Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಭಾರತೀಯ ಹೂಡಿಕೆದಾರರ ನಿರಂತರ ನಷ್ಟಕ್ಕೆ...

ಭಾರತೀಯ ಹೂಡಿಕೆದಾರರ ನಿರಂತರ ನಷ್ಟಕ್ಕೆ ಹೊಣೆ ಯಾರು?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.16 Jan 2025 12:01 PM IST
share
ಭಾರತೀಯ ಹೂಡಿಕೆದಾರರ ನಿರಂತರ ನಷ್ಟಕ್ಕೆ ಹೊಣೆ ಯಾರು?
ಸೆಪ್ಟಂಬರ್‌ನಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ನಿರಂತರವಾಗಿ ಕುಸಿಯುತ್ತಿವೆ. ಮಾರುಕಟ್ಟೆ 4 ತಿಂಗಳಿನಿಂದ ಕುಸಿತ ಕಾಣುತ್ತಿದೆ. ನಡು ನಡುವೆ ಸುಧಾರಣೆ ಕಂಡಿದ್ದರೂ, ಅದು ತಾತ್ಕಾಲಿಕ ಎಂದು ಸಾಬೀತಾಗಿದೆ. ಕುಸಿತ ನಿಂತಿಲ್ಲ. ಜನವರಿಯ 14 ದಿನಗಳು ಕೂಡ ಕಳೆದಿವೆ ಮತ್ತು ಈಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಮೃದ್ಧಿ ಎಂಬುದೇ ಇಲ್ಲವಾಗಿದೆ. ಭಾರತೀಯ ಹೂಡಿಕೆದಾರರ ಲಕ್ಷ ಕೋಟಿ ರೂಪಾಯಿಗಳು ಗುಳುಂ ಆಗಿವೆ. ಸೆಪ್ಟಂಬರ್‌ನಿಂದ ಜನವರಿ 10ರವರೆಗೆ ಹೂಡಿಕೆದಾರರು 47 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಹೂಡಿಕೆದಾರರ 20 ಲಕ್ಷ ಕೋಟಿ ರೂ. ಇಲ್ಲವಾಗಿ ಹೋಗಿದೆ.

ಕೋವಿಡ್ ನಂತರ ಮಧ್ಯಮ ವರ್ಗದ ಪಾಲಿನ ಭರವಸೆ ಎಂಬಂತಿದ್ದ ಷೇರು ಮಾರುಕಟ್ಟೆ ಹಲವಾರು ತಿಂಗಳುಗಳಿಂದ ಕುಸಿಯುತ್ತಿದೆ.

ಕೋವಿಡ್ ನಂತರ ಜನರು ಷೇರು ಮಾರುಕಟ್ಟೆಯ ಮೇಲೆಯೇ ಭರವಸೆ ಇಟ್ಟಿದ್ದರು. ಷೇರು ಮಾರುಕಟ್ಟೆಯಲ್ಲಿನ ಏರಿಕೆ ಮತ್ತು ಸ್ಥಿರತೆಯಿಂದಾಗಿ ಕೋಟ್ಯಂತರ ಹೊಸ ಹೂಡಿಕೆದಾರರು ಷೇರು ಮಾರುಕಟ್ಟೆಗೆ ಬಂದರು. ಅವರು ಬ್ಯಾಂಕುಗಳಿಂದ ತಮ್ಮ ಠೇವಣಿಗಳನ್ನು ಹಿಂಪಡೆದು ಡಿಮ್ಯಾಟ್ ಖಾತೆಗಳನ್ನು ತೆರೆಯಲು ಪ್ರಾರಂಭಿಸಿದರು, ಆದರೆ ಈಗ ಷೇರು ಮಾರುಕಟ್ಟೆಯೂ ಕುಸಿಯತೊಡಗಿದೆ.

ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ಹಣ ಹಿಂದೆಗೆದುಕೊಂಡ ವೇಗ ನೋಡಿದರೆ ಅವರು ಇನ್ನೂ ಬಹಳ ಸಮಯದವರೆಗೆ ಇತ್ತ ಕಡೆ ತಲೆಹಾಕಿಯೂ ಮಲಗುವುದಿಲ್ಲ ಎನ್ನುವ ಹಾಗಿದೆ.

ಸೆಪ್ಟಂಬರ್‌ನಿಂದ ಸೆನ್ಸೆಕ್ಸ್ ಮತ್ತು ನಿಫ್ಟಿ ನಿರಂತರವಾಗಿ ಕುಸಿಯುತ್ತಿವೆ. ಮಾರುಕಟ್ಟೆ 4 ತಿಂಗಳಿನಿಂದ ಕುಸಿತ ಕಾಣುತ್ತಿದೆ. ನಡು ನಡುವೆ ಸುಧಾರಣೆ ಕಂಡಿದ್ದರೂ, ಅದು ತಾತ್ಕಾಲಿಕ ಎಂದು ಸಾಬೀತಾಗಿದೆ. ಕುಸಿತ ನಿಂತಿಲ್ಲ.

ಜನವರಿಯ 14 ದಿನಗಳು ಕೂಡ ಕಳೆದಿವೆ ಮತ್ತು ಈಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಸಮೃದ್ಧಿ ಎಂಬುದೇ ಇಲ್ಲವಾಗಿದೆ. ಭಾರತೀಯ ಹೂಡಿಕೆದಾರರ ಲಕ್ಷ ಕೋಟಿ ರೂಪಾಯಿಗಳು ಗುಳುಂ ಆಗಿವೆ. ಸೆಪ್ಟಂಬರ್‌ನಿಂದ ಜನವರಿ 10ರವರೆಗೆ ಹೂಡಿಕೆದಾರರು 47 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಕಳೆದ ನಾಲ್ಕು ದಿನಗಳಲ್ಲಿ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ಹೂಡಿಕೆದಾರರ 20 ಲಕ್ಷ ಕೋಟಿ ರೂ. ಇಲ್ಲವಾಗಿ ಹೋಗಿದೆ.

ಜನವರಿ 13ರಂದು 8 ಲಕ್ಷ ಕೋಟಿ ರೂ. ನಷ್ಟವಾಗಿದೆ.

ಸವಾಲುಗಳ ಹೊರತಾಗಿಯೂ ಭಾರತದ ಷೇರು ಮಾರುಕಟ್ಟೆ ಸ್ಥಿರವಾಗಿತ್ತು ಮತ್ತು ಏರಿಕೆಯತ್ತ ಸಾಗಿತ್ತು. ಆದರೆ ಕಳೆದ 5 ತಿಂಗಳುಗಳಿಂದ ಷೇರು ಮಾರುಕಟ್ಟೆ ಕುಸಿಯುತ್ತಲೇ ಇದೆ.

2024ರ ಸೆಪ್ಟಂಬರ್‌ನಲ್ಲಿ ಬಾಂಬೆ ಷೇರು ವಿನಿಮಯ ಕೇಂದ್ರ 85,863 ಅಂಕಗಳನ್ನು ತಲುಪಿತ್ತು. ಜನವರಿ 13ರಂದು 76,330 ಅಂಕಗಳಿಗೆ ಇಳಿಯಿತು. ನಾಲ್ಕೂವರೆ ತಿಂಗಳಲ್ಲಿ 9,000 ಪಾಯಿಂಟ್‌ಗಳಷ್ಟು ಕುಸಿದಿದೆ.

ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಗಳಿಂದ 22,000 ಕೋಟಿಗೂ ಹೆಚ್ಚು ಹಣ ಹಿಂಪಡೆದಿದ್ದಾರೆ.

ಜನವರಿ 13ರಂದು ಸೆನ್ಸೆಕ್ಸ್ 1,000 ಪಾಯಿಂಟ್‌ಗಳಿಗಿಂತ ಕಡಿಮೆಯಾಯಿತು. ನಿಫ್ಟಿ ಕೂಡ 345 ಪಾಯಿಂಟ್‌ಗಳಷ್ಟು ಕುಸಿದು 23,085ಕ್ಕೆ ತಲುಪಿತು.

ಮಾರುಕಟ್ಟೆಯಲ್ಲಿ ರಕ್ತಪಾತವಾಗುತ್ತಿದ್ದರೂ, ಗೋದಿ ಮೀಡಿಯಾದಲ್ಲಿ ಗುಣಗಾನ ನಡೆಯುತ್ತಿದೆ.

ಡಿಸೆಂಬರ್ ತಿಂಗಳಲ್ಲಿ ಬಿಸಿನೆಸ್ ಸ್ಟ್ಯಾಂಡರ್ಡ್ ಪ್ರಕಟಿಸಿರುವ ಒಂದು ಅಧ್ಯಯನ, ವಿವಿಧ ಪ್ರಧಾನಿಗಳ ಅಧಿಕಾರಾವಧಿಯಲ್ಲಿ ಭಾರತೀಯ ಷೇರು ಮಾರುಕಟ್ಟೆ ಹೂಡಿಕೆಯ ಮೇಲಿನ ರಿಟರ್ನ್ಸ್ ಚೆನ್ನಾಗಿದೆ ಎಂದು ಚಾರ್ಟ್ ಮೂಲಕ ತೋರಿಸಿದೆ.

ಅದರ ಪ್ರಕಾರ, ಮೋದಿ ಮೊದಲ ಅವಧಿಯಲ್ಲಿ ಕೇವಲ ಶೇ. 61.2 ರಷ್ಟು ಲಾಭ ಬಂದಿದೆ. ಎರಡನೇ ಅವಧಿಯಲ್ಲಿ ಶೇ. 81ರಷ್ಟು ಲಾಭ ಬಂದಿದೆ. ಕಳೆದ ಜೂನ್‌ನಿಂದ ಡಿಸೆಂಬರ್‌ವರೆಗೆ ಶೇ. 9.2ರಷ್ಟು ಲಾಭ ಬಂದಿದೆ.

ಕಳೆದ 4 ವರ್ಷಗಳಲ್ಲಿ ಡಿಮ್ಯಾಟ್ ಖಾತೆಗಳಲ್ಲಿ ಆಗಿರುವ ಪ್ರಗತಿಯ ಬಗ್ಗೆ ಎಸ್‌ಬಿಐ ವರದಿ ಪ್ರಕಟಿಸಿದೆ.

2020ರ ಮಾರ್ಚ್‌ನಲ್ಲಿ ಒಟ್ಟು ಡಿಮ್ಯಾಟ್ ಖಾತೆಗಳ ಸಂಖ್ಯೆ 4.1 ಕೋಟಿಗಳಷ್ಟಿತ್ತು. ಮುಂದಿನ 4 ವರ್ಷ ಮತ್ತು 7 ತಿಂಗಳುಗಳಲ್ಲಿ ಡಿಮ್ಯಾಟ್ ಖಾತೆಗಳ ಸಂಖ್ಯೆ 17 ಕೋಟಿಗೆ ಏರಿತು. ಮಧ್ಯಮ ವರ್ಗದವರು ಮೋದಿಯವರ ಮೇಲೆ ಹೆಚ್ಚಿನ ನಂಬಿಕೆ ಹೊಂದಿದ್ದರು ಎಂಬುದು ಸ್ಪಷ್ಟವಾಗಿದೆ. ಅದಕ್ಕಾಗಿಯೇ ಅವರು ಬ್ಯಾಂಕುಗಳಿಂದ ಹಣ ಹಿಂಪಡೆದು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಪ್ರಾರಂಭಿಸಿದರು.

ಆದರೆ ಮನಮೋಹನ್ ಸಿಂಗ್ ಅವಧಿಗಿಂತ ಮೋದಿ ಅವಧಿಯಲ್ಲಿ ಲಾಭ ಕಡಿಮೆಯಾಗಿದೆ.

ಸೆನ್ಸೆಕ್ಸ್ ಅಥವಾ ನಿಫ್ಟಿಯನ್ನು ನೋಡಿದರೆ ಬಹಳ ವೇಗವಾಗಿ ಏರಿಕೆಯಾಗಿದೆ. ಆದರೆ ನಮ್ಮ ನೈಜ ಆರ್ಥಿಕತೆಯನ್ನು, ಅಂದರೆ ನಮ್ಮ ಉತ್ಪಾದನೆಯನ್ನು, ಕೃಷಿ ಉತ್ಪಾದನೆಯನ್ನು ನೋಡಿದರೆ ಅದರ ಬೆಳವಣಿಗೆ ಷೇರು ಮಾರುಕಟ್ಟೆಯಷ್ಟು ವೇಗವಾಗಿಲ್ಲ.

ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳ ನಂತರ ಷೇರು ಮಾರುಕಟ್ಟೆ ಭಾರೀ ಪ್ರಮಾಣದಲ್ಲಿ ಏರಿತು ಮತ್ತು ಫಲಿತಾಂಶದ ಬಳಿಕ ಅದು ಸಂಪೂರ್ಣವಾಗಿ ಕುಸಿಯಿತು.

ಅದು ಕೃತಕ ಏರಿಕೆಯಾಗಿತ್ತು ಎಂಬುದು ಈಗ ಗೊತ್ತಾಗಿದೆ.

ಮೋದಿ ಮತ್ತು ಶಾ ಫಲಿತಾಂಶಗಳ ಮೊದಲು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಗೆ ಒತ್ತಾಯಿಸಿದ್ದಾಗ ಷೇರು ಮಾರುಕಟ್ಟೆಯಲ್ಲಿನ ಏರಿಕೆ ಅನಿವಾರ್ಯವಾಗಿತ್ತು.

ಆದರೆ ಬಿಜೆಪಿಯ ‘ಚಾರ್ ಸೌ ಪಾರ್’ ಘೋಷಣೆ ವಿಫಲವಾಗಿ, ಅದಕ್ಕೆ ಬಹುಮತವೂ ಸಿಕ್ಕಿರಲಿಲ್ಲ. ಆಗ ಮಾರುಕಟ್ಟೆ ತೀವ್ರವಾಗಿ ಕುಸಿದು ಹೋಯಿತು, ಹೂಡಿಕೆದಾರರು ದಿಗ್ಭ್ರಮೆಗೊಂಡರು.

ಒಂದೇ ದಿನದಲ್ಲಿ 30 ಲಕ್ಷ ಕೋಟಿ ರೂ. ನಷ್ಟವಾದ ಬಗ್ಗೆ ಕಾಂಗ್ರೆಸ್ ಟೀಕಿಸಿತ್ತು.

ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಬೇಕೆಂದು ರಾಹುಲ್ ಗಾಂಧಿ ಒತ್ತಾಯಿಸಿದ್ದರು. ಆದರೆ ಅದನ್ನು ಸರಕಾರ ನಿರ್ಲಕ್ಷಿಸಿತ್ತು.

ಜೂನ್ 4ರಂದು ಷೇರು ಮಾರುಕಟ್ಟೆ ಭಾರೀ ನಷ್ಟ ಅನುಭವಿಸಲಿದೆ ಎಂಬುದರ ಬಗ್ಗೆ ಮತ್ತು ತಮ್ಮ ಆಟ 240 ಸ್ಥಾನಗಳಿಗೇ ಸೀಮಿತ ಎಂಬುದರ ಬಗ್ಗೆ ಮೋದಿಗೆ ಗುಪ್ತಚರ ವರದಿ ಮೂಲಕ ಮೊದಲೇ ತಿಳಿದಿತ್ತು ಎಂಬುದರ ಬಗ್ಗೆಯೂ ಆಗ ವರದಿಗಳಿದ್ದವು.

ಈಗ ಷೇರು ಮಾರುಕಟ್ಟೆ ಕುಸಿಯುತ್ತಿದೆ, ಮೋದಿಯಾಗಲೀ ಅಮಿತ್ ಶಾ ಆಗಲೀ ಷೇರು ಮಾರುಕಟ್ಟೆಯ ಬಗ್ಗೆ ಏಕೆ ಮಾತನಾಡುತ್ತಿಲ್ಲ?

ಜಾಗತಿಕ ಸವಾಲುಗಳ ಹೆಸರಿನಲ್ಲಿ ಪ್ರಶ್ನೆಗಳನ್ನು ತಪ್ಪಿಸಿಕೊಳ್ಳುವುದು ಅವರಿಗೆ ರೂಢಿಯೇ ಆಗಿದೆ.

ಭಾರತದ ಸ್ವಂತ ಆರ್ಥಿಕ ಸ್ಥಿತಿಯ ಬಗ್ಗೆ ಚರ್ಚಿಸಲಾಗುತ್ತಿಲ್ಲ. ಜಿಡಿಪಿ ಅಂದಾಜು ಕಡಿಮೆಯಾಗಿದೆ. ಈ ಹಣಕಾಸು ವರ್ಷದಲ್ಲಿ, ಶೇ. 6.4ರ ಜಿಡಿಪಿ ಬಗ್ಗೆ ಅಂದಾಜಿಸಲಾಗಿದೆ.

ಜನರ ಆರ್ಥಿಕ ಸಾಮರ್ಥ್ಯ ಹಾಳಾಗುತ್ತಿದೆ. ಅವರ ಆದಾಯದ ಮೇಲೆ ಪರಿಣಾಮ ಉಂಟಾಗಿದೆ, ಆದ್ದರಿಂದಲೇ ಅವರು ತೆರಿಗೆ ಕಡಿತಕ್ಕೆ ಕೇಳುತ್ತಿದ್ದಾರೆ.

ಈ ನಡುವೆ ಮಧ್ಯಮ ವರ್ಗ ಮತ್ತು ಇಡೀ ದೇಶ ಮಂದಿರ ರಾಜಕೀಯದಲ್ಲಿ ಮುಳುಗಿದೆ.

ಈಒಅಉ ಕಂಪೆನಿಗಳು ಎಂದು ಕರೆಯಲಾಗುವ, ದೈನಂದಿನ ಬಳಕೆ ವಸ್ತುಗಳನ್ನು ತಯಾರಿಸುವ ಕಂಪೆನಿಗಳು ತಮ್ಮ ಸರಕುಗಳನ್ನು ಮಾರಾಟ ಮಾಡಲು ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುತ್ತಿವೆ.

ಸರಕುಗಳು ಮಾರುಕಟ್ಟೆಯಲ್ಲಿ ಹೋಗದಿದ್ದರೆ, ಜನರು ಖರೀದಿಸುವುದನ್ನು ಮುಂದುವರಿಸಬೇಕಾದರೆ ಸಣ್ಣ ಪ್ಯಾಕೆಟ್‌ಗಳಲ್ಲಿ ಮಾರಾಟ ಮಾಡಬೇಕು ಎಂಬುದು ಆ ತಂತ್ರ. ಶ್ರೀಮಂತರು ಮತ್ತು ಬಡವರ ನಡುವಿನ ಹೆಚ್ಚುತ್ತಿರುವ ಅಂತರವನ್ನು ಇದು ಬಹಿರಂಗಪಡಿಸುತ್ತದೆ.

ಒಂದೆಡೆ, ವಾಷಿಂಗ್ ಪೌಡರ್ ಪ್ಯಾಕೆಟ್ ಸಣ್ಣದಾಗುತ್ತಿದ್ದರೆ, ಮತ್ತೊಂದೆಡೆ, ಮಹಾ ನಗರಗಳಲ್ಲಿ ಪ್ರೀಮಿಯಂ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತಿದೆ. ದೊಡ್ಡ ಕಾರುಗಳ ಮಾರಾಟ ಹೆಚ್ಚುತ್ತಿದೆ. ಸಣ್ಣ ಕಾರುಗಳ ಮಾರಾಟ ಕಡಿಮೆಯಾಗುತ್ತಿದೆ.

ನಗರಗಳಲ್ಲಿ ಬೇಡಿಕೆ ಕುಸಿದಿದೆ. ನಗರಗಳಲ್ಲಿನ ಬೇಡಿಕೆಯಿಂದಾಗಿ ಈಒಅಉ ವಲಯ ಬೆಳೆಯುತ್ತದೆ, ಆದರೆ ನಗರಗಳಲ್ಲಿ ಅದರ ಬೆಳವಣಿಗೆ ನಿಧಾನವಾಗಿದೆ.

ಮತ್ತೊಂದೆಡೆ, ಭಾರತೀಯ ರೂಪಾಯಿ ಡಾಲರ್ ವಿರುದ್ಧ ಕುಸಿಯುತ್ತಿದೆ. ರೂಪಾಯಿ ಉಳಿಸಲು, ರಿಸರ್ವ್ ಬ್ಯಾಂಕ್ ಹರಸಾಹಸ ಮಾಡುತ್ತಿದೆ.

ಭಾರತದ ವಿದೇಶಿ ವಿನಿಮಯ ಜನವರಿ 3ರಂದು ಅತ್ಯಂತ ಕಡಿಮೆ ಮಟ್ಟದಲ್ಲಿತ್ತು.

ಅದು 634.59 ಬಿಲಿಯನ್ ಡಾಲರ್ ಆಗಿತ್ತು.

ಜಿಡಿಪಿ 2023-24ರಲ್ಲಿ ಶೇ. 8.2ರಷ್ಟಿತ್ತು; ಈ ಹಣಕಾಸು ವರ್ಷದ ಅಂದಾಜನ್ನು ಶೇ. 6.4ರಲ್ಲಿಯೇ ಇಡಲಾಗಿದೆ. ಸುಮಾರು ಶೇ. 2ರಷ್ಟು ಕುಸಿತ ಸಣ್ಣದಲ್ಲ.

ಜುಲೈ 2024ರ ಆರ್ಥಿಕ ಸಮೀಕ್ಷೆಯಲ್ಲಿ ನೀಡಲಾದ ಅಂದಾಜು ಶೇ. 6.5ರಿಂದ 7ರಷ್ಟಿತ್ತು. ಜಿಡಿಪಿ ಅದಕ್ಕಿಂತಲೂ ಕಡಿಮೆ ಇರಬಹುದು. ಅದು ಶೇ. 6.4ಕ್ಕಿಂತ ಕಡಿಮೆ ಇರುವ ಸಾಧ್ಯತೆಯಿದೆ.

2019ರಲ್ಲಿ ಕಾರ್ಪೊರೇಟ್ ತೆರಿಗೆಯನ್ನು ಕಡಿಮೆ ಮಾಡಲಾಯಿತು.

ಖಾಸಗಿ ಕಂಪೆನಿಗಳ ಹೂಡಿಕೆ ಹೆಚ್ಚಾಗುತ್ತದೆ ಮತ್ತು ಉದ್ಯೋಗಗಳು ಹೆಚ್ಚಾಗುತ್ತವೆ ಎಂದು ಕನಸನ್ನು ತೋರಿಸಲಾಯಿತು. ಆದರೆ ನಡೆದದ್ದೇ ಬೇರೆ. ಕಾರ್ಪೊರೇಟ್ ಲಾಭ ಹೆಚ್ಚಾಯಿತೇ ಹೊರತು ಹೂಡಿಕೆ ಹೆಚ್ಚಲಿಲ್ಲ.

‘ದಿ ಹಿಂದೂ’ ವರದಿಯಲ್ಲಿ ಭಾರತದ ನಿಧಾನಗತಿಯ ಆರ್ಥಿಕ ಬೆಳವಣಿಗೆಯ ಕುರಿತು ಹೇಳಲಾಗಿದೆ.

ಯುಪಿಎ ಆಡಳಿತದ 10 ವರ್ಷಗಳ ಅವಧಿಯಲ್ಲಿ ನೈಜ ಜಿಡಿಪಿಯ ವಾರ್ಷಿಕ ಬೆಳವಣಿಗೆ ದರ ಶೇ. 6.8, ಹೂಡಿಕೆ ದರ ಶೇ. 10 ಮತ್ತು ಖಾಸಗಿ ವಲಯದ ಬೆಳವಣಿಗೆ ಶೇ. 10, ಬಳಕೆಯ ಬೆಳವಣಿಗೆ ದರ ಶೇ. 6 ಎಂದು ಆ ವರದಿಯಲ್ಲಿದೆ.

2014ರಲ್ಲಿ ಮೋದಿ ಸರಕಾರ ಅಧಿಕಾರಕ್ಕೆ ಬಂದ ಸಮಯದಿಂದ ಕೋವಿಡ್‌ವರೆಗೆ, ನೈಜ ಜಿಡಿಪಿಯ ವಾರ್ಷಿಕ ಬೆಳವಣಿಗೆ ದರ ಯುಪಿಎ ಆಡಳಿತದಂತೆಯೇ ಇತ್ತು.

ಖಾಸಗಿ ಬಳಕೆಯ ಬೆಳವಣಿಗೆಯ ದರ ಶೇ. 6.8ಕ್ಕೆ ಏರಿತು. ಆದರೆ ನೈಜ ಹೂಡಿಕೆಯ ಬೆಳವಣಿಗೆಯ ದರ ಶೇ. 10ರಿಂದ ಶೇ. 6.3ಕ್ಕೆ ಇಳಿದಿದೆ.

ಮೋದಿ ಸರಕಾರದ ಅವಧಿಯಲ್ಲಿ ಹೂಡಿಕೆಯಿಂದಾಗಿ ಆರ್ಥಿಕ ಅಭಿವೃದ್ಧಿ ನಡೆದಿಲ್ಲ, ಆದರೆ ಯುಪಿಎ ಆಡಳಿತದಲ್ಲಿ ಕಾರ್ಪೊರೇಟ್ ತೆರಿಗೆ ಹೆಚ್ಚಿದ್ದಾಗ ಹೂಡಿಕೆ ಉತ್ತಮವಾಗಿತ್ತು.

ಕಳೆದ ವರ್ಷ ದೇಶದಲ್ಲಿ ಶೇ. 8ಕ್ಕಿಂತ ಹೆಚ್ಚು ಆರ್ಥಿಕ ಬೆಳವಣಿಗೆ ಕಂಡುಬಂದಿದೆ, ಆದರೆ ಈ ವರ್ಷ ಅದು ಶೇ.6.3 ಅಥವಾ ಶೇ.6.4 ರಷ್ಟು ಮಾತ್ರ ಇರುವ ಸಾಧ್ಯತೆಯಿದೆ. ಖಾಸಗಿ ಹೂಡಿಕೆಯಲ್ಲಿ ಯಾವುದೇ ಹೆಚ್ಚಳ ಇಲ್ಲದಿರುವುದೇ ಇದಕ್ಕೆ ಕಾರಣ.

ಜಿಡಿಪಿಯಲ್ಲಿನ ನಿಧಾನಗತಿಯ ಬೆಳವಣಿಗೆಯಿಂದಾಗಿ ನಮ್ಮ ಹಣಕಾಸು ಮಾರುಕಟ್ಟೆಯಲ್ಲಿರುವ ವಿದೇಶಿ ಬಂಡವಾಳ ಹೂಡಿಕೆದಾರರು ತಮ್ಮ ಹಣ ಹಿಂದೆಗೆದುಕೊಳ್ಳುತ್ತಿದ್ದಾರೆ.

ಇದರಿಂದಾಗಿ ಷೇರು ಮಾರುಕಟ್ಟೆಯ ಮೇಲೆ ಪರಿಣಾಮ ಬೀರುತ್ತಿದೆ.

ದೇಶೀಯ ಹೂಡಿಕೆದಾರರು, ಚಿಲ್ಲರೆ ಹೂಡಿಕೆದಾರರು ಇನ್ನೂ ಭಾರತೀಯ ಆರ್ಥಿಕತೆಯ ಮೇಲೆ ವಿಶ್ವಾಸ ಇಟ್ಟುಕೊಂಡಿದ್ದಾರೆ.

ಆದರೆ ಬೆಳವಣಿಗೆಯ ಅಂದಾಜುಗಳು ಕಡಿಮೆಯಾಗಿರುವುದರಿಂದ ಅವರ ಈ ವಿಶ್ವಾಸಕ್ಕೆ ಹೊಡೆತ ಬೀಳುತ್ತಿದೆ. ಮುಂಬರುವ ಬಜೆಟ್ ನಂತರ ಯಾವ ಸುಧಾರಣೆಗಳು ನಡೆಯುತ್ತವೆ ಎಂಬುದನ್ನು ನೋಡಬೇಕಾಗಿದೆ,

ಮೋದಿ ಸರಕಾರದ ಅವಧಿಯಲ್ಲಿ ಉತ್ಪಾದನಾ ವಲಯ ಯಾವತ್ತೂ ಚೇತರಿಸಿಕೊಳ್ಳಲಿಲ್ಲ.

ಕಂಪೆನಿಗಳಲ್ಲಿ ಸಂಬಳ ಏರಿಕೆಯಾಗಿಲ್ಲ. ಮಧ್ಯಮ ವರ್ಗಕ್ಕೆ ಎಲ್ಲಿಂದಲೂ ಹಣ ಸಿಗುತ್ತಿಲ್ಲ.

ತೆರಿಗೆಗಳಲ್ಲಿ ಕಡಿತ ಇರಬೇಕು. ಆದರೆ ತೆರಿಗೆ ಕಡಿತ ಮಾತ್ರವೇ ಸಾಕಾಗುತ್ತದೆಯೇ?

ತೆರಿಗೆಗಳನ್ನು ಕಡಿಮೆ ಮಾಡಲು ಸರಕಾರಕ್ಕೆ ಎಷ್ಟು ಅವಕಾಶ ಉಳಿದಿದೆ? ಹಾಗಾಗಿ ಹೇಳಿಕೊಳ್ಳುವಂಥ ಪರಿಹಾರ ಸಿಗುವುದು ಅನುಮಾನವೇ ಆಗಿದೆ.

ವೈಯಕ್ತಿಕ ಆದಾಯದ ಮೇಲಿನ ಬಡ್ಡಿದರ ಮತ್ತು ತೆರಿಗೆಯನ್ನು ಕಡಿಮೆ ಮಾಡಬೇಕು ಎಂಬ ಒತ್ತಾಯಗಳಿವೆ.

ವೈಯಕ್ತಿಕ ಆದಾಯದ ಮೇಲಿನ ಕನಿಷ್ಠ ತೆರಿಗೆ ಶೇ.39ಕ್ಕಿಂತ ಕಡಿಮೆಯಿರಬೇಕು, ಅದು ಶೇ.33 ಅಥವಾ ಶೇ.35 ಆಗಿರಬೇಕು.

ಮೊದಲು ಅದು ಶೇ.42 ಆಗಿತ್ತು, ಅದನ್ನು ಶೇ.39ಕ್ಕೆ ಇಳಿಸಲಾಗಿದೆ, ಕಾರ್ಪೊರೇಟ್ ತೆರಿಗೆ ಶೇ.25.

ಕಾರ್ಪೊರೇಟ್‌ಗಳಿಗೆ ಸರಕಾರ ಅದರ ಮೇಲಿನ ತೆರಿಗೆಯನ್ನು ಮತ್ತೆ ಹೆಚ್ಚಿಸಬಹುದು ಎಂಬ ಭಯ ಇದ್ದಂತಿದೆ. ಹಾಗಾಗಿಯೇ ಕಾರ್ಪೊರೇಟ್ ಮಂದಿ ಕಾರ್ಪೊರೇಟ್ ಆದಾಯ ತೆರಿಗೆ ಕಡಿಮೆ ಮಾಡುವ ಬಗ್ಗೆ ಒತ್ತಾಯ ಶುರು ಮಾಡಿದ್ದಾರೆ.

ಆದರೆ, ಸಿಐಐ ಅಧ್ಯಕ್ಷ ಮತ್ತು ಕೈಗಾರಿಕೋದ್ಯಮಿ ಸಂಜೀವ್ ಪುರಿ, ರೂ. 20 ಲಕ್ಷದವರೆಗೆ ಆದಾಯ ಹೊಂದಿರುವವರಿಗೆ ತೆರಿಗೆ ಕಡಿತ ಮಾಡಬೇಕು ಎನ್ನುತ್ತಾರೆ.

ಆರ್ಥಿಕತೆ ಮತ್ತು ಸಾಮಾನ್ಯ ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬೇಡಿಕೆಯನ್ನು ಹೆಚ್ಚಿಸುವ ಆವಶ್ಯಕತೆಯಿದೆ, ಇದು ಹೂಡಿಕೆಯನ್ನು ಹೆಚ್ಚಿಸುವುದಕ್ಕಿಂತ ಮುಖ್ಯ ಎನ್ನುತ್ತಾರೆ ಅವರು.

ಆದರೆ ಸರಕಾರದ ನೀತಿ ಕಾರ್ಪೊರೇಟ್ ಹೂಡಿಕೆಯನ್ನು ಉತ್ತೇಜಿಸುವುದಾಗಿದೆ.

ತೆರಿಗೆ ವಿನಾಯಿತಿಗಳನ್ನು ವರ್ಷಗಳಿಂದಲೂ ನೀಡಲಾಗುತ್ತಿದೆ.ಇಷ್ಟಾದರೂ, ಸರಕಾರ ಬಯಸಿದ್ದ ಖಾಸಗಿ ಹೂಡಿಕೆ ಆಗುತ್ತಲೇ ಇಲ್ಲ.

ಕಂಪೆನಿಗಳ ಲಾಭ ಹೆಚ್ಚಾಗಿದೆ, ಆದರೆ ಜನರ ಸಂಬಳ ಹೆಚ್ಚಾಗಲಿಲ್ಲ, ಹೊಸ ಉದ್ಯೋಗಗಳು ಸೃಷ್ಟಿಯಾಗಲಿಲ್ಲ,

ಈಗ ಈ ಎಲ್ಲಾ ಸತ್ಯ ಹೊರಬರುತ್ತಿದೆ, ಸಾಮಾನ್ಯ ಜನರಿಗೆ ಈ ಹೂಡಿಕೆಯ ಲಾಭ ಸಿಗಲಿಲ್ಲ, ಅವರ ಕೊಳ್ಳುವ ಶಕ್ತಿ ಕುಸಿಯುತ್ತಿದೆ.

ರಫ್ತು ಹೆಚ್ಚಾಗಲು ಮತ್ತು ಉದ್ಯೋಗಗಳು ಸೃಷ್ಟಿಯಾಗಲು ಇಂಗ್ಲೆಂಡ್ ಮತ್ತು ಯುರೋಪಿಯನ್ ದೇಶಗಳೊಂದಿಗೆ ಮುಕ್ತ ವ್ಯಾಪಾರ ಒಪ್ಪಂದಗಳು ಇರಬೇಕು ಎನ್ನುತ್ತಾರೆ ಸಂಜೀವ್ ಪುರಿ.

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡುವ ಮೂಲಕ ಮಧ್ಯಮ ವರ್ಗಕ್ಕೆ ಪರಿಹಾರ ಒದಗಿಸುವುದು ಅಗತ್ಯ ಎಂದು ಸಂಜೀವ್ ಪುರಿ ಹೇಳುತ್ತಾರೆ.

ಈಗಂತೂ ಕುಂಭಮೇಳದ ಗುಂಗು. ಆದ್ದರಿಂದ ತೆರಿಗೆ ಅಥವಾ ಮಧ್ಯಮ ವರ್ಗದ ಆರ್ಥಿಕ ಸ್ಥಿತಿಯ ಬಗ್ಗೆ ಯಾರೂ ಯೋಚನೆ ಕೂಡ ಮಾಡುವುದಿಲ್ಲ.

20 ಕೋಟಿ ಹೂಡಿಕೆದಾರರ ಹಣ ಪ್ರತಿದಿನ ಮಾರುಕಟ್ಟೆಯಲ್ಲಿ ಮುಳುಗುತ್ತಿದೆ. ಗೋದಿ ಮೀಡಿಯಾಗಳು ಕುಂಭಮೇಳದಲ್ಲಿ ನಿರತವಾಗಿರುವುದರಿಂದ ಆ ಬಗ್ಗೆ ಮಾತನಾಡುತ್ತಿಲ್ಲ.

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X