ಪ್ರೊ.ಮುಝಫರ್ ಅಸ್ಸಾದಿ ನಿಧನ : ಕರ್ನಾಟಕದ ಆದಿವಾಸಿ ಸಮುದಾಯಗಳ ಪಾಲಿಗೆ ತುಂಬಲಾರದ ನಷ್ಟ...
ಪ್ರೊ.ಮುಝಫರ್ ಅಸ್ಸಾದಿ
ನಾಡಿನ ಹಿರಿಯ ವಿದ್ವಾಂಸರು, ಚಿಂತಕರು, ಮೈಸೂರು ವಿವಿಯ ಹಂಗಾಮಿ ಕುಲಪತಿಗಳಾಗಿ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ಮತ್ತು ಆದಿವಾಸಿ ಬುಡಕಟ್ಟು ಸಮುದಾಯಗಳಿಗೆ ದಾರಿದೀಪವಾಗಿ ಗಣನೀಯವಾಗಿ ಸೇವೆಸಲ್ಲಿಸಿದ ಪ್ರೊ.ಮುಝಫರ್ ಅಸ್ಸಾದಿ ಅವರು ನಿಧನರಾಗಿದ್ದಾರೆ. ಅವರಿಗೆ ನಮ್ಮ ಅಲೆಮಾರಿ ಬುಡಕಟ್ಟು ಮಹಾಸಭಾದ ವತಿಯಿಂದ ಗೌರವಪೂರ್ವಕ ನಮನಗಳು.
ಪ್ರೊ.ಮುಝಫರ್ ಅಸ್ಸಾದಿಯವರು ಕರ್ನಾಟಕದ ಆದಿವಾಸಿ ಬುಡಕಟ್ಟು ಸಮುದಾಯಗಳ ಅಬ್ಯುಧಯಕ್ಕೆ ಮತ್ತು ಸರಕಾರಕ್ಕೆ "ಮುಝಫರ್ ಆಸಾದಿ ವರದಿ" ಮೂಲಕ ಬೆಳಕು ಚೆಲ್ಲಿದ ಚಿಂತಕರು. ಆದಿವಾಸಿ ಬುಡಕಟ್ಟು, ಶೋಷಿತ ತಳ ಸಮುದಾಯಗಳಿಗೆ ಮೀಸಲಾತಿಯ ವರದಿ ಕೊಟ್ಟು ಈ ತಳ ಸಮುದಾಯಗಳಿಗೆ ಜೀವ ತುಂಬಿದವರು. ಆದಿವಾಸಿ ಬುಡಕಟ್ಟು ಸಮುದಾಯದವರಿಗೆ ಪುನರ್ವಸತಿಯು ಸೇರಿದಂತೆ ವಸತಿ, ನಿವೇಶನ, ಭೂಮಿ ಹಲವು ಸೌಲಭ್ಯಗಳನ್ನು ಒದಗಿಸಲು ಇವರ ಸಮಿತಿಯ ವರದಿಯು ಪ್ರಮುಖ ಕಾರಣವಾಗಿದೆ.
ಹೀಗೆ ಆದಿವಾಸಿ ಬುಡಕಟ್ಟು ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ "ಮುಝಫರ್ ಅಸ್ಸಾದಿ ಸಮಿತಿಯ ವರದಿ" ಮೂಲಕ ಈ ಸಮುದಾಯಗಳ ಬೆಳವಣಿಗೆಗೆ ಕಾರಣಕರ್ತರಾದ ಪ್ರೊ.ಮುಝಫರ್ ಅಸ್ಸಾದಿ ಅವರು ನಿಧನರಾಗಿರುವುದು ಕರ್ನಾಟಕದ ಆದಿವಾಸಿ ಸಮುದಾಯಗಳ ಪಾಲಿಗೆ ಇಂದು ತುಂಬಲಾರದ ನಷ್ಟವಾಗಿದೆ.
-ನಾಗರಾಜ್
ವಕೀಲರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಅಲೆಮಾರಿ ಬುಡಕಟ್ಟು ಮಹಾಸಭಾ (ರಿ)