Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದಿಲ್ಲಿ ಚುನಾವಣೆ: ಬಯಲಾಗುತ್ತಿರುವ...

ದಿಲ್ಲಿ ಚುನಾವಣೆ: ಬಯಲಾಗುತ್ತಿರುವ ಬಿಜೆಪಿ ರಾಜಕೀಯದ ದ್ವಂದ್ವಗಳು

ವಿನಯ್ ಕೆ.ವಿನಯ್ ಕೆ.22 Jan 2025 12:49 PM IST
share
ದಿಲ್ಲಿ ಚುನಾವಣೆ: ಬಯಲಾಗುತ್ತಿರುವ ಬಿಜೆಪಿ ರಾಜಕೀಯದ ದ್ವಂದ್ವಗಳು

18ನೇ ಲೋಕಸಭಾ ಚುನಾವಣೆಯ ನಂತರದ ಐದನೇ ಪ್ರಮುಖ ಚುನಾವಣೆಯಾಗಿ ದಿಲ್ಲಿ ವಿಧಾನಸಭಾ ಚುನಾವಣೆ ಬಂದಿದೆ. ಅದರ ಪ್ರಚಾರ ಎರಡು ಬಗೆಯ ರಾಜಕೀಯ ಪ್ರವೃತ್ತಿಗಳನ್ನು ಕಾಣಿಸಿದೆ.

ಪ್ರಧಾನಿ ಮೋದಿ ಹೆಸರಲ್ಲಿ ಮತ ಕೇಳುವ ಸ್ಥಿತಿಯಲ್ಲಿ ಇನ್ನು ಮುಂದೆ ಬಿಜೆಪಿ ಇಲ್ಲ ಮತ್ತು ಇತರ ಪಕ್ಷಗಳ ಹಾಗೆಯೇ ಬಿಜೆಪಿ ಕೂಡ ಈಗ ಗೆಲುವಿಗಾಗಿ ಸ್ಥಳೀಯ ವಿಷಯಗಳನ್ನೇ ನೆಚ್ಚಬೇಕಾಗಿದೆ.

ಚುನಾವಣಾ ಪ್ರಚಾರ ಇನ್ನು ಮುಂದೆ ಮೋದಿ ಕೇಂದ್ರಿತವಾಗಿರುವುದಿಲ್ಲ. ಇತ್ತೀಚಿನ ವಿಧಾನಸಭಾ ಚುನಾವಣೆಗಳ ಸಮಯದಲ್ಲಿ ಜಮ್ಮು ಮತ್ತು ಕಾಶ್ಮೀರ, ಹರ್ಯಾಣ, ಮಹಾರಾಷ್ಟ್ರ ಮತ್ತು ಜಾರ್ಖಂಡ್‌ಗಳಲ್ಲಿ ಮೋದಿ ರ್ಯಾಲಿಗಳು ಮತ್ತು ರೋಡ್ ಶೋಗಳು ಕಡಿಮೆ ನಡೆದಿವೆ.

ಮೋದಿಯವರ ಪ್ರಮುಖ ಅಭಿವೃದ್ಧಿ ಯೋಜನೆಗಳು ಮತ್ತು ಕನಸಿನ ಯೋಜನೆಗಳು ಈಗ ಜನರನ್ನು ಆಕರ್ಷಿಸುತ್ತಿಲ್ಲ. ಅವು ಹೊಸತನ ಕಳೆದುಕೊಂಡಿವೆ ಅಥವಾ ಮತ್ತೊಂದು ಸರಕಾರಿ ಯೋಜನೆ ಮಾತ್ರ ಎಂಬಂತಾಗಿವೆ.

ಇದೆಲ್ಲದರ ನಡುವೆಯೇ ಬಿಜೆಪಿ ನಿಜವಾದ ವಿಷಯಗಳ ಕುರಿತ ಚರ್ಚೆಯನ್ನು ತಪ್ಪಿಸಲು ಯತ್ನಿಸುತ್ತದೆ.

ಕ್ಷೀಣಿಸುತ್ತಿರುವ ಆರ್ಥಿಕತೆ, ವಿಫಲ ಯೋಜನೆಗಳು ಮತ್ತು ಈಡೇರದ ಭರವಸೆಗಳು ಇವೆಲ್ಲವೂ ಚುನಾವಣಾ ವಿಷಯಗಳಾಗಬೇಕು. ಆದರೆ, ಆರ್ಥಿಕ ಸಮಸ್ಯೆಗಳು ಮತ್ತು ಜೀವನೋಪಾಯದ ಸಮಸ್ಯೆಗಳ ಕುರಿತು ಚರ್ಚೆಯನ್ನು ಬಿಜೆಪಿ ತಪ್ಪಿಸುತ್ತಿದೆ.

ಜಿಡಿಪಿ ಬೆಳವಣಿಗೆ, ರಫ್ತು ಮತ್ತು ಹೂಡಿಕೆಯಲ್ಲಿನ ಕಳಪೆತನಗಳ ಬಗ್ಗೆ ಮಾತನಾಡಲು ಅದು ಹಿಂಜರಿಯುತ್ತಿದೆ.

2024-25ರ ಜಿಡಿಪಿ ಬೆಳವಣಿಗೆಯ ಮುಂಗಡ ಅಂದಾಜಿನ ಪ್ರಕಾರ, ಹಿಂದಿನ ವರ್ಷದಲ್ಲಿ ಶೇ.8.2 ಇದ್ದದ್ದು ಶೇ.6.4ಕ್ಕೆ ಕುಸಿದಿದೆ.

ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಭಾರತದಲ್ಲಿ ನಿವ್ವಳ ವಿದೇಶಿ ಹೂಡಿಕೆ ಹಿಂದಿನ ವರ್ಷಕ್ಕೆ ಹೋಲಿಸಿದರೆ 12 ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

2014ರ ಚುನಾವಣೆಗೆ ಮೊದಲು, ಮನಮೋಹನ್ ಸಿಂಗ್ ಅವರ ಆಳ್ವಿಕೆಯಲ್ಲಿ ರೂಪಾಯಿ ಮೌಲ್ಯ ಡಾಲರ್‌ಗೆ 58.58 ಇದ್ದುದಕ್ಕಾಗಿಯೇ ಅವರನ್ನು ಮೋದಿ ಟೀಕಿಸಿದ್ದರು.

‘‘ರೂಪಾಯಿ ಐಸಿಯುನಲ್ಲಿದೆ’’ ಎಂದು ಆಗ ಮೋದಿ ಎಕ್ಸ್‌ನಲ್ಲಿ ಹೇಳಿದ್ದರು. ಆದರೆ ಅದೇ ಮೋದಿ ಅವಧಿಯಲ್ಲಿ ರೂಪಾಯಿ ಡಾಲರ್‌ಗೆ 86ಕ್ಕಿಂತ ಹೆಚ್ಚು ಕುಸಿದಿದೆ.

ಹತ್ತು ವರ್ಷಗಳ ಹಿಂದೆ ಯುಪಿಎ ವಿರುದ್ಧ ವಿಫಲ ಆರ್ಥಿಕತೆ ಕಾರಣಕ್ಕಾಗಿ ದಾಳಿ ಮಾಡುವ ಮೂಲಕ ಅಧಿಕಾರಕ್ಕೆ ಬಂದಿದ್ದ ಮೋದಿ, ಈಗ ಇನ್ನಷ್ಟು ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ.

ಭಾರತದ ರಫ್ತು ಕಳೆದ ಡಿಸೆಂಬರ್‌ನಲ್ಲಿ ಶೇ.1 ರಷ್ಟು ಕುಸಿದು 38.1 ಬಿಲಿಯನ್ ಡಾಲರ್‌ಗೆ ತಲುಪಿದೆ. ಒಂದು ವರ್ಷದ ಹಿಂದೆ ಅದು 38.39 ಬಿಲಿಯನ್ ಆಗಿತ್ತು.

ಹಿಂದೆ ಯಾವುದನ್ನು ರೇವ್ಡಿ ಸಂಸ್ಕೃತಿ ಎಂದು ಜರೆದಿದ್ದರೋ ಅದನ್ನೇ ಇಂದು ಚುನಾವಣೆ ಗೆಲ್ಲುವುದಕ್ಕಾಗಿ ಬಳಸಲು ಮೋದಿ ನೋಡುತ್ತಿದ್ದಾರೆ.

ಆರ್ಥಿಕವಾಗಿ ದುರ್ಬಲ ವರ್ಗಗಳು ಮತ್ತು ಮಹಿಳೆಯರಿಗೆ ನೀಡಲಾಗುತ್ತಿದ್ದ ಉಚಿತ ಯೋಜನೆಗಳನ್ನು ರೇವ್ಡಿ ಎಂದು ಮೋದಿ ಅವಹೇಳನ ಮಾಡಿದ್ದರು. ಆದರೆ ಲೋಕಸಭೆಯಲ್ಲಿ ‘ಚಾರ್ ಸೌ ಪಾರ್’ ಕನಸು ಭಗ್ನವಾದ ಬಳಿಕ ಈಗ ಸ್ಥಳೀಯ ಮತ ಬ್ಯಾಂಕ್ ಅನ್ನು ಕಾಪಾಡಿಕೊಳ್ಳಲು ಸ್ವತಃ ಮೋದಿ ಉಚಿತ ಯೋಜನೆಗಳ ಮೊರೆಹೋಗುತ್ತಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರದ ಗ್ಯಾರಂಟಿಗಳನ್ನು ಕಟುವಾಗಿ ಟೀಕಿಸಿದ್ದ ಮೋದಿ ಈಗ ತಾವೇ ಅಂಥ ಯೋಜನೆಗಳ ಬಗ್ಗೆ ಪ್ರತಿಪಾದಿಸುತ್ತಿದ್ದಾರೆ.

ಹರ್ಯಾಣದಲ್ಲಿ ಬಿಜೆಪಿ ಮಹಿಳೆಯರಿಗೆ ಮಾಸಿಕ 2,100 ರೂ. ಭತ್ತೆ, ವಿದ್ಯಾರ್ಥಿನಿಯರಿಗೆ ಸ್ಕೂಟಿ, ರೋಗಿಗಳಿಗೆ ಉಚಿತ ಡಯಾಲಿಸಿಸ್ ಮತ್ತು ಎರಡು ಲಕ್ಷ ಸರಕಾರಿ ಉದ್ಯೋಗಗಳನ್ನು ಘೋಷಿಸಿತು.

ಮಹಾರಾಷ್ಟ್ರದಲ್ಲಿ ಎನ್‌ಡಿಎ 146 ಉಚಿತ ಕೊಡುಗೆಗಳನ್ನು ಘೋಷಿಸಿತು. ಅವುಗಳಲ್ಲಿ ಮಹಿಳೆಯರಿಗೆ ಮಾಸಿಕ 2,100 ರೂ. ನೀಡುವ ಯೋಜನೆಯಿಂದಾಗಿ ಸರಕಾರದ ಬೊಕ್ಕಸಕ್ಕೆ 46,000 ಕೋಟಿ ರೂ.ಗಳ ಹೊರೆ ಬೀಳುತ್ತದೆ.

ಅದಲ್ಲದೆ, ವಿದ್ಯಾರ್ಥಿಗಳಿಗೆ ಮಾಸಿಕ ಸ್ಟೈಫಂಡ್, ರೈತರಿಗಾಗಿರುವ ಯೋಜನೆಗಳು, ಕುಟುಂಬಗಳಿಗೆ ಪ್ರತೀ ತಿಂಗಳು ಅಡುಗೆ ಅಗತ್ಯದ ಸಾಮಗ್ರಿಗಳನ್ನು ಒದಗಿಸುವ ಅಕ್ಷಯ ಅನ್ನ ಯೋಜನೆ ಕೂಡ ಇವೆ.

ದಿಲ್ಲಿಯಲ್ಲಿ ಎಎಪಿಯ ಉಚಿತ ಕೊಡುಗೆಗಳ ಪಟ್ಟಿಯಲ್ಲಿ ಮಹಿಳಾ ಸಮ್ಮಾನ್ ಯೋಜನೆಯನ್ನು ತಿಂಗಳಿಗೆ 1,000 ರೂ.ಗಳಿಂದ 2,100 ರೂ.ಗಳಿಗೆ ಹೆಚ್ಚಿಸುವುದು ಮತ್ತು 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಚಿಕಿತ್ಸೆ ಒದಗಿಸುವ ಸಂಜೀವನಿ ಯೋಜನೆಗಳಿವೆ.

ಕಾಂಗ್ರೆಸ್ ನಿರುದ್ಯೋಗಿಗಳ ಕೌಶಲ್ಯ ತರಬೇತಿಗಾಗಿ 8,500 ರೂ., ಪ್ಯಾರಿ ದೀದಿ ಯೋಜನೆಯಡಿ 2,500 ರೂ. ಮತ್ತು ಜೀವನ್ ರಕ್ಷಾ ಯೋಜನೆಯಡಿ 25 ಲಕ್ಷ ರೂ. ವಿಮೆ ಭರವಸೆ ನೀಡಿದೆ.

ಬಿಜೆಪಿ ಮಹಿಳೆಯರಿಗೆ 2,500 ರೂಪಾಯಿ, 300 ಯೂನಿಟ್ ವಿದ್ಯುತ್ ಸೇರಿದಂತೆ ಇತರ ಲಾಭಗಳನ್ನು ನೀಡುವುದಾಗಿ ಹೇಳಿದೆ.

ಉಚಿತ ಕೊಡುಗೆಗಳ ಜೊತೆಗೆ, ಇಡೀ ಚುನಾವಣೆಯನ್ನೇ ತನ್ನ ಪರ ಮಾಡಿಕೊಳ್ಳುವ ತಂತ್ರದಲ್ಲಿಯೂ ಬಿಜೆಪಿ ತೊಡಗಿದೆ.

ಚುನಾವಣೆಗೂ ಬಹಳ ಮುಂಚಿತವಾಗಿ ಮತದಾರರ ಪಟ್ಟಿಯನ್ನು ತನಗೆ ಬೇಕಾದಂತೆ ಬದಲಿಸಿಕೊಳ್ಳುವ ಆಟದಲ್ಲಿ ಬಿಜೆಪಿ ತೊಡಗಿದೆ.

ಬಿಜೆಪಿಯ ಬೂತ್ ಸಮಿತಿಗಳು ಮತ್ತು ಪೇಜ್ ಪ್ರಮುಖರು ವಿಪಕ್ಷದ ಪರ ಮತದಾರರನ್ನು ತೆಗೆದುಹಾಕಿ ನಕಲಿ ಹೆಸರುಗಳನ್ನು ಸೇರಿಸಿರುವುದಾಗಿ ಎಎಪಿ ಆರೋಪಿಸಿದೆ. ಚುನಾವಣಾ ಆಯುಕ್ತರಿಗೆ ಬರೆದ ಪತ್ರದಲ್ಲಿ ಕೇಜ್ರಿವಾಲ್, ಇದರ ಬಗ್ಗೆ ದೂರಿದ್ದಾರೆ. ಅಲ್ಲದೆ, ಮತದಾನಕ್ಕೂ ಮುಂಚೆಯೇ ವ್ಯವಸ್ಥಿತ ಮತ ಖರೀದಿಯಲ್ಲಿ ಬಿಜೆಪಿ ತೊಡಗಿರುವುದಾಗಿ ಎಎಪಿ ಆರೋಪಿಸಿದೆ. ಬಿಜೆಪಿ ನಾಯಕರು ಪ್ರತೀ ಮತಕ್ಕೆ 10,000 ರೂ. ತೆಗೆದುಕೊಳ್ಳುತ್ತಿದ್ದು, ಮತದಾರರಿಗೆ ಕೇವಲ ಒಂದು ಸಾವಿರವನ್ನು ಮಾತ್ರ ನೀಡುತ್ತಿದ್ದಾರೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ.

ಇದಲ್ಲದೆ ಆಯ್ದ ಮತದಾರರಿಗೆ ಬಿಜೆಪಿ ಹಣ, ಚಿನ್ನದ ಸರ ಮತ್ತು ಸೀರೆಗಳನ್ನು ವಿತರಿಸುತ್ತಿರುವುದಾಗಿಯೂ ಕೇಜ್ರಿವಾಲ್ ದೂರಿದ್ದಾರೆ.

ಕೇಜ್ರಿವಾಲ್ ದೂರಿನ ಬಳಿಕ, ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ಮತದಾರರಿಗೆ ಶೂಗಳನ್ನು ವಿತರಿಸುತ್ತಿರುವ ಬಗ್ಗೆ ತನಿಖೆಗೆ ಚುನಾವಣಾ ಆಯೋಗ ಆದೇಶಿಸಿದೆ.

ಮುಖ್ಯಮಂತ್ರಿ ಆತಿಶಿ ಪ್ರಕಾರ, ಬಿಜೆಪಿ ಶೇ.10 ನಕಲಿ ಮತದಾರರನ್ನು ಸೇರಿಸಲು ಮತ್ತು ಶೇ.5ರಷ್ಟು ವಿಪಕ್ಷದ ಮತಗಳನ್ನು ಪಟ್ಟಿಯಿಂದ ತೆಗೆದುಹಾಕಲು ಯೋಜಿಸಿದೆ.

ಆರ್ಥಿಕ ವಿಷಯಗಳ ಬಗ್ಗೆ ಗಂಭೀರ ಚರ್ಚೆಯನ್ನು ಬಿಜೆಪಿ ಏಕೆ ತಪ್ಪಿಸುತ್ತಿದೆ ಎಂಬುದಂತೂ ದೊಡ್ಡ ಪ್ರಶ್ನೆ.

ಆದರೆ ಈ ಪ್ರಮುಖ ವಿಷಯಗಳ ಬದಲು ಕ್ಷುಲ್ಲಕ ವಿಷಯಗಳ ಮೇಲೆಯೇ ಎಲ್ಲರ ಗಮನ ಹರಿಯುವಂತೆ ನೋಡಿಕೊಳ್ಳಲಾಗುತ್ತದೆ.

ಅಂತಹ ಒಂದು ಉದಾಹರಣೆಯೆಂದರೆ ಕೇಜ್ರಿವಾಲ್ ಅವರ ‘ಶೀಶ್ ಮಹಲ್’ ಸುತ್ತಲಿನ ವಿವಾದ.

ಕೇಜ್ರಿವಾಲ್ ತಿರುಗೇಟು ನೀಡುವವರೆಗೂ ಈ ಆರೋಪಗಳು ಮೀಡಿಯಾಗಳಲ್ಲಿ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಎರಡು ವಾರಗಳ ಕಾಲ ಜೋರು ಸದ್ದು ಮಾಡಿದ್ದವು.

2,700 ಕೋಟಿ ರೂ. ಮೌಲ್ಯದ ಮನೆಯನ್ನು ತನಗಾಗಿ ಮಾಡಿಕೊಂಡವರು, 8,400 ಕೋಟಿ ರೂ. ವಿಮಾನದಲ್ಲಿ ಹಾರುವವರು, 10 ಲಕ್ಷ ರೂ. ಮೌಲ್ಯದ ಸೂಟ್ ಧರಿಸುವವರು ಶೀಶ್ ಮಹಲ್ ಬಗ್ಗೆ ಮಾತನಾಡಬಾರದು ಎಂದು ಕೇಜ್ರಿವಾಲ್ ಮೋದಿಗೆ ತಿರುಗೇಟು ಕೊಟ್ಟಿದ್ದರು.

ಈ ಮಧ್ಯೆ ಎಎಪಿ ಚುನಾವಣಾ ಘೋಷಣೆಗಳ ವಿರುದ್ಧ ದಿಲ್ಲಿ ಸರಕಾರದ ಸಚಿವಾಲಯಗಳೇ ಪ್ರಕಟಣೆ ಹೊರಡಿಸುವಂತೆ ಮಾಡುವವರೆಗೂ ಬಿಜೆಪಿ ಹೋಗಿತ್ತು.

ಹೀಗೆ ಬಿಜೆಪಿ ರಾಜಕೀಯದ ದ್ವಂದ್ವಗಳು ಒಂದೊಂದಾಗಿ ಬಯಲಾಗುತ್ತಿವೆ

ಅದರ ಸುಳ್ಳುಗಳಲ್ಲಿ, ತಾನೇ ಜರೆದಿದ್ದ ಉಚಿತ ಯೋಜನೆಗಳ್ನು ಮುಂದಿಟ್ಟು ಪ್ರಚಾರ ಮಾಡುವಲ್ಲಿ, ಮತದಾರರ ಪಟ್ಟಿಯನ್ನೇ ತಿರುಚುವಲ್ಲಿ, ಕಡೆಗೆ ಪ್ರಮುಖ ವಿಷಯಗಳನ್ನು ಬದಿಗೆ ಸರಿಸಿ ಕ್ಷುಲ್ಲಕ ವಿಷಯಗಳ ಬಗ್ಗೆ ಅಬ್ಬರಿಸಿ ಮಾತಾಡುವುದರಲ್ಲಿ ಆ ದ್ವಂದ್ವ ಎದ್ದು ಕಾಣಿಸುತ್ತಿದೆ.

share
ವಿನಯ್ ಕೆ.
ವಿನಯ್ ಕೆ.
Next Story
X