ಒಬಿಸಿಗಳ ಹಿಂದುಳಿದಿರುವಿಕೆ ಪ.ಜಾ./ಪ.ಪಂ.ಗಳ ಹಿಂದುಳಿದಿರುವಿಕೆಗೆ ಸಮನಾಗಿರಬೇಕೇ?

ಬಾಲಾಜಿ vs ಮೈಸೂರು ರಾಜ್ಯ ಪ್ರಕರಣದಲ್ಲಿ ಹಿಂದುಳಿದವರನ್ನು ಹಿಂದುಳಿದವರು ಮತ್ತು ಹೆಚ್ಚು ಹಿಂದುಳಿದವರು ಎಂದು ವಿಂಗಡಿಸುವ ವಿಷಯವನ್ನು ನಿರ್ವಹಿಸುವಾಗ ಸರ್ವೋಚ್ಚ ನ್ಯಾಯಾಲಯವು ಕೆಲವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇದು ವಿಧಿ 16 (4)ರ ರೀತಿಯ ಹಿಂದುಳಿದ ವರ್ಗದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳು ಅನುಭವಿಸುವ ಹಿಂದುಳಿದಿರುವಿಕೆಯಂತೆಯೇ ಇರಬೇಕು ಎಂಬ ಅಭಿಪ್ರಾಯವನ್ನು ನೀಡುತ್ತದೆ ಎಂದು.
ಸಂವಿಧಾನದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳ ಜೊತೆಯಲ್ಲಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳನ್ನೂ ಉಲ್ಲೇಖಿಸಿರುವುದೇ ಎರಡನ್ನೂ ಸಮಾನವೆಂದು ಪರಿಗಣಿಸಲಾಗುವುದಿಲ್ಲ ಎಂಬುದನ್ನು ತೋರಿಸಿದೆ. ಎರಡರ ನಡುವೆ ಹಿಂದುಳಿದಿರುವಿಕೆಯ ಮಟ್ಟದಲ್ಲಿ ಮತ್ತು ವಿಭಿನ್ನ ಉಪಚಾರದಲ್ಲಿ ವ್ಯತ್ಯಾಸವಿದೆ. ಆದರೆ ನ್ಯಾಯಾಂಗ ಮತ್ತು ಹೆಚ್ಚುವರಿ ನ್ಯಾಯಾಂಗ ಈ ಎರಡೂ ಕಡೆಗಳಲ್ಲಿ ಕೆಲವು ತಪ್ಪು ಅಭಿಪ್ರಾಯಗಳು ಹೊಮ್ಮಿವೆ, ಅಭಿಪ್ರಾಯಗಳು ಎರಡರ ನಡುವಿನ ಹೋಲಿಕೆಯನ್ನು ತೋರಿಸುತ್ತದೆ. ಬಾಲಾಜಿ vs ಮೈಸೂರು ರಾಜ್ಯ ಪ್ರಕರಣದಲ್ಲಿ ಹಿಂದುಳಿದವರನ್ನು ಹಿಂದುಳಿದವರು ಮತ್ತು ಹೆಚ್ಚು ಹಿಂದುಳಿದವರು ಎಂದು ವಿಂಗಡಿಸುವ ವಿಷಯವನ್ನು ನಿರ್ವಹಿಸುವಾಗ ಸರ್ವೋಚ್ಚ ನ್ಯಾಯಾಲಯವು ಕೆಲವು ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಇದು ವಿಧಿ 16 (4)ರ ರೀತಿಯ ಹಿಂದುಳಿದ ವರ್ಗದ ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯು, ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳು ಅನುಭವಿಸುವ ಹಿಂದುಳಿದಿರುವಿಕೆಯಂತೆಯೇ ಇರಬೇಕು ಎಂಬ ಅಭಿಪ್ರಾಯವನ್ನು ನೀಡುತ್ತದೆ ಎಂದು. ನಂತರದಲ್ಲಿ ಭಾರತ ಸರ್ವೋಚ್ಚ ನ್ಯಾಯಾಲಯ ಹೀಗೆ ಅಭಿಪ್ರಾಯ ಪಟ್ಟಿದೆ:
‘‘ವಿಶೇಷ ನಿಬಂಧನೆಗಳನ್ನು ಪಡೆಯಲು ಅಧಿಕಾರ ಹೊಂದಿರುವ ಹಿಂದುಳಿದ ವರ್ಗಗಳ ನಾಗರಿಕರನ್ನು 15(4)ನೇ ವಿಧಿಯ ಮೂಲಕವೇ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಂತೆ ಪರಿಗಣಿಸಲಾಗುತ್ತದೆ ಎಂಬುದು ಸ್ಪಷ್ಟವಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳನ್ನೂ ಹಿಂದುಳಿದವರು ಎಂದು ವ್ಯಾಖ್ಯಾನಿಸಲಾಗಿದೆ ಮತ್ತು ಸಂವಿಧಾನ ರಚನಾಕಾರರು ಪ.ಜಾ./ ಪ.ಪಂ.ಗಳ ಪ್ರಗತಿಗೆ ವಿಶೇಷ ನಿಬಂಧನೆಗಳನ್ನು ಮಾಡಬೇಕೆಂಬುದರಲ್ಲಿ ಯಾವುದೇ ಸಂದೇಹವಿಲ್ಲ ಎಂದು ಭಾವಿಸಿದ್ದರು. ಭಾರತೀಯ ಸಮಾಜದಲ್ಲಿ ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಿಗೆ ಸಮಾನವಾಗಿ ಅಥವಾ ಸ್ವಲ್ಪ ಕಡಿಮೆ ಹಿಂದುಳಿದಿರುವ ಇತರ ವರ್ಗದ ನಾಗರಿಕರು ಇದ್ದಾರೆ ಎಂದು ಅರಿತುಕೊಂಡು, ಅವರಿಗೂ ಸಹ ಕೆಲವು ವಿಶೇಷ ನಿಬಂಧನೆಗಳನ್ನು ಮಾಡತಕ್ಕದ್ದು’’.
338 (3), 340(1), 341 ಮತ್ತು 342ನೇ ವಿಧಿಗಳನ್ನು ಉಲ್ಲೇಖಿಸಿದ ನಂತರ ನ್ಯಾಯಾಲಯವು ಹೀಗೆ ಹೇಳಿದೆ:
‘‘ಈ ನಿಬಂಧನೆಯು, ರಾಷ್ಟ್ರಪತಿಗಳ ಆದೇಶದ ಮೂಲಕ ಕೆಲವು ಹಿಂದುಳಿದ ವರ್ಗಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಸೇರಿಸಬಹುದು ಎಂದು ಉದ್ದೇಶಿಸುತ್ತದೆ ಎಂದು ಕಾಣುತ್ತದೆ. ಇದು 15(4)ನೇ ವಿಧಿಯ ಮೂಲಕ ಅವುಗಳ ಪ್ರಗತಿಗಾಗಿ ನಿಬಂಧನೆಯನ್ನು ಉದ್ದೇಶಿಸುವ ಹಿಂದುಳಿದ ವರ್ಗಗಳನ್ನು, ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳಿಗೆ ಹೋಲಿಸಬಹುದಾದ ಹಿಂದುಳಿದ ವರ್ಗಗಳ ಹಿಂದುಳಿದಿರುವಿಕೆಯ ಅಂಶವನ್ನು ಹೊರತರಲು ಸಹಾಯ ಮಾಡುತ್ತದೆ’’.
ಇದನ್ನು ಜಾನಕಿ ಪ್ರಸಾದ್ ಪರಿಮು vs ಜಮ್ಮು ಮತ್ತು ಕಾಶ್ಮೀರ ರಾಜ್ಯ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಬಾಲಾಜಿ ಪ್ರಕರಣವನ್ನು ಪರಿಶೀಲನೆಗೆ ಒಳಪಡಿಸಿದಾಗ ವಿವರಿಸಿದೆ. ಕೆ.ಎಸ್. ಜಯಶ್ರೀ vs ಕೇರಳ ರಾಜ್ಯ ಮತ್ತು ಕೆ.ಸಿ. ವಸಂತ್ ಕುಮಾರ್ vs ಕರ್ನಾಟಕ ರಾಜ್ಯ ಪ್ರಕರಣದಲ್ಲಿಯೂ ಇದೇ ಅಭಿಪ್ರಾಯ ವ್ಯಕ್ತವಾಗಿದೆ. ಮುಖ್ಯ ನ್ಯಾಯಮೂರ್ತಿಯಾಗಿದ್ದ ಚಂದ್ರಚೂಡ್ ತಮ್ಮ ಪ್ರತ್ಯೇಕ ತೀರ್ಪಿನಲ್ಲಿ ಹಿಂದುಳಿದ ವರ್ಗಗಳ ಹಿಂದುಳಿದಿರುವಿಕೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೋಲಿಸುವ ಬಗ್ಗೆ ಹೇಳಿದ್ದಾರೆ- ಅಭಿಪ್ರಾಯಗಳು ನಾಣ್ಯದ ಒಂದು ಬದಿಯನ್ನು ಪ್ರತಿನಿಧಿಸುತ್ತವೆ. ಇದು ಸಂವಿಧಾನದ ಪರ್ಯಾಯ ಶಬ್ದ ಪ್ರಯೋಗ ಮತ್ತು ಪ್ರತ್ಯೇಕ ನಿಬಂಧನೆಗಳ ಬಳಕೆಯನ್ನು ಸರಿಯಾಗಿ ಗುಣಗ್ರಹಣ ಮಾಡುವುದಿಲ್ಲ.
ಸಾಂವಿಧಾನಿಕ ಆಯಾಮವನ್ನು ಆಕರ್ಷಿಸುವ ವಿಷಯದ ಇನ್ನೊಂದು ಬದಿಯು ವಿಭಿನ್ನ ಅಭಿಪ್ರಾಯಗಳ ಸೆಟ್ಟುಗಳಲ್ಲಿ ಪ್ರತಿನಿಧಿಸಲ್ಪಟ್ಟಿದೆ. ಅಂತಿಮವಾಗಿ ಇಂದ್ರಾ ಸಹಾನಿ vs ಭಾರತ ಒಕ್ಕೂಟ ಪ್ರಕರಣದಲ್ಲಿ ಬಹುಮತದಿಂದ ಕೂಡಿದ ಅಭಿಪ್ರಾಯದಲ್ಲಿ ಅನುಮೋದನೆಯನ್ನು ನೀಡುತ್ತದೆ. ಆಂಧ್ರಪ್ರದೇಶ vs ಯು.ಎಸ್.ವಿ. ಬಲರಾಮ್ ಪ್ರಕರಣದಲ್ಲಿ, ಬಾಲಾಜಿ ತೀರ್ಪು ಇತರ ಹಿಂದುಳಿದ ವರ್ಗಗಳ ಹಿಂದುಳಿದಿರುವಿಕೆಯು ಎಲ್ಲಾ ರೀತಿಯಲ್ಲೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಹಿಂದುಳಿದಿರುವಿಕೆಗೆ ನಿಖರವಾಗಿ ಸಮಾನವಾಗಿರಬೇಕು ಎಂದು ಹೇಳಿರುವುದಿಲ್ಲ ಎಂದು ಸೂಚಿಸುವ ಮೂಲಕ, ಹಿಂದಿನ ಅಭಿಪ್ರಾಯವನ್ನು ಉಲ್ಲೇಖಿಸಲಾಗಿದೆ. ಬಾಲಾಜಿ ಪ್ರಕರಣದಲ್ಲಿ ಉಲ್ಲೇಖಿಸಲಾದ ಅವಲೋಕನಗಳನ್ನು ಮಂಡನೆ ಮಾಡಿ ನ್ಯಾ.ಚಿನ್ನಪ್ಪ ರೆಡ್ಡಿ ಅವರು ಕೆ.ಸಿ. ವಸಂತ್ ಕುಮಾರ್ vs ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ-
‘‘ಈ ಅವಲೋಕನಗಳು ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಎಂದರೆ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗದವರ ಜೀವನ ಪರಿಸ್ಥಿತಿಗಳಂತೆ ಇರುವ ಜನರ ವರ್ಗಗಳು ಎಂಬ ಯಾವುದೇ ಪ್ರತಿಪಾದನೆಯನ್ನು ಮಂಡಿಸಲು ಉದ್ದೇಶಿಸಿವೆ ಎಂದು ನಾವು ಭಾವಿಸುವುದಿಲ್ಲ.... ಪರಿಶಿಷ್ಟ ಜಾತಿಗಳ ಅಸ್ತಿತ್ವದ ಪರಿಸ್ಥಿತಿಗಳಿಗೆ ಹತ್ತಿರವಿರುವ ಪರೀಕ್ಷೆಯನ್ನು ಅನ್ವಯಿಸುವ ಮೂಲಕ ಇತರ ವರ್ಗಗಳ ಸಾಮಾಜಿಕ ಹಿಂದುಳಿದಿರುವಿಕೆಯನ್ನು ನಿರ್ಧರಿಸಲು ಪ್ರಯತ್ನಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಅಂತಹ ಪರೀಕ್ಷೆಯು ಪರಿಶಿಷ್ಟ ಜಾತಿ ಮತ್ತು ಬುಡಕಟ್ಟು ಜನಾಂಗಗಳನ್ನು ಹೊರತುಪಡಿಸಿ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳಿಗೆ ಮೀಸಲು ನೀಡುವ ನಿಬಂಧನೆಯನ್ನು ಪ್ರಾಯೋಗಿಕವಾಗಿ ರದ್ದುಗೊಳಿಸುತ್ತದೆ’’.
ಮಂಡಲ್ ಪ್ರಕರಣದಲ್ಲಿ ನ್ಯಾ.ಸಾವಂತ್ ಅವರು ತಮ್ಮ ಸಹಮತದ ಅಭಿಪ್ರಾಯದಲ್ಲಿ ಇದೇ ರೀತಿಯ ವಿವರಣೆಯನ್ನು ಪ್ರಸ್ತಾವಿಸಿದ್ದಾರೆ. ಬಾಲಾಜಿ ಪ್ರಕರಣದಲ್ಲಿ ಹೇಳಲಾದ ಹೋಲಿಕೆಯ ಇತರ ಹಿಂದುಳಿದ ವರ್ಗಗಳ ಹಿಂದುಳಿದಿರುವಿಕೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಂತೆಯೇ ಅಥವಾ ಎಲ್ಲಾ ವಿಷಯಗಳಲ್ಲೂ ಒಂದೇ ಆಗಿರಬೇಕು ಎಂದು ಅರ್ಥೈಸಿಕೊಳ್ಳಬಾರದು ಎಂದು ನ್ಯಾಯಾಧೀಶರು ವಿದ್ವತ್ಪೂರ್ಣ ತೀರ್ಪು ನೀಡಿದ್ದಾರೆ. ನ್ಯಾಯಾಧೀಶರು ಸಾಂವಿಧಾನಿಕ ನಿಬಂಧನೆಗಳ ಮೇಲೆ ಮುಖ್ಯವಾಗಿ ಅವಲಂಬಿತರಾಗಿದ್ದರೂ ತಮ್ಮ ತೀರ್ಮಾನಗಳಿಗೆ ಎರಡು ಮನವರಿಕೆಯಾಗುವ ವಾದಗಳನ್ನು ಮಂಡಿಸಿದ್ದಾರೆ.
1. ಇತರ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹಿಂದುಳಿದಿರುವಿಕೆಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಂತೆ ಇರಬೇಕಾಗಿಲ್ಲ ಎಂಬುದನ್ನು ಸಂವಿಧಾನದ ವಿವಿಧ ನಿಬಂಧನೆಗಳು ಗುರುತಿಸುತ್ತವೆ. ಏಕೆಂದರೆ ಅವು ಒಂದೆಡೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ನಡುವೆ ಮತ್ತು ಮತ್ತೊಂದೆಡೆ ‘ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು’ ಅಥವಾ ‘ಹಿಂದುಳಿದ ವರ್ಗಗಳ ನಾಗರಿಕರ’ ನಡುವೆ ವ್ಯತ್ಯಾಸವನ್ನುಂಟು ಮಾಡುತ್ತವೆ.
2. ಇದಲ್ಲದೆ, ಇತರ ಹಿಂದುಳಿದ ವರ್ಗಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಂತೆ ಎಲ್ಲಾ ವಿಷಯಗಳಲ್ಲಿಯೂ ಹಿಂದುಳಿದಿದ್ದರೆ ಅವರನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳು ಎಂದು ಘೋಷಿಸುವ ಅಧಿಕಾರ ರಾಷ್ಟ್ರಪತಿಗಳಿಗೆ ಇರುತ್ತದೆ. ನಂತರದಲ್ಲಿ ಅವರು ಇತರ ಹಿಂದುಳಿದ ವರ್ಗಗಳಾಗಿ ಮುಂದುವರಿಯುವುದಿಲ್ಲ.
ಮಂಡಲ್ ಪ್ರಕರಣದಲ್ಲಿ ಬಹುಮತದ ಪ್ರಮುಖ ನಿರ್ಣಯವನ್ನು ನೀಡುವಾಗ ನ್ಯಾ. ಬಿ.ಪಿ. ಜೀವನ್ ರೆಡ್ಡಿ ಅವರು ಇದೇ ವಿಷಯದ ಮೇಲೆ ಕೆಲವು ಹೆಚ್ಚುವರಿ ಅಭಿಪ್ರಾಯಗಳನ್ನು ನೀಡಿದರು. ‘ನಾಗರಿಕರ ಹಿಂದುಳಿದ ವರ್ಗಗಳು’ ಎಂಬ ನುಡಿಗಟ್ಟಿನ ಅರ್ಥದ ಅರ್ಹತೆ ಪಡೆಯಲು ಅಥವಾ ಸೀಮಿತಗೊಳಿಸಲು ಯಾವುದೇ ಕಾರಣವೂ ಇಲ್ಲ, ಅದು ಪರಿಶಿಷ್ಟ ಜಾತಿ/ಅಥವಾ ಪರಿಶಿಷ್ಟ ಪಂಗಡಗಳಿಗೆ ಹೋಲುವ ಇತರ ಹಿಂದುಳಿದ ವರ್ಗಗಳನ್ನು ಅರ್ಥೈಸುತ್ತದೆ ಎಂದು ಹೇಳಿದರು. ನ್ಯಾ.ಜೀವನ್ ರೆಡ್ಡಿ ವಿಧಿ 15(4)ರ ಮತ್ತು 16(4)ರ ಭಾಷೆಯಲ್ಲಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಿದರು. ಈ ವ್ಯತ್ಯಾಸವನ್ನು ಗಮನದಲ್ಲಿಟ್ಟುಕೊಂಡು ಎಸ್‌ಸಿ ಮತ್ತು ಎಸ್‌ಟಿಗಳನ್ನು ಉಲ್ಲೇಖಿಸುವುದಿಲ್ಲ ಎಂದು ನ್ಯಾಯಾಧೀಶರೇ ಹೇಳಿದರು. ‘‘ಹಾಗಿದ್ದರೆ, ಅದರ ರಕ್ಷಣೆಯನ್ನು ಕೋರುವ ಎಲ್ಲರಿಗೂ ನಾವು ಏಕೆ ಅವರ ಹಿಂದುಳಿದಿರುವಿಕೆಯನ್ನು ಪ್ರಾಮಾಣಿತ ಹಿಂದುಳಿದಿರುವಿಕೆ ಎಂದು ಪರಿಗಣಿಸಬಾರದು ಎಂಬುದಕ್ಕೆ ಯಾವುದೇ ಕಾರಣವಿಲ್ಲ’’. ಮುಂದುವರಿದು, ಅವರೇ ಹೀಗೆ ಹೇಳಿದರು:
‘‘ವಾಸ್ತವಿಕವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳೊಳಗಿನ ಹಲವಾರು ಜಾತಿಗಳು/ಗುಂಪುಗಳು/ ಬುಡಕಟ್ಟುಗಳು ಒಂದೇ ರೀತಿ ನೆಲೆಗೊಂಡಿಲ್ಲ. ಯಾವುದೇ ಗುಂಪು ಅಥವಾ ವರ್ಗವು ಪರಿಶಿಷ್ಟ ಜಾತಿಗಳಂತೆಯೇ ನೆಲೆಗೊಂಡಿದ್ದರೆ, ಅವರು ಆ ವರ್ಗದಲ್ಲಿ ಸೇರ್ಪಡೆಗೊಳ್ಳಲು ಅದೊಂದು ಪ್ರಕರಣವಾಗಬಹುದು, ಆದರೆ ಹಿಂದುಳಿದ ವರ್ಗಗಳಿಗೆ ಅರ್ಹತೆ ಪಡೆಯಲು ಇತರ ವರ್ಗಗಳು ಅಥವಾ ಗುಂಪುಗಳು ಅವುಗಳಂತೆ ನೆಲೆಗೊಂಡಿರಬೇಕು ಎಂದು ವಾದಿಸಲು ವಾಸ್ತವವಾಗಿ ಅಥವಾ ತಾತ್ವಿಕವಾಗಿ ಯಾವುದೇ ಆಧಾರವಿಲ್ಲವೆಂದು ತೋರುತ್ತದೆ...’’.
ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳಂತೆಯೇ ಇರುವ ವರ್ಗವನ್ನು ಹಿಂದುಳಿದ ವರ್ಗವೆಂದು ಗೊತ್ತು ಪಡಿಸುವ ಅಗತ್ಯವಿಲ್ಲ ಎಂದು ನ್ಯಾ. ಪಾಂಡಿಯನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಮಂಡಲ್ ಪ್ರಕರಣದಲ್ಲಿ ಮುಖ್ಯ ನ್ಯಾಯಮೂರ್ತಿ ಕನಿಯ ಮತ್ತು ನ್ಯಾ. ವೆಂಕಟಾಚಲಯ್ಯ, ನ್ಯಾ.ಅಹಮದಿ, ನ್ಯಾ. ಜೀವನ್ ರೆಡ್ಡಿ, ನ್ಯಾ. ಪಾಂಡಿಯನ್ ಮತ್ತು ನ್ಯಾ.ಸಾವಂತ್ ಅವರು ಒಬಿಸಿಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೋಲುವಂತಿಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಹಿಂದುಳಿದಿರುವಿಕೆಯನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಹೋಲಿಸುವುದನ್ನು ನ್ಯಾ. ಥೋಮನ್ ಮಾತ್ರ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರು ಮತ್ತು ಪ್ರತಿಪಾದಿಸಿದರು.
(ವಿವಿಧ ಮೂಲಗಳಿಂದ)