Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಜಾತಿ ಗಣತಿ: ಆಳ ಅಗಲ

ಜಾತಿ ಗಣತಿ: ಆಳ ಅಗಲ

ಬಿ. ಶ್ರೀಪಾದ ಭಟ್ಬಿ. ಶ್ರೀಪಾದ ಭಟ್28 April 2025 9:45 AM IST
share
ಜಾತಿ ಗಣತಿ: ಆಳ ಅಗಲ

ಭಾಗ- 2

ಮೊದಲನೆಯದಾಗಿ ಪರಿಶಿಷ್ಟ ಸಮುದಾಯಗಳು, ಹಿಂದುಳಿದ, ಅತಿ ಹಿಂದುಳಿದ ವರ್ಗಗಳು ತಮಗಿಂತಲೂ ಹೆಚ್ಚಿನ ಜನಸಂಖ್ಯೆಯಲ್ಲಿರುವುದು ಈ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಜಾತಿಗಳ ಹಲವು ರಾಜಕೀಯ, ಧಾರ್ಮಿಕ ಮುಖಂಡರಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ದಶಕಗಳ ಕಾಲ(1931ರಿಂದ) ತಮ್ಮದು ಅತಿ ಹೆಚ್ಚಿನ ಜನಸಂಖ್ಯೆ ಎಂದು ತಮ್ಮ ಜಾತಿಗಳ ಜನತೆಯನ್ನು ನಂಬಿಸಿಕೊಂಡು ಬಂದಿದ್ದ ಮತ್ತು ಆ ಮೂಲಕ ಒಂದು ಬಗೆಯ ದರ್ಪ ಮತ್ತು ಅಂತಸ್ತನ್ನು ಪಡೆದುಕೊಂಡಿದ್ದ ಈ ಬಲಿಷ್ಠ ಜಾತಿಗಳಿಗೆ ಇದು ಸುಳ್ಳು ಎಂದು ಬಹಿರಂಗಗೊಂಡಾಗ ಇವರ ಕಟ್ಟಿಕೊಂಡ ಅಹಮಿಕೆಯ ಸೌಧ ಕುಸಿಯುತ್ತದೆ.

ಎರಡನೆಯದಾಗಿ ತಮ್ಮದು ಅತಿ ಹೆಚ್ಚಿನ ಜನಸಂಖ್ಯೆ ಎಂದು ಪ್ರಚಾರ ಮಾಡಿಕೊಂಡು ಹೆಚ್ಚಿನ ಪ್ರಮಾಣದಲ್ಲಿ ಸಚಿವರಾದರು, ಶಾಸಕರಾದರು, ನಿಗಮ, ಮಂಡಳಿಗಳಿಗೆ ಅಧ್ಯಕ್ಷರಾದರು. ಕಳೆದ 73 ವರ್ಷಗಳಲ್ಲಿ ಕರ್ನಾಟಕದಲ್ಲಿ 14 ಲಿಂಗಾಯತ, 5 ಒಕ್ಕಲಿಗ, 2 ಬ್ರಾಹ್ಮಣ ಮುಖ್ಯಮಂತ್ರಿಗಳಾಗಿದ್ದಾರೆ. ಅತಿ ಹೆಚ್ಚು ಜನಸಂಖ್ಯೆಯಲ್ಲಿರುವ ಪರಿಶಿಷ್ಟ ಸಮುದಾಯದವರು ಇದುವರೆಗೂ ಮುಖ್ಯಮಂತ್ರಿಗಳಾಗಿಲ್ಲ. ಇದಕ್ಕೆ ಯಾರು ಉತ್ತರಿಸುತ್ತಾರೆ?

ಎರಡನೆಯದಾಗಿ ತಮ್ಮ ಜಾತಿಗಳ ಜನಸಂಖ್ಯೆ ತಾವು ಪ್ರಚಾರ ಮಾಡಿದ್ದಕ್ಕಿಂತಲೂ ಕಡಿಮೆಯಿದೆ ಎನ್ನುವ ಸತ್ಯ ಬಹಿರಂಗಗೊಂಡಾಗ ಅಧಿಕಾರ, ಹುದ್ದೆಗಳಲ್ಲಿನ ಪ್ರಮಾಣವೂ, ಅವರ ಪ್ರಾಬಲ್ಯವೂ ಕಡಿಮೆಯಾಗುತ್ತದೆ. ಉದಾಹರಣೆಗೆ ಇದುವರೆಗೂ ಲಿಂಗಾಯತ ಜಾತಿಯೊಳಗಿನ ಶ್ರೇಣೀಕೃತ ವ್ಯವಸ್ಥೆಯಲ್ಲಿ ಮೇಲಿನ ಸ್ತರದಲ್ಲಿರುವ ಐನೋರು, ಸಾದರು, ಪಂಚಮಶಾಲಿಗಳು, ಬಣಜಿಗರು ಮುಖಂಡರು ಅತಿ ಹೆಚ್ಚಿನ ಪ್ರಮಾಣದಲ್ಲಿ ಅಧಿಕಾರವನ್ನು ಅನುಭವಿಸಿದ್ದಾರೆ. ಆದರೆ ಜಾತಿ ಗಣತಿಯ ನಂತರ ಇಲ್ಲಿನ ಲಿಂಗಾಯತ ಹಡಪದ, ಲಿಂಗಾಯತ ದರ್ಜಿ, ಲಿಂಗಾಯತ ಗಾಣಿಗ ಮುಂತಾದ ಐವತ್ತಕ್ಕೂ ಹೆಚ್ಚು ನಿರ್ಲಕ್ಷಿತ ಇತರ ಉಪಜಾತಿಗಳು ಸಹ ಜನಸಂಖ್ಯೆ ಆಧಾರದಲ್ಲಿ ತಮ್ಮ ಹಕ್ಕನ್ನು ಕೇಳತೊಡಗಿದರೆ ಈ ಪಟ್ಟಭದ್ರರಿಗೆ ಹಿನ್ನಡೆಯಾಗುತ್ತದೆ. ಅವರ ಪ್ರಾಬಲ್ಯ, ದೌಲತ್ತು ಕಡಿಮೆಯಾಗುತ್ತದೆ. ಇತರ ಉಪಜಾತಿಗಳಿಗೆ ಅಧಿಕಾರ ಬಿಟ್ಟುಕೊಡಬೇಕಾಗುತ್ತದೆ. ಈ ಕಾರಣಕ್ಕಾಗಿಯೂ ಮಧ್ಯ ಜಾತಿಯೊಳಗಿನ ಪಟ್ಟಭದ್ರರು ಜಾತಿಗಣತಿಯನ್ನು ಸದಾಕಾಲ ವಿರೋಧಿಸಿಕೊಂಡು ಬಂದಿದ್ದಾರೆ. ಮುಖ್ಯವಾಗಿ ಇವರ ಕುಟುಂಬ ರಾಜಕಾರಣಕ್ಕೂ ಸಂಚಕಾರ ಬರಬಹುದು.

ಮೂರನೆಯದಾಗಿ ಈ ಹಿಂದಿನ ಹಾವನೂರು, ಟಿ.ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಆಯೋಗಗಳ ಸಮೀಕ್ಷೆಯ ಪ್ರಕಾರ ಲಿಂಗಾಯತ, ಒಕ್ಕಲಿಗ ಜಾತಿಗಳು ಹಿಂದುಳಿದವರಾಗಿರಲಿಲ್ಲ. ನಂತರ ಚಿನ್ನಪ್ಪ ರೆಡ್ಡಿ ಆಯೋಗದ ವರದಿಗೆ ತಿದ್ದುಪಡಿ ಮಾಡಿ ಒಕ್ಕಲಿಗರನ್ನು ಪ್ರವರ್ಗ 3ಎ, ಲಿಂಗಾಯತರನ್ನು ಪ್ರವರ್ಗ 3ಬಿ ಎಂದು ವಿಂಗಡಿಸಿ ಮೀಸಲಾತಿ ಕಲ್ಪಿಸಲಾಯಿತು. ಅಂದರೆ ಎಂಭತ್ತರ ದಶಕದ ನಂತರ ದಿಢೀರನೆ ಈ ಎರಡೂ ಜಾತಿಗಳು ಹಿಂದುಳಿದವಾದವೇ? ಅದು ಹೇಗೆ? ಸಂಬಂಧಪಟ್ಟವರು ಉತ್ತರಿಸಬೇಕು

ಇವರ ಮತ್ತೊಂದು ಮುಖ್ಯ ಆಕ್ಷೇಪ ಎಂದರೆ ‘ಇದು ಹತ್ತು ವರ್ಷಗಳ ಹಿಂದೆ ನಡೆಸಿದ ಸಮೀಕ್ಷೆಯಾಗಿದೆ. ಈ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಇವರೆಲ್ಲರೂ ಸಮೀಕ್ಷೆಯಲ್ಲಿ ಬಿಟ್ಟು ಹೋಗಿದ್ದಾರೆ. ಇದು ಅನ್ಯಾಯ’’ ಎಂದು ವಾದಿಸುತ್ತಾರೆ. ಇದು ನಿಜ. ಆದರೆ ಎಷ್ಟು ಪ್ರಮಾಣದ ಜನಸಂಖ್ಯೆ, ಯಾವ ಯಾವ ಜಾತಿಗಳ ಜನಸಂಖ್ಯೆ ಮತ್ತು ಯಾವ ಪ್ರದೇಶಗಳ ಜನಸಂಖ್ಯೆ ಈ ಹತ್ತು ವರ್ಷಗಳ ಅವಧಿಯಲ್ಲಿ ಜಾತಿಗಣತಿಯಿಂದ ಹೊರಗುಳಿದಿದ್ದಾರೆ ಎಂದು ಅರಿಯಲು ಕಾಂತರಾಜು ಆಯೋಗದ ವರದಿ ಬಹಿರಂಗವಾಗಬೇಕಿದೆ. ಆ ನಂತರವಷ್ಟೆ ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬಹುದು. ಆದರೆ ಬಿಡುಗಡೆಯನ್ನೇ ವಿರೋಧಿಸುವುದು ವಿವೇಕ ಎನಿಸಿಕೊಳ್ಳುವುದಿಲ್ಲ. ಇನ್ನು 2021ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ ನಾಲ್ಕು ವರ್ಷಗಳಾದರೂ ನಡೆದಿಲ್ಲ. ಆದರೆ ಕೇಂದ್ರ ಸರಕಾರವನ್ನು ಯಾರೂ ಪ್ರಶ್ನಿಸುವುದಿಲ್ಲ. ಈಗಲೂ 2011ರ ಜನಗಣತಿ ಆಧಾರದಲ್ಲಿ ಕಲ್ಯಾಣ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಅಂದರೆ ಕಳೆದ 14 ವರ್ಷಗಳಲ್ಲಿ ಜನಗಣತಿಯಿಂದ ಹೊರಗುಳಿದ ಅಂದಾಜು 10 ಕೋಟಿ ಜನಸಂಖ್ಯೆ ಸರಕಾರದ ಎಲ್ಲಾ ಯೋಜನೆಗಳಿಂದ ವಂಚಿತವಾಗಿವೆ. ಆದರೆ ಇದನ್ನು ಈ ಬಲಿಷ್ಠ ಜಾತಿಗಳ ಮುಖಂಡರು ಯಾಕೆ ಪ್ರಶ್ನಿಸುತ್ತಿಲ್ಲ?. ಮುಖ್ಯವಾಗಿ 1931ರಲ್ಲಿ ನಡೆದ ಕಡೆಯ ಜಾತಿಗಣತಿಯನ್ನು ಕಳೆದ 94 ವರ್ಷಗಳಿಂದ ಅನುಸರಿಸುತ್ತಾ ಬರಲಾಗಿದೆ. ಇಂತಹ ಅಗಾಧ ವಿಳಂಬವನ್ನು ಪ್ರಶ್ನಿಸದೆ ಮೌನವಾಗಿದ್ದು ಹತ್ತು ವರ್ಷಗಳ ಅಂತರವನ್ನು ಪ್ರಶ್ನಿಸುವುದು ಏನನ್ನು ಸೂಚಿಸುತ್ತದೆ? ಇವರು ಜಾತಿಗಣತಿಯ ವಿರೋಧಿಗಳು ಎನ್ನುವುದು ಖಚಿತವಾಗುತ್ತದೆ

ಜಾತಿಗಣತಿ ಯಾಕೆ ಅತ್ಯಗತ್ಯ?

ಬಾಬಾ ಸಾಹೇಬರ ಒಳಗೊಳ್ಳುವಿಕೆ ಮತ್ತು ಸಮಾನ ಅವಕಾಶಗಳ ಚಿಂತನೆಯು ಮುಂದುವರಿದ ಜಾತಿಗಳ ಅಧಿಕಾರ ರಾಜಕಾರಣಕ್ಕೆ ಸವಾಲಾಗಿತ್ತು. ಇದನ್ನು ರಾಜಕೀಯವಾಗಿ ಪ್ರಯೋಗಿಸಿದ ಕಾನ್ಶೀರಾಂ ಅವರ ‘ಜಿತ್ನಿ ಜಿಸ್ಕ ಸಂಖ್ಯಾ ಭಾರಿ, ಉಸ್ಕಿ ಉತ್ನಿ ಹಿಸ್ಸೆದಾರಿ’(ಜನಸಂಖ್ಯೆಯ ಪ್ರಮಾಣದ ಆಧಾರದಲ್ಲಿ ಒಳ ಮೀಸಲಾತಿ) ಘೋಷಣೆ ಅನೇಕ ಪಲ್ಲಟಗಳಿಗೆ ಕಾರಣವಾಯಿತು. ಸಾಮಾಜಿಕ ಸಮಾನತೆ(ಮೀಸಲಾತಿ) ಮತ್ತು ಸಮತೆ(ಒಳ ಮೀಸಲಾತಿ) ಕುರಿತು ಚಿಂತಿಸುವ ಈ ಪ್ರಯೋಗವು proportional representationನ ಮಾರ್ಗದ ಕಡೆಗೆ ಹೊರಳುವ ಅಗತ್ಯವನ್ನು ಸೂಚಿಸುತ್ತದೆ. ನಮ್ಮ ಸಮಾಜದ ಬಹುಸಂಸ್ಕೃತಿಯನ್ನು ಪ್ರತಿನಿಧಿಸಲು ಈ ಮಾದರಿಯ ಒಳಗೊಳ್ಳುವಿಕೆ ಮತ್ತು ಪ್ರಾತಿನಿಧ್ಯದ ರಚನೆ ಅಗತ್ಯವಿದೆ ಎನ್ನುವ ನೀತಿಯನ್ನು ಪ್ರತಿಪಾದಿಸುತ್ತದೆ.

ಭಾರತದಲ್ಲಿ ಜಾತಿ ಗಣತಿ ಅನೇಕ ಕಾರಣಗಳಿಗೆ ಮುಖ್ಯವಾಗುತ್ತದೆ

ಚಾರಿತ್ರಿಕ ಅಸಮಾನತೆಯ ಸರಿಪಡಿಸುವಿಕೆ

ಭಾರತದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ಉಂಟಾದ ಪ್ರತ್ಯೇಕತೆ ಮತ್ತು ತಾರತಮ್ಯವನ್ನು ನಿಖರವಾಗಿ ಗುರುತಿಸಿ, ಪರಿಶಿಷ್ಟ ಸಮುದಾಯ, ಅತಿ ಹಿಂದುಳಿದ ಜಾತಿಗಳ ಸಬಲೀಕರಣಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಜಾತಿ ಗಣತಿಯ ದತ್ತಾಂಶ ಅಗತ್ಯವಾಗಿದೆ

ಸಾಮಾಜಿಕ ನ್ಯಾಯ: ಸಾಮಾಜಿಕ-ಆರ್ಥಿಕ-ಶೈಕ್ಷಣಿಕ ಅಸಮಾನತೆಗಳ ಸಮೀಕ್ಷೆ ಮತ್ತು ಕಾರ್ಯ ಯೋಜನೆಗಳು

ಜಾತಿ ಗಣತಿಯು ವಿವಿಧ ಜಾತಿಗಳ ಅದರಲ್ಲಿಯೂ ಸಣ್ಣ, ಅತಿ ಸಣ್ಣ ನಿರ್ಲಕ್ಷಿತ ಜಾತಿಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ಅರ್ಥಮಾಡಿಕೊಳ್ಳಲು ಮುಖ್ಯ ದಾಖಲಾತಿಯಾಗಿದೆ.

ಜನಸಂಖ್ಯೆ ಮಾಹಿತಿ ಆಧರಿಸಿ ಸರಕಾರವು ಪರಿಶಿಷ್ಟ ಸಮುದಾಯ, ಅತಿ ಹಿಂದುಳಿದ ಜಾತಿಗಳಿಗೆ ಒಳ ಮೀಸಲಾತಿ, ಕಲ್ಯಾಣ ಯೋಜನೆಗಳು ಮತ್ತು ಇತರ ಸೌಲಭ್ಯಗಳನ್ನು ಒದಗಿಸಲು ಸಹಾಯವಾಗುತ್ತದೆ. ಜಾತಿ ಗಣತಿಯು ವಿವಿಧ ಜಾತಿ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯ ನಿಖರ ದತ್ತಾಂಶವನ್ನು ಒದಗಿಸುತ್ತದೆ. ಇದರ ಆಧಾರದ ಮೇಲೆ, ಸರಕಾರವು ಹಿಂದುಳಿದ ವರ್ಗಗಳಿಗೆ ಉದ್ದೇಶಿತ ಕಲ್ಯಾಣ ಯೋಜನೆಗಳನ್ನು ರೂಪಿಸಬಹುದು. ಉದಾಹರಣೆಗೆ, ಬಿಹಾರದ ಜಾತಿ ಗಣತಿ ವರದಿಯು ಶೇ.63 ಜನಸಂಖ್ಯೆ ಹಿಂದುಳಿದ ವರ್ಗಗಳೆಂದು ಗುರುತಿಸಿದೆ. ಇದರಲ್ಲಿ ಶೇ.36 ಅತ್ಯಂತ ಹಿಂದುಳಿದವರು ಮತ್ತು ಶೇ.19.65 ಪರಿಶಿಷ್ಟ ಸಮುದಾಯಗಳಿಗೆ ಸೇರಿದ್ದಾರೆ. ಸಂಪನ್ಮೂಲಗಳ ಸಮಾನ ಹಂಚಿಕೆಗೆ ಇಂತಹ ಅಧಿಕೃತ, ವೈಜ್ಞಾನಿಕ ದತ್ತಾಂಶಗಳ ಅಗತ್ಯವಿದೆ.

ಸಾರ್ವಜನಿಕ ವಿತರಣ ಯೋಜನೆ

ಉಪ ಜಾತಿಗಳ ಜನಸಂಖ್ಯೆಯ ಪ್ರಮಾಣ ಮತ್ತು ಗಾತ್ರವನ್ನು ಆಧರಿಸಿ ಸಾರ್ವಜನಿಕ ಪಡಿತರ ವಿತರಣೆಯಲ್ಲಿ ಸಮಗ್ರ ಬದಲಾವಣೆಗಳನ್ನು ತರಲು ಸಹಕಾರಿಯಾಗಿದೆ. ಸಂಪನ್ಮೂಲಗಳ ನ್ಯಾಯಬದ್ಧ ಹಂಚಿಕೆಗೆ ಈ ವಾಸ್ತವ ಸ್ಥಿತಿಯ ಅಂಕಿ ಅಂಶಗಳು ಪೂರಕವಾಗುತ್ತದೆ. ಶಿಕ್ಷಣ, ಉದ್ಯೋಗ, ಆರೋಗ್ಯ ಕ್ಷೇತ್ರಗಳಲ್ಲಿ ಸೂಕ್ತ ಅವಕಾಶಗಳನ್ನು, ಪ್ರಾತಿನಿಧ್ಯವನ್ನು ಕಲ್ಪಿಸಬಹುದು.

ರಾಜಕೀಯ ಪ್ರಾತಿನಿಧ್ಯ

ಪರಿಶಿಷ್ಟ ಸಮುದಾಯ, ಅತಿ ಹಿಂದುಳಿದ ಜಾತಿಗಳ ಜನಸಂಖ್ಯೆಯ ಆಧಾರದ ಮೇಲೆ ರಾಜಕೀಯ ಮೀಸಲಾತಿ ಮತ್ತು ಪ್ರಾತಿನಿಧ್ಯವನ್ನು ನಿರ್ಧರಿಸಲು ಇದು ಸಹಾಯಕವಾಗಿದೆ.

ಸಾಮಾಜಿಕ ಸಂಶೋಧನೆ

ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದಾಗಿ ಉಂಟಾಗಿರುವ ಅಸಮಾನತೆಯ ವಿವಿಧ ಆಯಾಮಗಳನ್ನು ಅಧ್ಯಯನ ಮಾಡಲು ಮತ್ತು ದೀರ್ಘಕಾಲೀನ ಯೋಜನೆ ರೂಪಿಸಲು ಜಾತಿ ಗಣತಿಯ ಮಾಹಿತಿ ಮುಖ್ಯವಾಗಿದೆ. ಭಾರತದಲ್ಲಿ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಗಾಗಿ ನೀತಿ ರೂಪುರೇಷೆಗಳನ್ನು ರೂಪಿಸುವ ಸಂದರ್ಭದಲ್ಲಿ ಜಾತಿ ಗಣತಿಯ ದತ್ತಾಂಶ ಅವಶ್ಯವಾಗುತ್ತದೆ. ಆಗ ಇದರ ಪ್ರಾಮುಖ್ಯತೆ ಅರ್ಥವಾಗುತ್ತದೆ.

ಆದರೆ, ಜಾತಿ ಗಣತಿಯನ್ನು ಸೂಕ್ಷ್ಮವಾಗಿ ನಿರ್ವಹಿಸದಿದ್ದರೆ, ಜಾತಿಗಳ ನಡುವೆ ಭಿನ್ನಾಭಿಪ್ರಾಯ ಅಥವಾ ರಾಜಕೀಯ ದುರುಪಯೋಗವಾಗುವ ಸಂಭವವೂ ಇದೆ. ಹೀಗಾಗಿ, ಇದನ್ನು ಪಾರದರ್ಶಕವಾಗಿ ಮತ್ತು ಜವಾಬ್ದಾರಿಯುತವಾಗಿ ನಡೆಸುವುದು ಅಗತ್ಯ ಮತ್ತು ಯಾವುದೇ ಸಂದರ್ಭದಲ್ಲಿಯೂ ಇದು ಅಹಿಂದ ವರ್ಸಸ್ ಮುಂದುವರಿದ, ಮಧ್ಯ ಜಾತಿಗಳ ನಡುವಿನ ಸಂಘರ್ಷಕ್ಕೆ ಕಾರಣವಾಗದಂತೆ ಎಚ್ಚರವಹಿಸಬೇಕಿದೆ. ಇದು ಸರಕಾರದ ಜವಾಬ್ದಾರಿಯಾಗಿದೆ.

share
ಬಿ. ಶ್ರೀಪಾದ ಭಟ್
ಬಿ. ಶ್ರೀಪಾದ ಭಟ್
Next Story
X