Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಇದು ಶಾ ಹೇಳುವ ಬಲಿಷ್ಠ ವಿದೇಶಾಂಗ...

ಇದು ಶಾ ಹೇಳುವ ಬಲಿಷ್ಠ ವಿದೇಶಾಂಗ ನೀತಿಯೇ?

ಪ್ರವೀಣ್ ಎನ್.ಪ್ರವೀಣ್ ಎನ್.19 Sept 2024 11:40 AM IST
share
ಇದು ಶಾ ಹೇಳುವ ಬಲಿಷ್ಠ ವಿದೇಶಾಂಗ ನೀತಿಯೇ?

ಗೃಹಸಚಿವ ಅಮಿತ್ ಶಾ ಈ ದೇಶದ ವಿದೇಶಾಂಗ ನೀತಿ ಬಗ್ಗೆ ಹೇಳಿಕೆ ನೀಡಿ ಯಡವಟ್ಟು ಮಾಡಿಕೊಂಡಿದ್ದಾರೆ. ಅದಕ್ಕಿಂತ ಹೆಚ್ಚಾಗಿ, ಈಗ ಕೇಳಲಾಗುತ್ತಿರುವ ಒಂದು ಸರಳ ಮತ್ತು ನೇರ ಪ್ರಶ್ನೆಗೆ ಉತ್ತರಿಸಲು ಶಾ ಬಳಿ ಆಗುತ್ತಿಲ್ಲ.

ಏಕನಾಥ್ ಶಿಂದೆ ಸರಕಾರದ ಶಾಸಕ ಸಂಜಯ್ ಗಾಯಕ್ವಾಡ್ ರಾಹುಲ್ ಗಾಂಧಿ ನಾಲಿಗೆ ಕತ್ತರಿಸಿದವರಿಗೆ 11 ಲಕ್ಷ ಇನಾಮು ಕೊಡುವುದಾಗಿ ಹೇಳುತ್ತಾರೆ. ಮೋದಿ ಸಂಪುಟದಲ್ಲಿ ಮಂತ್ರಿಯಾಗಿರುವ ರವನೀತ್ ಬಿಟ್ಟು, ರಾಹುಲ್ ಗಾಂಧಿಯನ್ನು ಭಯೋತ್ಪಾದಕ ಎಂದು ಕರೆಯುತ್ತಾರೆ. ಬಿಜೆಪಿ ಮಾಜಿ ಶಾಸಕ ತರ್ವಿಂದರ್ ಸಿಂಗ್ ಮಾರ್ವಾ, ಇಂದಿರಾ ಗಾಂಧಿಗೆ ಒದಗಿದ್ದ ಸ್ಥಿತಿಯೇ ರಾಹುಲ್ ಅವರಿಗೂ ಬರಲಿದೆ ಎಂದು ಹೇಳುತ್ತಾರೆ.

ಬಿಜೆಪಿ ಮತ್ತು ಅದರ ನಾಯಕರು ಮತ್ತೆ ಮತ್ತೆ ರಾಹುಲ್ ವಿರುದ್ಧ ಹಿಂಸಾತ್ಮಕ ಹೇಳಿಕೆ ನೀಡುತ್ತಲೇ ಇದ್ದಾರೆ.

ಬಿಟ್ಟು ನೀಡಿದ ಹೇಳಿಕೆ ಬಗ್ಗೆ ಪತ್ರಕರ್ತರೊಬ್ಬರು ಪ್ರಶ್ನೆ ಆರಂಭಿಸುತ್ತಾರೆ. ಪ್ರಶ್ನೆ ಪೂರ್ತಿಯಾಗುವ ಮೊದಲೇ ಓಡಿಹೋಗುವವರ ಹಾಗೆ ಈ ದೇಶದ ಗೃಹಮಂತ್ರಿ ‘‘ರಾಜಕೀಯ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ’’ ಎಂದುಬಿಡುತ್ತಾರೆ.

ವಿಪಕ್ಷ ನಾಯಕನನ್ನು ಆಡಳಿತ ಪಕ್ಷದ ನಾಯಕನೊಬ್ಬ ಭಯೋತ್ಪಾದಕ ಎಂದು ಕರೆದರೆ ಬಾಯಿ ಮುಚ್ಚಿಕೊಂಡಿರುವ ಗೃಹಮಂತ್ರಿ, ಆ ಬಗ್ಗೆ ಕೇಳಿದರೆ ಅದನ್ನು ರಾಜಕೀಯ ಪ್ರಶ್ನೆ ಎನ್ನುತ್ತಾ ತಪ್ಪಿಸಿಕೊಳ್ಳುವುದೇಕೆ? ಹಿಂಸಾತ್ಮಕ ಹೇಳಿಕೆ ಬಗ್ಗೆ ಪ್ರಶ್ನೆ ಕೇಳಿದರೆ ಅದಕ್ಕೆ ಉತ್ತರಿಸುವ ಧೈರ್ಯವೂ ಈ ದೇಶದ ಗೃಹ ಸಚಿವರಿಗೆ ಇಲ್ಲವೆ?

ರವನೀತ್ ಬಿಟ್ಟು, ತರ್ವಿಂದರ್ ಸಿಂಗ್ ಮಾರ್ವಾ ಮತ್ತು ಸಂಜಯ್ ಗಾಯಕ್ವಾಡ್ - ಈ ಮೂವರಲ್ಲಿ ಗಾಯಕ್ವಾಡ್ ವಿರುದ್ದ ಕಾಂಗ್ರೆಸ್ ನಾಯಕರು ದೃಢವಾಗಿ ಪ್ರತಿಭಟಿಸಿದ ಕಾರಣಕ್ಕೆ ಎಫ್‌ಐಆರ್ ದಾಖಲಾಗಿದೆ. ಆದರೆ ಕೇಂದ್ರ ಸಚಿವ ರವನೀತ್ ಬಿಟ್ಟು ವಿರುದ್ಧ ಏನಾದರೂ ಕ್ರಮ ಕೈಗೊಳ್ಳಲಾಯಿತೇ? ಮಾರ್ವಾ ವಿರುದ್ಧ ಏನಾದರೂ ಕ್ರಮ ತೆಗೆದುಕೊಂಡರೇ?

ಈ ವಿಚಾರವಾಗಿ ಅದು ಹೇಗೆ ಅಮಿತ್ ಶಾ ಮೌನವಾಗಿರುತ್ತಾರೆ ಮತ್ತು ಪ್ರಶ್ನಿಸಿದರೆ ರಾಜಕೀಯ ಪ್ರಶ್ನೆ ಎಂದು ಅತಿ ಬುದ್ಧಿವಂತಿಕೆ ತೋರಿಸುತ್ತಾರೆ? ಪತ್ರಕರ್ತರ ಒಂದು ಸಾಮಾನ್ಯ ಪ್ರಶ್ನೆಗೆ ಉತ್ತರಿಸಲೂ ಇವರಿಗೆ ಆಗುತ್ತಿಲ್ಲವೆ? ಮೂರನೇ ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಸರಕಾರಕ್ಕೆ ಒಂದು ಅತ್ಯಂತ ಸರಳ ಪ್ರಶ್ನೆಗೆ ಉತ್ತರಿಸಲು ಆಗದಷ್ಟು ಪುಕ್ಕಲುತನವೆ?

ಬಿಜೆಪಿಯವರು ಯಾರ ಬಗ್ಗೆ ಹೇಗೆ ಬೇಕಾದರೂ ಮಾತಾಡಬಹುದೆ? ಅವರ ಮೇಲೆ ಅಂಕುಶವೇ ಇಲ್ಲವೆ?

ಮೂರನೇ ಅವಧಿಯ ಸರಕಾರ 100 ದಿನ ಪೂರೈಸಿದ ಹೊತ್ತಲ್ಲಿ ಒಂದು ಪ್ರಶ್ನೆಗೆ ಉತ್ತರ ಕೊಡುವುದಿಲ್ಲ ಎಂದು ಹೇಳುವ ಮೂಲಕ ಶಾ ಸಾಧಿಸಿದ್ದೇನೂ ಇಲ್ಲ. ಆದರೆ ತಪ್ಪು ಸಂದೇಶ ನೀಡಿದ್ದಾರೆ.

ಮಣಿಪುರದಲ್ಲಿ ಹದಿನಾರು ತಿಂಗಳಾದರೂ ಹಿಂಸೆ ನಿಂತಿಲ್ಲ, ಅಲ್ಲಿನ ಸಿಎಂ ಕೂಡ ಬದಲಾಗಿಲ್ಲ ಯಾಕೆ ಎಂದು ಪತ್ರಕರ್ತರು ಕೇಳಿದರೆ ನೀವು ಪ್ರಶ್ನೆ ಮಾಡಿ, ಚರ್ಚೆ ಮಾಡಬೇಡಿ ಎಂದು ಹೇಳುತ್ತಾರೆ ಅಮಿತ್ ಶಾ. ಚಾಣಕ್ಯ ಎಂದು ಮಡಿಲ ಮೀಡಿಯಾಗಳಲ್ಲಿ ಬಿಂಬಿಸಿಕೊಂಡಿರುವ ಗೃಹ ಸಚಿವರಿಗೆ ಒಂದು ಪುಟ್ಟ ರಾಜ್ಯದಲ್ಲಿ ಒಂದೂವರೆ ವರ್ಷದಿಂದ ನಡೆಯುತ್ತಿರುವ ಹಿಂಸೆಯನ್ನು ತಡೆಯಲು ಸಾಧ್ಯ ಆಗಲೇ ಇಲ್ಲ ಯಾಕೆ?

ಇಂಥ ಗೃಹ ಸಚಿವ ವಿದೇಶಾಂಗ ನೀತಿಯ ಬಗ್ಗೆ ಕೊಡುವ ಹೇಳಿಕೆ ನೋಡಿ.

ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ಮೋದಿ ಸರಕಾರ ಅತ್ಯಂತ ಪ್ರಬಲ ವಿದೇಶಾಂಗ ನೀತಿಯನ್ನು ರೂಪಿಸಿದೆ ಎಂಬುದು ಶಾ ಹೇಳಿಕೆ.

ಇನ್ನೊಂದು ವಿಚಾರ ಗಮನಿಸಿ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ರಶ್ಯ ಅಧ್ಯಕ್ಷ ಪುಟಿನ್ ಎದುರಲ್ಲಿ ಕುರ್ಚಿಯ ತುದಿಗೆ ಸರಿದು ಅಳುಕಿನಿಂದ ಕುಳಿತಿರುವ ಚಿತ್ರವೊಂದು ಸದ್ದು ಮಾಡುತ್ತಿದೆ. ಪುಟಿನ್ ಎದುರಲ್ಲಿ ದೋವಲ್ ಹೀಗೆ ಕುಳಿತುಕೊಳ್ಳಬೇಕಾಗಿದೆಯೆ?

ವಿಪಕ್ಷ ನಾಯಕರು ಈ ಬಗ್ಗೆ ಪ್ರಶ್ನೆಯೆತ್ತಿದ್ದಾರೆ.

ಶಿವಸೇನಾ ಯುಬಿಟಿ ನಾಯಕಿ ಪ್ರಿಯಾಂಕಾ ಚತುರ್ವೇದಿ ಇದರ ಬಗ್ಗೆ ಪ್ರಶ್ನೆಯೆತ್ತಿದ್ದಾರೆ. ಉಕ್ರೇನ್‌ಗೆ ಮೋದಿ ಭೇಟಿ ಬಗ್ಗೆ ಪುಟಿನ್‌ಗೆ ದೋವಲ್ ಸ್ಪಷ್ಟೀಕರಣ ನೀಡುತ್ತಿರುವ ಈ ವೀಡಿಯೊ ಬಿಡುಗಡೆ ಮಾಡಬೇಕಿತ್ತೇ ಎಂಬುದು ಅವರ ಪ್ರಶ್ನೆ.

ಕಪಿಲ್ ಸಿಬಲ್, ಆ ವೀಡಿಯೊವನ್ನು ಬಿಡುಗಡೆ ಮಾಡಿರುವುದೇ ರಶ್ಯ ಎಂಬುದನ್ನು ಗಮನಕ್ಕೆ ತಂದಿದ್ದಾರೆ.

ಪುಟಿನ್ ಎದುರಲ್ಲಿ ಭಾರತದ ಭದ್ರತಾ ಸಲಹೆಗಾರ ದೋವಲ್ ಕುರ್ಚಿಯ ತುತ್ತ ತುದಿಗೆ ಜಾರಿಕೊಂಡು ಬೆನ್ನು ಬಾಗಿಸಿ ಕುಳಿತಿದ್ದರೆ, ಈ ದೇಶದ ಗೃಹಮಂತ್ರಿ ಕಳೆದ 60 ವರ್ಷಗಳಲ್ಲೇ ನಮ್ಮದು ಬಲಿಷ್ಠ ವಿದೇಶಾಂಗ ನೀತಿ ಎನ್ನುತ್ತಿದ್ದಾರೆ. ಎಷ್ಟು ಹಾಸ್ಯಾಸ್ಪದ ಅಲ್ಲವೆ? ಅಷ್ಟೊಂದು ಬಲಿಷ್ಠ ವಿದೇಶಾಂಗ ನೀತಿಯನ್ನು ಹೊಂದಿರುವ ದೇಶದ ಭದ್ರತಾ ಸಲಹೆಗಾರ ಇನ್ನೊಂದು ದೇಶದ ಅಧ್ಯಕ್ಷನ ಎದುರು ಬಾಗಿ ಕೂತು, ಈ ದೇಶದ ಪ್ರಧಾನಿಯ ಪ್ರವಾಸದ ಬಗ್ಗೆ ಸ್ಪಷ್ಟನೆ ನೀಡಬೇಕಾಗಿದೆಯೇ?

ಎಎಪಿ ನಾಯಕ ಸಂಜಯ್ ಸಿಂಗ್, ಪುಟಿನ್ ಮುಂದೆ ಸ್ಪಷ್ಟೀಕರಣ ನೀಡುವ ವೀಡಿಯೊ ದೇಶಕ್ಕೆ ಅಪಮಾನಕರ ಎಂದಿದ್ದಾರೆ. ಅದನ್ನು ನೋಡಿ ಭಾರತೀಯರು ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ ಎಂದಿದ್ದಾರೆ.

ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶದ ಪ್ರಧಾನಿ ತನ್ನ ಉಕ್ರೇನ್ ಪ್ರವಾಸದ ಬಗ್ಗೆ ರಶ್ಯಕ್ಕೆ ಸ್ಪಷ್ಟನೆ ನೀಡಬೇಕಾಯಿತೆ? ಮೋದಿ ಒಂದೇ ಒಂದು ಮಾತು ಹೇಳಿ ರಶ್ಯ-ಉಕ್ರೇನ್ ಯುದ್ಧ ನಿಲ್ಲಿಸಿಬಿಡುತ್ತಾರೆ ಎಂದು ಭಕ್ತರು ಹೇಳಿಕೊಳ್ಳುತ್ತಿದ್ದರು. ಅಂಥವರು ಉಕ್ರೇನ್‌ಗೆ ಹೋದುದಕ್ಕಾಗಿ ಸ್ಪಷ್ಟನೆ ನೀಡುವ ಸ್ಥಿತಿಯೆ?

144 ಕೋಟಿ ಜನರ ದೇಶದ ಪ್ರಧಾನಿ ತಾನು ಎಂಬುದನ್ನು ಮೋದಿ ಮರೆಯಬಾರದಲ್ಲವೆ? ಎಂದು ಸಂಜಯ್ ಸಿಂಗ್ ಕೇಳಿದ್ದಾರೆ. ಈ 144 ಕೋಟಿ ಜನರ ದೇಶ ಪುಟಿನ್ ಎದುರಲ್ಲಿ ಯಾವುದೋ ವಿಚಾರಕ್ಕೆ ಸ್ಪಷ್ಟನೆ ನೀಡಬೇಕಾದ ಅಗತ್ಯ, ಅನಿವಾರ್ಯತೆ ಏನು?

ವಿಷಯ ಇದಿಷ್ಟೇ ಅಲ್ಲ. ಮೋದಿ ಉಕ್ರೇನ್‌ಗೆ ಹೋಗಿದ್ದಾಗ ಝೆಲೆನ್‌ಸ್ಕಿಯನ್ನು ಆಲಂಗಿಸಿಕೊಂಡಿದ್ದರು.

ರಶ್ಯದಿಂದ ತೈಲ ಆಮದು ನಿಲ್ಲಿಸಿ ಎಂದು ಭಾರತಕ್ಕೆ ಹೇಳಿದ್ದವರು ಝೆಲೆನ್‌ಸ್ಕಿ. ಭಾರತ-ರಶ್ಯ ಸಂಬಂಧದ ವಿಚಾರದಲ್ಲಿಯೂ ಝೆಲೆನ್‌ಸ್ಕಿ ಭಾರತದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇರಾನ್ ಅಂತೂ ಭಾರತವನ್ನು ಮುಸ್ಲಿಮರು ತೊಂದರೆ ಅನುಭವಿಸುತ್ತಿರುವ ದೇಶ ಎಂದು ಪಟ್ಟಿ ಮಾಡಿರುವುದರ ಬಗ್ಗೆ ವರದಿಯಾಗಿದೆ. ಆದರೆ ಅಲ್ಲಿನ ಸರ್ವೋಚ್ಚ ನಾಯಕ ಖಾಮಿನೈ ಅವರ ಈ ಹೇಳಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಸರಕಾರ ಪ್ರತಿಕ್ರಿಯಿಸಿದೆ.

ಶಾ ಹೇಳುವಂತೆಯೇ ನಮ್ಮ ದೇಶದ ವಿದೇಶಾಂಗ ನೀತಿ ಅಷ್ಟೊಂದು ದೃಢವಾಗಿದ್ದರೆ, ಪ್ರಬಲವಾಗಿದ್ದರೆ, ಬೆನ್ನುಹುರಿಯುಳ್ಳ ನೀತಿಯಾಗಿದ್ದರೆ ಯಾಕೆ ಮಧ್ಯಪ್ರಾಚ್ಯ ರಾಷ್ಟ್ರ ಹೀಗೆ ಭಾರತದ ಬಗ್ಗೆ ಹೇಳುತ್ತದೆ?

ಬಿಜೆಪಿ ತನ್ನದೇ ನಾಯಕಿ ನೂಪುರ್ ಶರ್ಮಾ ವಿರುದ್ಧ ಅವರು ಅಂಬಾನಿ, ಅದಾನಿ, ರಾಮ್‌ದೇವ್ ಉದ್ಯಮಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಮಾತಾಡಿದ್ದಕ್ಕೆ ಕ್ರಮ ಕೈಗೊಂಡಿತ್ತು.

ದೇಶದಲ್ಲಿ ಅದೆಷ್ಟು ಬಿಜೆಪಿ ನಾಯಕರು ಮುಸ್ಲಿಮರ ವಿರುದ್ಧ ದ್ವೇಷ ಕಾರುವ ಹೇಳಿಕೆಗಳನ್ನು ನೀಡುತ್ತಲೇ ಇದ್ದಾರಲ್ಲವೆ?

ಹಿಮಂತ ಬಿಸ್ವಾ ಶರ್ಮಾ, ಗಿರಿರಾಜ್ ಸಿಂಗ್, ಸ್ವತಃ ಮೋದಿ-ಹೀಗೆ ಈ ನಾಯಕರೆಲ್ಲ ಮುಸ್ಲಿಮರ ವಿರುದ್ಧ ನಿರಂತರವಾಗಿ ಹೇಳಿಕೆಗಳನ್ನು ಕೊಡುತ್ತಲೇ ಬಂದಿದ್ದಾರೆ. ಮೋದಿಯೇ ಮುಸ್ಲಿಮರನ್ನು ನುಸುಳುಕೋರರು, ಹೆಚ್ಚು ಮಕ್ಕಳನ್ನು ಹುಟ್ಟಿಸುವವರು ಎಂದೆಲ್ಲ ಪ್ರಧಾನಿ ಹುದ್ದೆಗೆ ಶೋಭಿಸದ ರೀತಿಯಲ್ಲಿ ಮಾತಾಡಿದ್ದರು.

ದೇಶವನ್ನು ಆಳುವ ಮಂದಿಯೇ ಈ ದೇಶದ ಭಾಗವೇ ಆಗಿರುವ ಸಮುದಾಯದ ಬಗ್ಗೆ ಇಲ್ಲಸಲ್ಲದ ರೀತಿಯಲ್ಲಿ ಮಾತಾಡುತ್ತಿದ್ದರೆ, ನಿರಂತರ ತಾರತಮ್ಯವನ್ನು ತೋರಿಸುತ್ತಿದ್ದರೆ, ದ್ವೇಷವನ್ನು ಹರಡುತ್ತಿದ್ದರೆ, ವಿದೇಶದಲ್ಲಿ ಇರುವವರಿಗೆ ಸಹಜವಾಗಿಯೇ ಟೀಕಿಸಬೇಕಿನ್ನಿಸುತ್ತದೆ. ಟೀಕಿಸಲು ಸ್ವತಃ ನಾವೇ ಅವಕಾಶ ಮಾಡಿಕೊಟ್ಟ ಹಾಗಾಗುತ್ತದೆ ಎನ್ನುತ್ತಾರೆ ಖ್ಯಾತ ಪತ್ರಕರ್ತ ಅಭಿಸಾರ್ ಶರ್ಮ

ಇರಾನ್ ಮಾತ್ರವಲ್ಲ, ಅಮೆರಿಕ, ಇಂಗ್ಲೆಂಡ್‌ನ ವಿದೇಶಾಂಗ ವಿಭಾಗಗಳೆಲ್ಲವೂ ಭಾರತದ ವಿಚಾರವಾಗಿ ಮಾತಾಡಿದ್ದಿದೆ.

ಜರ್ಮನಿಯ ವಿದೇಶಾಂಗ ಖಾತೆ ಕೂಡ ಭಾರತದ ಆಂತರಿಕ ವಿಚಾರಗಳ ಬಗ್ಗೆ ಮಾತಾಡಿದೆ. ಹೀಗೆ ಹಲವಾರು ದೇಶಗಳು ಭಾರತದ ಬಗ್ಗೆ ಮಾತಾಡುವುದಕ್ಕೆ ಅವಕಾಶ ಮಾಡಿಕೊಟ್ಟಿರುವುದು ಯಾರು?

ಶಾ ಹೇಳುವ ಬಲಿಷ್ಠ ವಿದೇಶಾಂಗ ನೀತಿಯ ದೇಶದ ವಿದೇಶಾಂಗ ವ್ಯವಹಾರಗಳ ಮಂತ್ರಿಯೇ ಅಲ್ಲವೆ, ಚೀನಾದ ಎದುರು ಹೇಗೆ ಯುದ್ಧ ಮಾಡಲು ಸಾಧ್ಯ ಎಂದಿದ್ದವರು?

ಇದೇ ಜೈಶಂಕರ್ ನೀಡಿದ್ದ ಹೇಳಿಕೆಗಳನ್ನು ಗಮನಿಸಬೇಕು.

ಒಂದು ಹೇಳಿಕೆಯಲ್ಲಿ ಅವರು, ‘‘ಭಾರತ ಚೀನಾ ಜೊತೆಗಿನ ವ್ಯಾಪಾರದ ಬಾಗಿಲು ಮುಚ್ಚಿಲ್ಲ. ಚೀನಾ ಜಗತ್ತಿನ ಎರಡನೇ ದೊಡ್ಡ ಆರ್ಥಿಕತೆಯಾಗಿದೆ. ಹೀಗಾಗಿ ಚೀನಾದೊಂದಿಗೆ ವ್ಯಾಪಾರ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂದು ಯಾವ ದೇಶವೂ ಹೇಳಲು ಸಾಧ್ಯವಿಲ್ಲ’’ ಎಂದಿದರು.

ರಾಷ್ಟ್ರೀಯತೆ ಬಗ್ಗೆ ಮಾತಾಡುವ ಬಿಜೆಪಿಯವರಿಗೆ ಚೀನಾ ಸೇನೆ ಜೊತೆಗಿನ ಘರ್ಷಣೆಯಲ್ಲಿ ನಮ್ಮ 20 ಸೈನಿಕರು ಹುತಾತ್ಮರಾದದ್ದು ನೆನಪಿರಬೇಕಲ್ಲವೆ?

ಹೀಗಿರುವಾಗ ನಮ್ಮದು ಬಲಿಷ್ಠ ವಿದೇಶಾಂಗ ನೀತಿ ಎಂಬ ಮಾತು ಶಾ ಬಾಯಲ್ಲಿ ಹೇಗೆ ಬರುತ್ತದೆ?

ಪುಟಿನ್ ಮುಂದೆ ಮೋದಿಯ ಉಕ್ರೇನ್ ಭೇಟಿ ಬಗ್ಗೆ ಸ್ಪಷ್ಟನೆ ಕೊಡುವುದು, ಇರಾನ್ ನಾಯಕ ಭಾರತದ ಅಲ್ಪಸಂಖ್ಯಾತರ ಸ್ಥಿತಿಯ ಬಗ್ಗೆ ಮಾತಾಡುವುದು ಮತ್ತು ಚೀನಾ ಎದುರು ಯುದ್ಧ ಮಾಡಲಾರೆವು ಮತ್ತು ಚೀನಾ ಜೊತೆಗಿನ ವ್ಯಾಪಾರ ಸಂಬಂಧದ ಬಾಗಿಲು ಮುಚ್ಚಲು ಸಾಧ್ಯವಿಲ್ಲ ಎಂದು ಭಾರತದ ವಿದೇಶಾಂಗ ಸಚಿವರು ಹೇಳುವುದರಲ್ಲಿ ಎಲ್ಲಾದರೂ ಬಲಿಷ್ಠ ವಿದೇಶಾಂಗ ನೀತಿಯ ಚಹರೆ ಕಾಣಿಸುತ್ತದೆಯೆ?

share
ಪ್ರವೀಣ್ ಎನ್.
ಪ್ರವೀಣ್ ಎನ್.
Next Story
X