Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ತಪ್ಪುವ ಲೆಕ್ಕಗಳೂ..ಅದರಿಂದಾಗುವ...

ತಪ್ಪುವ ಲೆಕ್ಕಗಳೂ..ಅದರಿಂದಾಗುವ ಪರಿಣಾಮಗಳೂ...

ಎನ್. ಕೇಶವ್ಎನ್. ಕೇಶವ್6 Feb 2025 12:22 PM IST
share
ತಪ್ಪುವ ಲೆಕ್ಕಗಳೂ..ಅದರಿಂದಾಗುವ ಪರಿಣಾಮಗಳೂ...
ಭಾರತದಲ್ಲಿ ಸಂಖ್ಯೆಗಳು ಪ್ರಮಾಣೀಕರಣಕ್ಕಿಂತ ಹೆಚ್ಚಾಗಿ ಧಾರ್ಮಿಕ ಆಯಾಮವನ್ನು ಪಡೆದುಕೊಳ್ಳುತ್ತವೆ. ಇದು ಕೇವಲ ರಾಜಕೀಯ ವಂಚನೆಯಲ್ಲ. ಇದು ಅಂಕಿಅಂಶಗಳನ್ನು ದಂತಕತೆಯಾಗಿ ಪರಿವರ್ತಿಸುವ ಒಂದು ದಾರಿಯೂ ಆಗಿದೆ.

ಮಹಾ ಕುಂಭಕ್ಕೆ ಬಂದವರ ಕುರಿತ ಅಂದಾಜಿನಿಂದ ಹಿಡಿದು 2ಜಿ ಸ್ಪೆಕ್ಟ್ರಮ್ ಹಂಚಿಕೆಯಿಂದ ಉಂಟಾದ ನಷ್ಟದವರೆಗೆ, ಸಂಖ್ಯೆಗಳೊಂದಿಗಿನ ಭಾರತದ ಸಂಬಂಧವೇ ವಿಚಿತ್ರ. ಅದು ಪುರಾಣ, ರಾಜಕೀಯ ಮತ್ತು ಪ್ರಚಾರ ಇವೆಲ್ಲವೂ ಬೆರೆತದ್ದಾಗಿದೆ.

ನಿಖರವಾದ ಎಣಿಕೆಯೊಂದಿಗೆ ಭಾರತದ ದೀರ್ಘಕಾಲಿಕ ಸಮಸ್ಯೆ ಮತ್ತೊಮ್ಮೆ 2025ರ ಮಹಾ ಕುಂಭದಲ್ಲಿ ಕಾಣಿಸಿದೆ.

ಮೌನಿ ಅಮಾವಾಸ್ಯೆಯ ದಿನ ಬಂದವರ ಸಂಖ್ಯೆಯನ್ನು 5.7 ಕೋಟಿಯಿಂದ 10 ಕೋಟಿಯವರೆಗೆ ಎಂದು ಹೇಳಲಾಗಿದೆ.

‘ದಿ ಹಿಂದೂ’ ಪ್ರಕಾರ, ಆ ದಿನ 7.64 ಕೋಟಿಗೂ ಹೆಚ್ಚು ಜನರು ಬಂದಿದ್ದರು. ಇಂಡಿಯನ್ ಎಕ್ಸ್‌ಪ್ರೆಸ್ ಸಂಪಾದಕೀಯದ ಪ್ರಕಾರ, ಅಂದು 10 ಕೋಟಿಗೂ ಹೆಚ್ಚು ಜನರು ಪವಿತ್ರ ಸ್ನಾನ ಮಾಡಿದರು. ಎನ್‌ಡಿಟಿವಿ ಹೇಳಿರುವ ಪ್ರಕಾರ, 5.71 ಕೋಟಿಗೂ ಹೆಚ್ಚು ಭಕ್ತರು ಆ ದಿನ ತ್ರಿವೇಣಿ ಸಂಗಮದಲ್ಲಿ ಮಿಂದರು.

ಮೇಳದಾದ್ಯಂತ ಒಟ್ಟು ಯಾತ್ರಿಕರ ಅಧಿಕೃತ ಅಂದಾಜು 40ರಿಂದ 45 ಕೋಟಿ ಎನ್ನಲಾಗಿದೆ. ಆದರೆ ಈ ಅಂದಾಜುಗಳ ಮೂಲಗಳು ಎಂದಿಗೂ ಸ್ಪಷ್ಟವಾಗಿಲ್ಲ.

ಕೆಲವು ಅಂಕಿಅಂಶಗಳನ್ನು ಸುಮ್ಮನೆ ಕೊಟ್ಟುಬಿಡಲಾಗುತ್ತದೆ. ಈ ಅಂಕಿ ಸಂಖ್ಯೆಗಳಲ್ಲಿ ನಿಖರತೆ ಎಂಬುದು ಎಂದಿಗೂ ಇರುವುದಿಲ್ಲ.

ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಜನರ ನಿಜವಾದ ಸಂಖ್ಯೆಯನ್ನು ಮರೆಮಾಚಲಾಗುತ್ತಿದೆ ಎಂದು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಆರೋಪಿಸಿದ್ದಾರೆ.

ಕಾಲ್ತುಳಿತದಲ್ಲಿ ಸಾವಿಗೀಡಾದವರ ದೇಹಗಳನ್ನು ಗಂಗಾ ನದಿಗೆ ಬಿಸಾಡಲಾಗಿದೆ ಎಂದು ಸಂಸದೆ ಜಯಾ ಬಚ್ಚನ್ ಆರೋಪಿಸಿದ್ದಾರೆ

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಂಸತ್ತಿನಲ್ಲಿ ಮಾತಾಡುವಾಗ ಕುಂಭ ಮೇಳದ ಕಾಲ್ತುಳಿತದಲ್ಲಿ ಸಾವಿರಾರು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.

ಶಿವಸೇನಾ ಯುಬಿಟಿ ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅವರೂ ಎರಡು ಸಾವಿರ ಜನ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾರೆ ಎಂದು ಸಂಸತ್ತಿನಲ್ಲೇ ಹೇಳಿದರು.

ಇದು ನಿಜವೋ ಅಲ್ಲವೋ ಗೊತ್ತಿಲ್ಲ. ಆದರೆ ರಾಜ್ಯ ಮತ್ತು ಕೇಂದ್ರ ಸರಕಾರಗಳು ಅಂಥದನ್ನು ಮಾಡುವಂಥವೇ ಆಗಿವೆ ಎಂಬುದನ್ನು ಇಲ್ಲವೆನ್ನಲಾಗದು.

ವಾಸ್ತವವಾಗಿ, ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ 39 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ. ಆದರೆ ಸರಕಾರದ ಅಧಿಕೃತ ಸಂಖ್ಯೆ 30ಕ್ಕೇ ನಿಂತಿದೆ.

ಅಖಿಲೇಶ್ ಯಾದವ್ ಗಮನ ಸೆಳೆದಂತೆ, ಕಾಣೆಯಾದ ವ್ಯಕ್ತಿಗಳ ಹುಡುಕಾಟ ಇನ್ನೂ ಮುಗಿದಿಲ್ಲ.

ಆದರೆ ಕುಂಭಮೇಳದಂಥ ಕಡೆ ಎಷ್ಟು ಮಂದಿ ಸೇರಿದರು ಎಂಬುದಕ್ಕಿಂತ ಬೇರೆ ರೀತಿಯಲ್ಲಿ ಸಾವಿನ ಸಂಖ್ಯೆಯನ್ನು ನೋಡಲಾಗುತ್ತದೆ. ಸಾಮೂಹಿಕ ಸಾವುಗಳನ್ನು ಸಾಮಾನ್ಯವಾಗಿ ಕಡಿಮೆ ತೋರಿಸಲಾಗುತ್ತದೆ.

ಚುನಾವಣಾ ರ್ಯಾಲಿಗಳಲ್ಲಿ, ಮತದಾನದ ಪ್ರಮಾಣದ ಬಗ್ಗೆ ವಾಡಿಕೆಯಂತೆ ಉತ್ಪ್ರೇಕ್ಷೆಯಾಗಿ ಅಥವಾ ಅಸ್ಪಷ್ಟವಾಗಿ ಹೇಳಲಾಗುತ್ತದೆ.

ಜನಗಣತಿ ಅಥವಾ ಸಮೀಕ್ಷೆಯ ದತ್ತಾಂಶ ಕೂಡ ಹೆಚ್ಚಾಗಿ ಅನುಮಾನಾಸ್ಪದವಾಗಿಯೇ ಇರುತ್ತದೆ.

ಭಾರತ ಸ್ವಾತಂತ್ರ್ಯದ ನಂತರ ಮರಣದಂಡನೆಗೆ ಒಳಗಾದವರು ಎಷ್ಟು? ಅದರ ಬಗ್ಗೆಯೂ ನಮ್ಮಲ್ಲಿ ನಿರ್ದಿಷ್ಟ ಮಾಹಿತಿಯಿಲ್ಲ.

ಯಾರು ಎಣಿಸುತ್ತಿದ್ದಾರೆ ಎಂಬುದರ ಆಧಾರದ ಮೇಲೆ ಎಣಿಕೆಯಲ್ಲಿ ವ್ಯತ್ಯಾಸವಿರುತ್ತದೆ. ಅದು ನೂರಾರು ಎಂಬುದರಿಂದ ಸಾವಿರಾರು ಎಂಬಲ್ಲಿಯವರೆಗೆ ಬದಲಾಗಬಹುದು.

2005ರಲ್ಲಿ ಪೀಪಲ್ಸ್ ಯೂನಿಯನ್ ಫಾರ್ ಡೆಮಾಕ್ರಟಿಕ್ ರೈಟ್ಸ್ (ಪಿಯುಡಿಆರ್) ಕಾನೂನು ಆಯೋಗದ ವರದಿ 1953ರಿಂದ 1964ರ ಅವಧಿಯಲ್ಲಿ 1,422 ಮರಣದಂಡನೆಗಳು ನಡೆದಿವೆ ಎಂದು ಸಾಬೀತುಪಡಿಸುತ್ತದೆ.ಆದರೆ, ಆಗಿನ ಸರಕಾರದ ಅಂಕಿಅಂಶದ ಪ್ರಕಾರ ಆ ಸಂಖ್ಯೆ 55 ಮಾತ್ರ.

ಒಂದೆಡೆ, ನಮಗೆ ದೊಡ್ಡ ಸಂಖ್ಯೆಗಳ ಬಗ್ಗೆ ಆಕರ್ಷಣೆ.

ನಮ್ಮ ಸಾಮೂಹಿಕ ಕಲ್ಪನೆಯಲ್ಲಿ ನಾವು ಕೋಟಿ ಕೋಟಿ ಜನರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆ. ನಮ್ಮನ್ನು ಯಾವಾಗಲೂ ದೊಡ್ಡ ಸಾಮೂಹಿಕತೆ ಎಂದು ವ್ಯಾಖ್ಯಾನಿಸಿಕೊಳ್ಳುವುದರಲ್ಲಿ ಏನೋ ಹೆಚ್ಚುಗಾರಿಕೆಯ ಭಾವನೆ.

ಅದೇ ವೇಳೆ, ಮತ್ತೊಂದೆಡೆ, ಅಗತ್ಯವಿದ್ದಾಗ ಸಂಖ್ಯೆಗಳನ್ನು ಕಡಿಮೆ ತೋರಿಸಲು ನಾವು ಹಿಂಜರಿಯುವುದಿಲ್ಲ.

ಹೀಗೆ ತಪ್ಪು ಎಣಿಕೆ ಭಾರತದಲ್ಲಿ ಆಧುನಿಕ ಅಥವಾ ಧಾರ್ಮಿಕ ಪಿಡುಗಲ್ಲ. ಯಾವುದೇ ಸಂಖ್ಯೆಯನ್ನು ಅಂದಾಜು ಮಾಡುವಲ್ಲಿ ನಾವು ವಿಫಲರಾಗುತ್ತಲೇ ಇರುತ್ತೇವೆ. ನಾವು ಸಣ್ಣ ಎಣಿಕೆಗಳಲ್ಲಿ ಮಾತ್ರ ಎತ್ತಿದ ಕೈ ಎನ್ನುವಂತಿರುತ್ತೇವೆ.ಎರಡು ಅಂಕೆಗಳಿಗಿಂತ ಹೆಚ್ಚು ಬಂದಾಗ ನಮ್ಮ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ.

ಜಲಿಯನ್ ವಾಲಾ ಬಾಗ್‌ನಲ್ಲಿನ ಸಾವಿನ ಸಂಖ್ಯೆ, ಪುನ್ನಪ್ರಾ-ವಯಲಾರ್ ದಂಗೆ ಮತ್ತು ಸ್ವಾತಂತ್ರ್ಯಾನಂತರದ ಗಲಭೆಗಳ ವಿಚಾರದಲ್ಲಿನ ಅಂಕಿಅಂಶಗಳು ಹೆಚ್ಚಾಗಿ ವಿವಾದಾಸ್ಪದವಾಗಿವೆ.

2ಜಿ ಸ್ಪೆಕ್ಟ್ರಮ್ ಪ್ರಕರಣ ಇದೇ ರೀತಿಯ ಆಧಾರರಹಿತ ಸಂಖ್ಯೆಯನ್ನು ಹೊಂದಿತ್ತು. 25 ಬಿಲಿಯನ್ ಡಾಲರ್ ಅಥವಾ ರೂ.1.76 ಲಕ್ಷ ಕೋಟಿಯ ಹಗರಣ ಎನ್ನಲಾಗಿತ್ತು.ಆಮೇಲೆ ಅದು ತೀರಾ ಉತ್ಪ್ರೇಕ್ಷಿತ ಸಂಖ್ಯೆ ಎಂದು ಹೇಳಲಾಯಿತು.

ಭಾರತದಲ್ಲಿ ಸಂಖ್ಯೆಗಳು ಪ್ರಮಾಣೀಕರಣಕ್ಕಿಂತ ಹೆಚ್ಚಾಗಿ ಧಾರ್ಮಿಕ ಆಯಾಮವನ್ನು ಪಡೆದುಕೊಳ್ಳುತ್ತವೆ. ಇದು ಕೇವಲ ರಾಜಕೀಯ ವಂಚನೆಯಲ್ಲ. ಇದು ಅಂಕಿಅಂಶಗಳನ್ನು ದಂತಕತೆಯಾಗಿ ಪರಿವರ್ತಿಸುವ ಒಂದು ದಾರಿಯೂ ಆಗಿದೆ.

ಕೋವಿಡ್ ಸಾವುಗಳನ್ನು ಎಣಿಸುವಾಗ ಕಂಡ ದೋಷ ಕೂಡ ಅಂಥದೇ ಆಗಿದೆ.

ಸರಕಾರದ ಪ್ರಕಾರ ಒಟ್ಟು ಸಾವುಗಳು ಕೆಲವು ಸಾವಿರವಷ್ಟೇ. ಆದರೆ ವಿಪಕ್ಷಗಳು, ಸ್ವತಂತ್ರ ಮಾಧ್ಯಮಗಳು ಹಾಗೂ ಸಾಮಾಜಿಕ ಕಾರ್ಯಕರ್ತರ ಪ್ರಕಾರ ಲಕ್ಷಾಂತರ ಮಂದಿ ಕೋವಿಡ್ ಸಂದರ್ಭದಲ್ಲಿ ಪ್ರಾಣ ಬಿಟ್ಟಿದ್ದಾರೆ

ನರೇಂದ್ರ ಮೋದಿ, ರಾಹುಲ್ ಗಾಂಧಿ ಅಥವಾ ಪ್ರಾದೇಶಿಕ ನಾಯಕರ ರಾಜಕೀಯ ರ್ಯಾಲಿಗಳಲ್ಲಿ ಸೇರುವ

ಜನಸಂದಣಿ ಬಗ್ಗೆ ಮಾಡಲಾಗುವ ಅಂದಾಜು ಕೂಡ ಅಂಥದೇ ಆಗಿರುತ್ತದೆ.

ಆಂಧ್ರಪ್ರದೇಶದಲ್ಲಿ ವೈ.ಎಸ್. ರಾಜಶೇಖರ ರೆಡ್ಡಿ ನಿಧನದ ನಂತರದ ಆಘಾತದಿಂದಾಗಿ ಸಂಭವಿಸಿದ ಸಾವುಗಳನ್ನು ಸಾವಿರಾರು ಸಂಖ್ಯೆಯಲ್ಲಿ ಉಲ್ಲೇಖಿಸಲಾಗಿತ್ತು. ಆದರೆ ಅದಾವುದಕ್ಕೂ ಪರಿಶೀಲಿಸಬಹುದಾದ ದಾಖಲೆಗಳಿಲ್ಲ.

ಭಾರತ ವಿಶ್ವದ ಕೆಲವು ಅತ್ಯುತ್ತಮ ಸಂಖ್ಯಾಶಾಸ್ತ್ರೀಯ ಸಂಸ್ಥೆಗಳ ನೆಲೆಯಾಗಿದೆ. ಐಎಸ್‌ಐ ಕೋಲ್ಕತಾ, ಜನಗಣತಿ ಬ್ಯೂರೋ ಅಂತಹ ಸಂಸ್ಥೆಗಳಲ್ಲದೆ, ಉನ್ನತ ಶ್ರೇಣಿಯ ಗಣಿತಜ್ಞರೂ ಇಲ್ಲಿದ್ದಾರೆ. ಆದರೆ ಪ್ರಮುಖ ವಿಷಯಗಳು ಹಾಗೂ ಘಟನೆಗಳಲ್ಲಿ ತಪ್ಪು ಎಣಿಕೆ ಮಾತ್ರ ತಪ್ಪುವುದೇ ಇಲ್ಲ.

ಹಾಗಾದರೆ, ಸಮಸ್ಯೆ ಸಾಮರ್ಥ್ಯದ್ದಲ್ಲ ಎನ್ನಬೇಕಾಗುತ್ತದೆ. ಅಲ್ಲಿ ಆ ಹೊತ್ತಿನ ಅಗತ್ಯಕ್ಕೆ ಸಂಬಂಧಿಸಿದ ತುರ್ತೊಂದು ಬಹುಶಃ ಕೆಲಸ ಮಾಡುತ್ತದೆ.

ಜೋಯಲ್ ಲೀ ತಮ್ಮ ಪುಸ್ತಕ ‘ಡಿಸೆಪ್ಟಿವ್‌ಮೆಜಾರಿಟಿ’ಯಲ್ಲಿ, ಜನಗಣತಿ ಮಾಡಲು ಬರುವವರು ಹೇಗೆ ಅಸಡ್ಡೆಯಿಂದ ತಪ್ಪಾಗಿ ಎಣಿಸುತ್ತಾರೆ ಎಂಬುದನ್ನು ವರದಿ ಮಾಡುತ್ತಾರೆ.

ಸಂಖ್ಯೆಗಳನ್ನು ಉತ್ಪ್ರೇಕ್ಷಿಸುವ ಅಥವಾ ಕಡಿಮೆ ಮಾಡಿ ಹೇಳುವ ಈ ವಿಚಿತ್ರ ಅಭ್ಯಾಸ ಬ್ರಿಟಿಷರಲ್ಲೂ ಇತ್ತು.

ಆಡಳಿತಾತ್ಮಕ ಅಸಮರ್ಥತೆ ಮತ್ತು ಕೋಮು ಆತಂಕಗಳೆರಡರಿಂದಲೂ ಜನಗಣತಿ ಸಂಖ್ಯೆಗಳು ಹೆಚ್ಚಾಗಿ ಅನುಮಾನಾಸ್ಪದವೇ ಆಗಿದ್ದವು. ಆದರೆ ಬ್ರಿಟಿಷರು ಜನಸಂಖ್ಯೆಯನ್ನು ಸರಿಯಾಗಿ ಎಣಿಸಲು ಸಾಕಷ್ಟು ಪ್ರಯತ್ನಗಳನ್ನು ಮಾಡಿದ್ದರು.

ಅಂತರ್‌ರಾಷ್ಟ್ರೀಯ ಮಟ್ಟದಲ್ಲೂ, ಸಂಖ್ಯೆಗಳನ್ನು ಹೆಚ್ಚಾಗಿ ರಾಜಕೀಯ ಅಸ್ತ್ರವಾಗಿ ಬಳಸುವುದು ನಡೆಯುತ್ತದೆ.

ಚೀನಾದ ಜಿಡಿಪಿ ಅಂಕಿಅಂಶಗಳು, ಸಂಘರ್ಷಗಳಲ್ಲಿ ರಶ್ಯದ ಸಾವುನೋವುಗಳ ಎಣಿಕೆ ಇಂಥವುಗಳಲ್ಲೆಲ್ಲ ರಾಜಕೀಯವೇ ಇರುತ್ತದೆ.

ಸಂಖ್ಯೆಗಳೊಂದಿಗೆ ಭಾರತದ ಸಮಸ್ಯೆ ಗಣಿತದ ತಾರ್ಕಿಕತೆಯ ವೈಫಲ್ಯವೇ ಎಂದು ಕೇಳಿಕೊಂಡರೆ, ಅದು ಅಸಂಭವ ಎಂದೇ ತೋರುತ್ತದೆ.

ಭಾರತ ರಾಮಾನುಜನ್‌ರಂತಹ ಅದ್ಭುತ ಗಣಿತಜ್ಞರನ್ನು ಮತ್ತು ಕೇರಳ ಸ್ಕೂಲ್‌ನಂತಹ ಗಣಿತ ಶಾಲೆಗಳನ್ನು ಸೃಷ್ಟಿಸಿದೆ. ಅಲ್ಲದೆ, ಭಾರತ ಕಂಪ್ಯೂಟೇಶನಲ್ ವಿಜ್ಞಾನದಲ್ಲಿ ಜಾಗತಿಕವಾಗಿ ಗೌರವಿಸಲಾಗುತ್ತದೆ.

ದೋಷಗಳ ಹೊರತಾಗಿಯೂ, ಭಾರತ ವಿಶ್ವದ ಅತಿದೊಡ್ಡ ಚುನಾವಣೆಗಳು, ಜನಗಣತಿಗಳು ಮತ್ತು ಲಸಿಕೆ ಅಭಿಯಾನಗಳನ್ನು ನಡೆಸುವಲ್ಲಿ ಯಶಸ್ವಿಯಾಗಿದೆ.

ಕುಂಭಮೇಳಕ್ಕೆ ಲಕ್ಷಾಂತರ ಜನರು ಸೇರಿದಾಗ, ಆ ದೃಶ್ಯ ಎಣಿಸಲಾಗದ ಹಾಗೆ ಕಾಣಿಸುತ್ತದೆ. ಆದ್ದರಿಂದ ಸಂಖ್ಯೆಗಳು ಸಾಮೂಹಿಕ ಭಾವನೆಗೆ ಅನುಗುಣವಾಗಿ ಹೆಚ್ಚಾಗುತ್ತವೆ.

ಈ ಉತ್ಪ್ರೇಕ್ಷೆ ಸಂಖ್ಯಾತ್ಮಕ ಬಿಕ್ಕಟ್ಟಿಗಿಂತಲೂ ಹೆಚ್ಚಾಗಿ ಸಾಂಸ್ಕೃತಿಕ ಮನಃಸ್ಥಿತಿಯಿಂದ ರೂಪಿತವಾಗುತ್ತವೆ ಎನ್ನಬಹುದು.

ಆದರೆ, ಈ ಉತ್ಪ್ರೇಕ್ಷೆಗಳ ಪರಿಣಾಮಗಳು ಆಳವಾದವುಗಳಾಗಿವೆ. ಇಂಥ ತಪ್ಪಾದ, ತಿರುಚಲಾದ ಸಂಖ್ಯೆಗಳು ನೀತಿ ಯೋಜನೆಯನ್ನು ವಿರೂಪಗೊಳಿಸುತ್ತವೆ.ಅದು ವಿಕೃತ ವ್ಯವಸ್ಥೆಗಳಿಗೆ ಕಾರಣವಾಗುತ್ತದೆ.

ಅದೇ ರೀತಿ, ವಿಶ್ವಾಸಾರ್ಹವಲ್ಲದ ಸಾಮಾಜಿಕ, ಆರ್ಥಿಕ ಡೇಟಾ ಪರಿಣಾಮಕಾರಿ ಆಡಳಿತಕ್ಕೆ ಅಡ್ಡಿ ಮಾಡುತ್ತದೆ.

ಅದು ಅಭಿವೃದ್ಧಿಯ ಹಂಚಿಕೆಗಳನ್ನು ತಪ್ಪಾಗಿ ಮಾಡಲು ಮತ್ತು ಸಂಪನ್ಮೂಲಗಳ ದುರುಪಯೋಗವಾಗಲು ಕಾರಣವಾಗುತ್ತದೆ.

ಉತ್ಪ್ರೇಕ್ಷೆಯ ಕಡೆಗಿನ ಒಲವು ಸಾರ್ವತ್ರಿಕ ಎನ್ನಬಹುದಾದರೂ ವಾಸ್ತವ ಹಾಗಿಲ್ಲ.

ಪ್ರಬುದ್ಧ ಸಂಖ್ಯಾಶಾಸ್ತ್ರೀಯ ಸಂಸ್ಕೃತಿಗಳಲ್ಲಿ, ಉತ್ಪ್ರೇಕ್ಷಿತ ಸಂಖ್ಯೆಗಳು ಕಠಿಣ ಪರಿಶೀಲನೆಗೆ ಒಳಗಾಗುತ್ತವೆ.

ಎಣಿಕೆಗೆ ನೈತಿಕ ವಿಧಾನ ಬೇಕಿರುವುದು ಕೇವಲ ನಿಖರತೆಯ ಕಾರಣಕ್ಕಾಗಿ ಅಲ್ಲ. ಅದು ಗೌರವದ ಪ್ರಶ್ನೆಯೂ ಹೌದು.

ನಮ್ಮ ಅಪಾರ ಸಂಖ್ಯೆಯ ಜನರು, ಯಾತ್ರಿಕರು, ಸಾವುನೋವುಗಳ ವಿಚಾರದಲ್ಲಿ ಬೇಕಿರುವುದು ಸತ್ಯವೇ ಹೊರತು ಅದನ್ನು ತಿದ್ದಿ ತೀಡಿ ಹೇಳುವುದಲ್ಲ.

ಸತ್ಯ ಸಾಕಷ್ಟು ಪ್ರಭಾವಶಾಲಿಯಾಗಿದೆ.

ಮಹಾ ಕುಂಭ ಒಂದೇ ದಿನದಲ್ಲಿ ಅಲ್ಲ, ಅಷ್ಟೂ ದಿನಗಳೂ ಸೇರಿ ಕೇವಲ 10 ಕೋಟಿ ಜನರನ್ನು ಮಾತ್ರ ಸೆಳೆದಿದ್ದರೂ, ಅದು ಇದುವರೆಗಿನ ಅತಿ ದೊಡ್ಡ ಕಾರ್ಯಕ್ರಮವಾಗಿಯೇ ಇರಲಿದೆ. ಯಾವುದೇ ಉತ್ಪ್ರೇಕ್ಷೆಯ ಅಗತ್ಯ ಮಹಾಕುಂಭಕ್ಕೆ ಖಂಡಿತ ಇಲ್ಲ.

share
ಎನ್. ಕೇಶವ್
ಎನ್. ಕೇಶವ್
Next Story
X