Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ದೊರೆಯಾಗಬೇಕೆಂಬ ದಲಿತ ನಾಯಕರ ಛಲ!

ದೊರೆಯಾಗಬೇಕೆಂಬ ದಲಿತ ನಾಯಕರ ಛಲ!

ಧರಣೀಶ್ ಬೂಕನಕೆರೆಧರಣೀಶ್ ಬೂಕನಕೆರೆ12 Feb 2025 12:02 PM IST
share
ದೊರೆಯಾಗಬೇಕೆಂಬ ದಲಿತ ನಾಯಕರ ಛಲ!
ಇದೀಗ ದಲಿತ ರಾಜಕಾರಣ ರಾಷ್ಟ್ರ ರಾಜಧಾನಿ ದಿಲ್ಲಿ ಕಡೆ ಹೊರಳುತ್ತಿದೆ. ತಾವು ನಡೆಸಲು ಉದ್ದೇಶಿಸಿರುವ ಎಸ್‌ಸಿ/ಎಸ್‌ಟಿ ಸಮುದಾಯಗಳ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಅಜೆಂಡಾ. ಆದರೆ ಅದು ಸಮಾವೇಶ ನಡೆಸಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷಕ್ಕೆ ಒಳಿತು ಮಾಡುವ ಉದ್ದೇಶವನ್ನಷ್ಟೇ ಹೊಂದಿಲ್ಲ ಎನ್ನುವುದು ವಾಸ್ತವ.

ಕರ್ನಾಟಕದ ದಲಿತ ರಾಜಕಾರಣ ನಿರ್ಣಾಯಕ ಹಂತ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ. ದಲಿತ ನಾಯಕರಲ್ಲಿ ಹಿಂದೆಂದೂ ಕಂಡಿರದಿದ್ದ ಒಗ್ಗಟ್ಟು ಈಗ ಕಾಣಿಸತೊಡಗಿದೆ. ಒಂದೊಮ್ಮೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವುದಾದರೆ ಈಗಲೇ ದಲಿತ ನಾಯಕರಿಗೆ ಸಿಎಂ ಪಟ್ಟ ಕೊಡಿ ಎನ್ನುವ ಪಟ್ಟು ಹಾಕಲಾಗುತ್ತಿದೆ ಅಥವಾ 2028ಕ್ಕೆ ಶತಾಯಗತಾಯ ದಲಿತ ನಾಯಕನೊಬ್ಬ ನಾಡನ್ನಾಳುವ ದೊರೆ ಆಗಬೇಕು ಎಂಬ ಛಲ ಹುಟ್ಟಿಕೊಂಡಿದೆ. ಸದ್ಯಕ್ಕೆ ಸಿದ್ದರಾಮಯ್ಯರಿಗೆ ಬೆಂಬಲ ನೀಡಿ ಮುಂದೆ ಅವರ ನೆರವು ಪಡೆಯುವ ಒಡಂಬಡಿಕೆ ಆಗಿರುವ ಸುಳಿವೂ ಸಿಗುತ್ತಿದೆ.

ಗೃಹ ಸಚಿವ ಡಾ. ಜಿ. ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಹುದ್ದೆ ಮೇಲೆ ಕಣ್ಣಿಟ್ಟಿರುವ ದಲಿತ ನಾಯಕರು. ಸಿದ್ದರಾಮಯ್ಯ ಅವರನ್ನು ಬೆಂಬಲಿಸುವುದೂ ಸೇರಿದಂತೆ ನಾನಾ ಕಾರ್ಯಸೂಚಿಗಳನ್ನು ಇಟ್ಟುಕೊಂಡು ಇವರು ಆಗಾಗ ಊಟ-ಉಭಯ ಕುಶಲೋಪಹರಿ ಹೆಸರಲ್ಲಿ ಸಭೆ ಸೇರುತ್ತಿದ್ದರು. ಜೊತೆಯಲ್ಲಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಮತ್ತಿತರ ದಲಿತ ಶಾಸಕರು, ವಿಧಾನ ಪರಿಷತ್ ಸದಸ್ಯರೂ ಇರುತ್ತಿದ್ದರು. ಆದರೂ ‘ದಲಿತರು ಮುಖ್ಯಮಂತ್ರಿ ಸ್ಥಾನವನ್ನು ಪಡದೇ ತಿರಬೇಕೆಂಬ’ ತೀವ್ರತೆ ಇರಲಿಲ್ಲ. ದಲಿತ ನಾಯಕರು ರಾಜ್ಯದ ಮೇರು ಸ್ಥಾನಕ್ಕೆ ಹಕ್ಕೊತ್ತಾಯ ಮಾಡುವಂತೆ ರೊಚ್ಚಿಗೆಬ್ಬಿಸಿದ್ದು ಮಾತ್ರ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನಡೆ.

ಯಾವಾಗ ಡಿ.ಕೆ. ಶಿವಕುಮಾರ್ ದಲಿತ ನಾಯಕರ ಡಿನ್ನರ್ ಮೀಟಿಂಗ್‌ಗೆ ಹೈಕಮಾಂಡ್ ಪ್ರತಿನಿಧಿ ರಣದೀಪ್ ಸಿಂಗ್ ಸುರ್ಜೆವಾಲಾ ಮುಖಾಂತರ ತಡೆಯಾಜ್ಞೆ ತಂದರೋ ಆಗ ಎಲ್ಲರೂ ಒಂದಾದರು. ಪ್ರತ್ಯೇಕವಾಗಿ ತಮ್ಮದೇ ಮಾರ್ಗಗಳ ಮುಖಾಂತರ ಮುಖ್ಯಮಂತ್ರಿ ಕುರ್ಚಿ ಬಳಿ ತೆರಳಲು ತೆವಳುತ್ತಿದ್ದ ಪರಮೇಶ್ವರ್, ಎಚ್.ಸಿ. ಮಹದೇವಪ್ಪ ಮತ್ತು ಸತೀಶ್ ಜಾರಕಿಹೊಳಿ, ದಲಿತ ನಾಯಕರ ಸಭೆ ರದ್ದಾದ ಬಳಿಕ ‘ಯಾರಾದರೂ ಆಗಲಿ, ನಮ್ಮವರೊಬ್ಬರಾಗಲಿ’ ಎಂಬ ನಿಲುವಿಗೆ ಬಂದರು. ಇದಕ್ಕೂ ಮುನ್ನ ‘‘ನಾನು ಎಂಟು ವರ್ಷ ಕೆಪಿಸಿಸಿ ಮುನ್ನಡೆಸಿದ್ದೇನೆ ಮುಖ್ಯಮಂತ್ರಿ ಸ್ಥಾನಕ್ಕೆ ನನ್ನನ್ನು ಪರಿಗಣಿಸಿ’’ ಎಂದು ಸೋನಿಯಾ ಗಾಂಧಿ ಬಳಿ ಅಲವತ್ತುಕೊಳ್ಳುತ್ತಿದ್ದ ಪರಮೇಶ್ವರ್ ಸ್ಥಳೀಯವಾಗಿ ಸಿದ್ದರಾಮಯ್ಯ ಅವರನ್ನು ನಂಬಿಕೊಂಡಿದ್ದರು. ಸಿಎಂ ಸ್ಥಾನದಿಂದ ಕೆಳಗಿಳಿಸಿದರೆ ಸಿದ್ದರಾಮಯ್ಯ ತನ್ನ ಹೆಸರು ಹೇಳಬಹುದೆಂದು ಎಚ್.ಸಿ. ಮಹದೇವಪ್ಪ ನಂಬಿಕೊಂಡಿದ್ದರು. ಸತೀಶ್ ಜಾರಕಿಹೊಳಿ ಏಕಕಾಲಕ್ಕೆ ಸಿದ್ದರಾಮಯ್ಯ ಮತ್ತು ಮಲ್ಲಿಕಾರ್ಜುನ ಖರ್ಗೆ ಇಬ್ಬರ ಮನವನ್ನೂ ಗೆದ್ದಿದ್ದರು ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ಇದೇ ಹೊತ್ತಿಗೆ ಜಾತಿ ಜನಗಣತಿ ತಡೆಯಲು ಒಕ್ಕಲಿಗರು ಮತ್ತು ಲಿಂಗಾಯತರು ಕೂಡ ಸಭೆ ನಡೆಸಲು ಯೋಚಿಸುತ್ತಿದ್ದರು. ದಲಿತ ಮತ್ತು ಲಿಂಗಾಯತ ನಾಯಕರ ಸಭೆಗಳು ಮುಖ್ಯಮಂತ್ರಿ ಆಗುವ ತನ್ನ ಅವಕಾಶ ತಪ್ಪಿಸಲು ನಡೆಯುತ್ತಿರುವ ತಂತ್ರಗಾರಿಕೆ ಎಂದು ಭಾವಿಸಿದ ಡಿ.ಕೆ. ಶಿವಕುಮಾರ್ ಹೈಕಮಾಂಡ್ ಮೂಲಕ ಎಲ್ಲಾ ಸಭೆಗಳನ್ನು ರದ್ದು ಮಾಡಿಸಿದರು. ಇನ್ನೊಂದೆಡೆ ಜಾತಿ ಜನಗಣತಿ ವಿಷಯ ಪಕ್ಕಕ್ಕೆ ಸರಿದಿದ್ದರಿಂದ ಒಕ್ಕಲಿಗ ಮತ್ತು ಲಿಂಗಾಯತ ನಾಯಕರಿಗೆ ಮತ್ತೆ ಸಭೆ ಸೇರುವ ಅಗತ್ಯ ಉದ್ಭವಿಸಲಿಲ್ಲ. ತಮ್ಮ ಸಭೆಗೆ ಮಾತ್ರ ಏಕೆ ತಡೆ ಎಂಬ ದಲಿತ ನಾಯಕರ ಪ್ರಶ್ನೆಗೆ ಉತ್ತರವೂ ಸಿಗಲಿಲ್ಲ.

ಖುದ್ದು ಮಲ್ಲಿಕಾರ್ಜುನ ಖರ್ಗೆಯವರೇ ‘ಬಾಯಿ ಬಿಡಬೇಡಿ’ ಎಂಬ ಕಟ್ಟಪ್ಪಣೆ ಹೊರಡಿಸಿದ್ದರಿಂದ ದಲಿತ ನಾಯಕರು ಸ್ವಲ್ಪದಿನ ಬಿಟ್ಟು ಸಭೆ ಸೇರಲು ನಿಶ್ಚಯಿಸಿದ್ದರು. ಆ ಸ್ವಲ್ಪ ದಿನ ಮುಗಿದಿದೆ. ಜೊತೆಗೆ ರಾಜ್ಯ ಹೈಕೋರ್ಟ್ ಮುಡಾ ಪ್ರಕರಣವನ್ನು ಸಿಬಿಐಗೆ ಒಪ್ಪಿಸುವ ಅಗತ್ಯ ಇಲ್ಲ ಎಂಬ ಮಹತ್ವದ ತೀರ್ಪು ನೀಡಿದ್ದು ಸಿದ್ದರಾಮಯ್ಯ ನಿಟ್ಟುಸಿರು ಬಿಡುವಂತಾಗಿದೆ. ಇದರ ಬೆನ್ನಲ್ಲೇ ದಲಿತ ನಾಯಕರು ದಾವಣಗೆರೆಯಲ್ಲಿ ಮತ್ತೆ ಸಭೆ ನಡೆಸಿದ್ದಾರೆ. ಅದರಲ್ಲಿ ಸಿದ್ದರಾಮಯ್ಯ ಪುತ್ರ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ದರಾಮಯ್ಯ ಕೂಡ ಉಪಸ್ಥಿತರಿದ್ದದ್ದು ವಿಶೇಷ.

ಇದೀಗ ದಲಿತ ರಾಜಕಾರಣ ರಾಷ್ಟ್ರ ರಾಜಧಾನಿ ದಿಲ್ಲಿ ಕಡೆ ಹೊರಳುತ್ತಿದೆ. ತಾವು ನಡೆಸಲು ಉದ್ದೇಶಿಸಿರುವ ಎಸ್‌ಸಿ/ಎಸ್‌ಟಿ ಸಮುದಾಯಗಳ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಆಹ್ವಾನಿಸುವುದು ಮೇಲ್ನೋಟಕ್ಕೆ ಕಂಡುಬರುತ್ತಿರುವ ಅಜೆಂಡಾ. ಆದರೆ ಅದು ಸಮಾವೇಶ ನಡೆಸಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷಕ್ಕೆ ಒಳಿತು ಮಾಡುವ ಉದ್ದೇಶವನ್ನಷ್ಟೇ ಹೊಂದಿಲ್ಲ ಎನ್ನುವುದು ವಾಸ್ತವ. ರಾಹುಲ್ ಗಾಂಧಿ ಅವರ ಎದುರು ದಲಿತರು ಮುಖ್ಯಮಂತ್ರಿ ಆಗಲೇಬೇಕು ಎಂಬ ಹಕ್ಕೊತ್ತಾಯ ಮಂಡಿಸುವುದು, ಅದಕ್ಕಾಗಿ ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶ ರವಾನಿಸುವುದು, ರಾಜ್ಯದಲ್ಲಿ ಪ್ರಚಂಡ ಬಹುಮತ ಇರುವ ಈಗಲ್ಲದಿದ್ದರೆ ಮುಂದೆ ದಲಿತರು ಮುಖ್ಯಮಂತ್ರಿ ಆಗುವುದು ಇನ್ನೂ ಕಷ್ಟವಾಗುತ್ತದೆ ಎನ್ನುವ ಸಂಗತಿಯನ್ನು ಮನವರಿಕೆ ಮಾಡಿಕೊಡುವುದು ಸೇರಿದಂತೆ ಮಹತ್ವದ ಕಾರ್ಯಸೂಚಿಗಳು ಇವೆ. ರಾಹುಲ್ ಗಾಂಧಿ ಅವರ ಮುತುವರ್ಜಿಯಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಕಾಂಗ್ರೆಸ್ ಪಕ್ಷ ಪಂಜಾಬಿನಲ್ಲಿ ದಲಿತ ಸಮುದಾಯದ ಚರಂಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿ ಮಾಡಿತ್ತು. ಇದೇ ಹಿನ್ನೆಲೆಯಲ್ಲಿ ರಾಜ್ಯ ನಾಯಕರು ರಾಹುಲ್ ಗಾಂಧಿ ವಿಶ್ವಾಸ ಗಳಿಸುವ ತಯಾರಿಯಲ್ಲಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಬೆಂಬಲ!

ರಾಜ್ಯದ ದಲಿತ ನಾಯಕರ ಪ್ರಯತ್ನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಬೆಂಬಲ ಇದೆ. ಸುಮಾರು ಐದು ದಶಕ ರಾಜಕಾರಣ ಮಾಡಿಯೂ ಮುಖ್ಯಮಂತ್ರಿ ಹುದ್ದೆ ಪಡೆಯಲು ಸಾಧ್ಯವಾಗಲಿಲ್ಲ ಎಂಬ ನೋವು ಅವರದು. ಅದನ್ನು ಅವರು ಖಾಸಗಿಯಾಗಿ ಮಾತನಾಡುವಾಗ ಹೇಳಿಕೊಳ್ಳುತ್ತಾರೆ. ಅದರಿಂದಾಗಿ ದಲಿತರನ್ನು ಮುಖ್ಯಮಂತ್ರಿ ಮಾಡುವುದಾದರೆ ಅವರಿಗೇ ಪ್ರಥಮ ಪ್ರಾಶಸ್ತ್ಯ ಎಂದು ಹೇಳಲಾಗುತ್ತಿತ್ತು. ಆದರೆ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮತ್ತು ಎಐಸಿಸಿಯಂತಹ ಉನ್ನತ ಹುದ್ದೆ ಹೊಂದಿರುವುದರಿಂದ ಜೊತೆಗೆ ಹೈಕಮಾಂಡ್ ಅವರನ್ನು ರಾಜ್ಯಕ್ಕೆ ಕಳುಹಿಸಲು ಒಪ್ಪದ ಕಾರಣಕ್ಕೆ ಅವರೀಗ ಮುಖ್ಯಮಂತ್ರಿ ಹುದ್ದೆಯ ರೇಸ್‌ನಲ್ಲಿ ಇಲ್ಲ. ಬೇರೆಯವರು ಯಾರೇ ಆದರೂ ಬೆಂಬಲ ನೀಡಲು ಒಪ್ಪಿದ್ದಾರೆ ಎನ್ನುತ್ತವೆ ಕಾಂಗ್ರೆಸ್ ಮೂಲಗಳು.

ವೇದಿಕೆ ಸಿದ್ಧಪಡಿಸುತ್ತಿರುವ ಸತೀಶ್

ಎಲ್ಲರಿಗಿಂತ ಮೊದಲೇ ದಿಲ್ಲಿ ತಲುಪಿರುವ ಸತೀಶ್ ಜಾರಕಿಹೊಳಿ ಅವರು ದಲಿತ ರಾಜಕಾರಣ, ದಲಿತ ಮುಖ್ಯಮಂತ್ರಿ ಹುದ್ದೆಯ ಬೇಡಿಕೆ, ದಲಿತ ಸಮಾವೇಶಗಳ ಬಗ್ಗೆ ಹೈಕಮಾಂಡಿಗೆ ಸ್ಪಷ್ಟ ಸಂದೇಶ ರವಾನಿಸಲು ಏನೆಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೋ ಅವೆಲ್ಲವನ್ನೂ ಮಾಡುತ್ತಿದ್ದಾರೆ. ಈಗಾಗಲೇ ಎಐಸಿಸಿ ಸಂಘಟನಾ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ರಾಹುಲ್ ಗಾಂಧಿ ಅವರ ಜೊತೆ ಚರ್ಚಿಸಬೇಕಿರುವ ವಿಷಯಗಳನ್ನು ತಿಳಿಸಿದ್ದಾರೆ. ಸತೀಶ್ ಜಾರಕಿಹೊಳಿ ವೇದಿಕೆ ನಿರ್ಮಿಸಿದ ಬಳಿಕ ಉಳಿದ ನಾಯಕರು ದಿಲ್ಲಿ ತಲುಪುತ್ತಾರೆ ಎನ್ನಲಾಗುತ್ತಿದೆ.

ಜಾತಿ ಜನಗಣತಿಗೂ ಒತ್ತು!

ರಾಹುಲ್ ಗಾಂಧಿ ಅವರ ಭೇಟಿ ವೇಳೆ ನಾಯಕರು ರಾಜ್ಯದ ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ವೈಜ್ಞಾನಿಕವಾಗಿ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ರಾಜ್ಯ ಸರಕಾರ ಒಪ್ಪಿ ಬಹಿರಂಗ ಪಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸೂಚಿಸುವಂತೆ ಒತ್ತಡ ಹೇರುವ ಸಾಧ್ಯತೆ ಇದೆ. ಸದ್ಯ ಸೋರಿಕೆಯಾಗಿರುವ ಮಾಹಿತಿಗಳು ಪರಿಶಿಷ್ಟ ಜಾತಿ ಮತ್ತು ಪಂಗಡಗಳು ನಿರ್ಣಾಯಕ ಪಾತ್ರ ವಹಿಸಬಲ್ಲವು ಎಂಬ ಆತ್ಮವಿಶ್ವಾಸವನ್ನು ಮೂಡಿಸಿವೆ. ಜಾತಿ ಗಣತಿ ವರದಿ ಬಿಡುಗಡೆಯಾದರೆ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವ ಅಹಿಂದ ವರ್ಗಗಳಿಗೆ ಅನುಕೂಲ ಆಗಲಿದೆ. ಅಹಿಂದ ವರ್ಗಗಳಿಗೆ ಲಾಭವಾದರೆ ಅದರ ಪ್ರಯೋಜನ ಕಾಂಗ್ರೆಸ್ ಪಕ್ಷಕ್ಕೂ ಆಗಲಿದೆ ಎನ್ನುವ ಅಂಶವನ್ನು ರಾಹುಲ್ ಗಾಂಧಿ ಅವರ ಬಳಿ ಚರ್ಚಿಸಬೇಕು. ಸ್ವತಃ ರಾಹುಲ್ ಗಾಂಧಿ ಅವರು ಜಾತಿ ಗಣತಿ ವರದಿ ಜಾರಿ ಬಗ್ಗೆ ಉತ್ಸಾಹಿತರಾಗಿರುವುದರಿಂದ ನಮ್ಮ ಬೇಡಿಕೆಗೂ ಪುರಸ್ಕಾರ ಸಿಗಬಹುದು ಎನ್ನುವುದು ರಾಜ್ಯ ನಾಯಕರ ಲೆಕ್ಕಾಚಾರವಾಗಿದೆ. ಒಟ್ಟಿನಲ್ಲಿ ದಲಿತ ನಾಯಕರ ಒಗ್ಗಟ್ಟು, ಮುಖ್ಯಮಂತ್ರಿ ಸ್ಥಾನವನ್ನು ಪಡೆಯಲೇಬೇಕು ಎಂಬ ಛಲ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಸೃಷ್ಟಿಸುತ್ತಿದೆ. ಮುಂದೆ ಇದು ಇನ್ನಷ್ಟು ತೀವ್ರತೆ ಪಡೆಯುವ ಸಾಧ್ಯತೆಯೂ ಇದೆ.

share
ಧರಣೀಶ್ ಬೂಕನಕೆರೆ
ಧರಣೀಶ್ ಬೂಕನಕೆರೆ
Next Story
X