Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶಿಕ್ಷಣ ವ್ಯಾಪಾರಿಗಳ ಹಿತಕ್ಕಾಗಿ...

ಶಿಕ್ಷಣ ವ್ಯಾಪಾರಿಗಳ ಹಿತಕ್ಕಾಗಿ ಯುನಿವರ್ಸಿಟಿ ಪ್ರಥಮ ದರ್ಜೆ ಕಾಲೇಜನ್ನು ಮುಚ್ಚುವ ಸಂಚು ನಡೆಯುತ್ತಿದೆಯೇ...?

ಇಸ್ಮತ್ ಪಜೀರ್, ಮಂಗಳೂರುಇಸ್ಮತ್ ಪಜೀರ್, ಮಂಗಳೂರು22 May 2024 2:50 PM IST
share

ಮಾನ್ಯರೇ,

ಉಳ್ಳಾಲ ತಾಲೂಕು ಕರ್ನಾಟಕ ರಾಜ್ಯದ ಅತ್ಯಂತ ಪ್ರಮುಖ ಶೈಕ್ಷಣಿಕ ತಾಣ. ಉಳ್ಳಾಲ ತಾಲೂಕಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ನಾಲ್ಕು ಮೆಡಿಕಲ್, ಮೂರು ಡೆಂಟಲ್, ಎರಡು ಇಂಜಿನಿಯರಿಂಗ್, ಎರಡು ಹೋಮಿಯೋಪತಿ, ಒಂದು ಆಯುರ್ವೇದ, ಒಂದು ನ್ಯಾಚುರೋಪತಿ, ಐದು ಅರೆ ವೈದ್ಯಕೀಯ ಕಾಲೇಜುಗಳಿವೆ. ಆದರೆ ಇವೆಲ್ಲವೂ ಖಾಸಗಿ ಕಾಲೇಜುಗಳು. ಇವುಗಳಲ್ಲಿ ಹೆಚ್ಚಿನ ಕಾಲೇಜುಗಳು ಇತ್ತೀಚೆಗೆ ಪದವಿ, ಪದವಿಪೂರ್ವ ಕಾಲೇಜುಗಳನ್ನೂ ತೆರೆದಿವೆ. ಆದರೆ ಇವ್ಯಾವುವೂ ಬಡವರ ಮಕ್ಕಳ ಕೈಗೆಟುಕವಂತಹದ್ದಲ್ಲ.

ಇಡೀ ಉಳ್ಳಾಲ ತಾಲೂಕಿನಲ್ಲಿ ಇರುವ ಸರಕಾರಿ ಪದವಿ ಕಾಲೇಜುಗಳ ಸಂಖ್ಯೆ ಕೇವಲ ಎರಡು ಮಾತ್ರ. ಒಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಕುರ್ನಾಡು (ಮುಡಿಪು). ಇನ್ನೊಂದು ಯುನಿವರ್ಸಿಟಿ ಪ್ರಥಮ ದರ್ಜೆ ಕಾಲೇಜು ಕೊಣಾಜೆ.

ಯುನಿವರ್ಸಿಟಿ ಪ್ರಥಮ ದರ್ಜೆ ಕಾಲೇಜನ್ನು 2016ರಲ್ಲಿ ಡಾ.ಕೆ.ಭೈರಪ್ಪ ಮಂಗಳೂರು ವಿವಿಯ ಉಪಕುಲಪತಿಯಾಗಿದ್ದ ಅವಧಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್ ಒಳಗೆ ಆರಂಭಿಸಿದರು. ಇದು ಹೃಸ್ವ ಅವಧಿಯಲ್ಲಿ ಅತ್ಯುತ್ತಮ ಕಾಲೇಜಾಗಿ ಬೆಳೆದು ನಿಂತಿತು.

ಗ್ರಾಮೀಣ ಬಡ ವಿದ್ಯಾರ್ಥಿಗಳ ಪಾಲಿಗೆ ಈ ಕಾಲೇಜೊಂದು ವರದಾನವೆಂದರೆ ತಪ್ಪಾಗದು. ಅದರಲ್ಲೂ ಕೊಣಾಜೆ, ಪಜೀರು, ಬೆಳ್ಮ, ಹರೇಕಳ, ಪಾವೂರು, ಅಂಬ್ಲಮೊಗರು, ಮಂಜನಾಡಿ, ಕಿನ್ಯ ಮುಂತಾದ ಗ್ರಾಮಗಳ ಬಡ ಹೆಣ್ಮಕ್ಕಳು ಪಿಯುಸಿಯಿಂದಾಚೆಗೆ ಶಿಕ್ಷಣ ಮುಂದುವರಿಸುತ್ತಿರುವುದಕ್ಕೆ ಯುನಿವರ್ಸಿಟಿ ಪ್ರಥಮ ದರ್ಜೆ ಕಾಲೇಜೇ ಮುಖ್ಯ ಕಾರಣವೆಂದರೆ ತಪ್ಪಾಗದು. ಸುತ್ತಮುತ್ತಲಲ್ಲಿರುವ ಸ್ಥಳೀಯ ಪದವಿ ಕಾಲೇಜುಗಳಲ್ಲಿ ಐವತ್ತು ಸಾವಿರದಿಂದ ಎಂಭತ್ತು ಸಾವಿರ ರೂಪಾಯಿವರೆಗೆ ಶುಲ್ಕವಿರುವುದರಿಂದ ಅಲ್ಲಿನ ದಾಖಲಾತಿ ಕೈಗೆಟುಕದ ವಿದ್ಯಾರ್ಥಿಗಳ ಹೆತ್ತವರು ಕೇವಲ ಎಂಟರಿಂದ ಹತ್ತು ಸಾವಿರದೊಳಗಿನ ಶುಲ್ಕವಿರುವ ಯುನಿವರ್ಸಿಟಿ ಪ್ರಥಮ ದರ್ಜೆ ಕಾಲೇಜನ್ನು ಅವಲಂಬಿಸುತ್ತಿದ್ದಾರೆ.

ಇಲ್ಲಿ ಕಲಿಯುವ ವಿದ್ಯಾರ್ಥಿಗಳು ಪ್ರತಿನಿತ್ಯ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅಲ್ಲಿನ ಕ್ಯಾಂಪಸ್, ಶಿಕ್ಷಣ ವಿಧಾನ ಇತ್ಯಾದಿಗಳನ್ನು ಹತ್ತಿರದಿಂದ ನೋಡುತ್ತಿರುವುದರಿಂದ ಕಳೆದ ಮೂರು ವರ್ಷಗಳಲ್ಲಿ ಇಲ್ಲಿನ ವಿದ್ಯಾರ್ಥಿಗಳು ಸ್ನಾತಕೋತ್ತರ ಶಿಕ್ಷಣದತ್ತವೂ ಒಲವು ತೋರುತ್ತಿದ್ದಾರೆ. ಅತಿಥಿ ಉಪನ್ಯಾಸಕರೇ ಅಲ್ಲಿ ಬೋಧಿಸುತ್ತಿರುವುದಾದರೂ ಫಲಿತಾಂಶ ಮಾತ್ರ ಅದ್ಭುತವಾಗಿದೆ.ಕಳೆದ ಕೆಲವು ವರ್ಷಗಳಿಂದ ಶೇ. 100 ಫಲಿತಾಂಶವನ್ನೂ ಈ ಕಾಲೇಜು ದಾಖಲಿಸುತ್ತಾ ಬಂದಿದೆ. ಇದು ಮಂಗಳೂರು ವಿಶ್ವವಿದ್ಯಾನಿಲಯದ constituent college ಆಗಿದ್ದು ಇಲ್ಲಿನ ಸಿಬ್ಬಂದಿಗೂ ಯುನಿವರ್ಸಿಟಿ ಫಂಡ್‌ನಿಂದಲೇ ವೇತನ ನೀಡಲಾಗುತ್ತಿದೆ. ಪಿ.ಎಲ್.ಧರ್ಮ ಅವರು ಉಪಕುಲಪತಿಯಾದ ಬಳಿಕ ಏಕಾಏಕಿ ಫಂಡ್ ಕೊರತೆ ತೋರಿಸಿ ಕಾಲೇಜನ್ನು ಮುಚ್ಚುವ ಯೋಜನೆ ಹಾಕಲಾಗಿದೆ. ಈ ಹಿಂದಿನ ಕುಲಪತಿಗಳಾದ ಭೈರಪ್ಪ ಮತ್ತು ಯಡಪಡಿತ್ತಾಯರ ಅವಧಿಯಲ್ಲಿ ಇರದಿದ್ದ ಫಂಡ್ ಕೊರತೆ ಈಗ ಏಕಾಏಕಿ ಹೇಗೆ ಉದ್ಭವಿಸಿದೆ? ಕಳೆದ ಫೆಬ್ರವರಿ ತಿಂಗಳಿಂದ ಉಪನ್ಯಾಸಕರ ವೇತನವನ್ನೂ ನೀಡಲಾಗಿಲ್ಲ. ಇದರ ಹಿಂದೆ ಒಂದು ಷಡ್ಯಂತ್ರವಿರುವುದು ಸ್ಪಷ್ಟವಾಗಿ ಗೋಚರವಾಗುತ್ತಿದೆ.

ಉಪನ್ಯಾಸಕರಿಗೆ ವೇತನ ನೀಡದೆ ಅತಿಥಿ ಉಪನ್ಯಾಸಕರ ನೆಲೆಯಲ್ಲಿ ನಿಯುಕ್ತಿಗೊಂಡ ಉಪನ್ಯಾಸಕರು ಕೆಲಸ ಬಿಡುವಂತೆ ಅವರನ್ನು ಅಸಹಾಯಕರನ್ನಾಗಿ ಮಾಡುವುದು. ಹೊಟ್ಟೆಪಾಡಿಗೆ ಕಷ್ಟವಾದಾಗ ಸಹಜವಾಗಿಯೇ ಉಪನ್ಯಾಸಕರು ಅನ್ಯದಾರಿ ಹುಡುಕುತ್ತಾರೆ.

ಕಾಲೇಜು ಮುಚ್ಚುವ ಬಗ್ಗೆ ಈವರೆಗೆ ಅಧಿಕೃತವಾಗಿ ಎಲ್ಲೂ ಹೇಳಲಾಗಿಲ್ಲ. ಆದರೆ ಅಲ್ಲಿನ ಸಿಬ್ಬಂದಿಗೆ ಮೌಖಿಕವಾಗಿ ಹೊಸ ವಿದ್ಯಾರ್ಥಿಗಳ ದಾಖಲಾತಿ ಮಾಡದಂತೆ ಸೂಚನೆ ಕೊಡಲಾಗಿದೆ. ದಾಖಲಾತಿ ಬಯಸಿ ಹೋದ ಬಡ ವಿದ್ಯಾರ್ಥಿಗಳು ಬರಿಗೈಯಿಂದ ವಾಪಸಾಗುತ್ತಿದ್ದಾರೆ. ಕೊನೆಗೆ ವಿದ್ಯಾರ್ಥಿಗಳ ಕೊರತೆ ತೋರಿಸಿ ಕಾಲೇಜು ಮುಚ್ಚುವ ಷಡ್ಯಂತ್ರವನ್ನು ಈಗಾಗಲೇ ರೂಪಿಸಲಾಗಿದೆ. ಇದರ ಹಿಂದೆ ಖಾಸಗಿ ಶಿಕ್ಷಣ ವ್ಯಾಪಾರಿಗಳ ಹಿತ ಕಾಪಾಡುವ ಷಡ್ಯಂತ್ರವೇನಾದರೂ ಇರಬಹುದೇ ಎಂಬ ಸಂಶಯ ದಟ್ಟವಾಗಿದೆ.

ಯುನಿವರ್ಸಿಟಿಗೆ ಫಂಡ್ ಒದಗಿಸಲು ಸಾಧ್ಯವಿಲ್ಲದಿದ್ದರೆ ಸರಕಾರದ ಮುಂದೆ ತನ್ನ ಅಹವಾಲನ್ನು ಇಡಬೇಕೇ ಹೊರತು ಕಾಲೇಜು ಮುಚ್ಚುವಂತಹ ಅತಿರೇಕದ ಹೆಜ್ಜೆ ಇಡುವುದಲ್ಲ. ಒಂದು ವೇಳೆ ಯುನಿವರ್ಸಿಟಿಗೆ ಕಾಲೇಜು ನಡೆಸಲು ಸಾಧ್ಯವಿಲ್ಲವಾದರೆ ಸರಕಾರವೇ ಈ ಕಾಲೇಜನ್ನು ಮುಂದುವರಿಸಬೇಕು. ಯಾವ ಕಾರಣಕ್ಕೂ ಸ್ಥಳೀಯ ಬಡವರ ಮಕ್ಕಳ ಪಾಲಿಗೆ, ಅದರಲ್ಲೂ ಹೆಣ್ಮಕ್ಕಳ ಪಾಲಿಗೆ ಆಶಾಕಿರಣವಾಗಿರುವ ಈ ಕಾಲೇಜನ್ನು ಮುಚ್ಚಲೇಬಾರದು. ಈ ನಿಟ್ಟಿನಲ್ಲಿ ಸರಕಾರ ಕೂಡಲೇ ಮಧ್ಯಪ್ರವೇಶಿಸಿ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸುವಂತೆ ಆದೇಶ ನೀಡಬೇಕಿದೆ.

share
ಇಸ್ಮತ್ ಪಜೀರ್, ಮಂಗಳೂರು
ಇಸ್ಮತ್ ಪಜೀರ್, ಮಂಗಳೂರು
Next Story
X