Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮೋದಿಯವರನ್ನು ಶಿವಾಜಿಗೆ ಹೋಲಿಸುವ...

ಮೋದಿಯವರನ್ನು ಶಿವಾಜಿಗೆ ಹೋಲಿಸುವ ಹಿಂದಿರುವ ರಾಜಕೀಯ ಯಾವುದು?

ಅಜಿತ್ ಕೆ.ಸಿ.ಅಜಿತ್ ಕೆ.ಸಿ.21 March 2025 10:30 AM IST
share
ಮೋದಿಯವರನ್ನು ಶಿವಾಜಿಗೆ ಹೋಲಿಸುವ ಹಿಂದಿರುವ ರಾಜಕೀಯ ಯಾವುದು?
ಪ್ರಧಾನಿ ಮೋದಿಯವರನ್ನು ವಿವಿಧ ಅವತಾರಗಳೊಂದಿಗೆ ಜೋಡಿಸುವುದು ಅವರ ರಾಜಕೀಯದ ಒಂದು ಭಾಗವಾಗಿದೆ ಎಂಬಂತೆ ಕಾಣುತ್ತದೆ. ತನ್ನನ್ನು ದೈವಿಕ ಶಕ್ತಿಯೆಂದು ಬಿಂಬಿಸಿಕೊಳ್ಳುವ ಅವರ ಸ್ವಂತ ಬಯಕೆಯ ವಿಸ್ತೃತ ರೂಪವೇ ಅದಾಗಿರುವ ಹಾಗೆ ಕಾಣುತ್ತದೆ. ಬಹುಶಃ ಇದರ ಹಿಂದೆ ಸಾಕಷ್ಟು ಯೋಜನೆ ಇದ್ದಿರಬಹುದು. ಸಾರ್ವಜನಿಕರು ಯಾರನ್ನು ಪೂಜಿಸುತ್ತಾರೆಂದು ಅವರಿಗೆ ತಿಳಿದಿದೆ ಮತ್ತು ಈಗ ಅವರ ಪ್ರತಿರೂಪ ಎಂಬಂತೆ ಕಾಣಿಸಿಕೊಳ್ಳುವ ಮೂಲಕ ಜನರ ನಡುವೆ ಹೊಸ ಇಮೇಜ್ ಸೃಷ್ಟಿಸುವ ಪ್ರಯತ್ನ ಇದಾಗಿರಬಹುದೇ?

ಪ್ರಧಾನಿ ಮೋದಿಯವರನ್ನು ಅವತಾರ ಪುರುಷ ಎಂಬಂತೆ ಘೋಷಿಸಲು ಎಷ್ಟು ಬಾರಿ ಪ್ರಯತ್ನ ನಡೆದಿದೆ ಎಂಬುದನ್ನು ಲೆಕ್ಕ ಹಾಕುವುದು ಕಷ್ಟ. ಆದರೆ ಏಕೆ ಅಂಥ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂಬುದೇ ಅರ್ಥವಾಗುವುದಿಲ್ಲ.

ನಾಯಕನಾಗಿ ಅವರ ಪ್ರಭಾವ ಕಡಿಮೆಯಾಗಲು ಪ್ರಾರಂಭಿಸಿದಾಗ, ಅವರನ್ನು ದೇವರ ಅವತಾರ ಎಂದು ಹೇಳುವ ಮೂಲಕ ಇಮೇಜ್ ಹೆಚ್ಚಿಸಬಹುದೇ?

ಲೋಕಸಭಾ ಚುನಾವಣೆಯ ಸಮಯದಲ್ಲಿ ಸ್ವತಃ ಮೋದಿ ದೇವರು ತಮ್ಮನ್ನು ಯಾವುದೋ ಉದ್ದೇಶಕ್ಕಾಗಿ ಕಳುಹಿಸಿದ್ದಾನೆ ಎಂದು ನಂಬಿದ್ದಾಗಿ ಹೇಳಿದ್ದರು.

ಈಗ ಲೋಕಸಭೆಯಲ್ಲಿ ಒಡಿಶಾದ ಸಂಸದ ಪ್ರದೀಪ್ ಪುರೋಹಿತ್, ಪ್ರಧಾನಿ ಮೋದಿಯವರು ತಮ್ಮ ಹಿಂದಿನ ಜನ್ಮದಲ್ಲಿ ಶಿವಾಜಿಯಾಗಿದ್ದರು ಎಂದು ಹೇಳಿದ್ದಾರೆ.

ಗಿರಿಜಾ ಬಾಬಾ ಎಂಬ ಸಂತರೊಬ್ಬರು ಮಾತನಾಡುತ್ತ ಹಾಗೆ ಹೇಳಿದ್ದರು ಎನ್ನುತ್ತಿದ್ದಾರೆ.

ಗಿರಿಜಾ ಬಾಬಾ ಹೇಳಿರುವುದು ಸರಿಯಾಗಿದೆ. ಮೋದಿಯವರು ಹಾಗಾಗಿಯೇ ಈ ರಾಷ್ಟ್ರವನ್ನು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವನ್ನಾಗಿ ಮಾಡುವ ಮನೋಭಾವದಿಂದ ಕೆಲಸ ಮಾಡುತ್ತಿದ್ದಾರೆ ಎಂದು ಆ ಸಂಸದ ಹೇಳಿದ್ದಾರೆ.

2018ರ ಅಕ್ಟೋಬರ್‌ನಲ್ಲಿ ಮಹಾರಾಷ್ಟ್ರ ಬಿಜೆಪಿ ವಕ್ತಾರ ಅವಧೂತ್ ವಾಘ್ ಅವರು ಮೋದಿಯನ್ನು ವಿಷ್ಣುವಿನ 11ನೇ ಅವತಾರ ಎಂದು ಹೇಳಿದ್ದರು. ಈ ಪೋಸ್ಟ್ ಅನ್ನು ಅವರ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಮೇಲ್ಭಾಗದಲ್ಲಿಯೇ ನೋಡಬಹುದಾಗಿದೆ. ಪ್ರಧಾನಿ ಮೋದಿ ಸೇರಿದಂತೆ ಅನೇಕ ಬಿಜೆಪಿ ನಾಯಕರು ಅವರನ್ನು ಫಾಲೋ ಮಾಡುತ್ತಾರೆ.

ಈಗ ಬಿಜೆಪಿ ಸಂಸದ ಮೋದಿಯವರನ್ನು ಹಿಂದಿನ ಜನ್ಮದಲ್ಲಿ ಶಿವಾಜಿಯಾಗಿದ್ದರು ಎನ್ನುತ್ತಿದ್ದಾರೆ.

ಅವರು ವಿಷ್ಣುವಿನ ಅವತಾರವೋ ಅಥವಾ ಹಿಂದಿನ ಜನ್ಮದಲ್ಲಿ ಶಿವಾಜಿಯಾಗಿದ್ದರೊ ಎಂಬುದನ್ನು ಯಾರು ನಿರ್ಧರಿಸುತ್ತಾರೆ?

ಇದೇ ಬಿಜೆಪಿಯ ದಿಲ್ಲಿ ನಾಯಕ ಜೈ ಭಗವಾನ್ ಗೋಯಲ್ ಒಂದು ಪುಸ್ತಕ ಬರೆದು ಅದಕ್ಕೆ ‘ಇಂದಿನ ಶಿವಾಜಿ ನರೇಂದ್ರ ಮೋದಿ’ ಎಂದು ಹೆಸರಿಟ್ಟಾಗ ದೊಡ್ಡ ಕೋಲಾಹಲವೇ ಆಯಿತು. ಬಿಜೆಪಿ ಆ ಪುಸ್ತಕದ ವಿಚಾರದಿಂದ ಅಂತರ ಕಾಯ್ದುಕೊಳ್ಳಬೇಕಾಯಿತು.

ಆ ಪುಸ್ತಕವನ್ನು 2020ರ ಜನವರಿಯಲ್ಲಿ ಬಿಜೆಪಿಯ ದಿಲ್ಲಿ ಕಚೇರಿಯಲ್ಲಿ ಬಿಡುಗಡೆ ಮಾಡಲಾಗಿತ್ತು.

ಜೈ ಭಗವಾನ್ ಗೋಯಲ್ ಅವರ ಪುಸ್ತಕದ ಹೆಸರಿನ ಬಗ್ಗೆ ಮಹಾರಾಷ್ಟ್ರದಲ್ಲಿ ಸಾಕಷ್ಟು ವಿವಾದಗಳು ಉಂಟಾದವು.

ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿಯಂತಹ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಬಿಜೆಪಿ ಶಾಸಕ ಶಿವೇಂದ್ರ ರಾಜೆ ಭೋಸಲೆ ಮತ್ತು ಶಿವಾಜಿ ಮಹಾರಾಜರ ವಂಶಸ್ಥರಾದ ಉದಯನ್ ರಾಜೆ ಇಬ್ಬರೂ ಈ ಪುಸ್ತಕವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು.

ಎನ್‌ಸಿಪಿಯ ಛಗನ್ ಭುಜಬಲ್ ಕೂಡ ಪುಸ್ತಕ ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು. ಇಂದು ಅದೇ ಛಗನ್ ಭುಜಬಲ್ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ.

ಈಗ ಅವರು ಬಿಜೆಪಿ ಸಂಸದರ ಹೇಳಿಕೆಯನ್ನು ಖಂಡಿಸುತ್ತಾರೆಯೇ?

ಆ ಪುಸ್ತಕ ಹೊರಬಂದ ಸಮಯದಲ್ಲಿ ವಿವಾದ ಎಷ್ಟು ದೊಡ್ಡದಾಗಿ ಬೆಳೆಯಿತೆಂದರೆ, ಆ ಪುಸ್ತಕವನ್ನು ಪಕ್ಷ ಪ್ರಕಟಿಸಿಲ್ಲ ಎಂದು ಬಿಜೆಪಿ ಅಧಿಕೃತ ಹೇಳಿಕೆ ನೀಡಬೇಕಾಗಿ ಬಂದಿತ್ತು. ಅದೇನಿದ್ದರೂ ಲೇಖಕರ ಅಭಿಪ್ರಾಯ ಎಂದು ಹೇಳಬೇಕಾಯಿತು. ಶಿವಾಜಿ ಅಪ್ರತಿಮ ವ್ಯಕ್ತಿ. ಆದರೆ ಈ ಪುಸ್ತಕಕ್ಕೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಆಗ ಪ್ರಕಾಶ್ ಜಾವಡೇಕರ್ ಹೇಳಿದ್ದರು.

ಹಾಗಾದರೆ ಅದನ್ನು ಪಕ್ಷದ ದಿಲ್ಲಿ ಕಚೇರಿಯಲ್ಲಿ ಏಕೆ ಬಿಡುಗಡೆ ಮಾಡಲಾಯಿತು ಎಂಬುದಕ್ಕೆ ಉತ್ತರವಿಲ್ಲ.

ಯಾರಾದರೂ ಅದನ್ನು ಬರೆದಿದ್ದರೆ, ಅದು ಅವರ ಬರವಣಿಗೆ ಮತ್ತು ಪಕ್ಷದ ಪ್ರಕಟಣೆಯಲ್ಲ. ಆದ್ದರಿಂದ ಆ ಪುಸ್ತಕಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಹೇಳಿತ್ತು.

ಪುಸ್ತಕಕ್ಕೆ ಹಾಗೆ ಶೀರ್ಷಿಕೆ ಇಟ್ಟಾಗ ತುಂಬಾ ಗದ್ದಲವೆದ್ದಿತ್ತು. ಆದರೆ ಈಗ ಲೋಕಸಭೆಯಲ್ಲಿ ಬಿಜೆಪಿ ಸಂಸದ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂದಿನ ಜನ್ಮದಲ್ಲಿ ಶಿವಾಜಿಯಾಗಿದ್ದರು ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿಯವರನ್ನು ವಿವಿಧ ಅವತಾರ ಗಳೊಂದಿಗೆ ಜೋಡಿಸುವುದು ಅವರ ರಾಜಕೀಯದ ಒಂದು ಭಾಗವಾಗಿದೆ ಎಂಬಂತೆ ಕಾಣುತ್ತದೆ.

ತನ್ನನ್ನು ದೈವಿಕ ಶಕ್ತಿಯೆಂದು ಬಿಂಬಿಸಿಕೊಳ್ಳುವ ಅವರ ಸ್ವಂತ ಬಯಕೆಯ ವಿಸ್ತೃತ ರೂಪವೇ ಅದಾಗಿರುವ ಹಾಗೆ ಕಾಣುತ್ತದೆ.

ಬಹುಶಃ ಇದರ ಹಿಂದೆ ಸಾಕಷ್ಟು ಯೋಜನೆ ಇದ್ದಿರಬಹುದು. ಸಾರ್ವಜನಿಕರು ಯಾರನ್ನು ಪೂಜಿಸುತ್ತಾರೆಂದು ಅವರಿಗೆ ತಿಳಿದಿದೆ ಮತ್ತು ಈಗ ಅವರ ಪ್ರತಿರೂಪ ಎಂಬಂತೆ ಕಾಣಿಸಿಕೊಳ್ಳುವ ಮೂಲಕ ಜನರ ನಡುವೆ ಹೊಸ ಇಮೇಜ್ ಸೃಷ್ಟಿಸುವ ಪ್ರಯತ್ನ ಇದಾಗಿರಬಹುದೇ?

ಸೋಷಿಯಲ್ ಮೀಡಿಯಾ ಮತ್ತು ಐಟಿ ಸೆಲ್ ಮೂಲಕ ಮೋದಿ ಶಿವಾಜಿಯ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸುತ್ತಿದ್ದಾರೆ ಎಂದು ಪದೇ ಪದೇ ಹೇಳುತ್ತ ಬರಲಾಗಿದೆ.

ಇದಕ್ಕೆ ಪ್ರತಿಕ್ರಿಯೆಯಾಗಿ, ಶಿವಾಜಿ ಎಂದಿಗೂ ಮುಸ್ಲಿಮರನ್ನು ರಾಜಕೀಯವಾಗಿ ನಿರ್ಮೂಲನೆ ಮಾಡಲು ಪ್ರಯತ್ನಿಸಲಿಲ್ಲ ಎಂದು ಇತಿಹಾಸಕಾರರು ಹೇಳುತ್ತಾರೆ.

ಶಿವಾಜಿ ಸೈನ್ಯದಲ್ಲಿ ಮುಸ್ಲಿಮ್ ಸೈನಿಕರು ಮತ್ತು ಜನರಲ್‌ಗಳು ಸಹ ಇದ್ದರು ಎಂಬುದನ್ನು ಇತಿಹಾಸ ಹೇಳುತ್ತಲೇ ಇದೆ.

ಮಹಾರಾಷ್ಟ್ರದ ಯಾವುದೇ ಸಂಸದರು ಶಿವಾಜಿ ನರೇಂದ್ರ ಮೋದಿಯ ರೂಪದಲ್ಲಿ ಎರಡನೇ ಜನ್ಮ ತಳೆದಿದ್ದಾರೆ ಎಂದು ಹೇಳಿಲ್ಲ. ಈಗ ಒಬ್ಬ ಬಾಬಾನನ್ನು ಉಲ್ಲೇಖಿಸಿ ಒಡಿಶಾದ ಪ್ರದೀಪ್ ಪುರೋಹಿತ್ ಆ ಮಾತು ಹೇಳಿದ್ದಾರೆ.

ಈ ದೇಶದಲ್ಲಿನ ಎಷ್ಟೆಲ್ಲ ಬಾಬಾಗಳಲ್ಲಿ ಯಾರೂ ಹೀಗೆ ಹೇಳಿರಲಿಲ್ಲ. ಪ್ರಧಾನಿ ಮೋದಿಯವರೇ ಅಷ್ಟೊಂದು ಬಾಬಾಗಳ ಸಹವಾಸದಲ್ಲಿದ್ದಾರೆ. ಅವರೊಬ್ಬರೂ ಹೀಗೆ ಹೇಳಿರಲಿಲ್ಲ.

ಇತ್ತೀಚೆಗೆ ಮೋದಿಯವರು ಬಾಗೇಶ್ವರನಾಥ ಬಾಬಾ ಬಳಿ ಹೋಗಿದ್ದರು. ಆ ಬಾಬಾಗೆ ಕೂಡ ನರೇಂದ್ರ ಮೋದಿ ಹಿಂದಿನ ಜನ್ಮದಲ್ಲಿ ಶಿವಾಜಿಯಾಗಿದ್ದರು ಎಂದು ಗೋಚರವಾಗಲಿಲ್ಲವೇ?

ಎಲ್ಲಾ ಬಾಬಾಗಳಿಗೂ ಅವತಾರವನ್ನು ನೋಡುವ ಸಾಮರ್ಥ್ಯವಿಲ್ಲವೇ?

ಪ್ರಧಾನಿ ಕೂಡ ಕುಂಭಮೇಳಕ್ಕೆ ಹೋದರು.

ಅಲ್ಲಿ ಎಲ್ಲಾ ಸಂತರ ಸಭೆ ಇತ್ತು. ಅವರಾದರೂ, ಈ ಜನ್ಮಕ್ಕೂ ಮುನ್ನ ಮೋದಿ ಯಾರ ಅವತಾರವಾಗಿದ್ದರು ಮತ್ತು ಹಿಂದಿನ ಜನ್ಮದಲ್ಲಿ ಏನಾಗಿದ್ದರು ಎಂಬುದನ್ನು ಘೋಷಿಸಬಹುದಿತ್ತು.

ಪ್ರಧಾನಿ ಮೋದಿಯವರನ್ನು ಯಾರದ್ದೋ ಅವತಾರವೆಂದು ಬಿಂಬಿಸಲು ಆತುರ ಏಕೆ?

ಪ್ರಧಾನಿ ಮೋದಿಯವರು ಇಷ್ಟು ವರ್ಷಗಳಲ್ಲಿ ಮಾಡಿದ ಕೆಲಸಕ್ಕಾಗಿ ಅವರನ್ನು ಈಗ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬಿಜೆಪಿ ಅರ್ಥಮಾಡಿಕೊಂಡಿದೆಯೇ?

ಸಾರ್ವಜನಿಕರು ಅವರ ಕೆಲಸದ ಬಗ್ಗೆ ಕೇಳಲು ಶುರು ಮಾಡುವ ಮೊದಲು, ಮೋದಿಯನ್ನು ಅವತಾರ ಎಂದು ಕರೆದುಬಿಡುವ ಅನಿವಾರ್ಯತೆ ಬಿಜೆಪಿಗೆ ಎದುರಾಗಿದೆಯೇ?

ಮೋದಿಯವರನ್ನು ಅವತಾರ ಎಂದು ಕರೆದರೆ, ಸಾರ್ವಜನಿಕರು ಪ್ರಶ್ನೆಗಳನ್ನು ಕೇಳುವ ಬದಲು ಅವರಿಂದ ಆಶೀರ್ವಾದ ಪಡೆಯಲು ಶುರು ಮಾಡಬಹುದೆ?

2024ರ ಲೋಕಸಭಾ ಚುನಾವಣೆಗೆ ಮೊದಲು ಬಿಜೆಪಿ ಸಂಸದ ಸಂಬಿತ್ ಪಾತ್ರ ಅವರು ಸ್ವತಃ ಜಗನ್ನಾಥ ಕೂಡ ಮೋದಿಯ ಭಕ್ತ ಎಂದು ಹೇಳಿದ್ದರು. ಕಡೆಗೆ ಕ್ಷಮೆ ಕೇಳಿದ್ದಲ್ಲದೆ, ಸಂಬಿತ್ ಪಾತ್ರ ಮೂರು ದಿನ ಉಪವಾಸ ಕೂಡ ಮಾಡಿದ್ದರು.

ರಾಮ ಮಂದಿರ ಉದ್ಘಾಟನೆಯ ಹೊತ್ತಲ್ಲಿ, ಬಾಲರಾಮನೇ ಪ್ರಧಾನಿ ಮೋದಿಯವರ ಬೆರಳನ್ನು ಹಿಡಿದುಕೊಂಡು ಹೋಗುತ್ತಿರುವ ಪೋಸ್ಟರ್ ಅನ್ನು ಬಿಜೆಪಿ ಹಂಚಿಕೊಂಡಿತ್ತು. ಇಂತಹ ಚಿತ್ರಗಳ ಮೂಲಕ, ಪ್ರಧಾನಿ ಮೋದಿ ದೇವರುಗಳ ಅವತಾರ, ಭಗವಾನ್ ರಾಮನೇ ಅವರ ಬೆರಳು ಹಿಡಿದುಕೊಂಡು ನಡೆಯುತ್ತಿದ್ದಾನೆ ಎಂಬ ಕಲ್ಪನೆಯನ್ನು ಸಾರ್ವಜನಿಕರಲ್ಲಿ ಮೂಡಿಸಲಾಗುತ್ತಿದೆ.

ಈಗ ಇದು ಸಾಕಾಗದು ಎನ್ನುವಂತೆ, ಹಿಂದಿನ ಜನ್ಮದಲ್ಲಿ ಅವರು ಶಿವಾಜಿಯಾಗಿದ್ದರು ಎನ್ನಲಾಗುತ್ತಿದೆ.

ಅವರು ಅವತಾರವಾಗಿದ್ದರೆ, ಮತ ಕೇಳಲು ಏಕೆ ಹೋಗುತ್ತಾರೆ?

ಅವತಾರವಾಗಿದ್ದರೆ ಪ್ರತೀ ವರ್ಷ ಬಜೆಟ್ ಮಂಡಿಸುವ ಅವಶ್ಯಕತೆ ಏನಿದೆ?

ವಿದೇಶ ಪ್ರವಾಸಗಳಿಗೆ ಹೋಗುವ ಅವಶ್ಯಕತೆ ಏನಿದೆ?

ಏನು ನಡೆಯುತ್ತಿದೆ ಈ ದೇಶದಲ್ಲಿ ಎಂಬುದಕ್ಕೆ ಉತ್ತರ, ಸತ್ಯಜಿತ್ ರೇ ಅವರ ಮಹಾಪುರುಷ ಸಿನೆಮಾದ ಬಿರಿಂಚಿ ಬಾಬಾ ಪಾತ್ರದಲ್ಲಿ ಇರುವ ಹಾಗಿದೆ.

ಅದರಲ್ಲಿ ಬಿರಿಂಚಿ ಬಾಬಾ ರೈಲಿನಲ್ಲಿ ಪ್ರಯಾಣಿಕರ ಎದುರು ಚಮತ್ಕಾರ ತೋರಿಸುತ್ತಾನೆ. ಉಗ್ ಉಗ್ ಎಂದು ಹೇಳಿ, ಸೂರ್ಯ ಉದಯಿಸುವ ಹಾಗೆ ಕಾಣಿಸುತ್ತಾನೆ ಮತ್ತು ಆ ಕಾಕತಾಳೀಯವನ್ನು ಆತ ತನ್ನ ಶಕ್ತಿ ಎಂದು ಕರೆದುಕೊಳ್ಳುತ್ತಾನೆ. ಎಲ್ಲರೂ ಇದನ್ನು ನೋಡಿ ಆಶ್ಚರ್ಯಚಕಿತರಾಗುತ್ತಾರೆ.

ಶಂಕರಾಚಾರ್ಯರೊಂದಿಗಿನ ತನ್ನ ಸಂಭಾಷಣೆಯ ಕಥೆಯನ್ನು ಕೂಡ ಬಿರಿಂಚಿ ಬಾಬಾ ವಿವರಿಸುತ್ತಾನೆ.

ಈ ದೇಶದಲ್ಲಿ ಪ್ರತಿದಿನ ಧರ್ಮದ ವಿಷಯದ ಬಗ್ಗೆ ಫುಟ್ಬಾಲ್ ಆಡಲಾಗುತ್ತದೆ ಎನ್ನುತ್ತಾನೆ.

ಸಿನೆಮಾದ ಈ ಸಂಭಾಷಣೆ ಎಷ್ಟು ಸರಿಯಾಗಿದೆ ಎಂಬುದು ಸಾಬೀತಾಗುತ್ತಿದೆ.

ಪ್ರತಿದಿನ ಎಲ್ಲೋ ಒಂದು ಕಡೆ ಧರ್ಮದ ವಿಷಯದಲ್ಲಿ ಫುಟ್ಬಾಲ್ ಆಡಲಾಗುತ್ತಿದೆ. ಕೆಲವೊಮ್ಮೆ ಸಂಭಲ್‌ನಲ್ಲಿ, ಕೆಲವೊಮ್ಮೆ ನಾಗಪುರದಲ್ಲಿ ಇದು ನಡೆಯುತ್ತದೆ.

ಬಿರಿಂಚಿ ಬಾಬಾ ತಾನು ಕಾಲಾತೀತ, ಯಾವುದೇ ಯುಗಕ್ಕೆ ಬದ್ಧನಲ್ಲ ಎಂದು ಹೇಳಿಕೊಳ್ಳುತ್ತಾನೆ.

ಕ್ರಿಸ್ತ ಪೂರ್ವ 400ರಲ್ಲಿ ಜನಿಸಿದ ಪ್ಲೇಟೋ ಜೊತೆ ಚರ್ಚೆ ನಡೆಸಿದ್ದಾಗಿ ಹೇಳುತ್ತಾನೆ.

ಯೇಸುಕ್ರಿಸ್ತ ಮತ್ತು ಗೌತಮ ಬುದ್ಧ ಅವರೊಂದಿಗೆ ಅವರ ಹೆಸರುಗಳನ್ನು ತೆಗೆದುಕೊಂಡು ಮಾತನಾಡುತ್ತಿದ್ದೆ ಎನ್ನುತ್ತಾನೆ.

ಆಲ್ಬರ್ಟ್ ಐನ್‌ಸ್ಟೈನ್ ವಿಷಯವಾಗಿ ಹೇಳುವ ಬಿರಿಂಚಿ ಬಾಬಾ, ತನಗೆ ಮನು ಮತ್ತು ಪರಾಶರ ಮುನಿಯೂ ಗೊತ್ತು, ಭಗೀರಥನೂ ಗೊತ್ತು ಎನ್ನುತ್ತಾನೆ.

ಪ್ರಧಾನಿ ಮೋದಿಯನ್ನು ವಿಷ್ಣುವಿನ ಅವತಾರ ಎಂದು ಕರೆಯುವವರು ಮತ್ತು ಹಿಂದಿನ ಜನ್ಮದಲ್ಲಿ ಶಿವಾಜಿ ಎಂದು ಕರೆಯುವವರು ಇನ್ನೂ ಬಿರಿಂಚಿ ಬಾಬಾ ಮಟ್ಟವನ್ನು ತಲುಪಿಲ್ಲ.

ಸತ್ಯಜಿತ್ ರೇ 1965ರಲ್ಲಿಯೇ ಭಾರತ ಎಲ್ಲಿಗೆ ಹೋಗುತ್ತಿದೆ ಎಂಬುದನ್ನು ಗುರುತಿಸಿದ್ದರು. ಅದನ್ನೇ ಆ ಚಿತ್ರದಲ್ಲಿ ಅವರು ಬಿರಿಂಚಿ ಬಾಬಾ ಮೂಲಕ ತೋರಿಸಿದ್ದಾರೆ.

ವಿದ್ಯಾವಂತ ಜನರಿಗೇ ಈ ಬಾಬಾಗಳ ಪವಾಡಗಳಲ್ಲಿ ಹೆಚ್ಚಿನ ನಂಬಿಕೆ ಇದೆ.

ಇಂದಿನ ಭಾರತ ಮಹಾಪುರುಷರ ಕುರಿತ ಸಿನೆಮಾಗಳ ಪ್ರಪಂಚಕ್ಕಿಂತ ಹೆಚ್ಚು ಅಪಾಯಕಾರಿಯಾಗಿದೆ.

ಧರ್ಮದ ಹೆಸರಿನಲ್ಲಿ, ಆಧ್ಯಾತ್ಮಿಕತೆಯ ಹೆಸರಿನಲ್ಲಿ ಮೋಸಗಳು ನಡೆಯುತ್ತವೆ. ಅದಕ್ಕಿಂತಲೂ ದೊಡ್ಡದಾಗಿ, ರಾಜಕೀಯ ನಡೆಯುತ್ತಿದೆ.

ಕಳೆದ ವರ್ಷ ಎಪ್ರಿಲ್‌ನಲ್ಲಿ, ಚುನಾವಣೆಗೆ ಸ್ವಲ್ಪ ಮೊದಲು ಮಧ್ಯಪ್ರದೇಶದ ಹನುಮಾನ್ ದೇವಸ್ಥಾನದಲ್ಲಿ ಭಜನ್ ಗಾಯಕ ಅನುಪ್ ಜಲೋಟಾ, ಮೋದಿ ಮತ್ತು ಯುಪಿ ಮುಖ್ಯಮಂತ್ರಿ ಇಬ್ಬರೂ ಅವತಾರ ಪುರುಷರು ಎಂದು ಹೇಳಿದ್ದು ಸುದ್ದಿಯಾಗಿತ್ತು.

2022ರ ಅಕ್ಟೋಬರ್‌ನಲ್ಲಿ ಉತ್ತರ ಪ್ರದೇಶ ಸರಕಾರದ ಮಾಧ್ಯಮಿಕ ಶಿಕ್ಷಣ ರಾಜ್ಯ ಸಚಿವೆ ಗುಲಾಬ್ ದೇವಿ, ನರೇಂದ್ರ ಮೋದಿ ದೇವರ ಅವತಾರವಾಗಿದ್ದು, ಅವರು ಬಯಸಿದಷ್ಟು ಕಾಲ ಪ್ರಧಾನಿಯಾಗಿ ಉಳಿಯಬಹುದು ಎಂದು ಹೇಳಿದರು.

2022ರ ಜನವರಿಯಲ್ಲಿ ಮಧ್ಯಪ್ರದೇಶದ ಕೃಷಿ ಸಚಿವ ಮತ್ತು ಬಿಜೆಪಿ ನಾಯಕ ಕಮಲ್ ಪಟೇಲ್ ನರೇಂದ್ರ ಮೋದಿಯನ್ನು ದೇವರ ಅವತಾರ ಎಂದು ಕರೆದರು.

ಪ್ರಚಾರಕರು ಜನರ ಒಳ್ಳೆಯತನವನ್ನೇ ತಮ್ಮ ಆಯುಧವನ್ನಾಗಿ ಮಾಡಿಕೊಂಡಿದ್ದಾರೆ.

ಮುಗ್ಧ ಸಾರ್ವಜನಿಕರು ದಾರಿ ತಪ್ಪುತ್ತಾರೆ.

ಪ್ರಜಾಪ್ರಭುತ್ವದ ಭವಿಷ್ಯವನ್ನು ಹುಡುಕದೆ ಅವತಾರವನ್ನು ಹುಡುಕುತ್ತಿರುವ ಜನರ ದೊಡ್ಡ ವರ್ಗವಿದೆ ಎಂದು ಅವರಿಗೆ ತಿಳಿದಿದೆ.

ಪ್ರಶ್ನೆಗಳನ್ನು ಕೇಳುವ ಸಮಯ ಬಂದ ತಕ್ಷಣ, ಸಮಾಧಿಗಳನ್ನು ಅಗೆಯುವ ರಾಜಕೀಯ ಪ್ರಾರಂಭವಾಗುತ್ತದೆ ಅಥವಾ ಪ್ರಧಾನಿಯನ್ನು ಅವತಾರ ಎಂದು ಕರೆಯಲಾಗುತ್ತದೆ.

ಹೇಗಾದರೂ, ಯಾವುದಾದರೂ ನೆಪದಲ್ಲಿ ಮೋದಿ ಸುದ್ದಿಯಾಗುವುದು, ಅವರ ಭಜನೆ ನಡೆಯುವುದು ತಪ್ಪುವುದಿಲ್ಲ.

share
ಅಜಿತ್ ಕೆ.ಸಿ.
ಅಜಿತ್ ಕೆ.ಸಿ.
Next Story
X