ವಚನಗಳು ಕೇಳಿ ಬರಲಿ
ಮಾನ್ಯರೇ,
ಈಗ ರಾಜ್ಯದೆಲ್ಲೆಡೆ ಬೆಳಗ್ಗೆ ಕಸ ಸಂಗ್ರಹಿಸುವ ವಾಹನಗಳಲ್ಲಿ ಬೇರೆ ಬೇರೆ ಹಾಡುಗಳು ಕೇಳಿಬರುತ್ತಿವೆ.
ರಾಜ್ಯದ ಶ್ರಮಿಕ ವರ್ಗದಲ್ಲಿ ಹುಟ್ಟಿದ ಎಲ್ಲಾ ಜಾತಿಯ ಶರಣರು ತಮ್ಮ ಅನುಭಾವದ ಮೂಲಕ ಮೌಢ್ಯ ಆಚರಣೆಗಳ ವಿರುದ್ಧ ಜಾಗೃತಿ ಮೂಡಿಸಿದವರು. ಅವರ ವಚನಗಳು ಜನರನ್ನು ವೈಜ್ಞಾನಿಕ, ವೈಚಾರಿಕ ಚಿಂತನೆಗೆ ಹಚ್ಚಬಲ್ಲವುಗಳು.
ಹಾಗಾಗಿ ಪೌರಾಡಳಿತದ ಸಚಿವರು, ಪಂಚಾಯತ್, ಪುರಸಭೆ, ನಗರಸಭೆ, ಪಾಲಿಕೆಗಳ ಸದಸ್ಯರು, ಅಧಿಕಾರಿಗಳು ಮತ್ತು ನೌಕರರಲ್ಲಿ ನ್ನನ್ನದೊಂದು ಸಲಹೆ ಏನೆಂದರೆ ಸಿನೆಮಾ ಗೀತೆ, ಭಾವ ಗೀತೆಗಳ ಜೊತೆ ಜನತೆಗೆ ವಚನಗಳನ್ನೂ ಕೇಳಿಸಿ ಜಾಗೃತಿ ಮೂಡಿಸಬಹುದಲ್ಲವೇ?
-ಕೊಟ್ರೇಶ್ ಪಿ. ಐರಣಿ
ದಾವಣಗೆರೆ
Next Story