Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭ್ರಷ್ಟರಾಗಿದ್ದ ಐವರು ನ್ಯಾಯಾಧೀಶರನ್ನೇ...

ಭ್ರಷ್ಟರಾಗಿದ್ದ ಐವರು ನ್ಯಾಯಾಧೀಶರನ್ನೇ ಸ್ಥಾನಭ್ರಷ್ಟರನ್ನಾಗಿಸಿದ್ದ ವಕೀಲ - ಇಕ್ಬಾಲ್ ಮುಹಮ್ಮದ್ ಅಲಿ ಛಾಗ್ಲಾ

ಎಸ್. ಸುದರ್ಶನ್ಎಸ್. ಸುದರ್ಶನ್17 Jan 2025 11:14 AM IST
share
ಭ್ರಷ್ಟರಾಗಿದ್ದ ಐವರು ನ್ಯಾಯಾಧೀಶರನ್ನೇ ಸ್ಥಾನಭ್ರಷ್ಟರನ್ನಾಗಿಸಿದ್ದ ವಕೀಲ - ಇಕ್ಬಾಲ್ ಮುಹಮ್ಮದ್ ಅಲಿ ಛಾಗ್ಲಾ
ಒಬ್ಬ ನ್ಯಾಯಾಧೀಶ ಭ್ರಷ್ಟ ಎಂದು ಗೊತ್ತಾದಾಗ ಸಾಮಾನ್ಯವಾಗಿ, ಏನನ್ನೂ ಮಾಡಲು ಆಗದು ಎಂದು ಸುಮ್ಮನಾಗುವ ಸಾಧ್ಯತೆಯೇ ಹೆಚ್ಚು. ಆದರೆ ಇಕ್ಬಾಲ್ ಮುಹಮ್ಮದ್ ಅಲಿ ಛಾಗ್ಲಾ ಮಾತ್ರ ಐವರು ನ್ಯಾಯಾಧೀಶರನ್ನು ಅವರು ಹೊಂದಿದ್ದ ಪದವಿಯಿಂದ ಕೆಳಗಿಳಿಸಿ ಬೇರೆಯೇ ಮಾದರಿಯನ್ನು ಸೃಷ್ಟಿಸಿದ್ದರು.

ಅವರೊಬ್ಬ ವಕೀಲರು, ಸಾಧಾರಣ ವಕೀಲರಲ್ಲ.

ಒಬ್ಬರನ್ನಲ್ಲ, ಐವರು ಭ್ರಷ್ಟ ನ್ಯಾಯಾಧೀಶರನ್ನು ಸ್ಥಾನಭ್ರಷ್ಟರನ್ನಾಗಿಸಿದ್ದ ವಕೀಲ.

ಆ ಐವರಲ್ಲಿ ಕೆಲವರನ್ನು ವರ್ಗಾವಣೆ ಮಾಡಲಾಯಿತು, ಮತ್ತೆ ಕೆಲವರು ರಾಜೀನಾಮೆ ನೀಡಬೇಕಾಯಿತು.

ಒಬ್ಬ ನ್ಯಾಯಾಧೀಶ ಭ್ರಷ್ಟ ಎಂದು ಗೊತ್ತಾದಾಗ ಸಾಮಾನ್ಯವಾಗಿ, ಏನನ್ನೂ ಮಾಡಲು ಆಗದು ಎಂದು ಸುಮ್ಮನಾಗುವ ಸಾಧ್ಯತೆಯೇ ಹೆಚ್ಚು. ಆದರೆ ಆ ವಕೀಲರೊಬ್ಬರು ಮಾತ್ರ ಐವರು ನ್ಯಾಯಾಧೀಶರನ್ನು ಅವರು ಹೊಂದಿದ್ದ ಪದವಿಯಿಂದ ಕೆಳಗಿಳಿಸಿ ಬೇರೆಯೇ ಮಾದರಿಯನ್ನು ಸೃಷ್ಟಿಸಿದ್ದರು.

ಅವರ ಹೆಸರು ಇಕ್ಬಾಲ್ ಮುಹಮ್ಮದ್ ಅಲಿ ಛಾಗ್ಲಾ.

ಇಕ್ಬಾಲ್ ಮುಹಮ್ಮದ್ ಅಲಿ ಛಾಗ್ಲಾ ಬಾಂಬೆ ಹೈಕೋರ್ಟ್ ನ ಪ್ರಸಿದ್ಧ ವಕೀಲರಾಗಿದ್ದರು.

ಅವರ ತಂದೆ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದರು. ನ್ಯಾ. ಎಂ.ಸಿ. ಛಾಗ್ಲಾ ಬಾಂಬೆ ಹೈಕೋರ್ಟ್‌ನ ಮೊದಲ ಭಾರತೀಯ ಮುಖ್ಯ ನ್ಯಾಯಮೂರ್ತಿಯಾಗಿದ್ದರು.

ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಇತಿಹಾಸ ಮತ್ತು ಕಾನೂನಿನಲ್ಲಿ ಎಂಎ ಪದವಿ ಪಡೆದ ನಂತರ ಇಕ್ಬಾಲ್ ಛಾಗ್ಲಾ ವಕೀಲಿಕೆ ಶುರು ಮಾಡಿದರು. ದೀರ್ಘ ಕಾಲದವರೆಗೆ ಬಾಂಬೆ ಬಾರ್ ಅಸೋಸಿಯೇಷನ್‌ನ ಅಧ್ಯಕ್ಷರಾಗಿದ್ದರು. ಅವರು ತಮ್ಮ ವಕೀಲಿ ವೃತ್ತಿಯಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಸಾಕಷ್ಟು ಹಣವನ್ನೂ ಸಂಪಾದಿಸಿದ್ದರು. ಆದರೆ ಅವರು ಮಾಡಿದ ಒಂದು ಕೆಲಸ ಇಡೀ ದೇಶದಲ್ಲಿ ಬೇರೆ ಯಾವುದೇ ವಕೀಲರು ಮಾಡಿರದೇ ಇರುವಂಥದ್ದು ಎನ್ನಬಹುದು.

ಅವರನ್ನು ಸಿವಿಲ್ ಪ್ರಕರಣಗಳಲ್ಲಿ ಪರಿಣಿತ ವಕೀಲರೆಂದು ಪರಿಗಣಿಸಲಾಗಿತ್ತು. ಕಂಪೆನಿ ವ್ಯವಹಾರಗಳ ವಿಷಯಗಳಲ್ಲಿನ ವಕಾಲತ್ತಿಗೂ ಅವರು ಬಹು ಬೇಡಿಕೆಯುಳ್ಳವರಾಗಿದ್ದರು. ಅವರು ಬಾಂಬೆ ಬಾರ್‌ನಲ್ಲಿ 60 ವರ್ಷಗಳ ಕಾಲ ವಕೀಲರಾಗಿದ್ದರು ಮತ್ತು ಅನೇಕ ಹೈ ಪ್ರೊಫೈಲ್ ಕೇಸ್‌ಗಳಲ್ಲಿ ತಮ್ಮ ಶಕ್ತಿ ತೋರಿಸಿದ್ದರು. ಹಲವು ಅಂತರ್‌ರಾಷ್ಟ್ರೀಯ ಪ್ರಕರಣಗಳಿಗೂ ಹಾಜರಾಗಿದ್ದರು, ಮಧ್ಯಸ್ಥಿಕೆ ವಹಿಸಿದ್ದರು ಮತ್ತು ವಿದೇಶಿ ನ್ಯಾಯಾಲಯಗಳಲ್ಲಿನ ವಿಚಾರಣೆಗಳ ಬಗ್ಗೆ ಸಲಹೆಯನ್ನೂ ನೀಡಿದ್ದರೆಂಬುದು ಅವರ ಅಸಾಧಾರಣ ಪ್ರತಿಭೆಗೆ ಸಾಕ್ಷಿ.

ಬಾಂಬೆ ಹೈಕೋರ್ಟ್‌ನಲ್ಲಿ ಇಕ್ಬಾಲ್ ಛಾಗ್ಲಾ ಅವರಿಗೆ ನ್ಯಾಯಾಧೀಶರಾಗುವ ಪ್ರಸ್ತಾಪ ಬಂದಿತ್ತು. ಆದರೆ ಅವರು ಅದನ್ನು ತಿರಸ್ಕರಿಸಿದ್ದರು. ಸುಪ್ರೀಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗುವ ಪ್ರಸ್ತಾವ ಬಂದಾಗಲೂ ಅವರು ತಿರಸ್ಕರಿಸಿದ್ದರು. ಅಂತಹ ವಕೀಲರು ತಮ್ಮ ವೃತ್ತಿ ಜೀವನದಲ್ಲಿ ಐವರು ನ್ಯಾಯಾಧೀಶರನ್ನು ಅವರ ಪದವಿಯಿಂದ ಕೆಳಗಿಳಿಸಿದ್ದರೆಂಬುದು ಮಹತ್ವದ ಸಂಗತಿ.

ಅವರು ತಮ್ಮ ಸಂದರ್ಶನವೊಂದರಲ್ಲಿ ಇದಕ್ಕೆ ಉತ್ತರಿಸಿದ್ದರು,

‘‘ಆ ನ್ಯಾಯಾಧೀಶರುಗಳ ವಿರುದ್ಧ ಯಾರ ಬಳಿಯೂ ಯಾವುದೇ ಸಾಕ್ಷ್ಯಗಳಿರಲಿಲ್ಲ. ಆದರೆ ಅವರನ್ನು ಎದುರಿಸದೇ ಹೋದರೆ ಮುಂದಿನ ಪೀಳಿಗೆ ಆ ನ್ಯಾಯಾಧೀಶರ ಭ್ರಷ್ಟತೆಯಲ್ಲಿ ನನ್ನ ಪಾಲೂ ಇದೆ ಎಂದು ಬೆರಳು ತೋರಿಸುತ್ತದೆ, ಗೊತ್ತಿದ್ದೂ ಸುಮ್ಮನೆ ಕುಳಿತಿದ್ದೀರಿ ಅಲ್ಲವೇ ಎಂದು ಪ್ರಶ್ನಿಸುತ್ತದೆ ಎಂಬ ಯೋಚನೆ ಬಂದಿದ್ದಾಗಿ’’ ಅವರು ಹೇಳಿದ್ದ ಆ ಸಂದರ್ಶನದ ಕೆಲ ಭಾಗಗಳು ಪತ್ರಕರ್ತ ರವೀಶ್ ಕುಮಾರ್ ಅವರ ವೀಡಿಯೊದಲ್ಲಿವೆ.

ಕಡೆಗೂ ಇಕ್ಬಾಲ್ ಛಾಗ್ಲಾ ದೊಡ್ಡ ಧೈರ್ಯ ಮಾಡಿದ್ದರು ಮತ್ತು ಅದರಲ್ಲಿ ಗೆದ್ದಿದ್ದರು. 1990ರ ದಶಕದ ಹೀರೋ ಆಗಿದ್ದರು.

1995ರಲ್ಲಿ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಆನಂದಮೋಯ್ ಭಟ್ಟಾಚಾರ್ಯ ರಾಜೀನಾಮೆ ನೀಡುವುದಕ್ಕೂ ಛಾಗ್ಲಾ ಕಾರಣರಾಗಿದ್ದರು.

ಯಾರ ಪ್ರಾಮಾಣಿಕತೆ ಬಗ್ಗೆ ಅನುಮಾನವೆದ್ದಿತ್ತೋ ಆ ಐವರು ನ್ಯಾಯಾಧೀಶರ ವಿರುದ್ಧ ಛಾಗ್ಲಾ ಅವರು ಬಾರ್ ಅಸೋಸಿಯೇಷನ್ ಪರವಾಗಿ ನಿರ್ಣಯ ಮಂಡಿಸಿದ್ದರು. ಹಾಗೆ ಐವರು ನ್ಯಾಯಾಧೀಶರಿಗೆ ಹೊರಬಾಗಿಲು ತೋರಿಸಿದ್ದ ವಕೀಲರೊಬ್ಬರು ಛಾಗ್ಲಾ ಅವರಿಗಿಂತ ಮೊದಲೂ ಇರಲಿಲ್ಲ, ಆನಂತರವೂ ಕಂಡಿಲ್ಲ.

ಭ್ರಷ್ಟಾಚಾರದ ವಿರುದ್ಧ ಹೋರಾಡಿದ್ದ ಹೀರೋ ಎಂದು ಅವರನ್ನೀಗ ಅವರ ಮರಣದ ನಂತರ ಕೊಂಡಾಡಲಾಗುತ್ತಿದೆ. ಅನೇಕ ಕಡೆ ಅವರ ಬಗ್ಗೆ ಪ್ರಕಟವಾಗಿದೆ. ಅವರು ಬಾಂಬೆ ಬಾರ್ ಅಸೋಸಿಯೇಷನ್ ಪರವಾಗಿ ಐವರು ನ್ಯಾಯಾಧೀಶರ ರಾಜೀನಾಮೆಗೆ ಒತ್ತಾಯಿಸಿ ಪ್ರಸ್ತಾವ ಮಂಡಿಸಿದ್ದರ ಬಗ್ಗೆಯೂ ಆ ಬರಹಗಳು ಹೇಳುತ್ತಿವೆ.

ಛಾಗ್ಲಾ ಅವರ ಆ ಪ್ರಸ್ತಾವದ ಪರಿಣಾಮವಾಗಿ ಇಬ್ಬರು ನ್ಯಾಯಾಧೀಶರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಮತ್ತಿಬ್ಬರು ನ್ಯಾಯಾಧೀಶರನ್ನು ವರ್ಗಾವಣೆ ಮಾಡಲಾಯಿತು ಮತ್ತು ಒಬ್ಬ ನ್ಯಾಯಾಧೀಶರಿಗೆ ಮುಂದೆ ಯಾವುದೇ ಹೊಣೆ ನೀಡಲಿಲ್ಲ.

ಒಬ್ಬ ವಕೀಲರು ಅಥವಾ ಬಾರ್ ಅಸೋಸಿಯೇಷನ್ ಐವರು ನ್ಯಾಯಾಧೀಶರ ವಿರುದ್ಧ ಪ್ರಸ್ತಾವಗಳನ್ನು ಮಂಡಿಸಬಹುದಾಗಿದ್ದ ಆ ದಿನಗಳೇ ಎಷ್ಟು ಅದ್ಭುತವಲ್ಲವೇ ಎನ್ನಿಸುತ್ತದೆ. ಹಾಗೆಯೆ ಛಾಗ್ಲಾ ಅವರಂಥ ದಿಟ್ಟ ವಕೀಲರ ಬಗ್ಗೆಯೂ ಹೆಮ್ಮೆಯಾಗುತ್ತದೆ.

ಭಾರತದ ಇತಿಹಾಸದ ಈ ಅದ್ಭುತ ಅವಧಿಯ ಬಗ್ಗೆ ಹೆಚ್ಚು ವಿವರಗಳಿಲ್ಲ. ಆದರೆ ನ್ಯಾಯಾಧೀಶರ ಪ್ರಾಮಾಣಿಕತೆಯನ್ನೇ ಪ್ರಶ್ನಿಸಬಲ್ಲವನ ಪ್ರಾಮಾಣಿಕತೆ, ಸಮಗ್ರತೆ ಚಿನ್ನಕ್ಕಿಂತಲೂ ಶುದ್ಧವಾಗಿರಲೇಬೇಕು ಎಂಬುದು ಸ್ಪಷ್ಟ.

ಛಾಗ್ಲಾ ಮತ್ತೊಂದು ಪ್ರಸ್ತಾವ ಮಂಡಿಸಿದ್ದರು. ಅದರಿಂದಾಗಿ ಬಾಂಬೆ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಆನಂದಮೋಯ್ ಭಟ್ಟಾಚಾರ್ಯ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕಾಯಿತು.

ನ್ಯಾಯಾಲಯಗಳ ಬಗ್ಗೆ ಪ್ರಶ್ನೆಗಳು, ಅನುಮಾನಗಳು ಮತ್ತು ಅನಿಶ್ಚಿತತೆ ಇದ್ದ ಸಮಯದಲ್ಲಿ ಈ ಮಹಾನ್ ನಾಯಕನನ್ನು ಉಲ್ಲೇಖಿಸುವುದನ್ನು ಎಷ್ಟು ನ್ಯಾಯಾಧೀಶರು ಕೇಳಿರಬಹುದು?ಈ 10 ವರ್ಷಗಳಲ್ಲಿಯೂ ಯಾರೂ ಇಕ್ಬಾಲ್ ಛಾಗ್ಲಾ ಅವರನ್ನು ನೆನಪಿಸಿಕೊಂಡಿಲ್ಲ, ಅವರ ಕಥೆಯನ್ನು ಜಗತ್ತಿಗೆ ಹೇಳಲಾಗಿಲ್ಲ.

ಇಕ್ಬಾಲ್ ಛಾಗ್ಲಾ ಹೇಗೆ ಏಕಾಂಗಿಯಾಗಿ ಅಷ್ಟು ದೊಡ್ಡ ಕೆಲಸ ಮಾಡಿದ್ದರು?

‘ಮೈ ಲಾ’ ಎಂಬ ಯೂಟ್ಯೂಬ್ ಚಾನೆಲ್‌ಗೆ 7 ವರ್ಷಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಅವರು ಅದರ ಬಗ್ಗೆ ಹೇಳಿದ್ದಾರೆ.

‘‘ನಾನು ಅದೃಷ್ಟಶಾಲಿ ಎಂದು ಹೇಳುತ್ತಿದ್ದೇನೆ. ಏಕೆಂದರೆ ನ್ಯಾಯಮೂರ್ತಿ ಚಿತಾತೋಷ್ ಮುಖರ್ಜಿ ಇದ್ದರು. ಅಂಥದೊಂದು ಪ್ರಸ್ತಾವ ತರುವ ಬಗ್ಗೆ ಹೇಳಿದಾಗ ಅವರು ಒಂದು ವಾರದ ಸಮಯ ಕೇಳಿದರು, ಒಂದು ವಾರದ ನಂತರ ಮುಖ್ಯ ನ್ಯಾಯಾಧೀಶರೇ ‘ನಾನು ನನ್ನ ಕೈಲಾದಷ್ಟು ಪ್ರಯತ್ನಿಸಿದ್ದೇನೆ, ಆದರೆ ನಾನು ಏನನ್ನೂ ಮಾಡಲು ಸಾಧ್ಯವಾಗುತ್ತಿಲ್ಲ. ನೀವು ಏನು ಮಾಡಬೇಕೆಂದು ನಿಮಗೆ ನಾನು ಹೇಳಲಾರೆ. ಆದರೆ ನಾನು ಅದನ್ನು ಮಾಡಲು ಸಾಧ್ಯವಿಲ್ಲ ಎಂದು ಮಾತ್ರ ಹೇಳಬಲ್ಲೆ’ ಎಂದರು. ನಾವು ನಿರ್ಣಯ ಅಂಗೀಕರಿಸಿದೆವು. ನಿರ್ಣಯ ಅಂಗೀಕರಿಸುವ ಮೊದಲೇ ಒಬ್ಬ ನ್ಯಾಯಾಧೀಶರು ರಾಜೀನಾಮೆ ನೀಡಿದರು, ಆನಂತರ ಮತ್ತೊಬ್ಬರು ರಾಜೀನಾಮೆ ನೀಡಿದರು, ಇಬ್ಬರು ವರ್ಗಾವಣೆಯಾದರು ಮತ್ತು ಒಬ್ಬರಿಗೆ ಯಾವುದೇ ಕೆಲಸ ನೀಡಲಿಲ್ಲ’’.

ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಿಗೆ ಸಂಬಂಧಿಸಿದ ಮತ್ತೊಂದು ಸಂಗತಿಯನ್ನು ಛಾಗ್ಲಾ ಅದೇ ಸಂದರ್ಶನದಲ್ಲಿ ಹೇಳುತ್ತಾರೆ.

‘‘ಆಗ ನಾನು ಬಾರ್ ಅಸೋಸಿಯೇಷನ್ ಅಧ್ಯಕ್ಷನಾಗಿದ್ದೆ. ದಿಲ್ಲಿಗೆ ಹೋದಾಗ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾದೆ. ಅವರು ನನ್ನನ್ನು ತಮ್ಮ ಮನೆಗೆ ಆಹ್ವಾನಿಸಿದರು. ಅವರು ಕಟುವಾಗಿ ‘ನೀವು ಇದನ್ನು ಮತ್ತೆ ಮಾಡಲು ಉದ್ದೇಶಿಸಿದ್ದೀರಾ?’ ಎಂದು ಕೇಳಿದರು. ನಾನು ‘ಇಲ್ಲ, ಅದು ಒಂದು ಸಲದ ವಿಷಯ’ ಎಂದೆ, ಆದರೆ ಅವರು ನನ್ನನ್ನು ಅಭಿನಂದಿಸುವುದಾಗಿ ಹೇಳಿದರು. ನಿಜಕ್ಕೂ ಅದ್ಭುತ ಎಂದರು. ‘ನಾವು ನಮ್ಮ ಮಟ್ಟದಲ್ಲಿ ತನಿಖೆ ನಡೆಸಿದ್ದೇವೆ ಮತ್ತು ನೀವು ನಿರ್ಣಯ ಅಂಗೀಕರಿಸಿದ ಎಲ್ಲಾ ನ್ಯಾಯಾಧೀಶರು ಅತ್ಯಂತ ಭ್ರಷ್ಟರು ಎಂದು ಕಂಡುಬಂದಿದೆ. ಇದು ದೇಶಾದ್ಯಂತ ಪರಿಣಾಮ ಬೀರುತ್ತದೆ ಮತ್ತು ವಿವಿಧ ವಕೀಲರ ಸಂಘಗಳು ಅದೇ ರೀತಿ ಮಾಡಬೇಕು ಎಂಬುದು ನಮ್ಮ ಕಾಳಜಿಯಾಗಿತ್ತು, ಬಾಂಬೆ ಬಾರ್ ಅಸೋಸಿಯೇಷನ್ ಕೆಲವು ಮುಖ್ಯ ಕಾರಣಕ್ಕಾಗಿ ಬಹಳ ಜವಾಬ್ದಾರಿಯುತವಾಗಿದೆ ಎಂದು ನಮಗೆ ತಿಳಿದಿದೆ. ಮೊದಲು ಇದು ಸೇಡಿನ ಭಾವನೆಯಿಂದ ಆಗುತ್ತಿರಬಹುದು ಎಂದು ನಾವು ಭಾವಿಸಿದ್ದೆವು. ಆದರೆ ನಮ್ಮ ತನಿಖೆಯ ನಂತರ ಬಾಂಬೆ ಬಾರ್ ಅಸೋಸಿಯೇಷನ್ ಅದ್ಭುತ ಕೆಲಸ ಮಾಡಿದೆ ಎಂದು ನಾವು ಭಾವಿಸಿದ್ದೇವೆ’ ಎಂದಿದ್ದರು’’.

ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರು ಛಾಗ್ಲಾ ಅವರನ್ನು ಅಭಿನಂದಿಸುತ್ತಾ, ನಾವು ಕೂಡ ತನಿಖೆ ನಡೆಸಿ ಐವರು ನ್ಯಾಯಾಧೀಶರು ಅತ್ಯಂತ ಭ್ರಷ್ಟರು ಎಂದು ಕಂಡುಕೊಂಡಿದ್ದೇವೆ ಎಂದು ಹೇಳುತ್ತಾರೆ.

ಇಂದಿನ ಭಾರತದಲ್ಲಿ ಇದು ಸಾಧ್ಯವೇ?

ಮತ್ತೆ ಹೀಗೆ ಮಾಡುವುದಿಲ್ಲ ಎಂದು ಛಾಗ್ಲಾ ಅವರು ಅವತ್ತು ಹೇಳಿದ್ದರಾದರೂ, 5 ವರ್ಷಗಳ ನಂತರ ಅವರು ಮತ್ತೆ ಬಾಂಬೆ ಹೈಕೋರ್ಟ್‌ನ ಆಗಿನ ಮುಖ್ಯ ನ್ಯಾಯಮೂರ್ತಿ ವಿರುದ್ಧ ಭ್ರಷ್ಟಾಚಾರದ ಆರೋಪದ ಮೇಲೆ ಪ್ರಸ್ತಾವ ತಂದಿದ್ದರು. ಆ ಮುಖ್ಯ ನ್ಯಾಯಮೂರ್ತಿ ಕೂಡ ಅಂತಿಮವಾಗಿ ರಾಜೀನಾಮೆ ನೀಡಬೇಕಾಯಿತು.

2020ರ ಫೆಬ್ರವರಿಯಲ್ಲಿ ಆಗಿನ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಮೋದಿಯನ್ನು ಹೊಗಳಿದಾಗ, ಅವರ ವಿರುದ್ಧವೂ ಬಾಂಬೆ ಬಾರ್ ಅಸೋಸಿಯೇಷನ್ ನಿರ್ಣಯ ಅಂಗೀಕರಿಸಿ, ಹುದ್ದೆಯ ಘನತೆಯನ್ನು ಕುಗ್ಗಿಸುವ ಹೇಳಿಕೆ ಎಂದಿತ್ತು. ಛಾಗ್ಲಾ ಸೇರಿದಂತೆ ಅನೇಕ ಹಿರಿಯ ವಕೀಲರು ಆ ನಿರ್ಣಯವನ್ನು ಬೆಂಬಲಿಸಿದ್ದರು.

ಛಾಗ್ಲಾ ಅವರು ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗುವ ಪ್ರಸ್ತಾವವನ್ನು ನಿರಾಕರಿಸಲು ಆ ಅವಧಿ 13 ತಿಂಗಳಷ್ಟೇ ಆಗಿತ್ತು ಎಂಬುದು ಕಾರಣವಾಗಿತ್ತು.

‘‘ಮುಖ್ಯ ನ್ಯಾಯಾಧೀಶರ ಅಧಿಕಾರಾವಧಿ ಹೆಚ್ಚು ದೀರ್ಘವಾಗಿರಬೇಕು. ಏಕೆಂದರೆ ಆಡಳಿತಾತ್ಮಕ ಕಾರಣಗಳ ಜೊತೆಗೆ, ನ್ಯಾಯಾಂಗ ನೇಮಕಾತಿಗಳಿಗೂ ಇದು ಮುಖ್ಯವಾಗಿದೆ, ಅದರಿಂದ ಸುಪ್ರೀಂ ಕೋರ್ಟ್‌ಗೆ ಉತ್ತಮ ಪ್ರತಿಭೆಗಳನ್ನು ತರಲು ಸಾಧ್ಯ’’ ಎಂದು ಅವರು ಹೇಳಿದ್ದನ್ನು ಬಾಂಬೆ ಬಾರ್ ಅಸೋಷಿಯೇಷನ್ ಪ್ರಕಟಿಸಿದೆ.

‘‘ಇಂದು ಸುಪ್ರೀಂ ಕೋರ್ಟ್ ಅನ್ನು ನೋಡಿ, ಅದು ಏನಾಗಿದೆ ಮತ್ತು ಎಂಥೆಂಥ ಪ್ರಕರಣಗಳು ಸುಪ್ರೀಂ ಕೋರ್ಟ್ ಗೆ ಹೋಗುತ್ತಿವೆ’’ ಎಂದು ಛಾಗ್ಲಾ ಬೇಸರ ವ್ಯಕ್ತಪಡಿಸಿದ್ದಿದೆ.

ಛಾಗ್ಲಾ ಅವರ ಸಭ್ಯತೆ ಅಥವಾ ಧೈರ್ಯಕ್ಕೆ ಯಾರೂ ಸಾಟಿಯಿಲ್ಲ.

ಮುಂಬೈ ಗಲಭೆಯ ಸಮಯದಲ್ಲಿ ಜನರ ಹೆಸರನ್ನು ನೋಡಿಕೊಂಡು ಮನೆಗಳ ಮೇಲೆ ದಾಳಿ ನಡೆಸುತ್ತಿದ್ದಾಗಲೂ, ಇಕ್ಬಾಲ್ ಛಾಗ್ಲಾ ತಮ್ಮ ಮನೆಗಿದ್ದ ತಮ್ಮ ಹೆಸರಿನ ಫಲಕ ತೆಗೆದಿರಲಿಲ್ಲ ಎಂದು ಪ್ರಸಿದ್ಧ ವಕೀಲ ಸಂಜಯ್ ಹೆಗ್ಡೆ ನೆನಪಿಸಿಕೊಂಡಿದ್ದಾರೆ.

ಛಾಗ್ಲಾ ಅವರೀಗ ನಮ್ಮನ್ನು ಅಗಲಿದ್ದಾರೆ.

ಜನವರಿ 12ರಂದು 86ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅಂಥ ಒಬ್ಬ ಅದ್ಭುತ ವಕೀಲರನ್ನು ಈ ದೇಶ ಕಂಡಿದೆ ಎಂಬುದೇ ಧನ್ಯತೆ ತರುವ ಸಂಗತಿ.

ನ್ಯಾಯಾಂಗ ಭ್ರಷ್ಟಗೊಂಡರೆ ಅದನ್ನು ಸರಿಪಡಿಸಬಹುದು ಎಂಬ ಭರವಸೆಯನ್ನು ಅನೇಕ ಪ್ರಾಮಾಣಿಕ ವಕೀಲರು ಮತ್ತು ನ್ಯಾಯಾಧೀಶರಲ್ಲಿ ತುಂಬಿದ್ದ ಕಥನವಾಗಿ ಅವರ ಬದುಕು ಎಂದೆಂದಿಗೂ ದೊಡ್ಡ ಆದರ್ಶ.

share
ಎಸ್. ಸುದರ್ಶನ್
ಎಸ್. ಸುದರ್ಶನ್
Next Story
X