Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ |...

ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ | ಕರ್ನಾಟಕ ಪಾಲಿಗೆ ವಿಷಾದ ಯೋಗ

ವಿಲ್ಫ್ರೆಡ್ ಡಿಸೋಜಾವಿಲ್ಫ್ರೆಡ್ ಡಿಸೋಜಾ24 April 2025 10:51 AM IST
share
ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ | ಕರ್ನಾಟಕ ಪಾಲಿಗೆ ವಿಷಾದ ಯೋಗ

ಎಪ್ರಿಲ್ 24, ಈ ದಿನ ‘ರಾಷ್ಟ್ರೀಯ ಪಂಚಾಯತ್ ರಾಜ್ ದಿವಸ್’. ದೇಶವೇ ಈ ದಿನವನ್ನು ಆಚರಿಸುವ ಸಂಭ್ರಮದಲ್ಲಿದೆ. ಆದರೆ ಈ ಬಾರಿ ಕರ್ನಾಟಕದ ಪಾಲಿಗೆ ಈ ದಿನ ವಿಷಾದ. ನಾವು ಸಂಭ್ರಮ ಪಡುವ ಸ್ಥಿತಿಯಲ್ಲಿ ಇಲ್ಲವೇ ಇಲ್ಲ. ಬಸವರಾಜ ಬೊಮ್ಮಾಯಿ ಸರಕಾರದಿಂದ ಹಿಡಿದು ಇಂದಿನ ಸಿದ್ದರಾಮಯ್ಯ ಸರಕಾರದ ಆಡಳಿತಾವಧಿ ನಮ್ಮ ರಾಜ್ಯದ ಪಂ. ರಾಜ್ ವ್ಯವಸ್ಥೆಯ ಪಾಲಿಗೆ ಕೆಟ್ಟ ದಿನಗಳನ್ನು ಕೊಟ್ಟಿರುವಾಗ ಸಂಭ್ರಮಕ್ಕೆ ಅರ್ಥವೇ ಇಲ್ಲ.

ಏನಿದು ಪಂ. ರಾಜ್ ದಿನ

ಈ ದಿನ ಮಹಾತ್ಮಾ ಗಾಂಧೀಜಿ ಅವರ ಗ್ರಾಮ ಸ್ವರಾಜ್ಯದ ಆಶಯಕ್ಕೆ ಇಂಬು ಕೊಡುವಂತೆ ಇರಬೇಕಿತ್ತು. ಪ್ರಜೆಗಳಿಗೆ ಆಡಳಿತದಲ್ಲಿ ಭಾಗವಹಿಸುವ ಅವಕಾಶಗಳು ಸಿಗಬೇಕಿತ್ತು.

“ My notion of democracy is that under it the weakest should have the same opportunity as the strongest” ಎನ್ನುವ ಗಾಂಧೀಜಿ ಅವರ ಹಾರೈಕೆ ನಿಜ ಆಗುವ ದಾರಿಯಲ್ಲಿ ಅಧಿಕಾರ ವಿಕೇಂದ್ರೀಕರಣದ ಹೆಜ್ಜೆಗಳು ದಾಪುಗಾಲಿಟ್ಟು ಮುನ್ನಡೆಯುವ ಹೆಮ್ಮೆ ನಮ್ಮದಾಗಬೇಕಿತ್ತು. ಸಂವಿಧಾನದ 73ನೇ ತಿದ್ದುಪಡಿಯ ಉದ್ದೇಶ, ಗುರಿಯೆಡೆಗೆ ನಮ್ಮ ಪಯಣ ಸಾಗಬೇಕಿತ್ತು.

<ನಮಗೆ ಗೊತ್ತಿರುವಂತೆ ಸಂವಿಧಾನದ 73ನೇ ತಿದ್ದುಪಡಿ ದೇಶದಲ್ಲಿ ಅನುಷ್ಠಾನಕ್ಕೆ ಬಂದ ಎಪ್ರಿಲ್ 24 ರಂದು ‘ರಾಷ್ಟ್ರೀಯ ಪಂ. ರಾಜ್ ದಿನ’ ವನ್ನು ಆಚರಿಸಲಾಗುತ್ತಿದೆ.

♦ ಸಂವಿಧಾನದ 73ನೇ ತಿದ್ದುಪಡಿ 1992ರ ಡಿಸೆಂಬರ್ 22ರಂದು ಲೋಕಸಭೆಯಲ್ಲಿ ಅನುಮೋದನೆ ಪಡೆಯಿತು.

♦ ಡಿಸೆಂಬರ್ 23ರಂದು ರಾಜ್ಯ ಸಭೆಯ ಅನುಮೋದನೆಯೂ ಸಿಕ್ಕಿತು.

♦ ಆಗ ದೇಶದಲ್ಲಿ ಅಸ್ತಿತ್ವದಲ್ಲಿದ್ದ 17 ರಾಜ್ಯ ಸರಕಾರಗಳ ಒಪ್ಪಿಗೆಯೂ ಸಿಕ್ಕಿತು.

♦ ಇದಾದ ನಂತರ 1993 ರ ಎಪ್ರಿಲ್ 23ರಂದು ರಾಷ್ಟ್ರಪತಿಗಳು ಈ ತಿದ್ದುಪಡಿ ವಿದೇಯಕಕ್ಕೆ ಸಹಿ ಹಾಕಿದರು.

♦ 1993 ರ ಎಪ್ರಿಲ್ 24ರಿಂದ ಸಂವಿಧಾನದ 73ನೇ ತಿದ್ದುಪಡಿಯನ್ನು ಭಾರತದ ದೇಶದಲ್ಲಿ ಅನುಷ್ಠಾನ ಮಾಡುವುದು ಕಡ್ಡಾಯವಾಯಿತು.

ಹೀಗಾಗಿ ಎಪ್ರಿಲ್ 24ನ್ನು ‘ರಾಷ್ಟ್ರೀಯ ಪಂ. ರಾಜ್ ದಿವಸ್’ ಎಂದು ಆಚರಿಸಲಾಗುತ್ತಿದೆ.

ಸಂವಿಧಾನದ 73ನೇ ತಿದ್ದುಪಡಿಯ ಹಿನ್ನೆಲೆ

ಭಾರತದ ಮೊದಲ ಕಾಂಗ್ರೆಸೇತರ ಸರಕಾರವಾದ ಜನತಾ ಪಕ್ಷದ ಆಡಳಿತದ ಅವಧಿಯಲ್ಲಿ ಅಂದಿನ ಪ್ರಧಾನಿ ಮೊರಾರ್ಜಿ ದೇಸಾಯಿ

ಅವರು ಸ್ಥಳೀಯ ಆಡಳಿತದಲ್ಲಿ ಸುಧಾರಣೆ ತರುವ ನಿಟ್ಟಿನಲ್ಲಿ ಅಶೋಕ್ ಮೆಹತಾ ಅಧ್ಯಕ್ಷತೆಯ ಸಮಿತಿಯನ್ನು ನೇಮಿಸಿದರು. ಈ ಸಮಿತಿಯ ಶಿಫಾರಸುಗಳು ಭಾರತದ ಆಡಳಿತ ವ್ಯವಸ್ಥೆಯಲ್ಲಿ ಅಧಿಕಾರ ವಿಕೇಂದ್ರೀಕರಣದ ಮಹತ್ವವನ್ನು ಸ್ಥಾಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು. ಆದರೆ ಸಮಿತಿಯ ವರದಿಯನ್ನು ಆಧರಿಸಿ ಸಂವಿಧಾನಕ್ಕೆ ಅಗತ್ಯ ತಿದ್ದುಪಡಿ ತರುವ ಸಂಸದೀಯ ಚರ್ಚೆ ಆರಂಭ ಆಗುವ

ಮೊದಲೇ ಮೊರಾರ್ಜಿ ಸರಕಾರ ಪತನ ಆಗಿ ಹೋಯಿತು. ಇಂದಿರಾ ಗಾಂಧಿ ಅವರು ಮತ್ತೆ ಪ್ರಧಾನಿ ಆದರು. ಸಮಿತಿಯ ಶಿಫಾರಸುಗಳು ಮೂಲೆ ಸೇರಿದವು.

ಪ. ಬಂಗಾಳ, ಕರ್ನಾಟಕ, ಆಂಧ್ರಪ್ರದೇಶ ತೋರಿಸಿದ ದಾರಿ

ಈ ಸಂದರ್ಭದಲ್ಲಿ ಮೂರು ರಾಜ್ಯಗಳಲ್ಲಿ ಕಾಂಗ್ರೆಸೇತರ ಸರಕಾರಗಳು ಆಡಳಿತ ನಡೆಸುತ್ತಿದ್ದವು. ಪ.ಬಂಗಾಲದಲ್ಲಿ ಜ್ಯೋತಿಬಸು, ಕರ್ನಾಟಕದಲ್ಲಿ ರಾಮಕೃಷ್ಣ ಹೆಗಡೆ, ಆಂದ್ರದಲ್ಲಿ ಎನ್. ಟಿ. ರಾಮರಾವ್ ಮುಖ್ಯಮಂತ್ರಿಗಳಾಗಿದ್ದರು. ಮೊದಲಿಗೆ ಜ್ಯೋತಿ ಬಸು ಅವರ ಸರಕಾರ ಅಶೋಕ್ ಮೆಹತಾ ಸಮಿತಿಯ ಶಿಫಾರಸುಗಳನ್ನು ಜಾರಿಗೆ ತರುವ ಧೈರ್ಯ ಮಾಡಿತು. 1978ರಲ್ಲಿ ಹೊಸ ಪಂ. ರಾಜ್ ವ್ಯವಸ್ಥೆ ಗೆ ಪ.ಬಂಗಾಳ ರಾಜ್ಯದಲ್ಲಿ ಚುನಾವಣೆ ನಡೆಯಿತು. ಜಿಲ್ಲಾ ಪರಿಷತ್ ಮತ್ತು ಮಂಡಲ ಪಂಚಾಯತ್ ಎನ್ನುವ ಎರಡು ಸ್ತರಗಳ ಪಂಚಾಯತ್ ರಾಜ್ಯ.

ತಳ ಹಂತದಲ್ಲಿ ಪ್ರಜೆಗಳಿಗೆ ಆಡಳಿತದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವ ಗ್ರಾಮಸಭಾಗಳು. ಜೊತೆಗೆ ಕಾರ್ಯಕ್ರಮಗಳು, ಸಿಬ್ಬಂದಿ

ಮತ್ತು ಹಣಕಾಸು ವಿಕೇಂದ್ರೀಕರಣಕ್ಕೆ ಒತ್ತು. ಮೊದಲ ಬಾರಿಗೆ

ಅನುಸೂಚಿತ ಜಾತಿ, ಪಂಗಡ ಮತ್ತು ಮಹಿಳೆಯರಿಗೆ ರಾಜಕೀಯ

ಮೀಸಲಾತಿ. ಇದು ಸ್ಥಳೀಯಾಡಳಿತ ವ್ಯವಸ್ಥೆಯ ಇತಿಹಾಸದಲ್ಲಿ ಕ್ರಾಂತಿಕಾರಿ ಹೆಜ್ಜೆಯಾಗಿತ್ತು.

ರಾಮಕೃಷ್ಣ ಹೆಗಡೆ ಅವರ ಸರಕಾರದಲ್ಲಿ ಪಂಚಾಯತ್ ರಾಜ್ ಸಚಿವ

ರಾಗಿದ್ದ ಅಬ್ದುಲ್ ನಝೀರ್ ಸಾಬ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋದರು. ಅದಕ್ಕಾಗಿ ಅವರು ಪಕ್ಷದ ಒಳಗೆ ಮತ್ತು ಹೊರಗೆ ತೀವ್ರವಾದ ಪ್ರತಿರೋಧವನ್ನು ಎದುರಿಸಬೇಕಾಗಿ ಬಂತು. ಈ ಕುರಿತು ಇಲ್ಲಿ ಹೆಚ್ಚು ವಿಸ್ತರಿಸಲು ಹೋಗುವುದಿಲ್ಲ. ಆದರೆ ವಿಧಾನ ಸಭೆಯ ಅಧಿವೇಶನದಲ್ಲಿ ಅವರು ಆಡಿದ ಒಂದು ಮಾತು ಅಧಿಕಾರ ವಿಕೇಂದ್ರೀಕರಣಕ್ಕೆ

ಅವರ ಬದ್ಧತೆಯನ್ನು ಸೂಚಿಸುತ್ತದೆ. ‘‘ನಾನು ಕರ್ನಾಟಕ ರಾಜ್ಯದಲ್ಲಿ ಕಲೆಕ್ಟರ್ ರಾಜ್ ಕಿತ್ತು ಹಾಕಿ ಪಂಚಾಯತ್ ರಾಜ್

ಸ್ಥಾಪನೆ ಮಾಡುತ್ತೇನೆ’’

ಅವರು ನುಡಿದಂತೆ ಸಾಧಿಸಿ ತೋರಿಸಿದರು. 1987ರಿಂದ 1992ರ ಅವಧಿಯಲ್ಲಿ ಕರ್ನಾಟಕದಲ್ಲಿ ಜಾರಿಯಲ್ಲಿದ್ದ ಮಂಡಲ ಪಂಚಾಯತ್ ಮತ್ತು ಜಿಲ್ಲಾ ಪರಿಷತ್ ವ್ಯವಸ್ಥೆ ಒಂದು ಯಶಸ್ವಿ ಮಾದರಿ ಆಗಿತ್ತು. ನಝೀರ್ ಸಾಬ್ ಅವರು ಅಧಿಕಾರ ವಿಕೇಂದ್ರೀಕರಣ ಹೇಗಿರಬೇಕು..? ಅದರ ಸಾಮರ್ಥ್ಯ ಏನು..? ಪ್ರಜೆಗಳ ಕೈಗೆ ಅಧಿಕಾರ ಕೊಡುವುದು ಹೇಗೆ ಎನ್ನುವುದನ್ನು ಸಾಬೀತು ಮಾಡಿದರು. ಅವರ ಈ ಮಾದರಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಆಂಧ್ರ ಪ್ರದೇಶ ರಾಜ್ಯದ ಅಂದಿನ ಮುಖ್ಯಮಂತ್ರಿ ಎನ್. ಟಿ. ರಾಮರಾವ್ ಕರ್ನಾಟಕದ ಮಾದರಿಯನ್ನು ತಮ್ಮ ರಾಜ್ಯದಲ್ಲಿ ಅಳವಡಿಸಿಕೊಂಡರು. ಒಂದು ಭಾಗದಲ್ಲಿ ಭಾರತದ ಪಂಚಾಯತ್ ರಾಜ್ ವ್ಯವಸ್ಥೆ ಕುಂಟುತ್ತಿದ್ದರೆ ಪ. ಬಂಗಾಳ, ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಜನಾಧಿಕಾರದ ಪತಾಕೆಯನ್ನು ಎತ್ತಿ ಹಿಡಿದಿದ್ದವು.

ಸಂವಿಧಾನದ 73ನೇ ತಿದ್ದುಪಡಿ

ಮೇಲೆ ವಿವರಿಸಿದ ಮೂರು ರಾಜ್ಯಗಳ ಸಾಧನೆಯಿಂದ ಪ್ರೇರಿತರಾದ ಅಂದಿನ ಯುವ ಪ್ರಧಾನಿ ರಾಜೀವ್ ಗಾಂಧಿ ಅವರು ಡಾ. ಎಲ್. ಎನ್. ಸಿಂಘವಿ ಅವರ ಅಧ್ಯಕ್ಷತೆಯ ಸಮಿತಿಯನ್ನು ನೇಮಿಸಿದರು. ಈ ಸಮಿತಿಯ ವರದಿಯೇ ಮುಂದೆ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳಿಗೆ ಕಾರಣವಾಯಿತು. ರಾಜೀವ್ ಗಾಂಧಿ ಅವರು ಪ್ರಧಾನಿ ಆಗಿದ್ದಾಗಲೇ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ 64ಟಿಇ ತಿದ್ದುಪಡಿಯಾಗಿ ಚರ್ಚೆಗೆ ಬಂದಿತ್ತು. ಲೋಕಸಭೆಯಲ್ಲಿ ಅಂಗೀಕಾರ ಪಡೆದಿತ್ತು. ಆದರೆ ರಾಜ್ಯಸಭೆಯಲ್ಲಿ ಒಂದು ಮತದ ಕೊರತೆಯಿಂದ ಬಿದ್ದುಹೋಯಿತು. ಮುಂದೆ ಪಿ. ವಿ. ನರಸಿಂಹ ರಾವ್ ಅವರು ಪ್ರಧಾನಿ ಆದಾಗ ಬಹಳ ಮುತುವರ್ಜಿ ವಹಿಸಿ ಸಂವಿಧಾನದ 73 ಮತ್ತು 74ನೇ ತಿದ್ದುಪಡಿಗಳು ಎರಡೂ ಸದನಗಳಲ್ಲಿ

ಅಂಗೀಕಾರ ಆಗುವಂತೆ ನೋಡಿಕೊಂಡರು. ಈ ಮಸೂದೆಗಳಿಗೆ ವಿರುದ್ಧವಾಗಿದ್ದ ಡಿ ಎಂ ಕೆ ಸಂಸದರು ಮಸೂದೆಯನ್ನು ಮತಕ್ಕೆ ಹಾಕುವ ಸಮಯದಲ್ಲಿ ಸಭಾತ್ಯಾಗ ಮಾಡುವಂತೆ ಮನ ಒಲಿಸುವ ತಂತ್ರವನ್ನು

ಪಿ. ವಿ. ನರಸಿಂಹ ರಾವ್ ಯಶಸ್ವಿಯಾಗಿ ಬಳಸಿದ್ದರು..!!

ಕರ್ನಾಟಕ ರಾಜ್ಯದಲ್ಲಿ ಈಗಿನ ಸ್ಥಿತಿ

ಸಂವಿಧಾನದ 73ನೇ ತಿದ್ದುಪಡಿಯನ್ನು ಮೊತ್ತ ಮೊದಲಿಗೆ ಜಾರಿಗೆ ತಂದ ರಾಜ್ಯ ಕರ್ನಾಟಕ. ಆಗ ವೀರಪ್ಪ ಮೊಯ್ಲಿ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದರು. ಎಂ.ವೈ. ಘೋರ್ಪಡೆಯವರು ಪಂ. ರಾಜ್ ಸಚಿವರಾಗಿದ್ದರು. ಕೆ.ಪಿ.ಆರ್. ಕಾಯ್ದೆ 1993ನ್ನು ವಿಧಾನ ಮಂಡಲದ ಅಧಿವೇಶನದಲ್ಲಿ ಮಂಡಿಸಿ, ಅನುಮೋದನೆ ಪಡೆದು ಮೂರು

ಹಂತಗಳ ಪಂಚಾಯತ್ ರಾಜ್ ಸಂಸ್ಥೆಗಳಿಗೆ ಚುನಾವಣೆ ನಡೆಸುವ ಮೂಲಕ ದೇಶಕ್ಕೆ ಮಾದರಿಯಾದ ರಾಜ್ಯ ನಮ್ಮದು. ನಂತರದಲ್ಲೂ ಕಾಲ ಕಾಲಕ್ಕೆ ಅಗತ್ಯ ತಿದ್ದುಪಡಿಗಳನ್ನು ತಂದು ಕಾಯ್ದೆಗೆ ಶಕ್ತಿ ತುಂಬುವ ಕಾರ್ಯವೂ ನಡೆದಿದೆ.

ಆದರೆ ಇತ್ತೀಚಿನ 5-6 ವರ್ಷಗಳಲ್ಲಿ ರಾಜ್ಯದ ಪಂ. ರಾಜ್ ವ್ಯವಸ್ಥೆ ಜಾರುದಾರಿಯಲ್ಲಿದೆ.

♦ ಕಳೆದ 4ವರ್ಷಗಳಿಂದ ಜಿಲ್ಲಾ ಮತ್ತು ತಾಲೂಕು ಪಂಚಾಯತ್‌ಗಳಿಗೆ ಚುನಾವಣೆಯನ್ನು ಮುಂದೂಡಲಾಗಿದೆ.

♦ ಜಿಲ್ಲೆ ಮತ್ತು ತಾಲೂಕು ಮಟ್ಟದಲ್ಲಿ ಅಧಿಕಾರಶಾಹಿ ದರ್ಬಾರ್ ನಡೆದಿದೆ.

♦ ರಮೇಶ್ ಕುಮಾರ್ ಸಮಿತಿಯ ಶಿಫಾರಸುಗಳ ಆಧಾರದಲ್ಲಿ ಪಂಚಾಯತ್ ಸಬಲೀಕರಣದ ಉದ್ದೇಶದಿಂದ ತಂದಿದ್ದ ಕೆಲವು ಪ್ರಮುಖ ತಿದ್ದುಪಡಿಗಳನ್ನು ಬಸವರಾಜ ಬೊಮ್ಮಯಿ ಸರಕಾರ ಹಿಂಪಡೆದಿದೆ. ಈಗಿನ ಸರಕಾರ ಇವುಗಳನ್ನು ಮರು ಸ್ಥಾಪಿಸಲು ಆಸಕ್ತಿ ತೋರಿಸುತ್ತಿಲ್ಲ.

♦ 2015ರಲ್ಲಿ ಕಾಯ್ದೆಗೆ ತಂದಿದ್ದ ಕೆಲವು ತಿದ್ದುಪಡಿಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆಯನ್ನು ಸರಕಾರ ತೋರಿಸುತ್ತಿಲ್ಲ.

♦ ಅಧಿಕಾರ ವಿಕೇಂದ್ರೀಕರಣದ ಜೊತೆ ಜೊತೆಗೆ ಭ್ರಷ್ಟಾಚಾರದ ವಿಕೇಂದ್ರೀಕರಣ ನಡೆದಿದೆ.

♦ 2025-26ನೇ ಸಾಲಿನ ರಾಜ್ಯದ ಆಯವ್ಯಯದಲ್ಲಿ

ಪಂ. ರಾಜ್‌ಗೆ ಯಾವುದೇ ವಿಶೇಷ ಕಾರ್ಯಕ್ರಮಗಳು ಮತ್ತು ಹೆಚ್ಚು ಅನುದಾನ ಲಭ್ಯವಾಗಿಲ್ಲ.

ಇದು ರಾಜ್ಯದ ಪಂ. ರಾಜ್ ವ್ಯವಸ್ಥೆಗೆ ತುಂಬಾ ನಿರಾಸೆ ಹುಟ್ಟಿಸಿದೆ. ಹೀಗಾಗಿ ಈ ಬಾರಿ ‘ರಾಷ್ಟ್ರೀಯ ಪಂಚಾಯತ್ ರಾಜ್ ದಿನ’ವನ್ನು ತೀವ್ರ ವಿಷಾದದಿಂದ ಆಚರಿಸಬೇಕಿದೆ.

share
ವಿಲ್ಫ್ರೆಡ್ ಡಿಸೋಜಾ
ವಿಲ್ಫ್ರೆಡ್ ಡಿಸೋಜಾ
Next Story
X