ಆದ್ಯತಾ ಉಪಚಾರ ತತ್ವ: ಏನು, ಏಕೆ ಮತ್ತು ಎಷ್ಟು ಸಮಯ?
ಆದ್ಯತಾ ಉಪಚಾರ ತತ್ವ:
ವಿದ್ವಾಂಸರಾದ ಮಾರ್ಕ್ ಗ್ಯಾಲಂಟರ್ 1984ರಲ್ಲಿ ‘ಸ್ಪರ್ಧಾತ್ಮಕ ಸಮಾನತೆಗಳು- ಕಾನೂನು ಮತ್ತು ಭಾರತದಲ್ಲಿ ಹಿಂದುಳಿದವರು’ ಎಂಬ ಶೀರ್ಷಿಕೆಯ ಪುಸ್ತಕವನ್ನು ಭಾರತೀಯ ಸಂವಿಧಾನದ ಹಿತಾಸಕ್ತಿಗಳನ್ನು ಕಾಪಾಡುವ ನೀತಿಗಳೊಂದಿಗೆ ಮೂರು ದಶಕಕ್ಕೂ ಹೆಚ್ಚುಕಾಲ ಕಾರ್ಯ ನಿರ್ವಹಣೆಯ ಅನುಭವದ ನಂತರದಲ್ಲಿ ಪ್ರಕಟಿಸಿದರು. ನಾಗರಿಕರಲ್ಲಿ ಚಾರಿತ್ರಿಕವಾಗಿ ಹಿಂದುಳಿದ ವರ್ಗಗಳನ್ನು ಕಾಪಾಡುವ ಉದ್ದೇಶ ಬರಹಗಾರರದಾಗಿತ್ತು.
ಆದರೆ, ಭಾರತದಲ್ಲಿ ವಂಚಿತ ಮತ್ತು ಸಾಮಾಜಿಕವಾಗಿ ಕಿರುಕುಳಕ್ಕೊಳಗಾದ ವ್ಯಕ್ತಿಗಳಿಗೆ ಪ್ರಯೋಜನವನ್ನು ಒದಗಿಸುವ ಎಲ್ಲಾ ಮಾರ್ಗಗಳನ್ನು ಒಳಗೊಳ್ಳಲು ‘ಪರಿಹಾರದ ತಾರತಮ್ಯ’ದ ಅಪೂರ್ಣತೆಯ ವಿಚಾರದಲ್ಲಿ ಮಾರ್ಕ್ ಗ್ಯಾಲಂಟರ್ ಎಚ್ಚರಿಕೆ ವಹಿಸಿದ್ದಾರೆ. ಅದಕ್ಕಾಗಿ ಗ್ಯಾಲಂಟರ್ ಕೆಲವು ವಾಕ್ ಸರಣಿಗಳನ್ನು ಸಮಾನಾರ್ಥಕವಾಗಿ ಮತ್ತು ಸಂಕ್ಷಿಪ್ತ ರೂಪಗಳಾಗಿ ಬಳಸಿದ್ದಾರೆ, ಉದಾಹರಣೆಗೆ ‘ಆದ್ಯತೆ ನೀತಿ’ ಅಥವಾ ‘ಆದ್ಯತೆ’ ಸರಿದೂಗಿಸುವ ತಾರತಮ್ಯ ಪದವು ಸೂಕ್ತ ಮತ್ತು ಅಪೂರ್ಣವಾಗಿದೆಯಾದರೂ, ಇದು ಮೌಲ್ಯಯುತವಾದ ಅರ್ಥವನ್ನು ಹೊಂದಿದೆ.
ಅಮೆರಿಕದಲ್ಲಿ ನೀಗ್ರೋಗಳಿಗೆ ಮತ್ತು ಭಾರತದಲ್ಲಿ ದಲಿತರಿಗೆ ಆಗಿರುವ ಐತಿಹಾಸಿಕ ಅನ್ಯಾಯವನ್ನು ತೊಡೆದುಹಾಕಲು ವಿಶೇಷ ಸರಕಾರಿ ಕ್ರಮಗಳನ್ನು ವಿವರಿಸಲು ಅನೇಕ ಪದಗಳನ್ನು ಬಳಸಲಾಗಿದೆ.
ಮೂಲ ಭಾರತೀಯ ಸಂವಿಧಾನದ ಕೊಡುಗೆ ಆದ್ಯತಾ ಉಪಚಾರ ತತ್ವದ ವಿಧಿಗಳಾದ 15(4),46,330-343, ಪ್ರಸ್ತುತ 243 ಡಿ ಮತ್ತು 243 ಟಿ ಮತ್ತು ಐದನೇ ಹಾಗೂ ಆರನೇ ಅನುಸೂಚಿಗಳ ಮೂಲಕ ಇತರ ಪರ್ಯಾಯಗಳಿಗೆ ಆದ್ಯತೆಯ ಪದ ರಚನೆಯಾಗಿದೆ. ಇದು ಸಮಗ್ರ ಮತ್ತು ವ್ಯಾಪಕ ಅರ್ಥದ ಪದರಚನೆಯನ್ನು ಅಳವಡಿಸಿಕೊಳ್ಳುತ್ತದೆ. ಮೊದಲನೆಯದಾಗಿ, ಇದು ಮೀಸಲಾತಿ ಮತ್ತು ಭಾರತೀಯ ಸಮಾಜದ ವಂಚಿತವರ್ಗಗಳ ಸ್ಪರ್ಧಾತ್ಮಕ ಸಾಮರ್ಥ್ಯವನ್ನು ಸುಧಾರಿಸಲು ಸಾಧ್ಯವಿರುವ ಎಲ್ಲಾ ಸಕಾರಾತ್ಮಕ ಪ್ರಯತ್ನಗಳು/ಹೆಜ್ಜೆಗಳನ್ನು ಒಳಗೊಂಡಿದೆ. ಜೊತೆಗೆ ಸಾಮಾಜಿಕವಾಗಿ ವಿಕಲಚೇತನರು ಗಳಿಸಿರುವ ಕಡಿಮೆ ಅಂಕಗಳನ್ನು ತಟಸ್ಥಗೊಳಿಸುವ ದೃಷ್ಟಿಯಿಂದ ಕೆಲವು ಪ್ರಾಮುಖ್ಯತೆಯನ್ನು ನೀಡುವ ಕ್ರಮಗಳು ಮತ್ತು ಎರಡನೆಯದಾಗಿ ಹಿಂದುಳಿದ ವರ್ಗಗಳಿಗೆ ವ್ಯಾಪಕ ಶ್ರೇಣಿಯ ಜೊತೆಗೆ ರಾಜ್ಯಗಳ ಸಹಾಯದಿಂದ ಪದರಚನೆಯ ದೃಷ್ಟಿಯಿಂದ ಆದ್ಯತಾ ಉಪಚಾರ ತತ್ವ ತಟಸ್ಥ ಪದವಾಗಿದೆ.
ಏಕೆ?
ಅಮೆರಿಕದಲ್ಲಿ ಜಿಮ್ ಕೌ, ಕ್ಲು, ಕ್ಲೌಕ್ಲಾನ್ ಮತ್ತು ಶಾಸಕಾಂಗ ಹಾಗೂ ನ್ಯಾಯಾಂಗಗಳ ಘೋಷಣೆಗಳು ನೀಗ್ರೋಗಳ ಸ್ಥಾನಮಾನಗಳನ್ನು ವ್ಯಾಪಾರದ ವಸ್ತುಗಳಂತೆ ಕೆಳ ದರ್ಜೆಗೆ ತಳ್ಳಿದ್ದವು. ದಾಸ್ಯದಿಂದ ವಿಮೋಚನೆಗೊಂಡಿದ್ದರೂ, ಅವರು ಉಳಿವಿಗಾಗಿ ಮಾತ್ರ ಮಾನವ ಘನತೆಯಿಂದ ಬದುಕುವ ಹಕ್ಕಿಗಾಗಿ ಇನ್ನೂ ಹೋರಾಡುತ್ತಲೇ ಇದ್ದಾರೆ. ಅವರು ನ್ಯಾಯ, ಸಮಾನತೆ, ಭ್ರಾತೃತ್ವ ಮತ್ತು ಉತ್ತಮ ಜೀವನಕ್ಕಾಗಿ ಒದ್ದಾಡುತ್ತಿದ್ದಾರೆ. ಭಾರತದಲ್ಲೂ ದಲಿತರು ಕೂಡ ಜೀವನಾಧಾರಕ್ಕಾಗಿ ಪರಿತಪಿಸುತ್ತಿದ್ದಾರೆ.
ಪರಿಹಾರದ ತಾರತಮ್ಯವು ಸಮಾನತೆಯ ನ್ಯಾಯಕ್ಕೆ ಕೇವಲ ಔಪಚಾರಿಕ ಅರ್ಥವನ್ನು ನೀಡುತ್ತದೆ, ಆದರೆ ಇದಕ್ಕಾಗಿ ಸಮಾನರಲ್ಲಿ ಕಾನೂನು ಸಮಾನವಾಗಿರಬೇಕು ಮತ್ತು ಸಮಾನವಾದ ಆಡಳಿತ ಇರಬೇಕು. ಅದನ್ನು ತುಂಬಾ ತೀವ್ರತೆಗೆ ಒಳಪಡಿಸಿದರೆ, ಅಸಮಾನರನ್ನು ಸಮಾನವಾಗಿ ಪರಿಗಣಿಸಿದರೆ ನ್ಯಾಯವು ಸಿಗಬಹುದು. ಅಸಮಾನತೆ ಹೋಗಲಾಡಿಸಿ ಸಮಾನತೆ ತರಲು ಸಕಾರಾತ್ಮಕ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಅಗತ್ಯ ಎಂದು ನ್ಯಾ. ಪಿ.ಬಿ.ಸಾವಂತ್ ಮಂಡಲ್ ಪ್ರಕರಣದಲ್ಲಿ ಸ್ಪಷ್ಟ ಪಡಿಸಿದ್ದಾರೆ. ಪರಿಹಾರದ ತಾರತಮ್ಯ ಕ್ರಮಗಳನ್ನು ಮೀಸಲಾತಿಯ ರೂಪದಲ್ಲಿ ತೆಗೆದುಕೊಳ್ಳಬಹುದು ಮತ್ತು ಮೀಸಲಾತಿಯನ್ನು ಹೊರತುಪಡಿಸಿ ಇತರ ಕ್ರಮಗಳನ್ನೂ ತೆಗೆದು ಕೊಳ್ಳಬಹುದಾಗಿದೆ. ‘‘ಐತಿಹಾಸಿಕ ತಾರತಮ್ಯ ಮತ್ತು ಅದರ ನಿರಂತರ ದುಷ್ಪರಿಣಾಮಕ್ಕೆ ಮೀಸಲಾತಿಯು ಪರಿಹಾರ ವಾಗಿದ್ದರೂ, ಇತರ ದೃಢೀಕರಣ ಕಾರ್ಯಕ್ರಮಗಳು ಪ್ರಚಲಿತದಲ್ಲಾಗಲಿ ಅಥವಾ ಐತಿಹಾಸಿಕವಾಗಿಯೇ ಆಗಲಿ ಎಲ್ಲಾ ರೀತಿಯ ತಾರತಮ್ಯವನ್ನು ನಿವಾರಿಸಲು ಉದ್ದೇಶಿಸಲಾಗಿದೆ’’ ಎಂದು ನ್ಯಾ. ತೊಮ್ಮನ್ ಅದೇ ಪ್ರಕರಣದಲ್ಲಿ ಸ್ಪಷ್ಟಪಡಿಸಿದ್ದಾರೆ. ನ್ಯಾ.ಪಾಂಡಿಯನ್ ಅವರು ಆ ಪ್ರಕರಣದಲ್ಲಿಯೇ ‘‘ಅಂತರ್ಗತವಾಗಿ ಅಸಮಾನವಾಗಿರುವ ಮತ್ತು ಸಾಮಾಜಿಕ ತಾರತಮ್ಯಕ್ಕೆ ಬಲಿಯಾದ ಕೆಲವು ಸಾಮಾಜಿಕ ಸಮುದಾಯಗಳಿಗೆ ಪರಿಹಾರೋಪಚಾರ ಅಗತ್ಯವಿದೆ’’ ಎಂದು ಇಂಗಿತ ವ್ಯಕ್ತಪಡಿಸಿದ್ದಾರೆ.
ಪರಿಹಾರದ ತಾರತಮ್ಯವು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳೂ ಸೇರಿದಂತೆ ಎಲ್ಲರಿಗೂ ನ್ಯಾಯವನ್ನು ಖಚಿತಪಡಿಸುವುದು ರಾಷ್ಟ್ರೀಯ ಬದ್ಧತೆಯ ಒಂದು ಭಾಗವಾಗಿದೆ. ಅನುಚ್ಛೇದ 46 ಹೀಗಿದೆ: ‘‘ರಾಜ್ಯವು ದುರ್ಬಲ ವರ್ಗಗಳ, ವಿಶೇಷವಾಗಿ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ ಜನತೆಯ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ವಿಶೇಷ ಜಾಗರೂಕತೆಯಿಂದ ಸಂವರ್ಧಿಸತಕ್ಕದ್ದು ಮತ್ತು ಅವರನ್ನು ಸಾಮಾಜಿಕ ಅನ್ಯಾಯದಿಂದ ಮತ್ತು ಎಲ್ಲಾ ರೀತಿಯ ಶೋಷಣೆಯಿಂದ ಸಂರಕ್ಷಿಸತಕ್ಕದ್ದು.’’ ಬಾಲಾಜಿ v/s ಮೈಸೂರು ರಾಜ್ಯ ಪ್ರಕರಣದಲ್ಲಿ ನ್ಯಾಯಮೂರ್ತಿ ಗಜೇಂದ್ರ ಗಡಕರ್ ಅವರು ಈ ಅನುಚ್ಛೇದಕ್ಕೆ ಯುಕ್ತ ನಂಬಿಕೆ ಇಟ್ಟು, ಅನುಚ್ಛೇದ 46ರ ಪ್ರಯೋಜನಗಳನ್ನು ಪಡೆಯುವವರು ಮತ್ತು ಸಮಾಜದ ಉಳಿದವರ ನಡುವೆ ಹಿತಾಸಕ್ತಿಗಳ ಸಮತೋಲನದ ಅಗತ್ಯವನ್ನು ಒತ್ತಿ ಹೇಳಿದರು. ಕೇಶವಾನಂದ ಭಾರತಿ v/s ಕೇರಳ ರಾಜ್ಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಅನುಚ್ಛೇದ 46ರ ಸಂಬಂಧವಾಗಿ ಅನುಚ್ಛೇದ 15 ಮತ್ತು 16ರ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಕ್ಕುಗಳ ಉದಾರ ಅನುಷ್ಠಾನವನ್ನು ಪರಿಗಣಿಸಿದೆ. ಪ್ರತಿಕೂಲ ಪರಿಸ್ಥಿತಿಯಲ್ಲಿರುವ ಜನರ ಬಗ್ಗೆ ರಾಜ್ಯ ಬದ್ಧತೆಯಲ್ಲಿ ವಿಫಲತೆ ತೋರಿಸುವುದನ್ನು ಕಂಡುಕೊಳ್ಳುವ ದಿಸೆಯಲ್ಲಿ ಅನುಚ್ಛೇದ 38ಕ್ಕೆ ಉಪವಾಕ್ಯ (2) ಅನ್ನು ಸೇರಿಸಲಾಯಿತು. ಸಂವಿಧಾನದ 44ನೇ ತಿದ್ದುಪಡಿ ಕಾಯ್ದೆ, 1978ರಲ್ಲಿ ಈ ರೀತಿ ಇದೆ: ‘‘ರಾಜ್ಯವು ವಿಶೇಷವಾಗಿ ಆದಾಯದಲ್ಲಿನ ಅಸಮಾನತೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸತಕ್ಕದ್ದು ಮತ್ತು ವ್ಯಕ್ತಿ ವ್ಯಕ್ತಿಗಳಲ್ಲಿ ಮಾತ್ರವಲ್ಲದೆ ಬೇರೆ ಬೇರೆ ಪ್ರದೇಶಗಳಲ್ಲಿ ವಾಸಿಸುವ ಬೇರೆ ಬೇರೆ ವೃತ್ತಿಗಳಲ್ಲಿ ತೊಡಗಿರುವ ಜನರ ಗುಂಪುಗಳಲ್ಲಿ ಸ್ಥಾನಮಾನ, ಸೌಲಭ್ಯಗಳು ಮತ್ತು ಅವಕಾಶಗಳಲ್ಲಿರುವ ಅಸಮಾನತೆಗಳನ್ನು ತೆಗೆದುಹಾಕಲು ಪ್ರಯತ್ನಿಸತಕ್ಕದ್ದು.’’
ಭಾರತದ ವಿಶಿಷ್ಟ ಸಂದರ್ಭಗಳಲ್ಲಿ ಅರ್ಹತೆಯು ತಪ್ಪು ತಿಳುವಳಿಕೆಗೆ ಹೆಸರಾಗಿದೆ ಮತ್ತು ಸಾಮಾಜಿಕ ಮೀಸಲಾತಿಯನ್ನು 1.ಪರಿಶಿಷ್ಟ ಜಾತಿಗಳು/ಪರಿಶಿಷ್ಟ ಪಂಗಡಗಳು, 2.ಇತರ ಹಿಂದುಳಿದ ವರ್ಗಗಳು ಮತ್ತು 3. ಸಾಮಾನ್ಯ ವರ್ಗಗಳೆಂದು ಪರಿವರ್ತಿಸಲಾಗಿದ್ದು, ಮೇಲ್ಜಾತಿಗೆ ಮಾತ್ರ ಸಾಮಾನ್ಯ ವರ್ಗದಲ್ಲಿ ಕಡಿಮೆ ಅರ್ಹತೆ ಉಳ್ಳವರನ್ನು ನೇಮಿಸುವುದು ಮತ್ತು ಪ್ರತಿಭಾವಂತ ಮತ್ತು ಹೆಚ್ಚು ಪ್ರತಿಭಾವಂತರನ್ನು ಮೀಸಲು ವರ್ಗದ ರಕ್ಷಣಾತ್ಮಕ/ ಪರಿಹಾರದ ತಾರತಮ್ಯಕ್ಕೆ ತಳ್ಳಿಬಿಡುವ ಸಂಭವವಿದೆ. ಮೀಸಲಾತಿಯು ಅರ್ಹತೆಯ ರಕ್ಷಣೆಗೆ ವಿಶೇಷ ಸಮರ್ಥನೆಯನ್ನು ಹೊಂದಿದೆ, ಇಲ್ಲದಿದ್ದರೆ ಎಲ್ಲಾ ಹುದ್ದೆಗಳು ಹೇಳಲಾಗದ ಗುಪ್ತ ಮೀಸಲಾತಿಯ ಮೂಲಕ ಸಾಧಾರಣ ಮೇಲ್ಜಾತಿಯವರಿಂದ ತುಂಬಿಹೋಗುತ್ತವೆ.
ಎಷ್ಟು ಸಮಯ?
ಅನುಚ್ಛೇದ 334(2)ರಲ್ಲಿ ಹತ್ತು ವರ್ಷಗಳ ಮಿತಿಯ ಭವಿಷ್ಯ ಸ್ಪಷ್ಟ ಉದಾರಣೆಯಾಗಿದೆ. ತಮ್ಮ ಭಿನ್ನ ಅಭಿಪ್ರಾಯದಲ್ಲಿ ನ್ಯಾ. ದಲ್ವೀರ್ ಭಂಡಾರಿ ಅವರು ಅಶೋಕ್ ಕುಮಾರ್ ಠಾಕೂರ್ v/s ಭಾರತ ಒಕ್ಕೂಟ ಪ್ರಕರಣದಲ್ಲಿ ಕಾಲಮಿತಿಯನ್ನು ನಿಗದಿಪಡಿಸುವುದು ವರ್ಗ ರಹಿತ/ ಜಾತಿ ರಹಿತ ಸಮಾಜವನ್ನು ಸಾಧಿಸುವುದು ನಮ್ಮ ಸಾಂವಿಧಾನಿಕ ಗುರಿಯಾಗಿದೆ. ಆದರೆ ಹಾಗೆ ಮಾಡಲು ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು. ಅವರ ಮಾತಿನಲ್ಲೇ ಹೇಳುವುದಾದರೆ ‘‘ನಾನು ಸಹಾನಿ(1) ಮೊಕದ್ದಮೆಗೆ(1992, supp.(3) SCC 217.) ಬದ್ಧನಾಗಿದ್ದೇನೆ ಮತ್ತು ವಿಸ್ತೃತ ಪೀಠವು ಮಾತ್ರ ಅಂತಹ ತೀರ್ಪು ನೀಡಬಲ್ಲದು ಎಂದು ನಂಬುತ್ತೇನೆ’’.
ಮುಖ್ಯ ನ್ಯಾಯಮೂರ್ತಿ (ಮಾಜಿ) ಚಂದ್ರಚೂಡ್ ಅವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ 15 ವರ್ಷಗಳ ರಿಯಾಯಿತಿಯನ್ನು ಕೊಟ್ಟರು ಮತ್ತು ಅವರಿಗೆ ಮೀಸಲಾತಿಯನ್ನು ಯಾವುದೇ ಪರೀಕ್ಷೆ ಇಲ್ಲದೆ 2000ದ ವರೆಗೆ ಮುಂದುವರಿಸಬೇಕು ಎಂದು ಸೂಚಿಸಿದರು. ಅವರ ಅಭಿಪ್ರಾಯದಲ್ಲಿ ಸಂವಿಧಾನದ ಪ್ರಾರಂಭದಿಂದ 50 ವರ್ಷಗಳ ಅವಧಿಯು ಸಾಮಾಜಿಕ ದಬ್ಬಾಳಿಕೆ ಪ್ರತ್ಯೇಕತೆ ಮತ್ತು ಅವಮಾನಗಳ ಹಾನಿಕಾರಕ ಪರಿಣಾಮಗಳನ್ನು ನಿವಾರಿಸಲು ತುಳಿತಕ್ಕೊಳಗಾದ ವರ್ಗಗಳ ಮೇಲ್ಪದರಕ್ಕೆ ಸಮಂಜಸವಾಗಿ ದೀರ್ಘಾವಧಿಯ ಅವಧಿಯಾಗಿದೆ. ಅದರ ನಂತರ ಆರ್ಥಿಕ ಪರೀಕ್ಷೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೂ ಅನ್ವಯಿಸುವಂತೆ ಮಾಡಬೇಕಿತ್ತು. ಉದ್ಯೋಗ, ಶಿಕ್ಷಣ ಮತ್ತು ಶಾಸಕಾಂಗ ಸಂಸ್ಥೆಗಳಲ್ಲಿ ಮೀಸಲಾತಿ ನೀತಿಯನ್ನು ಐದು ವರ್ಷಗಳ ಕಾಲ ಪರಿಶೀಲಿಸುವಂತೆ ಅವರು ಸಲಹೆ ನೀಡಿದರು.
ಮಂಡಲ್ ಪ್ರಕರಣದ ತೀರ್ಪಿಗೆ ಒಪ್ಪಿಗೆ ನೀಡುವಲ್ಲಿ ನ್ಯಾ.ರತ್ನವೇಲು ಪಾಂಡಿಯನ್ ಅವರ ಎಚ್ಚರಿಕೆಯು ಬಹಳ ಪ್ರಸ್ತುತವಾದ ಜ್ಞಾಪನವಾಗಿದೆ:
‘‘ಸಂವಿಧಾನವನ್ನು ಆಕ್ರಮಣಕ್ಕೆ ಕತ್ತಿಯಾಗಿ ಅಥವಾ ನಿರೀಕ್ಷಿತ ರಕ್ಷಣೆಗೆ ಗುರಾಣಿಯಾಗಿ ಬಳಸಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ, ಹಾಗೆ ಆದರೆ ಸಂವಿಧಾನವನ್ನು ಅರ್ಥೈಸುವ ನೆಪದಲ್ಲಿ ಯಾವುದೇ ವರ್ಗದ ಜನರಿಗೆ ಸರಿಪಡಿಸಲಾಗದ ಅನ್ಯಾಯ ಮತ್ತು ಪರಿಹಾರ ಕಾಣದ ಅಸಮಾನತೆಗಳನ್ನು ಉಂಟುಮಾಡಬಹುದು ಅಥವಾ ಸಂವಿಧಾನಾತ್ಮಕ ಪ್ರಯೋಜನಗಳ ಮೇಲೆ ಪ್ರಶ್ನಾತೀತ ರಾಜವಂಶದ ಏಕ ಸ್ವಾಮ್ಯವನ್ನು ಅನೈತಿಕವಾಗಿ ಪ್ರತಿಪಾದಿಸುವವರನ್ನು ರಕ್ಷಿಸಬಹುದು.’’
ಸಂವಿಧಾನದ ನಿರ್ಮಾಪಕರಲ್ಲಿ ಕೆಲವರು ಜಾತಿ ಆಧಾರಿತ ಮೀಸಲಾತಿಯನ್ನು ಅಗತ್ಯ ಕೆಡುಕೆಂದು ಪರಿಗಣಿಸಿದ್ದಾರೆ. ಹೀಗಾಗಿ ಅವರು ಅದನ್ನು ಸಮಯಕ್ಕೆ ಸೀಮಿತಗೊಳಿಸಿದರು. ಈ ಕಾಲಮಿತಿಯನ್ನು ವಿಸ್ತರಿಸುವುದು ಜಾತೀಯತೆಯನ್ನು ಉಲ್ಬಣಗೊಳಿಸಲಿದೆ. ಈ ತೀರ್ಮಾನವು ಜಾತಿ ರಹಿತ ಮತ್ತು ವರ್ಗ ರಹಿತ ಸಮಾಜವನ್ನು ಸ್ಥಾಪಿಸುವ ಉದ್ದೇಶವನ್ನು ರೂಪಿಸಿದ ಪ್ರಮುಖ ಪ್ರಮೇಯವನ್ನು ಆಧರಿಸಿದೆ ಮತ್ತು ನಂತರ ಮೀಸಲಾತಿಯನ್ನು ಶಾಶ್ವತಗೊಳಿಸುವುದಲ್ಲದೆ ಜಾತೀಯತೆಯನ್ನು ಪ್ರೋತ್ಸಾಹಿಸುತ್ತದೆ ಮತ್ತು ಜಾತಿ ರಹಿತ ಮತ್ತು ವರ್ಗ ರಹಿತ ಭಾರತೀಯ ಸಮಾಜದ ಧ್ಯೇಯ ಸಾಧನವನ್ನು ವಿಳಂಬ ಗೊಳಿಸುತ್ತದೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಆದರೆ ವಾಸ್ತವವೇ ಬೇರೆ ಆಗಿದೆ. ಪ್ರಾತಿನಿಧಿಕ ಸಂಸ್ಥೆಗಳಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ ಪ್ರಾತಿನಿಧ್ಯವನ್ನು ಮಾತ್ರ 10 ವರ್ಷಗಳ ಅವಧಿಗೆ ಮೊದಲು 334ನೇ ವಿಧಿ (ಪ್ರತೀ 10 ವರ್ಷಗಳಿಗೊಮ್ಮೆ ವಿಸ್ತರಿಸಲಾಗುತ್ತಿದೆ)10 ವರ್ಷಗಳ ಅವಧಿಗೆ ಗುರಿ ಪಡಿಸಲಾಗಿದೆ. ವಿಧಿ 16(4) ನಿರ್ದಿಷ್ಟವಾಗಿ ಇತರ ಹಿಂದುಳಿದ ವರ್ಗಗಳ ನಾಗರಿಕರು(ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ) ರಾಜ್ಯದ ಅಧೀನದಲ್ಲಿರುವ ಸೇವೆಗಳಲ್ಲಿ ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿಲ್ಲವೆಂದು ರಾಜ್ಯ ಅಭಿಪ್ರಾಯ ಪಟ್ಟಲ್ಲಿ ಮಾತ್ರ ಅಂಥವರಿಗಾಗಿ ನೇಮಕಗಳನ್ನು ಅಥವಾ ಹುದ್ದೆಗಳನ್ನು ಮೀಸಲಿಡುವುದಕ್ಕೆ ಸಾಧ್ಯವಿದೆ. ನಾಗರಿಕರಲ್ಲಿ ಯಾವುದೇ ವರ್ಗವು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದಿದ್ದರೂ, ಸಾಕಷ್ಟು ಪ್ರಾತಿನಿಧ್ಯವನ್ನು ಹೊಂದಿವೆ ಎಂದು ಕಂಡುಬಂದಲ್ಲಿ ಅಂತಹ ವರ್ಗಗಳು ಮೀಸಲಾತಿ ಪಡೆಯಲು ಸಾಧ್ಯವಿಲ್ಲ ಎಂಬ ಅರ್ಥ ವಿವರಣೆಯನ್ನು ಈ ವಿಧಿ 16(4) ನೀಡುವುದು. ಮಂಡಲ್ ಪ್ರಕರಣದಲ್ಲಿ ಈ ಕಾರಣಕ್ಕಾಗಿ ಸರ್ವೋಚ್ಚ ನ್ಯಾಯಾಲಯ ವಿಶೇಷವಾಗಿ ಕೇಂದ್ರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳು ಹಿಂದುಳಿದ ವರ್ಗಗಳ ಶಾಶ್ವತ ಆಯೋಗಗಳನ್ನು ರಚಿಸಬೇಕೆಂದು ನಿರ್ದೇಶನ ನೀಡಿದೆ. ಅಂತೆಯೇ ಎಲ್ಲಾ ಕಡೆಯೂ, ಕಾಯ್ದೆ ರಚಿಸುವುದರ ಮೂಲಕ ಶಾಶ್ವತ ಆಯೋಗಗಳು ರಚನೆಯಾದವು. ಕಾಯ್ದೆಯ ಸೆಕ್ಷನ್ 11 ರ ಪ್ರಕಾರ ಪ್ರತೀ 10 ವರ್ಷಗಳಿಗೊಮ್ಮೆ ಹಿಂದುಳಿದ ವರ್ಗಗಳ ಪಟ್ಟಿಯನ್ನು ಪರಿಷ್ಕರಿಸಬೇಕು. ಆನಂತರ ಸಾಕಷ್ಟು ಪ್ರಾತಿನಿಧ್ಯ ಪಡೆದ ವರ್ಗಗಳನ್ನು ಪಟ್ಟಿಯಿಂದ ಹೊರಗಿಡಬೇಕು; ಹಾಗೆಯೇ ಹೊಸದಾಗಿ ಯಾವುದಾದರೂ ಜಾತಿಯೊಂದು ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದಿದ್ದು ಸಾಕಷ್ಟು ಪ್ರಾತಿನಿಧ್ಯ ಇಲ್ಲ ಎಂದು ಆಯೋಗಕ್ಕೆ ಕಂಡು ಬಂದಲ್ಲಿ ಅಂಥದ್ದನ್ನು ಪಟ್ಟಿಗೆ ಸೇರಿಸಲು ಸರಕಾರಕ್ಕೆ ಸಲಹೆ ನೀಡಬೇಕು.
ಈ ಪ್ರಕ್ರಿಯೆಯನ್ನು ಪ್ರತೀ ನಿಶ್ಚಯಪಡಿಸಿದ ಅವಧಿಗೊಮ್ಮೆ ಮಾಡಲೇಬೇಕು. ಸದ್ಯ ಕರ್ನಾಟಕದ ಮೀಸಲಾತಿ ಪಟ್ಟಿಯ ಪ್ರವರ್ಗ-1 ಮತ್ತು ಪ್ರವರ್ಗ -2 ಎ ಯಲ್ಲಿ 197 ಮುಖ್ಯ ಜಾತಿಗಳಿವೆ. ಅವುಗಳಲ್ಲಿ ಸರಕಾರದ ನೇಮಕ ಮತ್ತು ಹುದ್ದೆಗಳಿಗೆ ಪ್ರಾತಿನಿಧ್ಯ ಸಿಕ್ಕಿರುವುದು 25ರಿಂದ 30 ಜಾತಿಗಳಿಗಷ್ಟೇ. ಪ್ರಾತಿನಿಧ್ಯ ಸಿಗದ ಜಾತಿಗಳಿಗೆ ಅವಕಾಶ ಕಲ್ಪಿಸಬೇಕಾದರೆ ನಿಯಮಿತವಾಗಿ ಪರಿಷ್ಕರಣೆ ಮಾಡಲೇಬೇಕು. ಈ ಕಾನೂನಿನ ಕರ್ಮಾಚರಣೆ ಆಗದ ಹೊರತು(ಇತರ) ಹಿಂದುಳಿದ ವರ್ಗಗಳ ಮೀಸಲಾತಿಗೆ ಕೊನೆ ಇಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸರಕಾರದ ನೇಮಕ ಮತ್ತು ಹುದ್ದೆಗಳಿಗೆ ಈ ಕಟ್ಟಳೆ ಅನ್ವಯಿಸುವುದಿಲ್ಲ. ಆದರೂ ಸರ್ವೋಚ್ಚ ನ್ಯಾಯಾಲಯ ಚೆಬ್ರೋಲು ಲೀಲಾ ಪ್ರಸಾದ್ ರಾವ್ v/s ಆಂಧ್ರ ಪ್ರದೇಶ (ಎಪ್ರಿಲ್ 22,2020) ಪ್ರಕರಣದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದಂತೆ ಮೀಸಲಾತಿ ಪಟ್ಟಿಗಳ ಪರಿಷ್ಕರಣೆಯ ಅಗತ್ಯವನ್ನು ಒತ್ತಿ ಹೇಳಿದೆ.