ಪ್ರತಿಮೆಗಳು ಬೇಕಿತ್ತೇ?
ಮಾನ್ಯರೇ,
‘‘ನನ್ನನ್ನು ಪುಸ್ತಕಗಳಲ್ಲಿ ಹುಡುಕಿ, ಪ್ರತಿಮೆಗಳಲ್ಲಲ್ಲ’’ ಎಂದು ಹೇಳಿದ ಅಂಬೇಡ್ಕರ್ ಅವರ ಅತೀ ಎತ್ತರದ ಮೂರ್ತಿಗಳು ಹೈದರಾಬಾದ್ ಮತ್ತು ವಿಜಯವಾಡದಲ್ಲಿ ತಲೆ ಎತ್ತಿ ನಿಲ್ಲುತ್ತಿವೆ. ಅಂಬೇಡ್ಕರ್ ಅವರನ್ನು ಓದಿ ಅರ್ಥೈಸಿಕೊಂಡ ನಾವು ಒಮ್ಮೆ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.
ಅಂದು ಗುಜರಾತಿನ ಸರ್ದಾರ್ ಪಟೇಲರ ಮೂರ್ತಿಯ ವೆಚ್ಚದ ಕುರಿತು ನಾವು ಆಂಬೇಡ್ಕರ್ ಅನುಯಾಯಿಗಳು ಮಾಡಿದ ಟೀಕೆಗಳನ್ನೊಮ್ಮೆ ನೆನೆಸಿಕೊಳ್ಳಬೇಕು. ಆ ವೆಚ್ಚದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗುತ್ತಿದ್ದವು ಎಂದು ಹೇಳಿದ ನಾವು ಇಂದು ಮೂರ್ತಿಪೂಜೆಯನ್ನು ಕಟುವಾಗಿ ವಿರೋಧಿಸಿದ ಅಂಬೇಡ್ಕರ್ ಅವರಂತಹ ಮಹಾಚೇತನವನ್ನು ಪ್ರತಿಮೆಯಲ್ಲಿ ಹುಡುಕ ಹೊರಟಿದ್ದೇವೆ. ಅದರ ಬದಲಾಗಿ ಅವರದೇ ಹೆಸರಿನಲ್ಲಿ ಬೇರೆ ಅಭಿವೃದ್ಧಿ ಕೆಲಸಗಳಿಗೆ, ಬಡ ವಿದ್ಯಾರ್ಥಿಗಳ ಓದಿಗೆ ಅನುಕೂಲವಾಗುವಂತೆ ಮಾಡಿದ್ದರೆ ಅಂಬೇಡ್ಕರ್ ಅವರನ್ನು ಅರಿತು ಅಪ್ಪಿದಂತಾಗುತ್ತಿತ್ತು.
-ಹಣಮಂತ ಕಾಂಬಳೆ,
ತುಮಕೂರು
Next Story