Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಧಿಕಾರರೂಢರ ಸವಾಲುಗಳನ್ನು ಮೆಟ್ಟಿ ನಿಂತು...

ಅಧಿಕಾರರೂಢರ ಸವಾಲುಗಳನ್ನು ಮೆಟ್ಟಿ ನಿಂತು ಗೆದ್ದ ವಿನೇಶ್ ಫೋಗಟ್

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.9 Oct 2024 11:10 AM IST
share
ಅಧಿಕಾರರೂಢರ ಸವಾಲುಗಳನ್ನು ಮೆಟ್ಟಿ ನಿಂತು ಗೆದ್ದ ವಿನೇಶ್ ಫೋಗಟ್
ಆಕೆಯನ್ನು ಸೋಲಿಸಲೆಂದೇ ಬಿಜೆಪಿ ತನ್ನೆಲ್ಲ ಶಕ್ತಿ ವಿನಿಯೋಗಿಸಿತು. ಅತ್ಯಂತ ಪ್ರಬಲ ಅಭ್ಯರ್ಥಿಯನ್ನು ಆಕೆಯ ವಿರುದ್ಧ ಕಣಕ್ಕಿಳಿಸಿತು. ಆಕೆ ಎದುರು ಹತ್ತಾರು ಸಮಸ್ಯೆ ತಂದಿಡಲು ನೋಡಿತು. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ವಿನೇಶ್ ಫೋಗಟ್ ಗೆಲುವಿನ ನಗೆ ಬೀರಿದ್ದಾರೆ.

ಹರ್ಯಾಣದಲ್ಲಿ ವಿನೇಶ್ ಫೋಗಟ್ ಗೆದ್ದಿದ್ದಾರೆ.

ಈ ಗೆಲುವು ಅಂತಿಂತಹ ಗೆಲುವಲ್ಲ. ಇದೊಂದು ಅಮೋಘ ಗೆಲುವು, ಇದೊಂದು ಐತಿಹಾಸಿಕ ಗೆಲುವು.

ಇದು ಹೋರಾಟ ಮತ್ತು ಸತ್ಯದ ಗೆಲುವು ಅಂದಿದ್ದಾರೆ ಫೋಗಟ್.

ಹರ್ಯಾಣದಲ್ಲಿ ಈ ದೇಶದ ಹೆಣ್ಣು ಮಗಳೊಬ್ಬಳು ಪುರುಷ ಪ್ರಧಾನ ರಾಜಕೀಯದ ಎಲ್ಲ ಸವಾಲುಗಳನ್ನು, ದಾಳಿಗಳನ್ನು, ಸಂಚುಗಳನ್ನು ಸಮರ್ಥವಾಗಿ ಎದುರಿಸಿ ಎದುರಾಳಿಯನ್ನು ಚುನಾವಣಾ ಅಖಾಡದಲ್ಲಿ ಮಕಾಡೆ ಮಲಗಿಸಿ ಬಿಟ್ಟಿದ್ದಾರೆ.

ಆಕೆ ಪ್ಯಾರಿಸ್‌ನಲ್ಲಿ ಚಿನ್ನ ಗೆಲ್ಲದಿದ್ದರೂ ತನ್ನ ತಾಯ್ನಾಡಲ್ಲಿ ಅದಕ್ಕಿಂತಲೂ ದೊಡ್ಡ ಸವಾಲನ್ನು ಗೆದ್ದು ಬೀಗಿದ್ದಾಳೆ.

ಇಡೀ ದೇಶದ ಹೆಣ್ಣು ಮಕ್ಕಳಿಗೆ ನೀವೂ ಗೆಲ್ಲಬಹುದು, ಎಂದೂ ಸೋಲೊಪ್ಪಿಕೊಂಡು ಶರಣಾಗಬೇಡಿ ಎಂಬ ಸಂದೇಶ ರವಾನಿಸಿದ್ದಾರೆ.

ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಜುಲಾನದಿಂದ ಕಣಕ್ಕಿಳಿದಿದ್ದ ವಿನೇಶ್ ಫೋಗಟ್ ಬಿಜೆಪಿ ಅಭ್ಯರ್ಥಿ ಯೋಗೇಶ್ ಬೈರಾಗಿಯನ್ನು ಸೋಲಿಸಿ ವಿಜಯ ಪತಾಕೆ ಹಾರಿಸಿದ್ದಾರೆ. ಆಕೆ ಬಿಜೆಪಿ ಅಭ್ಯರ್ಥಿ ವಿರುದ್ಧ ಆರು ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದಿದ್ದಾರೆ.

ಹರ್ಯಾಣದಲ್ಲಿ ವಿನೇಶ್‌ರ ಪಕ್ಷ ಕಾಂಗ್ರೆಸ್ ಬಹುಮತ ಗಳಿಸುವಲ್ಲಿ ಮುಗ್ಗರಿಸಿ ಬಿದ್ದಿದೆ. ಅಲ್ಲಿ ಅದಕ್ಕೆ ಅನಿರೀಕ್ಷಿತ ಆಘಾತ ಎದುರಾಗಿದೆ. ಬಿಜೆಪಿ ಎಲ್ಲ ನಿರೀಕ್ಷೆಗಳನ್ನು ಸುಳ್ಳಾಗಿಸಿ ಗೆದ್ದು ಬೀಗುತ್ತಿದೆ.

ಆದರೆ ತಮ್ಮ ಬೃಹತ್ ಸಂಘಟನಾ ಶಕ್ತಿ, ರಾಜಕೀಯ ಶಕ್ತಿ, ಹಣದ ಶಕ್ತಿ, ಅಧಿಕಾರದ ಶಕ್ತಿ ಎಲ್ಲವುಗಳ ಎದುರು ತೊಡೆತಟ್ಟಿದ್ದ ಕುಸ್ತಿಪಟು ವಿನೇಶ್ ಫೋಗಟ್‌ರನ್ನು ಮಣ್ಣು ಮುಕ್ಕಿಸುವ ಬಿಜೆಪಿಯ ಇರಾದೆ ಜುಲಾನದಲ್ಲಿ ಸಂಪೂರ್ಣ ವಿಫಲವಾಗಿದೆ. ಅಲ್ಲಿ ಈ ದೇಶದ ಚಾಂಪಿಯನ್ ಹೆಣ್ಣು ಮಗಳು ಜಯಭೇರಿ ಬಾರಿಸಿದ್ದಾರೆ.

ಅಲ್ಲಿನ ಮತದಾರರು ಆಕೆಯ ಕೈ ಹಿಡಿದಿದ್ದಾರೆ.

ಬಿಜೆಪಿ ಪ್ರಬಲ ಅಭ್ಯರ್ಥಿ ಭಾರತೀಯ ಸೇನೆಯ ಮಾಜಿ ಅಧಿಕಾರಿ ಹಾಗೂ ಕಮರ್ಷಿಯಲ್ ಪೈಲಟ್ ಯೋಗೇಶ್ ಬೈರಾಗಿಯನ್ನು ಜುಲಾನ ಮತದಾರರು ಸೋಲಿಸಿದ್ದಾರೆ.

ಕುಸ್ತಿಪಟು ವಿನೇಶ್ ತಮ್ಮ ಛಲ ಹಾಗೂ ಹೋರಾಟಗಳ ಮೂಲಕವೇ ಈ ದೇಶದ ಜನರ ಪ್ರೀತಿ, ಗೌರವ ಗಳಿಸಿದವರು.

ಊರವರ ಉಸಾಬರಿ ನಮಗೇಕೆ ಎಂದು ಸುಮ್ಮನಾಗದೆ ಮಹಿಳಾ ಕುಸ್ತಿಪಟುಗಳ ಮೇಲಾಗುತ್ತಿರುವ ದೌರ್ಜನ್ಯದ ವಿರುದ್ಧ ಹೋರಾಡಿ ಬೀದಿಗಿಳಿದವರು. ಅದಕ್ಕಾಗಿ ಆಡಳಿತಾರೂಢ ಬಿಜೆಪಿಯನ್ನು, ಅದರ ಪ್ರಭಾವೀ ಸಂಸದನನ್ನು ಎದುರು ಹಾಕಿಕೊಂಡವರು.

ಹೆದರಿಕೆಗೆ, ಬೆದರಿಕೆಗೆ, ಬೈಗುಳಕ್ಕೆ, ಟ್ರೋಲ್‌ಗೆ, ಅವಹೇಳನಕ್ಕೆ, ರಾಜಕೀಯ ಪ್ರಭಾವಕ್ಕೆ ಯಾವುದಕ್ಕೂ ಬಗ್ಗದೆ, ಜಗ್ಗದೆ ಪೊಲೀಸ್ ದೌರ್ಜನ್ಯವನ್ನೂ ಎದುರಿಸಿ ಅನ್ಯಾಯದ ವಿರುದ್ಧ ಹೋರಾಡಿದವರು. ಲಾಠಿಗೂ ಹೆದರದೆ ಮುನ್ನುಗ್ಗಿದವರು.

ಈ ಎಲ್ಲ ಹೋರಾಟದ ನಡುವೆಯೂ ತಮ್ಮ ಕುಸ್ತಿ ಅಭ್ಯಾಸವನ್ನು ಬಿಡದೆ, ತನ್ನ ವಿರುದ್ಧ ದೇಶದ ಕುಸ್ತಿ ಫೆಡೆರೇಶನ್ ಸಂಚು ಹೂಡಿದರೂ ಅದನ್ನು ಮೆಟ್ಟಿ ನಿಂತು ಜಾಗತಿಕ ಕ್ರೀಡಾಕೂಟ ಒಲಿಂಪಿಕ್ಸ್‌ಗೆ ತಲುಪಿದವರು.

ಅಲ್ಲಿ ನಾಲ್ಕು ಬಾರಿಯ ವಿಶ್ವ ಚಾಂಪಿಯನ್‌ರನ್ನೇ ಸದೆಬಡಿದವರು ಹಾಗೂ ಚಿನ್ನದ ಪದಕ ಪಡೆಯುವ ಹಂತಕ್ಕೆ ಹೋಗಿ ತಲುಪಿದವರು ವಿನೇಶ್ ಫೋಗಟ್

ಆದರೆ ವಿಧಿಯಾಟ ಬೇರೆಯಿತ್ತು. ಒಲಿಂಪಿಕ್ಸ್ ಚಿನ್ನ ಆಕೆಗೆ ಕೊನೆ ಕ್ಷಣದಲ್ಲಿ ಕೈತಪ್ಪಿತು. ಸ್ಪರ್ಧಿಸುವ ಅವಕಾಶವೇ ನಿರಾಕರಿಸಲಾಯಿತು.

ಆದರೂ ಆಕೆ ಮಾತ್ರ ಅಂಜಲಿಲ್ಲ, ಹಿಂಜರಿಯಲಿಲ್ಲ. ಪ್ರಧಾನಿ ಕರೆ ಮಾಡಿ ಅದರಲ್ಲೂ ಪ್ರಚಾರ ಗಿಟ್ಟಿಸಲು ನೋಡಿದಾಗ ನಿಮ್ಮ ಪ್ರಚಾರ ಸ್ಟಂಟ್‌ನಲ್ಲಿ ನಾನಿಲ್ಲ ಎಂದು ನಿರಾಕರಿಸಿಬಿಟ್ಟರು.

ತನ್ನ ತಾಯ್ನಾಡಿನಲ್ಲಿ ಚುನಾವಣೆ ಘೋಷಣೆಯಾದಾಗ ಇನ್ನು ತಾನಿನ್ನು ರಾಜಕೀಯಕ್ಕೆ ಇಳಿಯಲೇಬೇಕು, ಹೆಣ್ಣು ಮಕ್ಕಳನ್ನು ಸೋಲಿಸುವ ರಾಜಕಾರಣದಲ್ಲಿ ನಾನಿರಬೇಕು ಎಂದು ರಾಜಕೀಯಕ್ಕೆ ಕಾಲಿಟ್ಟರು, ಕಾಂಗ್ರೆಸ್ ಸೇರಿದರು.

ಆಕೆಯನ್ನು ಸೋಲಿಸಲೆಂದೇ ಬಿಜೆಪಿ ತನ್ನೆಲ್ಲ ಶಕ್ತಿ ವಿನಿಯೋಗಿಸಿತು. ಅತ್ಯಂತ ಪ್ರಬಲ ಅಭ್ಯರ್ಥಿಯನ್ನು ಆಕೆಯ ವಿರುದ್ಧ ಕಣಕ್ಕಿಳಿಸಿತು. ಆಕೆ ಎದುರು ಹತ್ತಾರು ಸಮಸ್ಯೆ ತಂದಿಡಲು ನೋಡಿತು. ಆದರೆ ಎಲ್ಲ ಸವಾಲುಗಳನ್ನು ಮೆಟ್ಟಿ ನಿಂತು ವಿನೇಶ್ ಫೋಗಟ್ ಗೆಲುವಿನ ನಗೆ ಬೀರಿದ್ದಾರೆ.

ಹೆಣ್ಣು ಸಶಕ್ತಳಲ್ಲ, ಆಕೆಗೆ ರಾಜಕೀಯದ ಒಳಸುಳಿಯಲ್ಲಿ ಗೆಲ್ಲುವುದು ಅಸಾಧ್ಯ, ಆಕೆ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಹೋಗಬೇಕು, ರಾಜಕೀಯ ಪ್ರಭಾವಿಗಳನ್ನು ಎದುರು ಹಾಕಿಕೊಳ್ಳಬಾರದು, ಹೋರಾಟಕ್ಕೆ ಇಳಿಯಬಾರದು ಎನ್ನುವ ಎಲ್ಲರಿಗೂ ವಿನೇಶ್ ಫೋಗಟ್‌ರ ಗೆಲುವು ಪಾಠ ಕಲಿಸಿದೆ.

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X