ಬಯೋಮೆಟ್ರಿಕ್ ವ್ಯವಸ್ಥೆಯಲ್ಲಿ ಹಿರಿಯ ನಾಗರಿಕರಿಗೆ ತೊಂದರೆ
ಮಾನ್ಯರೇ,
ಪಡಿತರ ಅಂಗಡಿಗಳಲ್ಲಿ ಮತ್ತು ಬ್ಯಾಂಕ್‌ಗಳಲ್ಲಿ ಹಿರಿಯ ನಾಗರಿಕರು ಬೇರೆ ಬೇರೆ ಸಂದರ್ಭಗಳಲ್ಲಿ ತಮ್ಮ ಬೆರಳಿನ ಮೂಲಕ ಬಯೋಮೆಟ್ರಿಕ್ ವ್ಯವಸ್ಥೆಯ ಅಡಿಯಲ್ಲಿ ಫಲಾನುಭವಿಗಳಾಗಬೇಕಾಗಿದೆ. ಅನೇಕ ಹಿರಿಯ ನಾಗರಿಕರ ಕೈ ಬೆರಳುಗಳಲ್ಲಿ ರೇಖೆಗಳು ಅಳಿಸಿ ಹೋಗಿರುತ್ತವೆ ಹಾಗೂ ಇವರ ಕೈ ಬೆರಳಿನ ಗುರುತನ್ನು ಬಯೋಮೆಟ್ರಿಕ್ ಯಂತ್ರ ದೃಢೀಕರಿಸಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ಅವರು ಪಡಿತರ ಅಂಗಡಿಗಳಲ್ಲಿ ಆಹಾರ ಪದಾರ್ಥಗಳನ್ನು ಪಡೆದುಕೊಳ್ಳಲು ಕಷ್ಟವಾಗುತ್ತಿದೆ ಮತ್ತು ಬ್ಯಾಂಕ್‌ಗಳಲ್ಲಿ ವ್ಯವಹರಿಸಲೂ ತೊಂದರೆಗಳಾಗುತ್ತಿದೆ. ಇದೊಂದು ಗಂಭೀರವಾದ ಸಮಸ್ಯೆಯಾಗಿದ್ದು, ರಾಜ್ಯ ಸರಕಾರ ಮತ್ತು ರಿಸರ್ವ್ ಬ್ಯಾಂಕಿನವರು ಈ ಬಗ್ಗೆ ಚಿಂತನೆ ನಡೆಸಿ ಹಿರಿಯ ನಾಗರಿಕರಲ್ಲಿ ಬೆರಳುಗಳು ಸವೆದು ಹೋಗಿದ್ದರೆ ಅಂತಹವರ ಆಧಾರ್ ಕಾರ್ಡ್‌ನ ಆಧಾರದ ಮೇಲೆ ಮತ್ತು ಭಾವಚಿತ್ರಗಳ ಆಧಾರದ ಮೇಲೆ ಅವರ ಗುರುತನ್ನು ದೃಢೀಕರಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಹಿರಿಯ ನಾಗರಿಕರು ಅನುಭವಿಸುತ್ತಿರುವ ತೊಂದರೆಯನ್ನು ತಪ್ಪಿಸಿದರೆ ಅವರ ಆತಂಕಕ್ಕೆ ಕೊನೆಯಾಗುತ್ತದೆ.