ʼಪ್ರಧಾನಮಂತ್ರಿ ಜನ್ ಧನ್ ಯೋಜನೆʼಗೆ ಹತ್ತನೇ ವಾರ್ಷಿಕೋತ್ಸವ ಸಂಭ್ರಮಾಚರಣೆ
PC : wikipedi
ನಾವು ಕೆಲವು ವಿಷಯಗಳಿಗಾಗಿ ಹಾತೊರೆಯುವಾಗ ಹಾಗೂ ಅವುಗಳನ್ನು ಭದ್ರಪಡಿಸಿಕೊಳ್ಳಲು ಶ್ರಮಿಸಿದಾಗ ನಾವು ಸ್ವಲ್ಪ ಮಟ್ಟಿಗೆ ಸಂತಸಪಡುತ್ತೇವೆ. ಅದು ಅಧಿಕಾರ, ಸ್ಥಾನ, ಪ್ರಭಾವ ಅಥವಾ ಭೌತಿಕ ಸಂಪತ್ತಾಗಿರಬಹುದು. ನಮ್ಮ ಯಶಸ್ಸಿನ ತರುವಾಯ ಮಾನಸಿಕ ಮರು ಹೊಂದಾಣಿಕೆ ಅಗತ್ಯ. ಏನು ಸಾಧಿಸಲಾಗಿದೆಯೋ ಅದು ಮಾನದಂಡವಾಗಲಿದೆ. ಹೆಚ್ಚಿನ ಮನುಷ್ಯರಲ್ಲಿ ಇದು ವಾಸ್ತವ. ತೆಗೆದುಕೊಳ್ಳಬೇಕಾದ ಕೆಲವು ನೀತಿಗಳು ಮತ್ತು ಕ್ರಮಗಳ ವಿಚಾರದಲ್ಲಿ ನಾವು ಗಲಾಟೆ ಮಾಡುತ್ತೇವೆ. ಸಾಧನೆಗೆ ಅಸಮರ್ಪಕ ಮನ್ನಣೆ ಇದೆ ಮತ್ತು ಪ್ರತಿರೂಪದ ಚಿಂತನೆ – ಕೀಳು ಮನಸ್ಥಿತಿಯ ನಿರಂತರತೆಯೂ ಇರುತ್ತದೆ. ತನ್ನ ಹತ್ತನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಪ್ರಧಾನಮಂತ್ರಿ ಜನ್ ಧನ್ ಯೋಜನೆ [ಪಿಎಂಜೆಡಿವೈ] ಅಂತಹ ಒಂದು ಪ್ರಕರಣವಾಗಿದೆ.
ಕೋಟ್ಯಂತರ ಭಾರತೀಯರನ್ನು ಆರ್ಥಿಕ ವಲಯದಿಂದ ಹೊರಗಿಟ್ಟ ಬಗ್ಗೆ ನಾವು ದೀರ್ಘಕಾಲ ವಿಷಾದಿಸುತ್ತಿದ್ದೇವು. ಆದರೆ 2014 ರಲ್ಲಿ ಎನ್.ಡಿ.ಎ ಸರ್ಕಾರ ಕೋಟ್ಯಂತರ ಭಾರತೀಯರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಗೆ ಒಳಪಡಿಸುವ ನಿಟ್ಟಿನಲ್ಲಿ ಮಹತ್ವಾಕಾಂಕ್ಷೆಯ ಮತ್ತು ಸವಾಲಿನ ಕಾರ್ಯ ಕೈಗೆತ್ತಿಕೊಂಡಿತು. ಇದು ಅದ್ಭುತ ಯಶಸ್ಸಾಗಿ ಹೊರ ಹೊಮ್ಮಿತು. ಈ ಯೋಜನೆಯಲ್ಲಿ 2024 ರ ಆಗಸ್ಟ್ 14 ರ ವೇಳೆಗೆ 53.13 ಕೋಟಿ ಫಲಾನುಭವಿಗಳಿದ್ದು, 2.31 ಲಕ್ಷ ಕೋಟಿ ರೂಪಾಯಿ ಠೇವಣಿ ಹೊಂದಿದೆ. ಈ ಪೈಕಿ ಸುಮಾರು 30 ಕೋಟಿ ಫಲಾನುಭವಿಗಳು ಮಹಿಳೆಯರು ಎನ್ನುವುದು ವಿಶೇಷ.
“ದಿ ಡಿಸೈನ್ ಆಫ್ ಡಿಜಿಟಲ್ ಫೈನಾನ್ಷಿಯಲ್ ಇನ್ಪ್ರಾಸ್ಟಕ್ಚರ್: ಲೆಸನ್ಸ್ ಫ್ರಂ ಇಂಡಿಯಾ” [ಬಿಐಎಸ್ ಪೇಪರ್ ಸಂಖ್ಯೆ. 106, ಡಿಸೆಂಬರ್ 2019], ಬ್ಯಾಂಕ್ ಫಾರ್ ಇಂಟರ್ ನ್ಯಾಷನಲ್ ಸೆಟಲ್ಮೆಂಟ್ಸ್’ ಹೀಗೆ ಹೇಳುತ್ತದೆ "2008 ರಲ್ಲಿ ಹಣಕಾಸಿನ ಸೇರ್ಪಡೆ ಮತ್ತು ಔಪಚಾರಿಕತೆಯ ಗುರುತಿಸುವಿಕೆ, ಈ ಎರಡರ ಕಡಿಮೆ ಮಟ್ಟವನ್ನು ಗಮನಿಸಿದರೆ, ಒಂದು ದಶಕದ ಹಿಂದೆ ಭಾರತವು ಎದುರಿಸುತ್ತಿದ್ದ ಸವಾಲುಗಳ ಪ್ರಮಾಣ ಅಪಾರವಾಗಿತ್ತು. ಬ್ಯಾಂಕ್ ಖಾತೆಯ ದತ್ತಾಂಶ ಮತ್ತು ಚರ್ಚಿಸಿದ ತಲಾವಾರು ಜಿಡಿಪಿ ಯೊಂದಿಗಿನ ಸಂಬಂಧದ ಆಧಾರದ ಮೇಲೆ, ಒಂದು ಸ್ಥೂಲ ಅಂದಾಜಿನ ಪ್ರಕಾರ, ಭಾರತವು ಸಾಂಪ್ರದಾಯಿಕ ಬೆಳವಣಿಗೆಯ ಪ್ರಕ್ರಿಯೆಗಳ ಮೇಲೆ ಮಾತ್ರ ಅವಲಂಬಿತವಾಗಿದ್ದರೆ ಶೇ.80ರಷ್ಟು ವಯಸ್ಕರಿಗೆ ಬ್ಯಾಂಕ್ ಖಾತೆಯನ್ನು ಒದಗಿಸಲು 47 ವರ್ಷಗಳನ್ನು ತೆಗೆದುಕೊಳ್ಳಲಾಗಿತ್ತು.
ಮತ್ತೊಂದು ಸಂಶೋಧನೆ [“ಬ್ಯಾಂಕಿಂಗ್ ದಿ ಅನ್ ಬ್ಯಾಂಕ್ಡ್: ವಾಟ್ ಡು 280 ಮಿಲಿಯನ್ ನ್ಯೂ ಬ್ಯಾಂಕ್ ಅಕೌಂಟ್ಸ್ ರಿವೀಲ್ ಎಬೌಟ್ ಫೈನಾನ್ಸಿಯಲ್ ಎಕ್ಸೆಸ್?’, ಸೆಪ್ಟೆಂಬರ್ 2023], ಕಳ್ಳತನ ಸಮಸ್ಯೆ ಇರುವ ಪ್ರದೇಶಗಳಲ್ಲಿ ಪಿಎಂಜೆಡಿವೈ ಖಾತೆಗಳ ಹೆಚ್ಚಿನ ಬಳಕೆ ಇರುವುದರಿಂದ ಪಿಎಂಜೆಡಿವೈ ಹಣವನ್ನು ಉಳಿತಾಯ ಮಾಡಲು ನೆರವಾಗಿರುವುದನ್ನು ಈ ಸಂಶೋಧನೆ ತೋರಿಸಿದೆ. ಇದಲ್ಲದೇ ಸಾಮಾನ್ಯವಾಗಿ ಹೆಚ್ಚಿನ ಬಡ್ಡಿದರ ವಿಧಿಸುವ ಅನೌಪಚಾರಿಕ ಮೂಲಗಳಿಂದ ಸಾಲ ಪಡೆಯುವುದು ಸಹ ಕಡಿಮೆಯಾಗಿದೆ ಎಂಬುದು ಸಹ ವಿಶೇಷವೇ.
ವಿನಾಯಿತಿ, ತ್ವರಿತ ತೀರ್ಪಿಗಿಂತ ಹೆಚ್ಚಿನ ಪ್ರಮಾಣದಲ್ಲಿ ರೂಢಿಯಲ್ಲಿರುವ ಈ ಜಗತ್ತಿನಲ್ಲಿ ಪಿಎಂಜೆಡಿವೈ ಖಾತೆಗಳು ಬಹುತೇಕ ಶೂನ್ಯ ಸಮತೋಲನ ಖಾತೆಗಳಾಗಿವೆ ಎಂದು ವ್ಯಾಖ್ಯಾನಕಾರರು ಗಮನಸೆಳೆದಿದ್ದಾರೆ. ಈ ಖಾತೆಗಳು ಒಟ್ಟಾಗಿ 2.31 ಕೋಟಿ ರೂಪಾಯಿ ಠೇವಣಿ ಹೊಂದಿದೆ. ಕೇಂದ್ರ ಸರ್ಕಾರ ಈ ಖಾತೆಗಳಿಗೆ ನೇರನಗದು ವರ್ಗಾವಣೆ ಸೌಲಭ್ಯ ವ್ಯವಸ್ಥೆಯನ್ನು ಕಲ್ಪಿಸಿದೆ. ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಈ ಖಾತೆಗಳ ಉಪಯುಕ್ತತೆಯು ಅತ್ಯಮೂಲ್ಯವಾಗಿತ್ತು ಎಂಬುದು ಸಾಬೀತಾಗಿದೆ. ಕಳೆದ ಮೂರು ಹಣಕಾಸು ವರ್ಷಗಳಲ್ಲಿ [20 ರ ಹಣಕಾಸು ವರ್ಷದಿಂದ 22ರ ಹಣಕಾಸು ವರ್ಷಗಳ ವರೆಗೆ] ಸುಮಾರು 8.1 ಲಕ್ಷ ಕೋಟಿ ರೂಪಾಯಿ ಮೊತ್ತವನ್ನು ನೇರ ಸೌಲಭ್ಯ ವರ್ಗಾವಣೆ ಮೂಲಕ ವರ್ಗಾಯಿಸಲಾಗಿದೆ. ಡಿಜಿಟಲ್ ಪಾವತಿ ಮೂಲ ಸೌಕರ್ಯದ ವಿಕಸನದ ಜೊತೆಗೆ ಇದು ಸಾಂಕ್ರಾಮಿಕದ ಗರಿಷ್ಠ ಸಮಯದಲ್ಲಿ ನೋ ಟಚ್ ಪಾವತಿಗಳನ್ನು ಸುಗಮಗೊಳಿಸಿತು.
ಡಿಜಿಟಲ್ ಪಾವತಿ ಮೂಲಸೌಕರ್ಯದ ವಿಕಸನದ ಜೊತೆಗೆ, ಇದು ನೋ-ಟಚ್ ವ್ಯವಸ್ಥೆಯನ್ನು ಸುಗಮಗೊಳಿಸಿತು ಉದಯೋನ್ಮುಖ ಸಂಶೋಧನೆ (‘ಡಸ್ ಓಪನ್ ಬ್ಯಾಂಕಿಂಗ್ ಎಕ್ಸ್ಪ್ಯಾಂಡ್ ಕ್ರಿಡಿಟ್ ಎಕ್ಸೆಸ್, ಆಗಸ್ಟ್ 2004] ಪಿಎಂಜೆಡಿವೈ ಮುಕ್ತ ಬ್ಯಾಂಕಿಂಗ್ ಅನ್ನು ಸುಗಮಗೊಳಿಸಿದೆ ಎಂದು ನಿರೂಪಿಸಿದೆ - ಯಾವುದೇ ಹಣಕಾಸು ಸಂಸ್ಥೆಗೆ ಗ್ರಾಹಕ-ಅನುಮತಿ, ದತ್ತಾಂಶ ಹಂಚಿಕೆ ಅಗತ್ಯ. ಹೆಚ್ಚು ನಿರ್ದಿಷ್ಟವಾಗಿ ಹೇಳುವುದಾದರೆ, ಹೆಚ್ಚು ಪಿಎಂಜೆಡಿವೈ ಖಾತೆಗಳನ್ನು ಹೊಂದಿರುವ ಪ್ರದೇಶಗಳು ಪಿಎಂಜೆಡಿವೈ ನೇತೃತ್ವದ ಸಾಲದ ಬೆಳವಣಿಗೆಯನ್ನು ಹೆಚ್ಚಿಸಿವೆ ಮತ್ತು ಅಗ್ಗದ ಮತ್ತು ಉತ್ತಮ ಅಂತರ್ಜಾಲ ಸಂಪರ್ಕ ಹೊಂದಿರುವ ಪ್ರದೇಶಗಳಲ್ಲಿ ಪರಿಣಾಮಗಳು ಪ್ರಬಲವಾಗಿವೆ. ‘ಖಾತೆ ಒಟ್ಟುಗೂಡಿಸುವಿಕೆ’ ಮುಕ್ತ ಬ್ಯಾಂಕಿಂಗ್ನ ದ್ಯೋತಕವಾಗಿದೆ. ಇದು ಸಾರ್ವಜನಿಕರಿಗೆ ಹೆಚ್ಚಿನ ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
ಪಿಎಂಜೆಡಿವೈ ತಮ್ಮ ಖಾತೆಗಳು ಮತ್ತು ಖಾತೆಗಳ ಹಣದ ಮೂಲಕ ಮಹಿಳೆಯರನ್ನು ಸಬಲೀಕರಣಗೊಳಿಸುತ್ತದೆ. ಗಣನೀಯವಾಗಿ ಇದು ಹಣಕಾಸು ಸ್ವಾಯತ್ತತೆಗೆ ಕಾರಣವಾಗಿದೆ. ಭಾರತದಲ್ಲಿ ಮಹಿಳೆಯರು ಸಾಮಾನ್ಯವಾಗಿ ಹೆಚ್ಚಿನ ಉಳಿತಾಯದ ಬಗ್ಗೆ ಒಲವು ಹೊಂದಿರುತ್ತಾರೆ ಮತ್ತು ಕಾಲಾನಂತರದಲ್ಲಿ, ಇದು ಕುಟುಂಬಗಳಿಗೆ ವರ್ಧಿತ ಆರ್ಥಿಕ ಭದ್ರತೆಗೆ ಕಾರಣವಾಗಬಹುದು ಮತ್ತು ರಾಷ್ಟ್ರೀಯ ಉಳಿತಾಯ ದರವನ್ನು ಹೆಚ್ಚಿಸಬಹುದು. ಮುಂದುವರೆದು ಇದು ಮಹಿಳೆಯರ ಉದ್ಯಮಶೀಲತೆಗೆ ಪುಷ್ಟಿ ನೀಡಿದೆ. ಭಾರತದಲ್ಲಿ ನವೋದ್ಯಮಗಳು, ಸರ್ಕಾರ ಉತ್ತೇಜಿತ ನವೋದ್ಯಮಗಳು ಮತ್ತು ಸ್ಟ್ಯಾಂಡ್ ಅಪ್ ಇಂಡಿಯಾದಲ್ಲಿ ಪಾಲ್ಗೊಳ್ಳುವಿಕೆ, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡದ ಮಹಿಳೆಯರ ಉದ್ಯಮಶೀಲತೆಯನ್ನು ಉತ್ತೇಜಿಸುವಲ್ಲಿಯೂ ಇದು ಫಲಪ್ರದವಾಗಿದೆ. ಪ್ರಧಾನಮಂತ್ರಿ ಮುದ್ರಾ ಯೋಜನೆಯಡಿ ಸುಮಾರು ಶೇ68 ರಷ್ಟು ಮಹಿಳೆಯರಿಗೆ ಸಾಲ ಮಂಜೂರು ಮಾಡಲಾಗಿದೆ ಮತ್ತು 2024 ರ ಮೇ ವೇಳೆಗೆ ಶೇ 77.7 ರಷ್ಟು ಫಲಾನುಭವಿಗಳು ಸ್ಟ್ಯಾಂಡ್ ಅಪ್ ಇಂಡಿಯಾ ಫಲಾನುಭವಿಗಳಾಗಿದ್ದಾರೆ. 2024 ರ ಜುಲೈ 30 ರ ವೇಳೆಗೆ ದೇಶದಲ್ಲಿ ಉದ್ಯಮ ಮತ್ತು ಯುಎಪಿನಲ್ಲಿ ನೋಂದಾಯಿಸಲಾದ ಮಹಿಳಾ ನಾಯಕತ್ವದಡಿ ಎಂ.ಎಸ್.ಎಂ.ಇಗಳ ಸಂಖ್ಯೆ 1.85 ಕೋಟಿಗಿಂತ ಅಧಿಕವಾಗಿದೆ. ಪಿಎಂಜೆಡಿವೈ ಖಾತೆಗಳು ಮಹಿಳೆಯರನ್ನು ಸಬಲೀಕರಣಗೊಳಿಸಿವೆ ಮತ್ತು ಸ್ವಯಂ ಉದ್ಯೋಗ/ಉದ್ಯಮಶೀಲತೆಗೆ ಮಹಿಳೆಯರ ಪ್ರವೇಶವನ್ನು ಸುಗಮಗೊಳಿಸಿವೆ ಮತ್ತು ಬಲವಾದ ಹಾಗೂ ಔಪಚಾರಿಕ ತನಿಖೆಗೆ ಇವು ಯೋಗ್ಯವಾಗಿವೆ.
ನಾವು ಪ್ರತಿವಾದವನ್ನು ಆಲೋಚಿಸುವ ಸವಾಲಿಗೆ ಹಿಂತಿರುಗುತ್ತಿದ್ದೇವೆ. ಖಾತೆದಾರರಿಗೆ ಪಿಎಂಜೆಡಿಪಿವೈ ನೀಡಿರುವ ಪ್ರಯೋಜನಗಳ ಪುರಾವೆಗಳ ಬೆಳಕಿನಲ್ಲಿ ಪ್ರತಿರೂಪವನ್ನು ರೂಪಿಸುವುದು ಕಷ್ಟವೇನಲ್ಲ. ಕಳೆದ ದಶಕದಲ್ಲಿ ಭಾರತದ ಅಭಿವೃದ್ಧಿ ಸಾಧನೆಗಳು ಗಣನೀಯವಾಗಿ ಕಡಿಮೆಯಾಗಿರಬಹುದು, ಆದರೆ ಪಿಎಂಜೆಡಿವೈ ಅನ್ನು ಪ್ರಾರಂಭಿಸುವ ದೂರದೃಷ್ಟಿಯ ನಿರ್ಧಾರ ಮತ್ತು ಕಡಿಮೆ ಅವಧಿಯಲ್ಲಿ ಅದನ್ನು ಯಶಸ್ವಿ ಕಾರ್ಯಗತಗೊಳಿಸಿರುವುದು ವಿಶೇಷವಾಗಿದೆ.