ್ಯಾಕ್ ಮಾಡಿ ಅಲ್ಲಿಗೆ ಹೋಗಿ ಕೊಂದಿದ್ದಾರೆ ಎಂದು ಶಂಕಿಸಲಾಗಿದೆ.

ಆದರೆ ಸಮಸ್ಯೆಯೆಂದರೆ ಸಿಸಿಲಿಯೊ ಪ್ರಕರಣ ಒಂದು ಪ್ರತ್ಯೇಕ ಘಟನೆಯಲ್ಲ. 2016ರಿಂದ 2017ರ ಅವಧಿಯಲ್ಲಿ ಸೋರಿಕೆಯಾದ ಪೆಗಾಸಸ್ ಡೇಟಾಬೇಸ್‌ನಲ್ಲಿ 26 ಮೆಕ್ಸಿಕನ್ ಪತ್ರಕರ್ತರ ಫೋನ್ ಸಂಖ್ಯೆಗಳು ಕಂಡುಬಂದಿವೆ. ಇವರು ಭ್ರಷ್ಟಾಚಾರ ಮತ್ತು ಅಪರಾಧದ ವಿರುದ್ಧ ಕೆಲಸ ಮಾಡುತ್ತಿದ್ದವರು. ಈ ಪಟ್ಟಿಯಲ್ಲಿ ಸ್ಥಳೀಯ ವರದಿಗಾರರು ಮಾತ್ರವಲ್ಲದೆ ಅಂತರ್‌ರಾಷ್ಟ್ರೀಯ ಪತ್ರಕರ್ತರು ಮತ್ತು ಸಂಪಾದಕರು ಕೂಡ ಸೇರಿದ್ದರು.

ವಾಸ್ತವವಾಗಿ ಈ ಪೆಗಾಸಸ್ 2021ರಲ್ಲಿ ದೊಡ್ಡ ಹಗರಣವಾಗಿ ಜಗತ್ತನ್ನೇ ಆಘಾತಕ್ಕೆ ತಳ್ಳಿತ್ತು.

ನಮ್ಮ ಪ್ರತಿಯೊಂದು ವೈಯಕ್ತಿಕ ಡೇಟಾವನ್ನು ಕೆಲವು ಪ್ರಬಲ ವ್ಯಕ್ತಿಗಳು ಅಥವಾ ಸಂಸ್ಥೆಗಳು ಯಾವುದೇ ಸಮಯದಲ್ಲಿ ನಮಗೆ ತಿಳಿಯದೆ ಪಡೆಯಬಹುದು. ಪೆಗಾಸಸ್ ಅಂತಹ ಸ್ಪೈವೇರ್ ಆಗಿದ್ದು, ಅದನ್ನು ಶೂನ್ಯ ಕ್ಲಿಕ್ ಕಾರ್ಯವಿಧಾನದೊಂದಿಗೆ ಯಾರದೇ ಫೋನ್‌ನಲ್ಲಿ ಇಡಬಹುದು, ಟಾರ್ಗೆಟ್ ಮಾಡಬಹುದು.

ಅಂದರೆ ಆ ಮೊಬೈಲ್ ಬಳಕೆದಾರರು ಏನನ್ನೂ ಮಾಡದೇ ಇದ್ದರೂ, ಯಾವುದೇ ಸಾಫ್ಟ್‌ವೇರ್ ಡೌನ್‌ಲೋಡ್ ಮಾಡದಿದ್ದರೂ, ಅದು ಫೋನ್ ಒಳಗೆ ಸೇರಿಕೊಳ್ಳಬಹುದು.

ಒಮ್ಮೆ ಅದನ್ನು ಅಳವಡಿಸಿದ ನಂತರ, ಅದು ಅನುಮತಿಯಿಲ್ಲದೆ ಫೋನ್ ಅಕ್ಸೆಸ್ ಅನ್ನು ಬೇರೆಯವರಿಗೆ ನೀಡುತ್ತದೆ. ನಿಮ್ಮ ಅನುಮತಿಯಿಲ್ಲದೆ ನಿಮ್ಮ ಎಲ್ಲಾ ಡೇಟಾವನ್ನು ಅದು ಪ್ರವೇಶಿಸುತ್ತದೆ ಮತ್ತು ನಿಮಗೆ ಸುಳಿವು ಸಹ ಸಿಗುವುದಿಲ್ಲ. ನಿಮ್ಮ ಫೋನ್‌ನ ಕ್ಯಾಮರಾ ಮತ್ತು ಮೈಕ್ರೊಫೋನ್ ಅನ್ನು ಸಹ ರಿಮೋಟ್ ಆಗಿ ಆನ್ ಅಥವಾ ಆಫ್ ಮಾಡಬಹುದು.

ಈ ಸಾಧನವನ್ನು 2021ರ ವೇಳೆಗೆ ಸಾವಿರಾರು ಜನರನ್ನು ಗುರಿಯಾಗಿಸಲು ಬಳಸಲಾಯಿತು. ಇದು ಪ್ರಮುಖ ರಾಜಕೀಯ ನಾಯಕರು, ಪ್ರಮುಖ ವಿರೋಧ ಪಕ್ಷದ ವ್ಯಕ್ತಿಗಳು, ಮಾನವ ಹಕ್ಕುಗಳ ಸಂಘಟನೆಗಳು, ಪತ್ರಕರ್ತರು, ಕಾರ್ಯಕರ್ತರು, ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ಪ್ರಪಂಚದಾದ್ಯಂತದ 17 ಮಾಧ್ಯಮ ಸಂಸ್ಥೆಗಳು ಸೇರಿದಂತೆ ಉನ್ನತ ಮಟ್ಟದ ಟಾರ್ಗೆಟ್‌ಗಳನ್ನು ಹೊಂದಿತ್ತು.

80 ಪತ್ರಕರ್ತರು ಈ ಸಮಸ್ಯೆಯನ್ನು ತನಿಖೆ ಮಾಡಲು ಒಟ್ಟುಗೂಡಿದರು ಮತ್ತು ಅದರ ಸಂಪೂರ್ಣ ಜಾಲವನ್ನು ಬಹಿರಂಗಪಡಿಸಿದರು.

ಈ ಸಮಯದಲ್ಲಿ, ಮಿಲಿಟರಿ ದರ್ಜೆಯ ಸ್ಪೈವೇರ್ ತಯಾರಕ ಎನ್‌ಎಸ್‌ಒ ಗ್ರೂಪ್ ತಾನು ಸರಕಾರಗಳ ಜೊತೆ ಮಾತ್ರ ವ್ಯವಹರಿಸುವುದಾಗಿಯೂ, ಈ ಸ್ಪೈವೇರ್‌ಗೆ ಪ್ರಪಂಚದಾದ್ಯಂತದ ಸರಕಾರಗಳಿಗೆ ಮಾತ್ರ ಅಕ್ಸೆಸ್ ನೀಡುವುದಾಗಿಯೂ ಹೇಳಿತು. ಇದನ್ನು ಭಯೋತ್ಪಾದಕ ಅಪರಾಧಿಗಳನ್ನು ಪತ್ತೆಹಚ್ಚಲು ಬಳಸಬೇಕು ಎಂದಿತ್ತು.

ಆದರೆ 2021ರ ಪ್ರಾಜೆಕ್ಟ್ ಪೆಗಾಸಸ್ ವರದಿ, ಸರಕಾರಗಳು ಸ್ವತಃ ಮಿಲಿಟರಿ ದರ್ಜೆಯ ಸೈಬರ್ ಅಸ್ತ್ರವನ್ನು ದೊಡ್ಡ ಪ್ರಮಾಣದಲ್ಲಿ ದುರುಪಯೋಗಪಡಿಸಿಕೊಳ್ಳುತ್ತಿವೆ ಎಂದು ಬಹಿರಂಗಪಡಿಸಿದೆ.

ದೇಶದ ಶತ್ರುಗಳಿಗಿಂತ ಹೆಚ್ಚಾಗಿ, ಸರಕಾರಗಳು ತನ್ನ ಟೀಕಾಕಾರರನ್ನು ಪೆಗಾಸಸ್ ಮೂಲಕ ಗುರಿಯಾಗಿಸಿಕೊಂಡಿದ್ದವು. ಇದರಲ್ಲಿ ಮೋದಿ ಸರಕಾರ ಮತ್ತು ಭಾರತದ ಹೆಸರು ಕೂಡ ಬರುತ್ತದೆ.

ಮೆಕ್ಸಿಕೋದಲ್ಲಿ ಸಿಸಿಲಿಯೊ ಹತ್ಯೆಯಾದ ಕೆಲವೇ ತಿಂಗಳುಗಳ ನಂತರ, ಭಾರತದಲ್ಲಿ ಮೋದಿ ಸರಕಾರದ ಟೀಕಾಕಾರ ರೋನಾ ವಿಲ್ಸನ್ ಅವರ ಫೋನ್‌ನಲ್ಲಿ ಪೆಗಾಸಸ್ ಇಡಲು ಪ್ರಯತ್ನಿಸಲಾಯಿತು.

ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಪ್ರಕಾರ, 2017ರ ಜುಲೈನಲ್ಲಿ ವಿಲ್ಸನ್ ಅವರ ಫೋನ್ ಅನ್ನು ಮೊದಲ ಬಾರಿಗೆ ಹ್ಯಾಕ್ ಮಾಡಲಾಯಿತು.

ನಂತರ 2018ರ ಮಾರ್ಚ್‌ವರೆಗೆ, ಪೆಗಾಸಸ್ ಮೂಲಕ ಅವರ ಫೋನ್‌ಗೆ ಮತ್ತೊಮ್ಮೆ ಹ್ಯಾಕ್ ಮಾಡಲಾಯಿತು.

2018ರ ಎಪ್ರಿಲ್‌ನಲ್ಲಿ ಪುಣೆ ಪೊಲೀಸರು ವಿಲ್ಸನ್ ಅವರ ಮನೆಯ ಮೇಲೆ ದಾಳಿ ಮಾಡಿದರು. ಜೂನ್‌ನಲ್ಲಿ ಅವರನ್ನು ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಬಂಧಿಸಲಾಯಿತು.

ಆರೂವರೆ ವರ್ಷಗಳ ನಂತರ ಈಚೆಗಷ್ಟೇ ಅವರಿಗೆ ಜಾಮೀನು ಸಿಕ್ಕಿದೆ. ಅವರ ವಿರುದ್ಧ ಮಾಡಲಾದ ಗಂಭೀರ ಆರೋಪಗಳಲ್ಲಿ ಏನನ್ನೂ ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.

ಪೆಗಾಸಸ್ ಮೂಲಕ ಫೋನ್ ಹ್ಯಾಕ್‌ಗೆ ಒಳಗಾಗಿರುವುದು ವಿಲ್ಸನ್ ಒಬ್ಬರೇ ಅಲ್ಲ. 2021ರ ವರದಿಗಳ ಪ್ರಕಾರ, ಭಾರತದಲ್ಲಿ 300ಕ್ಕೂ ಹೆಚ್ಚು ಫೋನ್ ಸಂಖ್ಯೆಗಳನ್ನು ಗುರಿಯಾಗಿಸಲಾಗಿತ್ತು.

ವಿರೋಧ ಪಕ್ಷದ ನಾಯಕರು ಈ ಪಟ್ಟಿಯಲ್ಲಿದ್ದರು.

ರಾಹುಲ್ ಗಾಂಧಿ, ಟಿಎಂಸಿಯ ಅಭಿಷೇಕ್ ಬ್ಯಾನರ್ಜಿ, ಪ್ರಶಾಂತ್ ಕಿಶೋರ್, ಪರಂಜೊಯ್ ಗುಹಾ ಠಾಕುರ್ತಾ, ಎನ್.ರಾಮ್ ಅವರಂತಹ ಪತ್ರಕರ್ತರು, ರೋನಾ ವಿಲ್ಸನ್, ಗೌತಮ್ ನವ್ಲಾಖಾ, ಉಮರ್ ಖಾಲಿದ್ ಅವರಂತಹ ಕಾರ್ಯಕರ್ತರು ಈ ಪಟ್ಟಿಯಲ್ಲಿದ್ದರು. ಆಗಿನ ಚುನಾವಣಾ ಆಯುಕ್ತ ಅಶೋಕ್ ಲವಾಸಾ ಕೂಡ ಈ ಪಟ್ಟಿಯಲ್ಲಿದ್ದರು.

ಭಾರತ ಸರಕಾರ ನಿರೀಕ್ಷೆಯಂತೆ ಈ ವಿಷಯವನ್ನು ಸಂಪೂರ್ಣವಾಗಿ ತಿರಸ್ಕರಿಸಿದೆ. ಆಗಿನ ಮಾಹಿತಿ ಮತ್ತು ಪ್ರಸಾರ ಸಚಿವ ಅಶ್ವಿನಿ ವೈಷ್ಣವ್, ಇವು ಸ್ಪಷ್ಟ ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡುವ ಗುರಿಯನ್ನು ಹೊಂದಿರುವ ಅತಿಯಾದ ಆರೋಪಗಳಾಗಿವೆ ಎಂದು ಸಂಸತ್ತಿನಲ್ಲಿ ಹೇಳಿದ್ದರು.

ಆ ಸಮಯದಲ್ಲಿ ಮೋದಿ ಸರಕಾರ ಹೇಗೋ ಸಂಸತ್ತನ್ನು ನಿರ್ವಹಿಸಿತು. ಆದರೆ ಸುಪ್ರೀಂ ಕೋರ್ಟ್ ಸರಕಾರಕ್ಕೆ ನೇರ ಪ್ರಶ್ನೆ ಯನ್ನು ಕೇಳಿತು. ಭಾರತ ಸರಕಾರ ನಾಗರಿಕರ ಮೇಲೆ ಕಣ್ಣಿಡಲು ಪೆಗಾಸಸ್ ಅನ್ನು ಬಳಸಿದೆಯೇ ಎಂಬುದು ಆ ಪ್ರಶ್ನೆಯಾಗಿತ್ತು.

ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ಬಳಸುವ ಯಾವುದೇ ಸಾಫ್ಟ್‌ವೇರ್‌ನ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವುದಿಲ್ಲ ಎಂದು ಸರಕಾರ ದೀರ್ಘ ಉತ್ತರ ನೀಡಿತು.

ಈ ಮಾಹಿತಿಯನ್ನು ನೀಡಲು ಸಾಧ್ಯವಿಲ್ಲ, ಇದು ರಾಷ್ಟ್ರೀಯ ಭದ್ರತೆಯ ವಿಷಯ ಎಂದುಬಿಟ್ಟಿತ್ತು. ಆದರೆ ಆಗಿನ ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ ಅವರು ಸರಕಾರವನ್ನು ಖಂಡಿಸಿದ್ದರು. ‘‘ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ನೀವು ಪ್ರತೀ ಬಾರಿಯೂ ಉಚಿತ ಪಾಸ್ ತೆಗೆದುಕೊಳ್ಳಲು ಸಾಧ್ಯವಿಲ್ಲ’’ ಎಂದಿದ್ದರು.

ಸುಪ್ರೀಂ ಕೋರ್ಟ್ ತಾಂತ್ರಿಕ ತನಿಖಾ ಸಮಿತಿಯನ್ನು ಸ್ಥಾಪಿಸಲು ಆದೇಶಿಸಿತು ಮತ್ತು 2021ರ ಅಕ್ಟೋಬರ್‌ನಲ್ಲಿ ಸ್ವತಂತ್ರ ತಾಂತ್ರಿಕ ಸಮಿತಿಯನ್ನು ಸಹ ರಚಿಸಲಾಯಿತು. ಸಮಿತಿ 29 ಮೊಬೈಲ್ ಫೋನ್‌ಗಳ ವಿಧಿವಿಜ್ಞಾನ ವಿಶ್ಲೇಷಣೆ ನಡೆಸಿ, ಅವುಗಳಲ್ಲಿ ಕೆಲವು ರೀತಿಯ ಮಾಲ್‌ವೇರ್ ಅಳವಡಿಕೆಯಾಗಿರುವುದನ್ನು ಕಂಡುಕೊಂಡಿತು. ಆದರೆ ಅದು ಪೆಗಾಸಸ್ ಸಾಫ್ಟ್‌ವೇರ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಲಿಲ್ಲ.

ಈ ಪೆಗಾಸಸ್ ಸ್ಪೈವೇರ್‌ನ ವಿಶೇಷತೆಯೆಂದರೆ, ಅದು ತನ್ನ ಕುರುಹುಗಳನ್ನು ಅಳಿಸಿಹಾಕುತ್ತದೆ ಮತ್ತು ಕೆಲಸ ಪೂರ್ಣಗೊಂಡಾಗ ಫೋನ್‌ನಿಂದ ತಂತಾನೇ ಇಲ್ಲವಾಗುತ್ತದೆ.

ಕೇಂದ್ರ ಸರಕಾರ ಅಂದರೆ ಮೋದಿ ಸರಕಾರ ಕೂಡ ತನಿಖೆಯಲ್ಲಿ ಈ ಸಮಿತಿಯೊಂದಿಗೆ ಸಹಕರಿಸಲಿಲ್ಲ ಎನ್ನಲಾಗಿದೆ. ಸರಕಾರ ಸಮಿತಿಯ ಮುಂದೆ ತನ್ನ ಹಳೇ ನಿಲುವನ್ನೇ ತೋರಿಸಿತ್ತು. ಮಾಹಿತಿ ನೀಡಲು ಸಾಧ್ಯವಿಲ್ಲ, ಇದು ರಾಷ್ಟ್ರೀಯ ಭದ್ರತೆಯ ವಿಷಯ ಎಂದಿತ್ತು. ಮಾತ್ರವಲ್ಲದೆ, ಸುಪ್ರೀಂ ಕೋರ್ಟ್ ಸ್ವತಃ ರಚಿಸಿದ ಸಮಿತಿಯ ವರದಿಯನ್ನು ಸಹ ಇಂದಿನವರೆಗೆ ಸಾರ್ವಜನಿಕಗೊಳಿಸಲಾಗಿಲ್ಲ. ಎಲ್ಲವೂ ಮುಚ್ಚಿದ ಕವರ್‌ನಲ್ಲಿದೆ.

ಆದರೆ ಈ ಪ್ರಕರಣದಲ್ಲಿ ಅಮೆರಿಕದ ನ್ಯಾಯಾಲಯಗಳು ಮತ್ತು ಏಜೆನ್ಸಿಗಳು ಹೇಗೆ ಕಠಿಣ ನಿಲುವು ತೆಗೆದುಕೊಂಡಿವೆ ಎಂಬುದನ್ನು ಗಮನಿಸಬೇಕು.

ನಾಗರಿಕರ ಹಕ್ಕುಗಳನ್ನು ಉಲ್ಲಂಘಿಸಿದಾಗ ಮತ್ತು ಕಂಪೆನಿಗಳ ಹಕ್ಕುಗಳನ್ನು ಉಲ್ಲಂಘಿಸಿದಾಗ ತನಿಖೆ ನಡೆಸಲು ಅಮೆರಿಕದ ಕಾನೂನು ವ್ಯವಸ್ಥೆ ಅನುಮತಿಸುವಾಗ ನಾವೇಕೆ ಅಂಥ ತನಿಖೆಯನ್ನು ಮಾಡಲು ಸಾಧ್ಯವಿಲ್ಲ?

ಅಮೆರಿಕದ ಕ್ಯಾಲಿಫೋರ್ನಿಯಾ ಕೋರ್ಟ್ ಎನ್‌ಎಸ್‌ಒ ಗ್ರೂಪ್ ವಿರುದ್ಧ ತೀರ್ಪು ನೀಡುತ್ತಾ, ಕಂಪೆನಿ ಪೆಗಾಸಸ್ ಸ್ಪೈವೇರ್ ಬಳಸುವ ಮೂಲಕ ದೌರ್ಬಲ್ಯದ ಲಾಭ ಪಡೆದುಕೊಂಡಿದೆ ಎಂದು ಹೇಳಿದೆ. ಇದರೊಂದಿಗೆ, ಎನ್‌ಎಸ್‌ಒ ಗ್ರೂಪ್ ಸಂಪೂರ್ಣ ತನಿಖೆಯಲ್ಲಿ ಯಾವುದೇ ಸಹಕಾರ ತೋರಿಸಲಿಲ್ಲ ಎಂದು ಕೂಡ ಕೋರ್ಟ್ ಹೇಳಿದೆ.

ಯಾವುದೇ ಅಮೆರಿಕನ್ ಏಜೆನ್ಸಿ ಅಥವಾ ಖಾಸಗಿ ಸಂಸ್ಥೆಯು ಎನ್‌ಎಸ್‌ಒ ಗ್ರೂಪ್‌ನೊಂದಿಗೆ ಸಂವಹನ ನಡೆಸಲು ಯಾವುದೇ ಅನುಮತಿಯನ್ನು ಹೊಂದಿಲ್ಲ. ಆದರೆ ಅದೇ ಸಮಯದಲ್ಲಿ ಭಾರತ ಸರಕಾರ ಏನು ಮಾಡಿತ್ತು?

2023ರ ಅಕ್ಟೋಬರ್‌ನಲ್ಲಿ ಮಹುವಾ ಮೊಯಿತ್ರಾ ಸೇರಿದಂತೆ 20 ಪ್ರಮುಖ ಟೀಕಾಕಾರರ ಫೋನ್‌ಗಳಲ್ಲಿ ಇಂಥದೊಂದು ಸ್ಪೈವೇರ್ ಅಳವಡಿಕೆ ಬಗ್ಗೆ ಎಚ್ಚರಿಕೆ ಸಂದೇಶ ಬಂದಿತ್ತು. ಇದರೊಂದಿಗೆ, ವಿರೋಧಿಗಳನ್ನು ಗುರಿಯಾಗಿಸುವವವರ ಆಟ ಬಯಲಾಗಿತ್ತು.

2023ರಲ್ಲಿ ಆ್ಯಮ್ನೆಸ್ಟಿ ಇಂಟರ್‌ನ್ಯಾಷನಲ್ ಮತ್ತು ‘ದಿ ವಾಶಿಂಗ್ಟನ್ ಪೋಸ್ಟ್’ ನಡೆಸಿದ ಜಂಟಿ ತನಿಖೆ ಕೂಡ ಟೀಕಾಕಾರರ ಫೋನ್‌ನಲ್ಲಿ ಸ್ಪೈವೇರ್ ಅಳವಡಿಕೆಯಾಗಿರುವುದನ್ನು ಬಹಿರಂಗಪಡಿಸಿತ್ತು.

ಯುರೋಪ್‌ನಲ್ಲಿಯೂ ಪೆಗಾಸಸ್ ಸ್ಪೈವೇರ್ ದುರುಪಯೋಗದ ವಿರುದ್ಧ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಯುರೋಪಿಯನ್ ಪಾರ್ಲಿಮೆಂಟ್ 2022ರಲ್ಲಿ ಪೆಗಾಸಸ್ ಸ್ಪೈವೇರ್ ದುರುಪಯೋಗದ ಬಗ್ಗೆ ಚರ್ಚಿಸಿ, ತನಿಖಾ ಸಮಿತಿಯನ್ನು ರಚಿಸಿತ್ತು.

ಅಲ್ಲಿ ಸ್ವತಂತ್ರ ಪತ್ರಕರ್ತರು ಮತ್ತು ವಿರೋಧ ಪಕ್ಷದ ನಾಯಕರನ್ನು ಸ್ಪೈವೇರ್ ಬಳಸಿ ಗುರಿಯಾಗಿಸಲಾಗಿತ್ತು.

ಫ್ರಾನ್ಸ್ ತನ್ನ ದೇಶದ ಭಿನ್ನಮತೀಯರನ್ನು ನಿಗ್ರಹಿಸಲು ಸ್ಪೈವೇರ್ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ವರದಿಯಾಗಿತ್ತು. ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರೋನ್ ಮತ್ತು ಅವರ ಸಂಪುಟ ಸದಸ್ಯರ ಫೋನ್‌ಗಳನ್ನು ಪೆಗಾಸಸ್ ಗುರಿಯಾಗಿಸಿಕೊಂಡಿದೆ ಎಂಬ ವರದಿಗಳು ಹೊರಬಿದ್ದ ನಂತರ ಉನ್ನತ ಮಟ್ಟದ ತನಿಖೆ ಪ್ರಾರಂಭಿಸಿತ್ತು. ಫ್ರೆಂಚ್ ಅಧಿಕಾರಿಗಳು ಪೆಗಾಸಸ್ ದುರುಪಯೋಗವನ್ನು ರಾಷ್ಟ್ರೀಯ ಭದ್ರತೆಯ ವಿರುದ್ಧದ ದಾಳಿ ಎಂದು ಘೋಷಿಸಿದ್ದರು ಮತ್ತು ಎನ್‌ಎಸ್‌ಒ ಗ್ರೂಪ್ ಮೇಲೆ ಕಠಿಣ ನಿರ್ಬಂಧಗಳನ್ನು ವಿಧಿಸಿದರು.

ಪೆಗಾಸಸ್ ವಿವಾದದ ನಂತರ ಆಂತರಿಕ ಪರಿಶೀಲನಾ ಉಪಕ್ರಮದ ಭಾಗವಾಗಿ ಸ್ಪೈವೇರ್ ರಫ್ತುಗಳನ್ನು ನಿಯಂತ್ರಿಸಲು ಇಸ್ರೇಲ್ ಕಠಿಣ ನೀತಿಗಳನ್ನು ಜಾರಿಗೆ ತಂದಿತು.

ಇಸ್ರೇಲ್ ಸ್ವತಃ ಸ್ಪೈವೇರ್ ಅನ್ನು ದುರುಪಯೋಗ ಪಡಿಸಿಕೊಂಡಿದೆ ಎಂದು ಆರೋಪಿಸಲಾಗಿದೆ. ಇಸ್ರೇಲ್ ಸ್ವತಃ ಅಮೇರಿಕನ್ ರಾಜತಾಂತ್ರಿಕರನ್ನು ಗುರಿಯಾಗಿಸಿಕೊಂಡಿದೆ.

ಸ್ಪೈವೇರ್ ಇತ್ಯಾದಿಗಳು ಇಂದು ಮಕ್ಕಳ ಆಟಿಕೆ ಯಂತಾಗಿವೆ. ವಾಕಿಟಾಕಿ ಮತ್ತು ಪೇಜರ್‌ಗಳಂತಹ ಸಾಧನಗಳು ದೂರದಿಂದಲೇ ಸ್ಫೋಟಗೊಳಿಸಲಾದ ಇತ್ತೀಚಿನ ಪ್ರಕರಣ ಗಳನ್ನು ನೆನಪು ಮಾಡಿಕೊಳ್ಳಬಹುದು. ಅಂತಹ ಪರಿಸ್ಥಿತಿಯಲ್ಲಿ ಭಾರತ ಸರಕಾರ ಸ್ಪೈವೇರ್ ಬಳಕೆಯ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳುತ್ತದೆ ಎಂದು ಹೇಗೆ ನಿರೀಕ್ಷಿಸಲು ಸಾಧ್ಯ?

ಆದರೆ ಸಾರ್ವಜನಿಕರು ಆನ್‌ಲೈನ್ ಭದ್ರತೆ, ಗೌಪ್ಯತೆ ಎಂಬುದೊಂದು ಇದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕಾ ಗುತ್ತದೆ. ಇದು ಅರ್ಥವಾಗದಿದ್ದರೆ, ಬ್ಯಾಂಕ್ ಖಾತೆ ಮಾತ್ರ ಖಾಲಿ ಯಾಗುವುದಿಲ್ಲ. ಜೊತೆಗೇ ಚಾರಿತ್ರ್ಯಕ್ಕೂ ಹೊಡೆತ ಬಿದ್ದೀತು.

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X