Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅರ್ನಬ್, ಝುಬೇರ್ ಮತ್ತು ಸಿದ್ದೀಕ್...

ಅರ್ನಬ್, ಝುಬೇರ್ ಮತ್ತು ಸಿದ್ದೀಕ್ ಕಪ್ಪನ್ ನ್ಯಾಯಕ್ಕೆ ಸರಿಸಮಾನರೆಂದು ಯಾಕೆ ಭಾವಿಸಲಾಗುವುದಿಲ್ಲ?

ಎನ್. ಕೇಶವ್ಎನ್. ಕೇಶವ್27 Feb 2025 1:20 PM IST
share
ಅರ್ನಬ್, ಝುಬೇರ್ ಮತ್ತು ಸಿದ್ದೀಕ್ ಕಪ್ಪನ್ ನ್ಯಾಯಕ್ಕೆ ಸರಿಸಮಾನರೆಂದು ಯಾಕೆ ಭಾವಿಸಲಾಗುವುದಿಲ್ಲ?

ಅರ್ನಬ್ ಗೋಸ್ವಾಮಿ ಮಾಧ್ಯಮ ಕ್ಷೇತ್ರದಲ್ಲಿ ಚಿರಪರಿಚಿತ ಹೆಸರಾಗಿದ್ದು, ಬೇಜವಾಬ್ದಾರಿ ಮತ್ತು ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಸುಳ್ಳು ಸುದ್ದಿ ಪ್ರಸಾರ ಮಾಡಿದ ಪ್ರಕರಣದಲ್ಲಿ ಅವರನ್ನು ಆರೋಪಿಯನ್ನಾಗಿಸಲಾಗಿದೆ ಎಂದಿದೆ ಕರ್ನಾಟಕ ಹೈಕೋರ್ಟ್ ಮತ್ತು ಅರ್ನಬ್ ವಿರುದ್ಧದ ಪ್ರಕರಣವನ್ನು ರದ್ದುಪಡಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಕುರಿತು ರಿಪಬ್ಲಿಕ್ ಟಿವಿ ಕನ್ನಡ ಚಾನೆಲ್ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದಕ್ಕೆ ಸಂಬಂಧಿಸಿದಂತೆ ಅರ್ನಾಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಸೋಮವಾರ ರದ್ದುಪಡಿಸಿತು.

ಮುಖ್ಯಮಂತ್ರಿಗಾಗಿ ಎಂಜಿ ರಸ್ತೆಯಲ್ಲಿ ಟ್ರಾಫಿಕ್ ತಡೆಯಲಾಗಿತ್ತು ಮತ್ತು ಆ ವೇಳೆ ಆ್ಯಂಬುಲೆನ್ಸ್‌ನಲ್ಲಿದ್ದ ವ್ಯಕ್ತಿಯ ಪ್ರಾಣ ಹೋಯಿತು ಎಂಬುದು ವರದಿಯಾಗಿತ್ತು. ಮತ್ತದರ ವಿರುದ್ಧ ದಾಖಲಾಗಿದ್ದ ಪ್ರಕರಣ ಅದಾಗಿತ್ತು.

ಮುಖ್ಯಮಂತ್ರಿ ಕಾರಣಕ್ಕಾಗಿ ಟ್ರಾಫಿಕ್ ಸಮಸ್ಯೆ ಏರ್ಪಟ್ಟಿತ್ತು ಎಂದು ಸುದ್ದಿ ಪ್ರಸಾರವಾಗಿದ್ದರೆ, ಅವತ್ತು ಸಿಎಂ ಬೆಂಗಳೂರಿನಲ್ಲಿಯೇ ಇರಲಿಲ್ಲ, ಅವರು ಮೈಸೂರಿನಲ್ಲಿದ್ದರು. ಹಾಗಾಗಿ ಅದು ಸುಳ್ಳು ಸುದ್ದಿ ಎಂಬುದು ಅರ್ನಬ್ ವಿರುದ್ಧದ ಪ್ರಕರಣದಲ್ಲಿ ಮುಖ್ಯವಾಗಿತ್ತು.

ಗೋಸ್ವಾಮಿ ಅವರು ಮಾಧ್ಯಮದಲ್ಲಿ ಚಿರಪರಿಚಿತ ಹೆಸರಾಗಿರುವುದರಿಂದ ಯಾವುದೇ ಸಕಾರಣವಿಲ್ಲದೇ ಅಪರಾಧದ ಜಾಲಕ್ಕೆ ಎಳೆದು ತರಲಾಗಿದೆ. ಅರ್ನಬ್ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಬಿಂಬಿಸಲು ಯತ್ನಿಸಲಾಗಿದೆ ಎಂದು ಹೈಕೋರ್ಟ್ ಹೇಳಿತು.

ಅರ್ನಬ್ ಗೋಸ್ವಾಮಿ ಎಂಬ ಕಾರಣಕ್ಕಾಗಿ ಅವರನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ. ರಿಪಬ್ಲಿಕ್ ಮೀಡಿಯಾ ನೆಟ್‌ವರ್ಕ್‌ನ ಮುಖ್ಯಸ್ಥರಾಗಿ ಅವರು ಸಮುದಾಯಗಳ ನಡುವೆ ದ್ವೇಷ ಹರಡುವ ಹೇಳಿಕೆ ಅಥವಾ ಸುದ್ದಿ ಪ್ರಕಟಿಸಿದ್ದಾರೆಯೇ? ಪ್ರತೀಕಾರ ತೀರಿಸಿಕೊಳ್ಳಲು ಅವರನ್ನು ಎಳೆದು ತರಲಾಗಿದೆ ಎಂದು ಹೈಕೋರ್ಟ್ ಹೇಳಿತು.

ಇಲ್ಲಿ, ಈ ಪ್ರಕರಣದಲ್ಲಿ, ಸ್ಥಳೀಯವಾಗಿ ನಡೆದ ಘಟನೆಯ ವಿಚಾರದಲ್ಲಿ ಮುಂಬೈಯಲ್ಲಿ ಕುಳಿತ ಅರ್ನಬ್ ಗೋಸ್ವಾಮಿ ಹೆಸರನ್ನು ಎಳೆದು ತರಲಾಗಿದೆ ಎಂಬುದು ವಾದ.

ಅದನ್ನು ಒಪ್ಪಬಹುದು. ಮಾತು ಸರಿಯೇ ಇದೆ.

ಸ್ಥಳೀಯ ಸುದ್ದಿ ಒಂದಕ್ಕಾಗಿ ಚಾನೆಲ್ ಪ್ರಧಾನ ಸಂಪಾದಕರನ್ನು ಎಳೆದು ತರುವುದು ಅಷ್ಟು ಸರಿ ಅಲ್ಲ.

ಆದರೆ ಪ್ರಶ್ನೆಯೆಂದರೆ, ಸಿದ್ದರಾಮಯ್ಯ ಬದಲು ಬಿಜೆಪಿಗೆ ಸೇರಿದ್ದ ಮುಖ್ಯಮಂತ್ರಿಯಾಗಿದ್ದಲ್ಲಿ ಆಗ ಅಂಥದೇ ವರದಿಯನ್ನು ರಿಪಬ್ಲಿಕ್ ಪ್ರಸಾರ ಮಾಡುತ್ತಿತ್ತೇ ಎಂಬುದು.

ಯಾವ ಕಾರಣದಿಂದ ರಿಪಬ್ಲಿಕ್ ಈ ರೀತಿ ಸುದ್ದಿ ಪ್ರಸಾರ ಮಾಡಿತು ಎಂಬುದು ಬಹಳ ಮುಖ್ಯ ಪ್ರಶ್ನೆಯಾಗಿದೆ.

ಸುದ್ದಿಯೇ ರಾಜಕೀಯ ಪ್ರೇರಿತವಾಗಿರುವಾಗ ಅದರ ವಿರುದ್ಧದ ಕ್ರಮವನ್ನು ರಾಜಕೀಯ ಪ್ರೇರಿತ ಎಂದು ಹೇಳುವುದು ಎಷ್ಟು ಸರಿ?

ಸತ್ಯವನ್ನು ತೋರಿಸಬೇಕಾದ ಪತ್ರಕರ್ತರು ರಾಜಕೀಯಕ್ಕಾಗಿ ಸುಳ್ಳನ್ನು ಹರಡುತ್ತಿರುವಾಗ ಅವರು ಹರಡುತ್ತಿರುವುದು ಕೇವಲ ಸುಳ್ಳು ಸುದ್ದಿ ಅಲ್ಲ. ಇಡೀ ಮಾಧ್ಯಮ ವ್ಯವಸ್ಥೆಯ ಮೇಲಿಂದಲೇ ಜನರು ವಿಶ್ವಾಸ ಕಳೆದು ಕೊಳ್ಳುವಂತೆ ಆಗುತ್ತದೆ.

ಇನ್ನು ರಾಜಕೀಯಪ್ರೇರಿತ ಪ್ರಕರಣ ಎಂದು ಹೇಳುವುದಕ್ಕೆ ಇದೊಂದೇ ಪ್ರಕರಣವಿರುವುದೇ?

ಬಿಜೆಪಿ ಆಡಳಿತ ರಾಜ್ಯಗಳಲ್ಲಿ ದಾಖಲಾಗಿರುವ ಅದೆಷ್ಟೋ ರಾಜಕೀಯ ಪ್ರೇರಿತ ಪ್ರಕರಣಗಳ ಬಗ್ಗೆ ನ್ಯಾಯಾಲಯಗಳ ಮೌನ ಆಘಾತಕಾರಿ ಮತ್ತು ಕಳವಳಕಾರಿಯಾಗಿದೆ.

‘ಆಲ್ಟ್ ನ್ಯೂಸ್’ನ ಸಹ ಸ್ಥಾಪಕ ಮುಹಮ್ಮದ್ ಝುಬೇರ್ ಬಂಧನದ ಮೇಲಿನ ತಡೆಯನ್ನು ಅಲಹಾಬಾದ್ ಹೈಕೋರ್ಟ್ ಫೆಬ್ರವರಿ 27 ಅಂದರೆ ಗುರುವಾರದವರೆಗೆ ವಿಸ್ತರಿಸಿದೆ.

ಮುಹಮ್ಮದ್ ಝುಬೇರ್ ಕೂಡ ಒಬ್ಬ ಪತ್ರಕರ್ತ. ಆದರೆ ಅವರ ವಿರುದ್ಧ ಏಕೆ ಪ್ರಕರಣ ದಾಖಲಿಸಲಾಗಿದೆ?

ಘಾಝಿಯಾಬಾದ್ ಪೊಲೀಸರು ಅವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಮುಹಮ್ಮದ್ ಝುಬೇರ್ ತಮ್ಮ ಟ್ವಿಟರ್ ಖಾತೆಯಲ್ಲಿ ನರಸಿಂಹಾನಂದ ಅವರ ಸರಣಿ ಭಾಷಣಗಳನ್ನು ಅಪ್‌ಲೋಡ್ ಮಾಡಿದ್ದರು. ಈ ನರಸಿಂಹಾನಂದ ಕೋಮು ವಿಷ ಬಿತ್ತುವ ವ್ಯಕ್ತಿ. ಆತನ ಭಾಷಣಗಳನ್ನು ಝುಬೇರ್ ಟ್ವಿಟರ್‌ನಲ್ಲಿ ಅಪ್ಲೋಡ್ ಮಾಡಿದ್ದರು.

ಹಿಂಸಾಚಾರ ಹರಡುತ್ತಿದ್ದಾರೆ ಎಂದು ಝುಬೇರ್ ಟ್ವಿಟರ್‌ನಲ್ಲಿ ಇದನ್ನೆಲ್ಲಾ ಹಾಕಿದ್ದಾರೆ. ಆದರೆ ಅವರ ವಿರುದ್ಧ ಪ್ರಕರಣ ದಾಖಲಿಸಲಾಯಿತು. ಅವರ ಬಂಧನಕ್ಕೆ ತಡೆ ಬಿದ್ದಿದೆ ಎಂಬುದು ನಿಜ. ಈಗ ಅವರು ಪ್ರಕರಣದ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ ಹಿಂಸಾಚಾರ ಪ್ರಚೋದಿಸುವಂತೆ ಮಾತನಾಡಿದ್ದ ನರಸಿಂಹಾನಂದಗೆ ಏನೂ ಆಗಲಿಲ್ಲ. ಯಾರು ಹಿಂಸೆಯನ್ನು ಬಿತ್ತುವ ಹಾಗೆ ಅಷ್ಟೆಲ್ಲ ಮಾತಾಡಿದ್ದಾರೋ ಆ ನರಸಿಂಹಾನಂದ ಅರೆಸ್ಟ್ ಆಗಲಿಲ್ಲ.

ಒಮ್ಮೆ ಅರೆಸ್ಟ್ ಮಾಡಿದ್ದರು ಎಂಬ ಸುದ್ದಿ ಬಂತು, ಮತ್ತೆ ಯುಪಿ ಪೊಲೀಸರೇ ನಾವು ಅವರನ್ನು ಬಂಧಿಸಿಲ್ಲ ಎಂದು ಹೇಳಿದರು

ಆದರೆ, ಹೀಗೆ ಕೋಮುದ್ವೇಷ ಹರಡಲಾಗುತ್ತಿದೆ ಎಂದು ಎಚ್ಚರಿಸಿದ ಝುಬೇರ್ ವಿರುದ್ಧ ಪ್ರಕರಣ ದಾಖಲಾಗುತ್ತದೆ.

ಈ ಹಿಂದೆ ಬೇರೆ ಪ್ರಕರಣ ಒಂದರಲ್ಲಿ ಝುಬೇರ್ ಅವರನ್ನು ದಿಲ್ಲಿ ಪೊಲೀಸ್ ಬಂಧಿಸಿದ್ದು ನಂತರ ಸುಪ್ರೀಂ ಕೋರ್ಟ್‌ನಿಂದ ಜಾಮೀನು ಸಿಕ್ಕಿತು.

ಇಷ್ಟೆಲ್ಲಾ ಪ್ರಕರಣಗಳನ್ನು ಝುಬೇರ್ ಎದುರಿಸಬೇಕಾದದ್ದು ಕೇವಲ ಸತ್ಯವನ್ನು ಹರಡಿದ್ದಕ್ಕೆ ಮತ್ತು ಸುಳ್ಳನ್ನು ಬಯಲು ಮಾಡಿದ್ದಕ್ಕೆ ಮಾತ್ರ.

ಇನ್ನು ಹಳೆಯದೊಂದು ವಿಚಾರವಿದೆ.

ಕೇರಳದ ಪತ್ರಕರ್ತ ಸಿದ್ದೀಕ್ ಕಪ್ಪನ್ 846 ದಿನಗಳ ಕಾಲ ಜೈಲಿನಲ್ಲಿದ್ದರು. ಅಷ್ಟು ದಿನಗಳ ಕಾಲ ಅವರಿಗೆ ಜಾಮೀನು ಸಿಗಲಿಲ್ಲ.

ಅವರು ಕೇರಳದಿಂದ ಉತ್ತರ ಪ್ರದೇಶದ ಹಾಥರಸ್ ಅತ್ಯಾಚಾರ ಪ್ರಕರಣದ ವರದಿ ಮಾಡಲು ಹೋಗಿದ್ದರು. ಅವರನ್ನು ಯಾವ ಸೆಕ್ಷನ್‌ಗಳ ಅಡಿಯಲ್ಲಿ ಜೈಲಿನಲ್ಲಿಡಲಾಗಿದೆ?

ಸೆಕ್ಷನ್ 107 - ಉಲ್ಲಂಘನೆ ಮತ್ತು ಶಾಂತಿ ಕದಡುವ ಯತ್ನ, ಸೆಕ್ಷನ್ 151 - ಪೊಲೀಸ್ ಅಧಿಕಾರಿಗಳಿಗೆ ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಬಂಧಿಸುವ ಅಧಿಕಾರವಿದೆ ಮತ್ತು ಯಾವುದೇ ಸಂಭಾವ್ಯ ಅಪರಾಧವನ್ನು ಮಾಡುವುದನ್ನು ತಡೆಯಲು ವಾರಂಟ್ ಇಲ್ಲದೆಯೇ ಬಂಧಿಸುವ ಅಧಿಕಾರವಿದೆ;

2020ರ ಅಕ್ಟೋಬರ್ 7ರಂದು ಮಥುರಾದಲ್ಲಿ ಸೆಕ್ಷನ್ 153ಎ, 295ಎ, 124ಎ ಮತ್ತು ಐಪಿಸಿ ಸೆಕ್ಷನ್ 17ರಡಿ ಎಫ್‌ಐಆರ್ ಹಾಕಲಾಯಿತು.

ಸಾಧ್ಯವಿರುವ ಎಲ್ಲಾ ಕಠಿಣ ಕಾಯ್ದೆಗಳನ್ನು ಅನ್ವಯಿಸಲಾಗಿತ್ತು.

2022ರ ಡಿಸೆಂಬರ್ 23ರಂದು ಹೈಕೋರ್ಟ್ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣದಲ್ಲಿ ಕಪ್ಪನ್ ಅವರಿಗೆ ಜಾಮೀನು ನೀಡುವಾಗ, ಅವರ ಮೇಲೆ ಆರೋಪ ಹೊರಿಸಲಾದ ಪ್ರಕರಣದಲ್ಲಿ ವರ್ಗಾವಣೆಯಾಗಿರುವುದು ಬರೀ 5,000 ರೂ. ಆದರೆ ಅಂಥ ಪ್ರಕರಣ ದಾಖಲಿಸಲು ರೂ. 1 ಕೋಟಿಗೂ ಹೆಚ್ಚು ಮೊತ್ತವಿರಬೇಕು ಎಂಬುದನ್ನು ಉಲ್ಲೇಖಿಸಿತ್ತು. ಅಷ್ಟು ಹೊತ್ತಿಗೆ ಅವರು 846 ದಿನಗಳನ್ನು ಜೈಲಿನಲ್ಲಿ ಕಳೆದಿದ್ದರು.

ಈ ಮೂರೂ ಪ್ರಕರಣಗಳಲ್ಲಿ, ಅರ್ನಬ್ ಗೋಸ್ವಾಮಿ ಪ್ರಸಿದ್ಧ ಪತ್ರಕರ್ತರಾಗಿರುವುದರಿಂದ ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ಕೋರ್ಟ್ ಭಾವಿಸಿತು.

ಇನ್ನು ಮುಹಮ್ಮದ್ ಝುಬೇರ್ ಪ್ರಕರಣದಲ್ಲಿ ಅವರು ನರಸಿಂಹಾನಂದ ಭಾಷಣಗಳು ಸರಿಯಿಲ್ಲ ಎಂದು ಹೇಳಿದ್ದಕ್ಕಾಗಿ ಅವರನ್ನು ಬಂಧಿಸಲಾಯಿತು. ಇಲ್ಲಿ ನರಸಿಂಹಾನಂದನನ್ನು ಬಂಧಿಸಿದರೆ ಅದು ನ್ಯಾಯಯುತವಾಗಿತ್ತು. ಆದರೆ ಹಾಗಾಗದೆ, ತಪ್ಪು ಎತ್ತಿ ತೋರಿಸಿದವರನ್ನು ತಪ್ಪಿತಸ್ಥರೆನ್ನಲಾಯಿತು.

ಇನ್ನು ಕೇರಳದ ಸ್ವತಂತ್ರ ಪತ್ರಕರ್ತ ಕಪ್ಪನ್ ಹತಾಶರಾಗಿ ಹೋಗಿದ್ದರು. ಅವರನ್ನು ಬಂಧಿಸಿ 846 ದಿನಗಳ ಕಾಲ ಜೈಲಿನಲ್ಲಿರಿಸಲಾಯಿತು.

ಅರ್ನಬ್ ಗೋಸ್ವಾಮಿ ಕೇವಲ ಆರು ದಿನಗಳ ಕಾಲ ಜೈಲಿನಲ್ಲಿ ಇದ್ದಿದ್ದಕ್ಕೆ ರಜಾದಿನವಾದ ಶನಿವಾರ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರೇ ವಿಚಾರಣೆ ನಡೆಸಿ ಅವರಿಗೆ ಜಾಮೀನು ಕೊಡುತ್ತಾರೆ. ವ್ಯಕ್ತಿ ಸ್ವಾತಂತ್ರ್ಯದ ಮಹತ್ವದ ಬಗ್ಗೆ ಹೇಳುತ್ತಾರೆ. ಅರ್ನಬ್‌ರನ್ನು ಅನ್ಯಾಯವಾಗಿ ಜೈಲಿಗೆ ಹಾಕಿದ್ದರೆ ಅವರಿಗೆ ಆ ಸ್ವಾತಂತ್ರ್ಯ ಕೊಡಲೇಬೇಕು. ಆದರೆ ಸಿದ್ದೀಕ್ ಕಪ್ಪನ್ ವರದಿ ಮಾಡಲು ಹೋಗಿದ್ದೇ ಮಹಾ ಅಪರಾಧವೇ? ಅವರೇಕೆ ಎರಡು ವರ್ಷಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಕೊಳೆಯಬೇಕಾಯಿತು?

ಅರ್ನಬ್‌ಗಾಗಿ ಜೈಲಿಗೆ ಹೋದ ಒಂದೇ ವಾರದೊಳಗೆ ರಜಾದಿನದಂದೂ ವಿಚಾರಣೆ ನಡೆಸುವ ನ್ಯಾಯಾಂಗ ಸಿದ್ದೀಕ್ ಕಪ್ಪನ್‌ಗಾಗಿ ಅಷ್ಟೊಂದು ಸಮಯ ಯಾಕೆ ತೆಗೆದುಕೊಂಡಿತು? ಸಾಧ್ಯವಿರುವ ಎಲ್ಲಾ ಕಠಿಣ ಕಾಯ್ದೆಗಳನ್ನು ಅವರ ಮೇಲೆ ಹಾಕಲಾಯಿತು.

ನಮ್ಮ ಸಂವಿಧಾನದ ವಿಧಿ 14 ಕಾನೂನಿನ ಮುಂದೆ ಸಮಾನತೆ ಬಗ್ಗೆ ಹೇಳುತ್ತದೆ.

ಸರಕಾರ ಯಾವುದೇ ವ್ಯಕ್ತಿಗೆ ಸಮಾನತೆಯನ್ನು ನಿರಾಕರಿಸಬಾರದು. ಆದರೆ ಈ ಮೂರು ಪ್ರಕರಣಗಳಲ್ಲಿ ಮೂವರು ಪತ್ರಕರ್ತರನ್ನು ಒಂದೇ ರೀತಿಯಲ್ಲಿ ನಡೆಸಿಕೊಳ್ಳಲಾಗಿದೆಯೇ?

ಇದು ಯಾವುದೇ ಹೈಕೋರ್ಟ್ ಹೇಳಿದ್ದರ ವಿರುದ್ಧದ ಪ್ರಶ್ನೆಯಲ್ಲ. ಆದರೆ ನಾವೆಲ್ಲರೂ ಕೇಳಿಕೊಳ್ಳಬೇಕಿರುವ ಪ್ರಶ್ನೆ.

share
ಎನ್. ಕೇಶವ್
ಎನ್. ಕೇಶವ್
Next Story
X