Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಬೆಳಗಾವಿ ‘ಹನಿ’ಗೆ ರಾಜ್ಯ ರಾಜಕಾರಣ...

ಬೆಳಗಾವಿ ‘ಹನಿ’ಗೆ ರಾಜ್ಯ ರಾಜಕಾರಣ ಟ್ರ್ಯಾಪ್!

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ24 March 2025 10:25 AM IST
share
ಬೆಳಗಾವಿ ‘ಹನಿ’ಗೆ ರಾಜ್ಯ ರಾಜಕಾರಣ ಟ್ರ್ಯಾಪ್!

ರಾಜ್ಯ ರಾಜಕಾರಣ ಮೊದಲೆಲ್ಲಾ ಹಳೆ ಮೈಸೂರು, ಬೆಂಗಳೂರು ಭಾಗದ ರಾಜಕಾರಣದ ಮೇಲೆ ನಿರ್ಧಾರವಾಗುತ್ತಿತ್ತು. 2008ರಲ್ಲಿ ಬಳ್ಳಾರಿ ರಾಜಕಾರಣ ಮಿಂಚಿ ಮರೆಯಾಯಿತು. 2019ರಿಂದ ಈಚೆಗೆ ಬೆಳಗಾವಿ ನಿರ್ಣಾಯಕ ಎನ್ನುವಂತಾಗಿದೆ. ಆಗ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಪತನಕ್ಕೆ ಮುಹೂರ್ತ ನಿಗದಿಯಾಗಿದ್ದೇ ಬೆಳಗಾವಿಯ ಪಿಎಲ್ ಡಿ ಬ್ಯಾಂಕಿನ ಪುಡಿ ರಾಜಕಾರಣದಿಂದ. ಅಂದಿನಿಂದಲೂ ಬೆಳಗಾವಿ ರಾಜಕಾರಣ ಒಂದಲ್ಲಾ ಒಂದು ಬಗೆಯಲ್ಲಿ ಕಾಂಗ್ರೆಸ್-

ಬಿಜೆಪಿಗಳನ್ನು ಬಾಧಿಸುತ್ತಿದೆ. ಈಗ ವಿಧಾನಸಭೆಯಲ್ಲಿ ಸಚಿವ ಕೆ.ಎನ್. ರಾಜಣ್ಣ ಸ್ಫೋಟಿಸಿದ ಹನಿ ಟ್ರ್ಯಾಪ್ ವಿಷಯಕ್ಕೂ ಬೆಳಗಾವಿಗೂ ನಂಟಿದೆ ಎನ್ನುವುದು ಸದ್ಯದ ವರ್ತಮಾನ.

2018ರ ವಿಧಾನಸಭಾ ಚುನಾವಣೆಯಲ್ಲಿ ಕೆ.ಎನ್. ರಾಜಣ್ಣ ಸೋತಿರುತ್ತಾರೆ. ಪುತ್ರ ಆರ್.ರಾಜೇಂದ್ರ ಇದಕ್ಕೂ ಮೊದಲು ವಿಧಾನ ಪರಿಷತ್ ಚುನಾವಣೆಯಲ್ಲಿ ಸೋತಿರುತ್ತಾರೆ. ಇವೆರಡು ಸೋಲುಗಳು ಅವರನ್ನು ಕಂಗೆಡಿಸಿರುತ್ತವೆ. ಆ ಕಷ್ಟದ ಸಂದರ್ಭದಲ್ಲಿ ಅಂದಿನ ಸಿಎಂ ಬಿ.ಎಸ್. ಯಡಿಯೂರಪ್ಪ ರಾಜಣ್ಣ ಅವರನ್ನು ಒಂದು ವರ್ಷದ ಮಟ್ಟಿಗೆ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರನ್ನಾಗಿ ಮುಂದುವರಿಸಿದರು.

ಈಗ ರಾಜಣ್ಣ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರಾಗಿರುವ ಯಡಿಯೂರಪ್ಪ ಬೆಂಬಲಿಗ ಬೆಳ್ಳಿ ಪ್ರಕಾಶ್ ಅವರನ್ನು ಮುಂದುವರಿಸಿ ಋಣ ಸಂದಾಯ ಮಾಡಬೇಕಿದೆ. ಇನ್ನೊಂದೆಡೆ ಡಿ.ಕೆ. ಶಿವಕುಮಾರ್, ಲಕ್ಷ್ಮ್ಮಣ್ ಸವದಿಯನ್ನು ಅಧ್ಯಕ್ಷನನ್ನಾಗಿ ಮಾಡಿ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ. ಅದಕ್ಕಿಂತ ಮುಖ್ಯವಾಗಿ ಲಕ್ಷ್ಮಣ್ ಸವದಿಗೆ ಅಧಿಕಾರ ಕೊಟ್ಟು ಸತೀಶ್ ಜಾರಕಿಹೊಳಿಗೆ ಸೆಡ್ಡು ಹೊಡೆಯಬೇಕಾಗಿದೆ. ಸಿದ್ದರಾಮಯ್ಯ ಜೊತೆಗಿರುವ ಬೇರೆಲ್ಲರಿಗಿಂತ ಸತೀಶ್ ಜಾರಕಿಹೊಳಿ ಎಲ್ಲಾ ದೃಷ್ಟಿಯಲ್ಲೂ ಗಟ್ಟಿಗ ಎನ್ನುವುದು ಡಿಕೆಶಿಗೆ ಗೊತ್ತು. ಅದಕ್ಕಾಗಿ ಲಕ್ಷ್ಮಣ್ ಸವದಿಯನ್ನು ಪರ್ಯಾಯ ನಾಯಕನನ್ನಾಗಿ ಬೆಳಸುವ ಮೂಲಕ ಬೆಳಗಾವಿ ರಾಜಕಾರಣದಲ್ಲೇ ಅಂದರೆ ಮೂಲದಲ್ಲೇ ಸತೀಶ್ ಜಾರಕಿಹೊಳಿಯ ಹುಟ್ಟಡಗಿಸಬೇಕು, ತನ್ಮೂಲಕ ಸಿದ್ದರಾಮಯ್ಯ ಅವರ ಇತರ ಬೆಂಬಲಿಗರಿಗೂ ಸಂದೇಶ ಕಳಿಸಬೇಕೆಂದು ಡಿಕೆಶಿ ಪ್ರಯತ್ನಿಸುತ್ತಲೇ ಇದ್ದಾರೆ.

ಲಕ್ಷ್ಮ್ಮಣ್ ಸವದಿಗೆ ಅಪೆಕ್ಸ್ ಅಧ್ಯಕ್ಷಗಾದಿ ನೀಡುವ ಬಗ್ಗೆ ಚರ್ಚಿಸಬೇಕೆಂದು ಡಿಕೆಶಿ ಮೂರ್ನಾಲ್ಕು ಸಲ ರಾಜಣ್ಣ ಅವರನ್ನು ಕರೆದಿದ್ದರು. ಡಿಕೆಶಿ ತಂತ್ರಗಾರಿಕೆ ಬಗ್ಗೆ ಗೊತ್ತಿದ್ದ ರಾಜಣ್ಣ ಹೋಗಿಲ್ಲ.

ಅವರು ಬರಲ್ಲ ಎನ್ನುವುದು ಖಾತರಿಯಾಗುತ್ತಿದ್ದಂತೆ ಖುದ್ದು ಡಿಕೆಶಿಯೇ ರಾಜಣ್ಣ ಬಳಿ ಹೋದರು. ಇದು ಡಿಕೆಶಿಯ ಇನ್ನೊಂದು ಸಾಮರ್ಥ್ಯ. ಅಂದುಕೊಂಡದ್ದನ್ನು ಸಾಧಿಸಲು ಯಾವ ರೀತಿಯ ರಾಜಿಗಾದರೂ ಸಿದ್ಧರಾಗುವುದು. ಕಚೇರಿಗೆ ಹೋಗಿ ಕಾದರು. ಮತ್ತೆ ಮತ್ತೆ ಕರೆ ಮಾಡಿದರು. ರಾಜಣ್ಣ ಯಾವುದಕ್ಕೂ ಸ್ಪಂದಿಸದಿದ್ದಾಗ ಡಿಕೆಶಿ ರೊಚ್ಚಿ ಗೆದ್ದರು.

ಇದು ಇತ್ತೀಚಿನ ಸಂಗತಿ. ಆದರೆ ಡಿಕೆಶಿ-ರಾಜಣ್ಣ ಅವರ ಎಣ್ಣೆ-ಸೀಗೆಕಾಯಿ ಸಂಬಂಧ ಬಹಳ ಹಿಂದಿನದು ಮತ್ತು ನಿರಂತರವಾದುದು. ಸತೀಶ್ ಜಾರಕಿಹೊಳಿ ಮತ್ತು ರಾಜಣ್ಣ ಬಹಳ ಮುತುವರ್ಜಿ ವಹಿಸಿ ಸಿದ್ದರಾಮಯ್ಯೋತ್ಸವ ನಡೆಸಿದ್ದರು. ರಾಹುಲ್ ಗಾಂಧಿ ಸಮ್ಮುಖದಲ್ಲಿ ಸಿದ್ದರಾಮಯ್ಯ ಬಲಪ್ರದರ್ಶನದೆದುರು ಡಿಕೆಶಿ ಬಗ್ಗುವಂತೆ ಮಾಡಿದ್ದರು. ಇದಾದ ಮೇಲೆ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕು’ ಎಂದು ಮೊದಲು ಬಹಿರಂಗ ಹೇಳಿಕೆ ಕೊಟ್ಟಿದ್ದೇ ರಾಜಣ್ಣ. ‘ಬಹುತೇಕ ಶಾಸಕರು ಸಿದ್ದರಾಮಯ್ಯ ಪರ ಇದ್ದಾರೆ. ಶಾಸಕಾಂಗ ಸಭೆಯಲ್ಲೂ ಇದನ್ನೇ ಹೇಳುತ್ತೇನೆ’ ಎಂದಿದ್ದರು. ಮಾಧ್ಯಮದವರು ಡಿಕೆಶಿ ಬಗ್ಗೆ ಕೇಳಿದಾಗ ‘ಅವರಿಗೆ ಇನ್ನೂ ಟೈಮಿದೆ’ ಎಂದು ಪ್ರತಿಪಾದಿಸಿದ್ದರು. ಇನ್ನೊಂದೆಡೆ ಸತೀಶ್ ಜಾರಕಿಹೊಳಿ ಬೆಳಗಾವಿ ಕಾಂಗ್ರೆಸ್ ಮಹಾ ಅಧಿವೇಶನ ಮತ್ತು ‘ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾವೇಶ’ದ ವೇಳೆ ‘ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ’ ಎಂದು ಬಹಿರಂಗವಾಗಿಯೇ ಡಿಕೆಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.

ಹೈಕಮಾಂಡ್ ನಾಯಕರೆದುರು ಪದೇ ಪದೇ ಕೆಪಿಸಿಸಿ ಅಧ್ಯಕ್ಷರನ್ನು ಬದಲಿಸಿ ಎಂದು ಒತ್ತಾಯಿಸುತ್ತಿರುವುದು ಇದೇ ಸತೀಶ್ ಜಾರಕಿಹೊಳಿ ಮತ್ತು ರಾಜಣ್ಣ. ಕೆಪಿಸಿಸಿ ಡಿಕೆಶಿಯ ವೈಯಕ್ತಿಕ ಆಸ್ತಿಯಾದಂತಾಗಿದೆ. ಸ್ವತಃ ಒಕ್ಕಲಿಗರಾಗಿದ್ದು ಇನ್ನೊಬ್ಬ ಒಕ್ಕಲಿಗ ನಾಯಕನನ್ನು ಕಾರ್ಯಾಧ್ಯಕ್ಷನನ್ನಾಗಿ ಮಾಡಿದ್ದಾರೆ. (ಇದೇ ಕಾರಣಕ್ಕೆ ಜಿ.ಸಿ. ಚಂದ್ರಶೇಖರ್ ಒಮ್ಮೆ ರಾಜಣ್ಣ ವಿರುದ್ಧ ಹಾರಾಡಿ ಮರುದಿನವೇ ಮುದುಡಿ ಕೂತದ್ದು) ಮಹಿಳಾ ಘಟಕ, ಯುವ ಘಟಕ, ಸೇವಾದಳ, ವೈದ್ಯರ ವಿಭಾಗ, ಪದವೀಧರ ವಿಭಾಗ, ಕಾರ್ಮಿಕ ವಿಭಾಗ, ಸಂಶೋಧನಾ ವಿಭಾಗಗಳ ಅಧ್ಯಕ್ಷಗಾದಿಯನ್ನೂ ಒಕ್ಕಲಿಗರಿಗೇ ಕೊಟ್ಟಿದ್ದಾರೆ. ಡಿಕೆಶಿ ಕಾಂಗ್ರೆಸ್ ಪಕ್ಷದ ಸಾಮಾಜಿಕ ನ್ಯಾಯತತ್ವಕ್ಕೆ ಸಂಪೂರ್ಣ ವಿರುದ್ಧವಾಗಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಜೊತೆಗೆ ಶೋಷಿತರ ಸಮಾವೇಶ ನಡೆಸಲು ಅನುಮತಿ ಕೊಡಿ ಎಂದು ದುಂಬಾಲು ಬಿದ್ದಿದ್ದಾರೆ. ಇವರ ದೂರನ್ನು ಆಧರಿಸಿ ಮಲ್ಲಿಕಾರ್ಜುನ ಖರ್ಗೆ ಅವರು ಡಿಕೆಶಿಯನ್ನು ಕರೆಸಿ ಸ್ಪಷ್ಟೀಕರಣ ಕೇಳಿದ್ದಾರೆ. ಕ್ರಮೇಣ ಕೆಪಿಸಿಸಿಯ ಕುರ್ಚಿ ಕಾಲುಗಳು ಅಲುಗಾಡುತ್ತಿರುವುದರಿಂದ ಡಿಕೆಶಿ ಆತಂಕಗೊಂಡಿದ್ದಾರೆ. ಜೊತೆಗೆ ಸತೀಶ್ ಜಾರಕಿಹೊಳಿ ಮತ್ತು ರಾಜಣ್ಣ ವಿರುದ್ಧ್ದ ಆಕ್ರೋಶಗೊಂಡಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಹೀಗೆ ಡಿಕೆಶಿಗೆ ಒಂದರ ಹಿಂದೆ ಒಂದು ಹಿನ್ನಡೆಯಾಗುವುದಕ್ಕೂ ಹನಿ ಟ್ರ್ಯಾಪ್ ತಂಡ ರಾಜಣ್ಣ ಮತ್ತವರ ಮಗ ರಾಜೇಂದ್ರ ಅವರನ್ನು ಸಂಪರ್ಕಿಸಿರುವುದಕ್ಕೂ ಅದೇನು ನಂಟಿದೆಯೋ ಏನೋ... ಡಿಕೆಶಿ ಮಾಡಬೇಕಿರುವ ರಾಜ್ಯ ರಾಜಕಾರಣಕ್ಕೆ ಹೋಲಿಸಿಕೊಂಡರೆ ಬೆಳಗಾವಿ ವಿಷಯ ಹನಿ ಮಾತ್ರ. ಆದರೂ ಬೆಳಗಾವಿ ಮೂಲಕವೇ ಬೆಂಗಳೂರು ತಲುಪಬೇಕು ಎಂದು ತಲೆಕೆಡಿಸಿಕೊಂಡಿದ್ದಾರೆ. ಅವರ ತಲೆಗೆ ಯಾರೋ ವಿಷದ ‘ಹನಿ’ ಹಾಕಿದ್ದಾರೆ. ಸತೀಶ್ ಜಾರಕಿಹೊಳಿ ಕುಮ್ಮಕ್ಕಿನಿಂದಲೇ ನಾನು ಅವರ ವಿರುದ್ಧ ತಿರುಗಿಬಿದ್ದಿದ್ದೇನೆ ಎಂದು ಭಾವಿಸಿ ಹನಿ ಟ್ರ್ಯಾಪ್ ತಂಡವನ್ನು ನಮ್ಮೆಡೆಗೆ ಕಳುಹಿಸಿಕೊಟ್ಟಿರುವುದು ಡಿಕೆಶಿಯೇ ಎನ್ನುವುದು ರಾಜಣ್ಣ ಅವರ ಗುಮಾನಿ. ಇದು ಹನಿ ಟ್ರ್ಯಾಪ್ ಹಿಂದಿನ ಅಸಲಿ ಕಹಾನಿ. ಬೆಳಗಾವಿ ‘ಹನಿ’ಗೆ ರಾಜ್ಯ ರಾಜಕಾರಣ ಟ್ರ್ಯಾಪ್ ಆಗಿದೆ ಎನ್ನುವುದಕ್ಕೆ ಇನ್ನೊಂದು ಪೂರಕ ಸಂಗತಿ ಏನೆಂದರೆ ರಾಜಣ್ಣ ಸದನದಲ್ಲಿ ಮಾತನಾಡುವ ಮುನ್ನವೇ ಹೊರಗೆ ಸತೀಶ್ ಜಾರಕಿಹೊಳಿ ಹನಿ ಟ್ರ್ಯಾಪ್ ಪ್ರಯತ್ನ ನಡೆದಿದೆ ಎಂದು ಹೇಳಿದ್ದು.

ಟ್ರ್ಯಾಕ್ ತಪ್ಪಿದ ಹನಿ ಟ್ರ್ಯಾಪ್ ಅಸ್ತ್ರ!

ರಾಜಣ್ಣ ಮತ್ತು ಸತೀಶ್ ಜಾರಕಿಹೊಳಿಯನ್ನು ನಿಯಂತ್ರಿಸಲೆಂದು ಡಿಕೆಶಿ ಹನಿ ಟ್ರ್ಯಾಪ್ ಮಾಡಿಸಿದ್ದಾರೆ ಎನ್ನಲು ಪುರಾವೆಗಳಿಲ್ಲ. ಆದರೂ, ಅಂಥ ಕೆಲಸಕ್ಕೆ ಕೈಹಾಕಿದ್ದರೂ, ಯಶಸ್ವಿಯೂ ಆಗಿಲ್ಲ. ಅವರ ಗುರಿ ತಪ್ಪಿದೆ. ದಾರಿ ತಪ್ಪಿದಾಗ ಗುರಿ ತಪ್ಪುವುದು ಸಹಜ. ಡಿಕೆಶಿ ಮಾತ್ರವಲ್ಲ, ಕದನ ವಿರಾಮ ಘೋಷಿಸಿದ ಸಂದರ್ಭದಲ್ಲೂ ರಣ ಕಹಳೆ ಊದುವ ರಾಜಣ್ಣ ಗುರಿಯೂ ಈಡೇರಿಲ್ಲ. ಸದನದಲ್ಲಿ ಡಿಕೆಶಿಯ ಒಂದು ಕಣ್ಣನ್ನು ತೆಗೆಯಲು ಹೋಗಿ ರಾಜಣ್ಣ ತಮ್ಮ ಎರಡು ಕಣ್ಣುಗಳನ್ನು ಕಳೆದುಕೊಂಡಿದ್ದಾರೆ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X