Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸಂತೋಷವನ್ನು ಸಾರ್ವತ್ರಿಕಗೊಳಿಸುವ ಹಬ್ಬ...

ಸಂತೋಷವನ್ನು ಸಾರ್ವತ್ರಿಕಗೊಳಿಸುವ ಹಬ್ಬ ಈದುಲ್ ಫಿತ್ರ್

ಬಿ.ಎಸ್. ಶರ್ಫುದ್ದೀನ್,  ಕುವೈತ್ಬಿ.ಎಸ್. ಶರ್ಫುದ್ದೀನ್, ಕುವೈತ್9 April 2024 11:31 AM IST
share
ಸಂತೋಷವನ್ನು ಸಾರ್ವತ್ರಿಕಗೊಳಿಸುವ ಹಬ್ಬ ಈದುಲ್ ಫಿತ್ರ್
ಭಾರತದಂತಹ ಬಹುರೂಪಿ ಸಮಾಜದಲ್ಲಿ ಧರ್ಮಗಳು ಪ್ರೀತಿ ಹರಡುವ ಮತ್ತು ಸಂಬಂಧ ಬೆಸೆಯುವ ಕೆಲಸ ಮಾಡಬೇಕಾಗಿದೆ. ಧಾರ್ಮಿಕ ಹಬ್ಬಗಳು ಇದಕ್ಕೆ ಪ್ರಮುಖ ಅವಕಾಶಗಳನ್ನು ಕಲ್ಪಿಸುತ್ತದೆ. ಆದರೆ ದುರದೃಷ್ಟವಶಾತ್ ಇಂದು ಸ್ವಾರ್ಥ ಸಾಧನೆ ಮತ್ತು ಸಾರ್ಥ ಹಿತಾಸಕ್ತಿಗಳಿಗಾಗಿ ಧರ್ಮದ ಆಧಾರದಲ್ಲಿ ದ್ವೇಷ ಹರಡುವ ಕೆಲಸ ಧಾರಾಳವಾಗಿ ನಡೆಯುತ್ತಿದೆ. ಕೆಲವರಿಗೆ ಇದರಿಂದ ಕೆಲವು ಪ್ರಯೋಜನಗಳು ದೊರೆಯಬಹುದು. ಆದರೆ ದೇಶದ ಮೇಲೆ ಅದರಿಂದ ಆಗುವ ನಷ್ಟ ಹೇರಳ ಮತ್ತು ದೂರಗಾಮಿ. ಎಲ್ಲ ಧಾರ್ಮಿಕ ಗುಂಪುಗಳೂ ಮಾಡಬಹುದಾದ ಒಂದು ಪ್ರಮುಖ ಕೆಲಸವೆಂದರೆ ತಮ್ಮ ತಮ್ಮ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ‘ಪ್ರೀತಿ ಹರಡುವುದು ಮತ್ತು ಸಾಮಾಜಿಕ ಸಂಬಂಧ ಬೆಸೆಯುವುದು’. ಈದ್ ಫಿತ್ರ್‌ನ ಸಂದರ್ಭದಲ್ಲಿ ಮುಸ್ಲಿಮರು ಈ ಕೆಲಸ ಮಾಡಿದರೆ ಅದು ಸಮಾಜ ಮತ್ತು ದೇಶಕ್ಕೆ ಮಾಡುವ ಅತ್ಯಂತ ಮುಖ್ಯ ಸೇವೆಯಾಗಿದೆ.

ಹಬ್ಬಗಳು, ಅದು ಯಾವುದೇ ಧರ್ಮಕ್ಕೆ ಸೇರಿದ್ದಾದರೂ ಮಾನವ ಜೀವನಕ್ಕೆ ತುಂಬಾ ಹುರುಪು ತುಂಬುವ ಆಚರಣೆಗಳು. ಹಬ್ಬಗಳಿಂದಾಗಿ ಮಾನವ ಬದುಕಿಗೆ ಹಲವಾರು ಪ್ರಯೋಜನಗಳಿವೆ. ಚುರುಕುಗೊಳ್ಳುವ ಎಲ್ಲಾ ವಿಧದ ವ್ಯಾಪಾರ ವಹಿವಾಟುಗಳು, ಹೊಸ ಬಟ್ಟೆ ಧರಿಸಿ ಹಿಗ್ಗುವ ಮತ್ತು ಹಬ್ಬದ ಸವಿನೆನಪುಗಳನ್ನು ಜೀವನ ಪರ್ಯಂತ ನೆನಪಿರುವಂತೆ ಸ್ಮತಿ ಪಟಲದಲ್ಲಿ ಉಳಿಸಿಕೊಂಡು ಸಂತೋಷ ಪಡುವ ಮಕ್ಕಳು, ಶುಭ ಕಾಮನೆಗಳನ್ನು ಹಂಚಿಕೊಂಡು ಸಂಬಂಧಗಳನ್ನು ಬೆಸೆಯುವ ಸಮಾಜ, ತಮ್ಮ ನಿಬಿಡತೆಗಳನ್ನು ಬದಿಗೊತ್ತಿ ಒಂದೆಡೆ ಕಲೆತು ಹಿರಿ ಹಿರಿ ಹಿಗ್ಗುವ ಕುಟುಂಬಗಳು-ಸಮಾಜಕ್ಕೆ ಹಬ್ಬಗಳಿಂದಾಗುವ ಪ್ರಯೋಜನಗಳು ಅಪಾರ ಎಂದು ಸಾರಿ ಹೇಳುತ್ತವೆ. ಇಂತಹ ಸಂತೋಷ ತುಂಬುವ ಹಬ್ಬಗಳು ಇಲ್ಲದಿರುತ್ತಿದ್ದರೆ ಮಾನವ ಬದುಕು ತುಂಬಾ ನೀರಸವಾಗಿರುತ್ತಿತ್ತು.

ಹಬ್ಬಗಳು ಸಮಾಜಕ್ಕೆ ಹಲವು ಸಂಸ್ಕೃತಿಗಳನ್ನು ಪರಿಚಯಿಸುತ್ತದೆ. ಈ ಸಂಸ್ಕೃತಿ ಪ್ರಾದೇಶಿಕ ಅಸ್ಮಿತೆಯೊಂದಿಗೆ ಬೆರೆತು ಸಮಾಜದಲ್ಲಿ ಸಾಂಸ್ಕೃತಿಕ ಸಮಾಗಮದ ಛಾಪು ಮೂಡಿಸುತ್ತದೆ. ಇಂತಹ ಎಲ್ಲಾ ವಿಶೇಷತೆ ಮತ್ತು ಕೊಡುಗೆಗಳನ್ನು ಮೈಗೂಡಿಸಿರುವ ಹಾಗೂ ರಮಝಾನ್ ತಿಂಗಳ ಮುಕ್ತಾಯವನ್ನು ಸೂಚಿಸುವ ಹಬ್ಬವೇ ಈದುಲ್ ಫಿತ್ರ್. ಈದ್ ಎಂದರೆ ಮರುಕಳಿಸಿ ಬರುವ ಸಂತೋಷ. ಫಿತ್ರ್ ಎಂದರೆ ಪಾರಣೆ ಅಥವಾ ಉಪವಾಸ ತೊರೆಯುವುದು. ಆದ್ದರಿಂದ ಇದು ಒಂದು ತಿಂಗಳ ಉಪವಾಸಕ್ಕೆ ನಾಂದಿ ಹಾಡಿ ಆ ಒಂದು ತಿಂಗಳಲ್ಲಿ ಬೆಳೆಸಿಕೊಂಡ ಸದ್ಮೌಲ್ಯಗಳನ್ನು ನೆನಪಿಸಿ ಸಂತೋಷ ಪಡುವ ಹಬ್ಬ.

ಈದುಲ್ ಫಿತ್ರ್ ಒಂದು ಅಂತರ್‌ರಾಷ್ಟ್ರೀಯ ಹಬ್ಬ. ಏಕೆಂದರೆ ಜಗತ್ತಿನ ಸುಮಾರು ಎರಡು ಶತಕೋಟಿ ಮುಸ್ಲಿಮರು ಈ ಹಬ್ಬವನ್ನು ಆಚರಿಸುತ್ತಾರೆ. ಸುಮಾರು ಐವತ್ತರಷ್ಟು ರಾಷ್ಟ್ರಗಳಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ. ಅಲ್ಲದೆ ಯುರೋಪ್, ಅಮೆರಿಕ, ಕೆನಡಾ ಮುಂತಾದ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲೂ ಮುಸ್ಲಿಮರು ಧಾರಾಳ ಸಂಖ್ಯೆಯಲ್ಲಿದ್ದಾರೆ. ಚೀನಾ ಮತ್ತು ರಶ್ಯದಂತಹ ಕಮ್ಯುನಿಸ್ಟ್ ರಾಷ್ಟ್ರಗಳಲ್ಲೂ ಗಣನೀಯ ಸಂಖ್ಯೆಯಲ್ಲಿ ಮುಸ್ಲಿಮರಿದ್ದಾರೆ. ಹೀಗೆ ಚಾಂದ್ರಮಾನ ಕ್ಯಾಲೆಂಡರ್‌ನಲ್ಲಿ ಆಗುವ ಒಂದೆರಡು ದಿನಗಳ ವ್ಯತ್ಯಾಸದೊಂದಿಗೆ ವಿಶ್ವದಾದ್ಯಂತ ಮುಸ್ಲಿಮರು ಈ ಹಬ್ಬವನ್ನು ಆಚರಿಸುತ್ತಾರೆ. ಇಸ್ಲಾಮಿನ ಬೋಧನೆಗಳಿಗನುಸಾರ ಪಾಲಿಸಬೇಕಾದ ಕೆಲವು ಸಮಾನ ಅಂಶಗಳನ್ನು ಎಲ್ಲಾ ಕಡೆಗಳಲ್ಲಿ ಪಾಲಿಸಲಾಗುತ್ತದೆ. ಅದು ಬಿಟ್ಟರೆ ಹಬ್ಬದ ಇತರ ಆಚರಣೆಗಳು ಪ್ರಾದೇಶಿಕ ಸಂಸ್ಕೃತಿಯೊಂದಿಗೆ ಬೆರೆತು ವಿಭಿನ್ನ ರೂಪ ತಾಳುತ್ತದೆ.

ಉದಾಹರಣೆಗೆ ಭಾರತ ಉಪಖಂಡದಲ್ಲಿ ‘ಬಿರಿಯಾನಿ’ ಇಲ್ಲದ ಈದ್‌ನ್ನು ಕಲ್ಪಿಸಲು ಸಾಧ್ಯವಿಲ್ಲ. ಮುಸ್ಲಿಮರು ಗರಿಷ್ಠ ಸಂಖ್ಯೆಯಲ್ಲಿರುವ ಇಂಡೋನೇಶ್ಯದಲ್ಲಿ ಹಬ್ಬದ ವಿಶೇಷ ಊಟಕ್ಕೆ ಕೆಟುಪ್ಯಾಟ್(ketupat) ಎನ್ನುತ್ತಾರೆ. ಅಕ್ಕಿಯಿಂದ ತಯಾರಾಗುವ ಈ ವಿಶೇಷ ಹಬ್ಬದೂಟವನ್ನು ತೆಂಗಿನ ಗರಿಯಿಂದ ಕಟ್ಟುತ್ತಾರೆ. ಮೊರೊಕ್ಕೊ, ಅಲ್‌ಜೀರಿಯಾ ಮತ್ತು ಹೆಚ್ಚಿನೆಲ್ಲಾ ಉತ್ತರ ಆಫ್ರಿಕಾದ ರಾಷ್ಟ್ರಗಳಲ್ಲಿ ತಾಜಿನೆ (tajine) ಹಬ್ಬದ ವಿಶೇಷ ಊಟವಾಗಿದೆ. ಇದನ್ನು ಮಾಂಸ, ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಮಿಶ್ರ ಮಾಡಿ ತಯಾರು ಮಾಡುತ್ತಾರೆ. ಗಲ್ಫ್ ರಾಷ್ಟ್ರಗಳಲ್ಲಿಮಚ್‌ಬೂಸ್(machboos), ಊಝಿ(ouzi), ಮಂದಿ(mandi) ಇತ್ಯಾದಿಗಳು ಹಬ್ಬದ ವಿಶೇಷ ಊಟವಾಗಿದೆ. ಇಂತಹ ಸಾಂಸ್ಕೃತಿಕ ವ್ಯೆವಿಧ್ಯ ಕೇವಲ ಊಟಕ್ಕೆ ಮಾತ್ರ ಸೀಮಿತವಾಗಿಲ್ಲ. ಹಬ್ಬದ ಉಡುಗೆ-ತೊಡುಗೆ, ಮನರಂಜನೆ, ಶುಭಕೋರುವ ರೀತಿ, ಸಂಪ್ರದಾಯಗಳು ಎಲ್ಲವೂ ಭಿನ್ನವಾಗಿದೆ. ಮೂಲಭೂತ ಬೋಧನೆಗಳ ಪಾಲನೆ ಬಿಟ್ಟರೆ ಉಳಿದ ಆಚಾರಗಳಲ್ಲಿ ಪ್ರಾದೇಶಿಕ ಅಸ್ಮಿತೆ ಮತ್ತು ವೈವಿಧ್ಯತೆಯನ್ನು ಕಾಪಾಡಿಕೊಳ್ಳಲು ಇಸ್ಲಾಮಿನಲ್ಲಿರುವ ವೈಶಾಲ್ಯ ಮತ್ತು ಉದಾರ ನೀತಿಗಳೇ ಕಾರಣವಾಗಿದೆ. ಇಸ್ಲಾಮಿನಲ್ಲಿರುವ ಎಲ್ಲರನ್ನೂ ಬೆಸೆಯುವ, ಎಲ್ಲರಿಗೂ ಒಗ್ಗುವ, ಸೀಮಿತತೆ ಮತ್ತು ಪ್ರಾದೇಶಿಕತೆ ಇಲ್ಲದ ಬೋಧನೆಗಳಿಂದಾಗಿಯೇ ಪ್ರಾಯಶಃ ಅದರ ಬೋಧನೆಗಳು ಗಡಿಗಳನ್ನು ದಾಟಿ ಎಲ್ಲರ ಮನಗೆದ್ದಿದೆ ಮತ್ತು ಎಲ್ಲ ಪ್ರದೇಶದವರೂ ಅದನ್ನು ಮೈಗೂಡಿಸಿಕೊಂಡಿದ್ದಾರೆ.

ಇಸ್ಲಾಮಿನ ಹಬ್ಬಗಳಲ್ಲಿ ಕಂಡು ಬರುವ ಅತಿ ಮುಖ್ಯವಾದ ಅಂಶಗಳೆಂದರೆ ಪ್ರೀತಿ, ಸೌಹಾರ್ದ, ಸಂಬಂಧಗಳ ಸುಧಾರಣೆ ಮತ್ತು ದೇವನೊಂದಿಗೆ ಪ್ರಕಟಿಸಬೇಕಾದ ವಿನೀತತೆ ಮತ್ತು ಕೃತಜ್ಞತಾ ಮನೋಭಾವ. ಮಾನವ ಸಂಬಂಧಗಳ ಸುಧಾರಣೆ ಮತ್ತು ಸಮಾಜದಲ್ಲಿ ಪ್ರೀತಿ ಹರಡುವುದಕ್ಕೆ ಇಸ್ಲಾಮಿನ ಹಬ್ಬಗಳಲ್ಲಿ ಅತಿ ಹೆಚ್ಚು ಒತ್ತು ಕೊಡಲಾಗಿದೆ.

ಉದಾಹರಣೆಗೆ ಈದುಲ್ ಫಿತ್ರ್‌ನಲ್ಲಿ ಪಾಲಿಸಬೇಕಾದ ಒಂದು ಮುಖ್ಯ ವಿಧಿಯೆಂದರೆ ಫಿತ್ರ್ ದಾನ. ಹಬ್ಬದ ಹೆಚ್ಚುವರಿ ಪ್ರಾರ್ಥನೆಗೆ ತೆರಳುವ ಮುನ್ನ ಆ ದಿನದ ಖರ್ಚಿಗೆ ಇರುವ ಮತ್ತು ಆ ದಿನದ ಮಟ್ಟಿಗೆ ಆರ್ಥಿಕ ಮುಗ್ಗಟ್ಟು ಇಲ್ಲದಿರುವ ಪ್ರತಿಯೊಬ್ಬನೂ ತನ್ನ ಅಧೀನದಲ್ಲಿರುವ ಪ್ರತಿಯೊಬ್ಬ ಮನೆಯ ಸದಸ್ಯನ ಪರವಾಗಿ ಸುಮಾರು ಎರಡೂವರೆ ಕೆ.ಜಿ. ಧಾನ್ಯ ಅಥವಾ ಅದಕ್ಕೆ ತುಲ್ಯವಾದ ಮೊತ್ತವನ್ನು ಕಡ್ಡಾಯವಾಗಿ ಬಡ-ಬಗ್ಗರಿಗೆ ದಾನ ಮಾಡಬೇಕಾಗಿದೆ. ಆ ಮೂಲಕ ಹಬ್ಬದ ದಿನದಂದು ಯಾರೂ ಮೂಲಭೂತ ಅವಶ್ಯಕತೆಗಳಿಂದ ವಂಚಿತರಾಗದಂತೆ ನೋಡಿಕೊಳ್ಳಲಾಗುತ್ತದೆ. ಈ ಒಂದು ಆದೇಶದಿಂದಾಗಿ ಹಬ್ಬದ ದಿನದಂದು ಬಹಳ ದೊಡ್ಡ ಮೊತ್ತದ ಹಣ ಅಪೇಕ್ಷಿತರ ಕೈ ಸೇರಿ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತದೆ. ಸಮಾಜದಲ್ಲಿ ಪ್ರೀತಿ ಮತ್ತು ಗೌರವದ ಸಂಬಂಧ ಬೆಳೆಸುತ್ತದೆ.

ಕೆಲವು ವರ್ಷಗಳ ಹಿಂದೆ ಸಂತೋಷದ ನಿಜವಾದ ಬುನಾದಿ ಯಾವುದು ಎಂಬ ಬಗ್ಗೆ ಹಾರ್ವರ್ಡ್ ವಿಶ್ವವಿದ್ಯಾನಿಲಯದಲ್ಲಿ ಸುದೀರ್ಘವಾದ ಸಂಶೋಧನೆಯೊಂದನ್ನು ನಡೆಸಲಾಯಿತು. ಅದರ ಪ್ರಕಾರ ಹೊರ ಹೊಮ್ಮಿದ ಸತ್ಯ ಅರ್ಥಗರ್ಭಿತವಾದ ಸಂಬಂಧಗಳಲ್ಲಿ ನಿಜವಾದ ಪ್ರೀತಿ ಅಡಕವಾಗಿದೆ.(happiness lies in meaningful relationships) ಧರ್ಮಗಳು ಮತ್ತು ಧಾರ್ಮಿಕ ವಕ್ತಾರರು ಇಂದು ಪ್ರೀತಿ ಹರಡುವ ಮತ್ತು ಸಂಬಂಧ ಬೆಸೆಯುವ ಕೆಲಸ ಮಾಡಬೇಕಾಗಿದೆ. ವೈಯಕ್ತಿಕ ಆರೋಗ್ಯಕ್ಕೂ ಇದು ಬಹಳ ಮುಖ್ಯ. ಸಾಮಾಜಿಕ ಸ್ವಾಸ್ಥ್ಯಕ್ಕೂ ಇದು ಅತ್ಯಂತ ಅವಶ್ಯಕ. ಇದರ ವಿನಾ ವಿಕಾಸ ಮತ್ತು ಆರ್ಥಿಕ ಪ್ರಗತಿಯನ್ನು ಕಲ್ಪಿಸಲಿಕ್ಕೆ ಸಾಧ್ಯವಿಲ್ಲ. ನಮ್ಮ ಮಕ್ಕಳು ನಿರ್ಮಲ ವಾತಾವರಣದಲ್ಲಿ ಪ್ರೀತಿಯಿಂದ, ಮುಕ್ತವಾಗಿ ಬೆರೆತು ಸಮಾಜದಿಂದ ಪಾಠ ಕಲಿಯಲಿಕ್ಕೂ ಇದರ ವಿನಾ ಸಾಧ್ಯವಿಲ್ಲ. ಭಾರತದಂತಹ ಬಹುರೂಪಿ ಸಮಾಜದಲ್ಲಿ ಧರ್ಮಗಳು ಪ್ರೀತಿ ಹರಡುವ ಮತ್ತು ಸಂಬಂಧ ಬೆಸೆಯುವ ಕೆಲಸ ಮಾಡಬೇಕಾಗಿದೆ. ಧಾರ್ಮಿಕ ಹಬ್ಬಗಳು ಇದಕ್ಕೆ ಪ್ರಮುಖ ಅವಕಾಶಗಳನ್ನು ಕಲ್ಪಿಸುತ್ತದೆ. ಆದರೆ ದುರದೃಷ್ಟವಶಾತ್ ಇಂದು ಸ್ವಾರ್ಥ ಸಾಧನೆ ಮತ್ತು ಸಾರ್ಥ ಹಿತಾಸಕ್ತಿಗಳಿಗಾಗಿ ಧರ್ಮದ ಆಧಾರದಲ್ಲಿ ದ್ವೇಷ ಹರಡುವ ಕೆಲಸ ಧಾರಾಳವಾಗಿ ನಡೆಯುತ್ತಿದೆ. ಕೆಲವರಿಗೆ ಇದರಿಂದ ಕೆಲವು ಪ್ರಯೋಜನಗಳು ದೊರೆಯಬಹುದು. ಆದರೆ ದೇಶದ ಮೇಲೆ ಅದರಿಂದ ಆಗುವ ನಷ್ಟ ಹೇರಳ ಮತ್ತು ದೂರಗಾಮಿ. ಎಲ್ಲ ಧಾರ್ಮಿಕ ಗುಂಪುಗಳೂ ಮಾಡಬಹುದಾದ ಒಂದು ಪ್ರಮುಖ ಕೆಲಸವೆಂದರೆ ತಮ್ಮ ತಮ್ಮ ಧಾರ್ಮಿಕ ಹಬ್ಬಗಳ ಸಂದರ್ಭದಲ್ಲಿ ‘ಪ್ರೀತಿ ಹರಡುವುದು ಮತ್ತು ಸಾಮಾಜಿಕ ಸಂಬಂಧ ಬೆಸೆಯುವುದು’. ಈದ್ ಫಿತ್ರ್‌ನ ಸಂದರ್ಭದಲ್ಲಿ ಮುಸ್ಲಿಮರು ಈ ಕೆಲಸ ಮಾಡಿದರೆ ಅದು ಸಮಾಜ ಮತ್ತು ದೇಶಕ್ಕೆ ಮಾಡುವ ಅತ್ಯಂತ ಮುಖ್ಯ ಸೇವೆಯಾಗಿದೆ.

ನಮ್ಮ ಸಂತೋಷ ಹಬ್ಬದ ದಿನಕ್ಕೆ ಸೀಮಿತವಾಗದೆ ಜೀವನ ಪರ್ಯಂತ ಉಳಿಯಬೇಕಾದರೆ ಒಂದು ತಿಂಗಳ ಉಪವಾಸ ವ್ರತದಿಂದ ಕಲಿತ ಹಲವು ಪಾಠಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾಗಿದೆ. ಕೃತಜ್ಞತಾ ಮನೋಭಾವ ಅದರಲ್ಲಿ ಮುಖ್ಯವಾದುದು. ಹದಿನೈದರಿಂದ-ಇಪ್ಪತ್ತು ಗಂಟೆ ಉಪವಾಸ ಆಚರಿಸಿ ಉಪವಾಸ ಬಿಡುವ ಸಂದರ್ಭದಲ್ಲಿ ಸೇವಿಸುವ ಒಂದು ಗುಟುಕು ನೀರು, ಅದು ದೇವನ ಎಂತಹ ದೊಡ್ಡ ಅನುಗ್ರಹ ಎಂಬ ಭಾವವನ್ನು ಉಪವಾಸಿಗನಲ್ಲಿ ಮೂಡಿಸುತ್ತದೆ. ನದಿಗಳೇ ಇಲ್ಲದ ದೊಡ್ಡ ರಾಷ್ಟ್ರವೆಂದರೆ ಸೌದಿ ಅರೇಬಿಯ. ಅಲ್ಲಿ ನೀರನ್ನು ನಿರ್ಲವಣೀಕರಣ ಘಟಕ(desalination plant)ಗಳ ಮೂಲಕ ಸಿದ್ಧಪಡಿಸಿ ಜನರಿಗೆ ತಲುಪಿಸಲಾಗುತ್ತದೆ. ಆದರೆ ವಿಶ್ವದ ದೊಡ್ಡ ಭಾಗಕ್ಕೆ ದೇವನು ನೈಸರ್ಗಿಕ ನಿರ್ಲವಣೀಕರಣ ಘಟಕದ ಮೂಲಕ ಉಚಿತವಾಗಿ ನೀರನ್ನು ಸರಬರಾಜು ಮಾಡುತ್ತಾನೆ. ಸಮುದ್ರದ ನೀರು ನಿರ್ಲವಣೀಕರಣಗೊಂಡು ಆವಿಯಾಗಿ, ಮೋಡವಾಗಿ, ಮಳೆಯಾಗಿ, ನೀರಿನ ಒಸರಾಗಿ, ಸಿಹಿ ನೀರಿನ ಆಕರಗಳಾಗಿ, ಕೆರೆಗಳಾಗಿ, ನದಿಗಳಾಗಿ, ಅವಶ್ಯಕತೆ ಇದ್ದಾಗ ಕೊಳವೆ ಬಾವಿಗಳ ಮೂಲಕ ಹೊರಹೊಮ್ಮುವ ಅಂತರ್ಜಲವಾಗಿ ಮಾರ್ಪಡುವ ಈ ದೊಡ್ಡ ವ್ಯವಸ್ಥೆಯೇ ನೈಸರ್ಗಿಕ ‘ನಿರ್ಲವಣೀಕರಣ ಘಟಕ’. ಮನುಷ್ಯ ದೇವನ ಇಂತಹ ಹಲವಾರು ಅನುಗ್ರಹಗಳನ್ನು ನೆನೆಸಿ ಕೃತಜ್ಞನಾಗಿ ಬದುಕುವುದನ್ನು ಕಲಿಯುವುದರಲ್ಲೇ ಸಂತೋಷ ಅಡಕವಾಗಿದೆ. ದೇವನು ಪವಿತ್ರ ಕುರ್‌ಆನ್‌ನಲ್ಲಿ ಹೇಳುತ್ತಾನೆ, ‘ನೀವು ಕುಡಿಯುವ ನೀರನ್ನು ನೋಡುವುದಿಲ್ಲವೇ? ಅದನ್ನು ಮೋಡಗಳ ಮೂಲಕ ಸುರಿಸುವವರು ನೀವೋ ಅಥವಾ ನಾವೋ? ನಾವು ಬಯಸಿದರೆ ಅದನ್ನು ಉಪ್ಪು ನೀರಾಗಿ ಮಾಡಬಲ್ಲೆವು ಇಷ್ಟಾಗಿ ನೀವೇಕೆ ಕೃತಜ್ಞರಾಗುವುದಿಲ್ಲ’. (ಅಧ್ಯಾಯ 56-ಸೂರ 68-70)

ಉಪವಾಸ ವ್ರತದಿಂದ ನಾವು ಕಲಿಯುವ ಇತರ ಪಾಠಗಳೆಂದರೆ ಆತ್ಮಸಂಸ್ಕರಣೆ, ಸಮಯ ಪಾಲನೆ, ಶಿಸ್ತು, ಬದ್ಧತೆ, ಮಾನವರ ಸಮಸ್ಯೆಗಳೊಂದಿಗೆ ಸ್ಪಂದಿಸುವ ಹೃದಯವಂತಿಕೆ, ಕಠಿಣ ಶ್ರಮ, ಮಿತಾಹಾರ, ಕೌಟುಂಬಿಕ ಸಂಬಂಧಗಳ ಸುಧಾರಣೆ, ಸುಳ್ಳು ಹೇಳುವುದು ಮತ್ತು ಆಚರಿಸುವುದರಿಂದ ದೂರ ಉಳಿಯುವುದು, ಜಗಳ ಕಾಯದಿರುವುದು, ಮನಸ್ಸಿನ ಸಂಕುಚಿತತೆಯನ್ನು ಕೊನೆಗೊಳಿಸಿ ಔದಾರ್ಯವನ್ನು ಬೆಳೆಸಿಕೊಳ್ಳುವುದು, ಪವಿತ್ರ ಕುರ್‌ಆನ್‌ನನ್ನು ಅರಿತು ಅದರ ಬೋಧನೆಗಳಂತೆ ಬದುಕುವುದು ಇತ್ಯಾದಿ. ಧರ್ಮ ಕಲಿಸುವ ಮಾನವನ ವೈಯಕ್ತಿಕ ಮತ್ತು ಸಾಮಾಜಿಕ ಬದುಕಿಗೆ ಬಹಳ ಮುಖ್ಯವಾದ ಈ ಎಲ್ಲ ಮೌಲ್ಯಗಳನ್ನು ಮಾನವ ಅಳವಡಿಸಿಕೊಂಡಾಗ ಸಂತೋಷ ಹಬ್ಬದ ದಿನಕ್ಕೆ ಸೀಮಿತವಾಗದೆ ಸರ್ವವ್ಯಾಪ್ತಿಯಾಗುತ್ತದೆ.

share
ಬಿ.ಎಸ್. ಶರ್ಫುದ್ದೀನ್,  ಕುವೈತ್
ಬಿ.ಎಸ್. ಶರ್ಫುದ್ದೀನ್, ಕುವೈತ್
Next Story
X