ಇಂತಹ ನಿರ್ಲಕ್ಷ್ಯ ಸಲ್ಲದು
ಮಾನ್ಯರೇ,
ನವೋದಯ ಸಾಹಿತ್ಯ ರತ್ನಗಳಲ್ಲಿ ಒಬ್ಬರಾದ ಪು.ತಿ.ನರಸಿಂಹಾಚಾರ್ ಅವರ ಸಮಾಧಿಯನ್ನು ಅವರ ಜನ್ಮದಿನವೇ ಕೆಡವಿ ಕಸದ ತೊಟ್ಟಿಮಾಡಿರುವುದು ಅಧಿಕಾರಿಗಳ ಬೇಜವಾಬ್ದಾರಿತನ ಎದ್ದು ಕಾಣುತ್ತದೆ. ಪು.ತಿ.ನರಸಿಂಹಾಚಾರ್ ಕಾಲನ ವಶವಾಗಿ ೨೬ ವರ್ಷಗಳು ಕಳೆದರೂ ಸಮಾಧಿಯನ್ನು ಸ್ಮಾರಕವಾಗಿ ನಿರ್ಮಿಸದೆ ನಿರ್ಲಕ್ಷ್ಯ ತೋರಿದವರ ಮೇಲೆ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಕನ್ನಡ ಸಾಹಿತ್ಯಕ್ಕೆ ಮಹಾನ್ ಕೊಡುಗೆ ನೀಡಿದ ಈ ಕವಿಗೆ ಈ ರೀತಿ ಅವಮಾನ ಸರಿಯಲ್ಲ. ಇದು ಇವರ ಅಭಿಮಾನಿಗಳಿಗೆ ಮತ್ತು ಕನ್ನಡ ಸಾಹಿತ್ಯಾಭಿಮಾನಿಗಳಿಗೆ ಅವಮಾನ ಮಾಡಿದಂತೆ. ಈ ರೀತಿಯ ಘಟನೆ ಮುಂದೆ ನಡೆಯದಂತೆ ಸರಕಾರ ಎಚ್ಚರಿಕೆ ವಹಿಸಬೇಕಾಗಿದೆ.
-ಭೀಮಾಶಂಕರ ದಾದೆಲಿ ಹಳಿಸಗರ,
ಶಹಾಪುರ
Next Story