Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬಾಂಬೆಯಲ್ಲಿ ಗಮನಸೆಳೆದ ಕನ್ನಡಿಗ...

ಬಾಂಬೆಯಲ್ಲಿ ಗಮನಸೆಳೆದ ಕನ್ನಡಿಗ ಶಾಂತಕುಮಾರ್ ಕಲಾಕೃತಿ

ದಸ್ತಗೀರ ನದಾಫ್ ಯಳಸಂಗಿದಸ್ತಗೀರ ನದಾಫ್ ಯಳಸಂಗಿ28 April 2025 4:45 PM IST
share
ಬಾಂಬೆಯಲ್ಲಿ ಗಮನಸೆಳೆದ ಕನ್ನಡಿಗ ಶಾಂತಕುಮಾರ್ ಕಲಾಕೃತಿ

ಕಲಬುರಗಿ : ಬಾಲ್ಯದಲ್ಲಿ ನಾವೇನು ಅಂದುಕೊಂಡಿರು ತ್ತೇವೆಯೋ ಅದನ್ನು ಸಾಧಿಸಲು ಸಾಕಷ್ಟು ದಾರಿಗಳನ್ನು ಹುಡುಕಿ ನಾನಾ ಪ್ರಯತ್ನಗಳಲ್ಲಿ ತೊಡಗಿರುತ್ತೇವೆ. ಆ ಪ್ರಯತ್ನಗಳು ಕೆಲವರಲ್ಲಿ ಯಶಸ್ಸು ಕಂಡರೆ, ಹಲವರು ವಿಫಲ ಆಗುವುದು ಸಾಮಾನ್ಯ. ಆದರೆ ಬಾಲ್ಯದ ಕನಸನ್ನೇ ಬೆನ್ನೇರಿ ಬಾಂಬೆಯಂತಹ ಬೃಹತ್ ನಗರದಲ್ಲಿ ವಾಸಿಸುತ್ತ ಕನಸಿನ ಗುರಿಯತ್ತ ಬೆನ್ನತ್ತುವುದು ಸಾಹಸವೇ ಸರಿ. ಅಂತಹ ಸಾಹಸದಲ್ಲಿ ಯಶಸ್ಸು ಕಂಡವರಲ್ಲಿ ಕಲ್ಯಾಣ ಕರ್ನಾಟಕ ಮೂಲದ ಚಿತ್ರ ಕಲಾವಿದ ಶಾಂತಕುಮಾರ್ ಹತ್ತರಕಿ ಅವರು ನಮ್ಮನ್ನು ಆಕರ್ಷಿಸುತ್ತಾರೆ.

ಖ್ಯಾತ ಬಾಂಬೆ ಕಲಾವಿದ ಎಂದು ಗುರುತಿಸಿಕೊಳ್ಳುವ ಶಾಂತಕುಮಾರ್ ಹತ್ತರಕಿ ಅವರು ಮೂಲತಃ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ತಂಬಾಕವಾಡಿ ಗ್ರಾಮದವರು.

ಶಿವಶರಣಪ್ಪ-ಸಂಗಮ್ಮ ದಂಪತಿಯ ಐವರು ಗಂಡು ಮಕ್ಕಳಲ್ಲಿ ಮೂರನೆಯ ಪುತ್ರನಾಗಿ ಜನಿಸಿದ್ದಾರೆ. ಒಂದನೇ ತರಗತಿಯಿಂದ 4ನೇ ತರಗತಿವರೆಗೆ ತಂಬಾಕವಾಡಿಯಲ್ಲಿ, 5ರಿಂದ 10ನೇ ತರಗತಿವರೆಗೆ ತಡಕಲ್‌ನಲ್ಲಿರುವ ಅನುದಾನಿತ ಪ್ರೌಢ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು, ಕಲಬುರಗಿ ನಗರದಲ್ಲಿರುವ ವಿಜಿ ಅಂದಾನಿ ಅವರ ಐಡಿಯಲ್ ಫೈನ್ ಆರ್ಟ್ಸ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿದರು. ಅದೇ ಕಾಲೇಜಿನಲ್ಲಿ ಅವರು ಜಿ.ಡಿ ಆರ್ಟ್,(ಡ್ರಾಯಿಂಗ್ ಪೇಂಟಿಂಗ್), ಐ.ಎಫ್.ಎ.ಐ ವಿದ್ಯಾರ್ಹತೆ ಪಡೆದುಕೊಂಡಿದ್ದಾರೆ.

ಶಾಂತಕುಮಾರ್ ಹತ್ತರಕಿ ಅವರು 1997ರಲ್ಲಿ ಕಲಬುರಗಿಯ ಚಿತ್ರಕಲಾವಿದೆ ಜ್ಯೋತಿ ಪಾಟೀಲ್ ಅವರನ್ನು ವರಿಸಿದರು. ಇದೀಗ ಅವರ ದಂಪತಿಗೆ ಈರ್ವರು ಮಕ್ಕಳಿದ್ದು, ದೊಡ್ಡ ಮಗಳು ಭಕ್ತಿ ಹತ್ತರಕಿ, ಬರೋಡಾದಲ್ಲಿ ಪದವಿ ಮುಗಿಸಿ, ಈಗ ಕಲ್ಕತ್ತಾದಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾರೆ. ಕಿರಿಯ ಪುತ್ರ ಓಂ ಹತ್ತರಕಿ ವಿಜ್ಞಾನಿ ಆಗುವ ಬಯಕೆಯಲ್ಲಿ ವಿದ್ಯಾಭ್ಯಾಸ ಮುಂದುವರಿಸುತ್ತಿದ್ದಾರೆ.

ಶಾಂತಕುಮಾರ್ ಹತ್ತರಕಿ ಅವರ ಕುಟುಂಬದಲ್ಲಿ ಕೇವಲ ಅವರೊಬ್ಬರೇ ಮಾತ್ರ ಚಿತ್ರ ಕಲಾವಿದರಾಗಿ ಹೊರಬಿದ್ದಿಲ್ಲ. ಬದಲಾಗಿ ಅವರ ಕುಟುಂಬದಲ್ಲೇ ನಾಲ್ಕೈದು ಮಂದಿ ಕಲಾವಿದರೇ ಇದ್ದಾರೆ ಎನ್ನುವುದು ಇಂತಹ ಕಾಲದಲ್ಲಿ ಬಹುವಿಪರ್ಯಾಸ. ಹೌದು, ಹತ್ತರಕಿ ಕುಟುಂಬದಲ್ಲಿ ಶಾಂತಕುಮಾರ್ ಅವರ ತಾತ(ತಂದೆಯ ಅಪ್ಪ) ಮಲಕಾಜಪ್ಪ ಹತ್ತರಕಿ ಅವರು ಮುಂಬೈ ಮೂಲದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದರು. ಆಗಲೇ ಅವರು ಕಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿಕೊಂಡು ವಾಲ್ ಪೇಂಟಿಂಗ್‌ನಲ್ಲಿ ಹೆಸರು ಪಡೆದಿದ್ದರು. ತಾತ ಮಲಕಾಜಪ್ಪ ಅವರು ಮನೆಯಲ್ಲೇ ‘ಬಸವೇಶ್ವರರ ನಿರ್ಗಮನ’, ‘ಭಗವಾನ ಸತ್ಯನಾರಾಯಣ’ ಹೀಗೆ ಹಲವು ಕಲಾಕೃತಿಗಳ ವಾಲ್ ಪೇಂಟಿಂಗ್ ಮಾಡಿದ್ದರು. ಅವರಿಂದಲೇ ಬಾಲ್ಯದಲ್ಲಿ ಆಕರ್ಷಿತರಾದ ಶಾಂತಕುಮಾರ್ ಅವರು ಮುಂದೊಂದು ದಿನ ತಾನೂ ಕೂಡ ಕಲಾವಿದನಾಗಬೇಕೆಂದು ಬಯಸಿದ್ದರು.

ಬಾಲ್ಯದಲ್ಲೇ ಕನಸು ಕಂಡಿದ್ದ ಶಾಂತಕುಮಾರ್ ಅವರು ಇಂದು ಸಾಧಕರಾಗಿದ್ದಾರೆ. ಪತ್ನಿ ಜ್ಯೋತಿ ಪಾಟೀಲ್ ಕೂಡ ಕಲಬುರಗಿಯ ಶರಣಬಸವೇಶ್ವರ ಆರ್ಟ್ ಕಾಲೇಜಿನಲ್ಲಿ ಪಿ.ಜಿ ಮುಗಿಸಿ, ಗೋದುತಾಯಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿದ್ದಾರೆ. ಮದುವೆಯಾದ ಬಳಿಕ ಇದೀಗ ದಂಪತಿ ಇಬ್ಬರೂ ಕಲಾಕೃತಿಗಳನ್ನು ‘ಜಂಟಿ’ ಯಾಗಿ ಪ್ರದರ್ಶಿಸುತ್ತಿದ್ದಾರೆ. ಅಲ್ಲದೆ ಮಗಳು ಭಕ್ತಿ ಕೂಡ ಇದೇ ಚಿತ್ರ ಕಲಾವಿದರ ರಂಗಿನಲ್ಲಿ ಬೆಳೆಯುತ್ತಿದ್ದಾರೆ. ಹೀಗೆ ಕುಟುಂಬದಲ್ಲಿ ತಾತ, ದಂಪತಿ ಸೇರಿದಂತೆ ಪುತ್ರಿ ಕೂಡ ಚಿತ್ರ ಕಲಾವಿದರಾಗಿರುವುದು ಕುಟುಂಬ ಸಮೇತ ಕಲಾವಿದರ ರಂಗು ತುಂಬಿದೆ ಎಂದರೆ ತಪ್ಪಾಗಲಾರದು. ಕಲಬುರಗಿ ಕಲಾವಿದನ ಬಾಂಬೆ ಪಯಣ: ಜಾಹೀರಾತು ಏಜೆನ್ಸಿಯಲ್ಲಿ ಕೆಲಸ ಮಾಡಲು ಮುಂಬೈ ಉತ್ತಮ ಸ್ಥಳವಾಗಿದ್ದರಿಂದ ಅಲ್ಲಿಗೆ 1988ರಲ್ಲಿ ಹೋಗಿದ್ದೆ. ಪ್ರಾರಂಭದಲ್ಲಿ ತಿಂಗಳಿಗೆ 300 ರೂ. ಸಂಬಳಕ್ಕಾಗಿ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡಲು ಶುರು ಮಾಡಿದ್ದೆ. 12 ವರ್ಷಗಳ ಕಾಲ ಪೈಂಟಿಂಗ್ಸ್ ಕೆಲಸಗಳನ್ನು ಮಾಡಿ, ಅದೇ ಸಮಯದಲ್ಲೇ 1992ರಲ್ಲಿ ಮುಂಬೈನಲ್ಲಿರುವ ‘ಬಜಾಜ್ ಆರ್ಟ್ ಗ್ಯಾಲರಿ’ಯಲ್ಲಿ ಮೊದಲ ಕಲಾಕೃತಿಯನ್ನು ಪ್ರದರ್ಶಿಸಿದೆ ಎನ್ನುತ್ತಾರೆ ಶಾಂತಕುಮಾರ್.

ಮುಂಬೈ ಸೇರಿದಂತೆ ಹಲವು ಕಡೆಗಳಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸುತ್ತ, ರಾಷ್ಟ್ರೀಯ ಮತ್ತು ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಹರಾಜು ಪ್ರಕ್ರಿಯೆಯಲ್ಲಿ ಶಾಂತಕುಮಾರ್ ಗಮನ ಸೆಳೆದಿದ್ದಾರೆ. ಚಿತ್ರ ಕಲಾಕೃತಿಗಳನ್ನು ಮಾಡುತ್ತಾ ಇಂದು ಅವರು, ಮುಂಬೈನ ಪ್ರತಿಷ್ಠಿತ ನಗರದಲ್ಲಿ ಮನೆಯೊಂದು ಮಾಡಿ, ಸ್ವತಃ 3,000 ಸ್ಕ್ವಯರ್ ಫೀಟ್ ಆರ್ಟ್ ಗ್ಯಾಲರಿಯೊಂದು ಸ್ಥಾಪಿಸಿದ್ದಾರೆ. ಬಾಂಬೆಯಲ್ಲಿದ್ದುಕೊಂಡು ಹೆಸರು ಪಡೆದಿರುವ ಶಾಂತಕುಮಾರ್ ಅವರು ‘ಬಾಂಬೆ ಕಲಾವಿದ’ ಎಂದು ಗುರುತಿಸಿಕೊಳ್ಳುತ್ತಿದ್ದಾರೆ.

ಕನ್ನಡ, ಇಂಗ್ಲಿಷ್, ಮರಾಠಿ, ಹಿಂದಿ, ಗುಜರಾತಿ ಭಾಷೆ ಬಲ್ಲವರಾಗಿರುವ ಶಾಂತಕುಮಾರ್ ಹತ್ತರಕಿ ಅವರು, 40 ವರ್ಷಗಳಿಂದ ಕಲಾಕೃತಿಗಳನ್ನು ಬಿಡಿಸುತ್ತಾ ಬಂದಿದ್ದಾರೆ. ಈವರೆಗೆ 300ಕ್ಕೂ ಹೆಚ್ಚು ಪ್ರಮುಖ ಕಲಾಕೃತಿಗಳನ್ನು ಶಾಂತಕುಮಾರ್ ರಚಿಸಿದ್ದಾರೆ.

ಜಾಗತಿಕ ಕ್ಯಾನ್ವಾಸ್ :

ಶಾಂತಕುಮಾರ್‌ರ ಕಲಾಕೃತಿಮುಂಬೈನ ಪ್ರತಿಷ್ಠಿತ ಜಹಾಂಗೀರ್ ಕಲಾ ಗ್ಯಾಲರಿ, ವೈ.ಬಿ. ಚವಾನ್ ಕಲಾ ಗ್ಯಾಲರಿ ಮತ್ತು ತಾಜ್ ಕಲಾ ಗ್ಯಾಲರಿಯಲ್ಲಿ ಏಕವ್ಯಕ್ತಿ ಪ್ರದರ್ಶನಗಳು. ಜಹಾಂಗೀರ್ ಕಲಾ ಗ್ಯಾಲರಿ, ತುಲಿಕಾ ಕಲಾ ಗ್ಯಾಲರಿ ಮತ್ತು ಕ್ರಿಮ್ಸನ್ ಕಲಾ ಗ್ಯಾಲರಿಯಲ್ಲಿ ಜಂಟಿ ಪ್ರದರ್ಶನಗಳು ಕಂಡಿವೆ. ಭಾರತ ಕಲಾ ಉತ್ಸವ, ಭಾರತ ಅಂತರ್‌ರಾಷ್ಟ್ರೀಯ ಕಲಾ ಮೇಳ, ಏಷ್ಯಾ ಕಲಾ ಉತ್ಸವ ಮತ್ತು ಭಾರತದಾದ್ಯಂತ ಮತ್ತು ಅಂತರ್‌ರಾಷ್ಟ್ರೀಯವಾಗಿ ಹಲವಾರು ಪ್ರಮುಖ ಸ್ಥಳಗಳಲ್ಲಿ ಗುಂಪು ಪ್ರದರ್ಶನಗಳು. ಅವರು 13 ಭಾಗವಹಿಸುವಿಕೆ, 26 ಗುಂಪು ಪ್ರದರ್ಶನಗಳು, 7 ಏಕವ್ಯಕ್ತಿ ಪ್ರದರ್ಶನಗಳು, 7 ಜಂಟಿ ಪ್ರದರ್ಶನಗಳು, 10 ರಾಷ್ಟ್ರೀಯ ಕಲಾ ಶಿಬಿರಗಳು, 2 ರಾಷ್ಟ್ರೀಯ ಮಟ್ಟದ ಚಿತ್ರಕಲೆ ಹರಾಜುಗಳಲ್ಲಿ ಭಾಗಿಯಾಗಿದ್ದಾರೆ. ಅವರ ಹಲವು ಚಿತ್ರಕಲೆಗಳು ಭಾರತ ಮತ್ತು ವಿದೇಶಗಳಲ್ಲಿ ಸಂಗ್ರಹ ಇವೆ.


share
ದಸ್ತಗೀರ ನದಾಫ್ ಯಳಸಂಗಿ
ದಸ್ತಗೀರ ನದಾಫ್ ಯಳಸಂಗಿ
Next Story
X