Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ವಿಪಕ್ಷಗಳ ಪ್ರಶ್ನೆಗಳಿಂದ ಮೋದಿ ಸರಕಾರ...

ವಿಪಕ್ಷಗಳ ಪ್ರಶ್ನೆಗಳಿಂದ ಮೋದಿ ಸರಕಾರ ಹೈರಾಣಾಗುತ್ತಿದೆಯೇ?

ಚಂದ್ರಕಾಂತ್ ಎನ್.ಚಂದ್ರಕಾಂತ್ ಎನ್.24 July 2024 12:28 PM IST
share
ವಿಪಕ್ಷಗಳ ಪ್ರಶ್ನೆಗಳಿಂದ ಮೋದಿ ಸರಕಾರ ಹೈರಾಣಾಗುತ್ತಿದೆಯೇ?

ಕಳೆದ ಹತ್ತು ವರ್ಷ ಮೋದಿಯನ್ನು, ಅವರ ಸರಕಾರವನ್ನು ಪ್ರಶ್ನಿಸುವವರೇ ಇರಲಿಲ್ಲ. ವಿಪಕ್ಷವನ್ನೇ ಇಲ್ಲದಂತೆ ಮಾಡಿ ತಾವು ಆಡಿದ್ದೇ ಆಟವೆಂದುಕೊಂಡು ಬರಲಾಗಿತ್ತು. ಆದರೆ ಈ ಬಾರಿ ಅಲ್ಪಮತದ ಮತ್ತು ಬೇರೆ ಪಕ್ಷಗಳ ಆಸರೆಯಲ್ಲಿ ನಿಂತಿರುವ ಮೋದಿ ಸರಕಾರಕ್ಕೆ ಭಯ ಕಾಡುತ್ತಿದೆ. ಹೆಜ್ಜೆಹೆಜ್ಜೆಗೂ ಸವಾಲುಗಳು ಎದುರಾಗುತ್ತಿವೆ.

ಈ ಸಲ ಬಿಜೆಪಿ ಸ್ಥಿತಿ ಹೇಗಿದೆಯೆಂದರೆ, ಮೋದಿ ಸರಕಾರ ಎಂದೂ ಹೇಳುವ ಹಾಗಿಲ್ಲ. ಅದು ಈಗ ಪಕ್ಕಾ ಎನ್‌ಡಿಎ ಸರಕಾರವಾಗಿದೆ.

ತನ್ನ ಗಂಟಲು ಹಿಸುಕಿದಂತೆ ಮಾಡಲಾಗುತ್ತಿದೆ ಎಂದು ವಿಪಕ್ಷಗಳ ವಿರುದ್ಧ ಆರೋಪಿಸುವ ಮೂಲಕ ಮೋದಿ ಹೊಸ ನಾಟಕವನ್ನೂ ಶುರು ಮಾಡಿದ್ದಾರೆ. ಇದೇ ಮೋದಿ ಸರಕಾರ, ರಾಹುಲ್ ಗಾಂಧಿ ಅವರು ಅದಾನಿ ಮತ್ತು ಮೋದಿ ಸಂಬಂಧವೇನು ಎಂದು ಸಂಸತ್ತಿನಲ್ಲಿ ಪ್ರಶ್ನಿಸಿ ಮಾತಾಡಿದ್ದಾಗ ಇಡೀ ಭಾಷಣವನ್ನೇ ಹೇಗೆ ಮುಗಿಸಿಹಾಕಿತ್ತಲ್ಲವೆ?

ಇನ್ನೊಂದೆಡೆ, ಹಲವು ವರ್ಷಗಳಿಂದ ಜಾರಿಯಲ್ಲಿದ್ದ, ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಸರಕಾರಿ ನೌಕರರು ಭಾಗವಹಿಸುವುದಕ್ಕೆ ಇದ್ದ ನಿಷೇಧವನ್ನು ಮೋದಿ ಸರಕಾರ ತೆಗೆದುಹಾಕಿದೆ. ಇದು ಕೂಡ, ಭಯದಲ್ಲಿರುವ ಬಿಜೆಪಿ ತನ್ನನ್ನು ರಕ್ಷಣೆ ಮಾಡಿಕೊಳ್ಳುವುದಕ್ಕಾಗಿ ಆರೆಸ್ಸೆಸ್ ಜೊತೆ ಮಾಡಿಕೊಂಡ ರಾಜಿಯಂತೆಯೇ ಕಾಣಿಸುತ್ತಿದೆ.

ಅತ್ತ, ಯುಪಿ ಸರಕಾರ ಮುಝಪ್ಫರ್ ನಗರದಲ್ಲಿನ ಅಂಗಡಿಗಳ ಮಾಲಕರು ತಮ್ಮ ಹೆಸರು ಪ್ರದರ್ಶಿಸಬೇಕೆಂದು ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿದೆ.

ಮೋದಿಗೆ ಮೊದಲ ೧೦ ವರ್ಷಗಳಲ್ಲಿ ಸವಾಲು ಎದುರಿಸಿಯೇ ಗೊತ್ತಿರಲಿಲ್ಲ. ಪ್ರಶ್ನೋತ್ತರಗಳ ಸನ್ನಿವೇಶವೇ ಇರಲಿಲ್ಲ. ಈಗ ಮೋದಿ ಮೂರನೇ ಅವಧಿಯ ಮೊದಲ ತಿಂಗಳಲ್ಲಿಯೇ ಬಿಜೆಪಿ ಹೈರಾಣಾಗಿರುವ ಹಾಗಿದೆ.

ಕೆಲ ವಿಚಾರಗಳನ್ನು ಗಮನಿಸುವುದಾದರೆ,

೧. ನರೇಗಾ ವಿಚಾರದಲ್ಲಿ ಹಿಂದೆ ತೀವ್ರ ನಿರ್ಲಕ್ಷ್ಯ ವಹಿಸಲಾಗಿತ್ತು.

ನರೇಗಾಕ್ಕೆ ಸಿಗಬೇಕಾದ ಹಣವನ್ನು ಕೋವಿಡ್ ನೆಪದಲ್ಲಿ ಬೇರೆಡೆಗೆ ಬಳಸಲಾಗಿತ್ತು.ಆದರೆ ಈ ಬಾರಿ ಹಾಗೆ ಹೇಳುವಂತಿಲ್ಲ. ನರೇಗಾಕ್ಕೆ ಸಲ್ಲಬೇಕಾದುದನ್ನು ಸಲ್ಲಿಸಲೇಬೇಕಾಗುತ್ತದೆ.

೨.ಜಿಎಸ್‌ಟಿ ಸಂಗ್ರಹದಲ್ಲಿ ತೀವ್ರ ಅಸಮಾನತೆ ಇದೆ.

ಬಡವರು ಮತ್ತು ಮಧ್ಯಮ ವರ್ಗದಿಂದಲೇ ಹೆಚ್ಚು ತೆರಿಗೆ ಹೋಗುತ್ತಿದೆ ಮತ್ತು ದೇಶದ ಶ್ರೀಮಂತ ವ್ಯಕ್ತಿಗಳು ರಿಯಾಯಿತಿ ಅನುಭವಿಸುತ್ತಲೇ ಇದ್ದಾರೆ.

೩. ಇದಲ್ಲದೆ, ಸರಕಾರ ಉದ್ಯೋಗ ನೀಡಲಾರದ ಸ್ಥಿತಿಯಲ್ಲಿದೆ. ಹೂಡಿಕೆ ಇಲ್ಲವೇ ಇಲ್ಲ ಎನ್ನುವಂತಾಗಿದೆ. ನೀಟ್ ಹಗರಣವಂತೂ ದೊಡ್ಡ ಕಳಂಕ. ಅದಕ್ಕೀಗ ಯುಜಿಸಿ, ಯುಪಿಎಸ್‌ಸಿ ಹಗರಣಗಳೂ ಸೇರಿಕೊಂಡಿವೆ.

ನೀಟ್ ಹಗರಣ ಕುರಿತ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಎತ್ತಿದ್ದ ಪ್ರಶ್ನೆಗಳಿಗೆ ಸ್ವತಃ ಎನ್‌ಟಿಎ ಉತ್ತರ ನೀಡಲಾರದಾಯಿತು.

‘‘ಇಡೀ ಪರೀಕ್ಷಾ ವ್ಯವಸ್ಥೆಯೇ ಫ್ರಾಡ್ ಆಗಿಬಿಟ್ಟಿದೆ, ದುಡ್ಡಿದ್ದವರು ಪರೀಕ್ಷೆಯನ್ನೇ ಕೊಂಡುಕೊಳ್ಳಬಹುದಾಗಿದೆ’’ ಎಂದು ರಾಹುಲ್ ಗಾಂಧಿ ಸೋಮವಾರ ಸಂಸತ್ತಿನಲ್ಲಿ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಆ ವೇಳೆ ಸಂಸತ್ತಿನಲ್ಲಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಇದ್ದರು.

ಎಲ್ಲಿಯವರೆಗೂ ಇವರು ಸಚಿವರಾಗಿರುತ್ತಾರೆಯೋ ಅಲ್ಲಿಯವರೆಗೆ ನಮಗೆ ನ್ಯಾಯ ಸಿಗಲಾರದು ಎಂದು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ಉತ್ತರ ನೀಡಲು ಧರ್ಮೇಂದ್ರ ಪ್ರಧಾನ್ ತಡಕಾಡಿದರೆ, ಸುಪ್ರೀಂ ಕೋರ್ಟ್‌ನಲ್ಲಿ ಉತ್ತರ ಕೊಡಲು ಸಾಲಿಸಿಟರ್ ಜನರಲ್ ಒಂದು ದಿನ ಸಮಯ ನೀಡುವಂತೆ ಕೇಳಬೇಕಾಗಿ ಬಂತು.

ಪ್ರಧಾನಿಯ ದಯೆಯಿಂದ ಇಲ್ಲಿರುವುದಾಗಿ ಧರ್ಮೇಂದ್ರ ಪ್ರಧಾನ್ ಹೇಳಿದ್ದಂತೂ ಮಂತ್ರಿಯ ಬಣ್ಣವನ್ನೇ ಬಯಲಾಗಿಸಿತ್ತು.

ಇದೆಲ್ಲದಕ್ಕೂ ಮೊದಲು ಕಲಾಪ ಆರಂಭಕ್ಕೆ ಮುನ್ನ ಮಾಧ್ಯಮಗಳೆದುರು ಮಾತನಾಡಿದ ಮೋದಿಯವರಂತೂ, ವಿಪಕ್ಷಗಳು ತನ್ನ ಗಂಟಲು ಹಿಸುಕುವಂತೆ ವರ್ತಿಸುತ್ತಿವೆ ಎಂದರು. ದೇಶದ ಪ್ರಧಾನಿ ಹೀಗೆ ಹೇಳಿದ್ದಾದರೂ ಏಕೆ?

ಇನ್ನು ಯುಪಿ ಸರಕಾರದ ಆದೇಶ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.

ಇದೆಲ್ಲದರ ನಡುವೆ, ಆರೆಸ್ಸೆಸ್ ಚಟುವಟಿಕೆಗಳಲ್ಲಿ ಸರಕಾರಿ ನೌಕರರು ಪಾಲ್ಗೊಳ್ಳಲು ದಶಕಗಳಿಂದ ಇದ್ದ ನಿಷೇಧವನ್ನು ಮೋದಿ ಸರಕಾರ ತೆರವುಗೊಳಿಸಿದೆ.

ಹಾಗೆ ನೋಡಿದರೆ ಇದೇ ಮೋದಿ ಸರಕಾರದ ಕೃಪೆಯಲ್ಲಿರುವ ಬಹಳಷ್ಟು ಮಂದಿ ಆರೆಸ್ಸೆಸ್ ಜೊತೆಗೂ ನಂಟು ಹೊಂದಿದವರೇ ಆಗಿದ್ದಾರೆ.

ಆರೆಸ್ಸೆಸ್ ಜೊತೆ ನಂಟಿರುವವರೇ ಉಪಕುಲಪತಿಗಳು, ರಾಜ್ಯಪಾಲರಾಗಿರುವುದಿದೆ. ಎಚ್‌ಆರ್‌ಡಿ ಸಚಿವಾಲಯದಲ್ಲಿ ಯಾಕೆ ಅತಿ ಹೆಚ್ಚು ಮಂದಿ ಆರೆಸ್ಸೆಸ್‌ನವರೇ ಆಗಿದ್ದಾರೆ ಎಂಬುದು ಕೂಡ ಕೇಳಲೇಬೇಕಿರುವ ಪ್ರಶ್ನೆ.

ಈಗ ಆರೆಸ್ಸೆಸ್ ಜೊತೆಗಿನ ನಂಟಿನ ಬಗ್ಗೆ ಅಧಿಕೃತವಾಗಿಯೇ ಹೇಳಿಕೊಳ್ಳಲು ಅವರಿಗೆಲ್ಲ ಅವಕಾಶ ಸಿಕ್ಕಂತಾಗಿದೆ.

ಮೋದಿ ಸರಕಾರ ಇಂಥದೊಂದು ನಿರ್ಧಾರವನ್ನು ತೆಗೆದುಕೊಂಡಿರುವುದಕ್ಕೆ ಅದು ಭಯದಲ್ಲಿರುವುದೇ ಕಾರಣವೇ?

ತನಗೆ ಮಾತಾಡಲು ವಿಪಕ್ಷಗಳು ಬಿಡಲಿಲ್ಲ. ಪ್ರಜಾತಂತ್ರ ವ್ಯವಸ್ಥೆಯ ಪರಂಪರೆಯನ್ನೇ ಹಾಳುಮಾಡಲಾಗಿದೆ ಎಂದು ಹೇಳುತ್ತ ಮೋದಿ ಯಾರ ಅನುಕಂಪ ಗಿಟ್ಟಿಸಲು ನೋಡಿದರು? ಯಾಕೆ ಸರಕಾರ ಒಂದೇ ತಿಂಗಳಲ್ಲಿ ಇಷ್ಟೆಲ್ಲ ನಡುಗತೊಡಗಿದೆ?

ಒಂದೆಡೆ ಬಿಜೆಪಿಯೊಳಗೆ ಮೋದಿ ಚಹರೆಯ ಆಟ ನಡೆಯದಂತಾಗಿರುವುದು, ಮೋದಿ ಹೋದಲ್ಲೆಲ್ಲ ಬಿಜೆಪಿ ಸೀಟುಗಳನ್ನು ಕಳೆದುಕೊಂಡಿರುವುದು ಸ್ವತಃ ಮೋದಿಯ ಆತ್ಮವಿಶ್ವಾಸವನ್ನೇ ಕುಗ್ಗಿಸಿರಬೇಕು.

ಇನ್ನೊಂದೆಡೆ, ಪ್ರಶ್ನೆಗಳನ್ನು ಎದುರಿಸಬೇಕಾಗಿರುವುದು, ವಿಪಕ್ಷವನ್ನು ಎದುರಿಸಬೇಕಾಗಿರುವುದು ದೊಡ್ಡ ಕಷ್ಟದ್ದಾಗಿ ಕಾಣಿಸುತ್ತಿರಬೇಕು.

ಒಂದೆಡೆ ಅತಿದೊಡ್ಡ ವಿಪಕ್ಷವಾದ ಕಾಂಗ್ರೆಸ್‌ನ ರಾಹುಲ್ ಗಾಂಧಿಯವರ ಖಡಕ್ ಪ್ರಶ್ನೆಗಳು ಎದುರಾಗುತ್ತವೆ. ಅಖಿಲೇಶ್ ಯಾದವ್ ಪ್ರಶ್ನಿಸುತ್ತಾರೆ. ಟಿಎಂಸಿ ಪ್ರಶ್ನೆ ಮಾಡುತ್ತದೆ. ಡಿಎಂಕೆ ಪ್ರಶ್ನಿಸುತ್ತದೆ. ಈಗ ವಿಪಕ್ಷಗಳ ಪ್ರಶ್ನೆಗಳನ್ನು ಮೊದಲಿನ ಹಾಗೆ ನಿರ್ಲಕ್ಷಿಸಲಾಗುವುದಿಲ್ಲ. ಪ್ರಶ್ನೆಯನ್ನೇ ಕೇಳದ ಹಾಗೆ ಮಾಡಲು ಆಗುವುದೂ ಇಲ್ಲ.

ಆದರೆ ರಾಹುಲ್, ಅಖಿಲೇಶ್, ಮಹುವಾ ಮತ್ತಿತರರ ನೇರ ನಿಷ್ಠುರ ಪ್ರಶ್ನೆಗಳಿಗೆ ಉತ್ತರ ಕೊಡುವುದು ಮೋದಿ ಸರಕಾರಕ್ಕೆ ಸಾಧ್ಯವೇ?

ಸಾಲದ್ದಕ್ಕೆ ಈಗ ಸುಪ್ರೀಂ ಕೋರ್ಟ್‌ನಲ್ಲಿ ಒಂದೊಂದೇ ತೀರ್ಪು ಸರಕಾರದ, ಅದರ ಆಶಯಗಳ ವಿರುದ್ಧ ಬರುತ್ತಿದೆ.

ಇದೆಲ್ಲವೂ ಈಗ ಮೋದಿ ಸರಕಾರದ ನಿದ್ದೆಗೆಡಿಸಿದೆಯೇ?

share
ಚಂದ್ರಕಾಂತ್ ಎನ್.
ಚಂದ್ರಕಾಂತ್ ಎನ್.
Next Story
X