Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಗಾಧ ಮಾನವ ಸಂಪನ್ಮೂಲದ ಹೊರತಾಗಿಯೂ...

ಅಗಾಧ ಮಾನವ ಸಂಪನ್ಮೂಲದ ಹೊರತಾಗಿಯೂ ಭಾರತವೇಕೆ ಶಕ್ತಿಶಾಲಿ ರಾಷ್ಟ್ರವಾಗಿ ಗುರುತಿಸಲ್ಪಡುವುದಿಲ್ಲ?

ಪಿ.ಎಚ್. ಅರುಣ್ಪಿ.ಎಚ್. ಅರುಣ್6 Feb 2025 11:53 AM IST
share
ಅಗಾಧ ಮಾನವ ಸಂಪನ್ಮೂಲದ ಹೊರತಾಗಿಯೂ ಭಾರತವೇಕೆ ಶಕ್ತಿಶಾಲಿ ರಾಷ್ಟ್ರವಾಗಿ ಗುರುತಿಸಲ್ಪಡುವುದಿಲ್ಲ?
ವಿಶ್ವದ ಅತಿ ದೊಡ್ಡ ಮತ್ತು ಪ್ರಮುಖ ಸಮಸ್ಯೆಗಳನ್ನು ಎದುರಿಸುವಾಗ, ಮೋದಿಯವರ ನಾಯಕತ್ವದಲ್ಲಿ ಭಾರತ ನೈತಿಕವಾಗಿ ಬಲವಾದ ತಂಡವಾಗಿ ಕಾಣುತ್ತಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಭಾರತ ಅಮೆರಿಕದ ಹಿಂದೆ ಕೈಗೊಂಬೆಯ ಹಾಗೆ ನಿಂತಿರುವಂತೆ ಕಾಣುತ್ತದೆ. ಹೆಚ್ಚೆಂದರೆ, ಭಾರತವನ್ನು ಕೆಲವು ಅಂತರ್‌ರಾಷ್ಟ್ರೀಯ ವೇದಿಕೆಯ ಸದಸ್ಯ ಎಂದು ನೋಡಲಾಗುತ್ತದೆ. ಇದು ಕೇವಲ ಆತಿಥ್ಯದ ಸ್ಥಳವಾಗಿ ಉಳಿದಿದೆ. ಅಂತರ್‌ರಾಷ್ಟ್ರೀಯ ಜಗತ್ತಿನಲ್ಲಿ ಭಾರತಕ್ಕೆ ಯಾವುದೇ ಸ್ವತಂತ್ರ ದೃಷ್ಟಿಕೋನವಿಲ್ಲ. ಅದಕ್ಕಾಗಿಯೇ ಹೆಚ್ಚಿನ ಶಕ್ತಿಶಾಲಿ ರಾಷ್ಟ್ರಗಳು ಭಾರತವನ್ನು ಅದರ ಜನಸಂಖ್ಯೆಯ ಕಾರಣದಿಂದಾಗಿ ಗಂಭೀರವಾಗಿ ಪರಿಗಣಿಸಬಹುದು. ಆದರೆ ಭಾರತದ ಪ್ರಸ್ತುತ ನಾಯಕತ್ವವನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ.

ಮೋದಿ ಯುಗದಲ್ಲಿ ಭಾರತ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗಿದೆ, ಮೋದಿ ಯುಗದಲ್ಲಿ ಭಾರತದ ಹೆಸರು ಇಡೀ ಜಗತ್ತಿನಲ್ಲಿ ಮೊಳಗುತ್ತಿದೆ ಎಂದೆಲ್ಲ ಬೊಬ್ಬೆ ಹೊಡೆಯುವುದನ್ನು ನೋಡುತ್ತಲೇ ಇದ್ದೇವೆ.

ಆದರೆ ಇದು ಪ್ರಚಾರದ ಭಾಷೆ. ಪ್ರಚಾರದ ಭಾಷೆಯಲ್ಲಿ ಯಾವುದೇ ಅರ್ಥವಿಲ್ಲ. ಅದರ ಏಕೈಕ ಪ್ರಯೋಜನವೆಂದರೆ, ಸರಕಾರಕ್ಕೆ ಜನರನ್ನು ಮರುಳು ಮಾಡುವುದು ಸಾಧ್ಯವಾಗುತ್ತಲೇ ಇರುತ್ತದೆ ಎಂಬುದು.

ತಮ್ಮ ಜೀವನದ ಅನಿವಾರ್ಯತೆಗಳಿಂದಾಗಿ ತಮ್ಮ ಮನಸ್ಸನ್ನು ಬದಲಿಸಿಕೊಳ್ಳಲು ಸಾಧ್ಯವಾಗದ ಜನರು, ಮೋದಿ ಬ್ರ್ಯಾಂಡಿಂಗ್ ಅನ್ನು ನೆಚ್ಚಿಕೊಳ್ಳುವ ಪ್ರಚಾರದ ಭಾಷೆಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಾರೆ.

ಜನರು ಮೋದಿಯನ್ನು ಇಡೀ ವಿಶ್ವದಲ್ಲೇ ಅತ್ಯಂತ ಶಕ್ತಿಶಾಲಿ ನಾಯಕ ಎಂದು ಭಾವಿಸಬೇಕು. ಅದಕ್ಕಾಗಿ ಮೋದಿ ಬ್ರ್ಯಾಂಡಿಂಗ್‌ಗಾಗಿ ಕೋಟ್ಯಂತರ ರೂಪಾಯಿ ಗಳನ್ನು ಖರ್ಚು ಮಾಡಲಾಗುತ್ತದೆ. ಇದರಿಂದಾಗಿ ಮೋದಿ ವಿಶ್ವದಲ್ಲಿ ಭಾರತದ ಹೆಸರನ್ನು ಹೆಚ್ಚಿಸಿದ್ದಾರೆ ಮತ್ತು ಭಾರತ ನಿಜವಾಗಿಯೂ ವಿಶ್ವ ಗುರು ಆಗಿದೆ ಎಂದು ಭಾರತದ ಸಾಮಾನ್ಯ ಜನರು ಭಾವಿಸುತ್ತಾರೆ.

ಬಿಜೆಪಿ ಹಾಗೂ ಮೋದಿ ಸರಕಾರ ನೂರಾರು ಕೋಟಿ ರೂ.ಗಳನ್ನು ಮಾಧ್ಯಮಗಳಿಗೆ ಖರ್ಚು ಮಾಡುತ್ತದೆ.ಮೋದಿ ನೇತೃತ್ವದ ಭಾರತ ಸರಕಾರ ವಿಶ್ವದ ಅತ್ಯಂತ ಶಕ್ತಿಶಾಲಿ ಸರಕಾರ ಎಂದು ಜನರ ಮನಸ್ಸಿನಲ್ಲಿ ತುಂಬಲು ನಿರಂತರವಾಗಿ ಅದು ತಂತ್ರವನ್ನು ರೂಪಿಸುತ್ತದೆ. ಇದು ವಿಶ್ವದ ಅತ್ಯಂತ ಶಕ್ತಿಶಾಲಿ ಸರಕಾರ, ಮೋದಿ ಬಹಳ ದೊಡ್ಡ ನಾಯಕ, ಮೋದಿಯವರ ಒಂದೇ ಒಂದು ಕರೆ ಜಗತ್ತಿನಲ್ಲಿ ನಡೆಯುತ್ತಿರುವ ಭೀಕರ ಯುದ್ಧಗಳನ್ನು ಕೊನೆಗೊಳಿಸುತ್ತದೆ ಎಂದೆಲ್ಲ ಬಿಂಬಿಸಲಾಗುತ್ತದೆ.

ಈ ಸಂಪೂರ್ಣ ಬ್ರ್ಯಾಂಡಿಂಗ್ ಮತ್ತು ಪ್ರಚಾರದ ಪೊಳ್ಳುತನ ಬಹಳ ಸಲ ಬಯಲಾಗಿದೆ. ಈಗ ಮತ್ತೂ ಒಮ್ಮೆ ಅದು ಬಟಾಬಯಲಾಗಿದೆ.

ಫೋರ್ಬ್ಸ್ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಆ ಪಟ್ಟಿಯ ಪ್ರಕಾರ, ವಿಶ್ವದ 10 ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಭಾರತ ಇಲ್ಲ.

ಭಾರತ 12ನೇ ಸ್ಥಾನದಲ್ಲಿದೆ.

ಇದರರ್ಥ ವಿಶ್ವದ ಅತಿ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತ ಟಾಪ್ ಮೂರು, ಟಾಪ್ ಐದು ಮಾತ್ರವಲ್ಲ ಟಾಪ್ ಟೆನ್ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿಯೂ ಸೇರಿಲ್ಲ.

ವಿಶ್ವದ ಬೇರೆ ಯಾವುದೇ ದೇಶ 142 ಕೋಟಿಗಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿಲ್ಲ. ಭಾರತದ ಮಾನವ ಸಂಪನ್ಮೂಲಗಳನ್ನು ಸರಿಯಾಗಿ ನೋಡಿದರೆ, ಖಂಡಿತವಾಗಿಯೂ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರವಾಗುವ ಸಾಮರ್ಥ್ಯವನ್ನು ಭಾರತ ಹೊಂದಿದೆ.

ಆದರೆ ಅತ್ಯಂತ ವಿಷಾದಕರ ವಿಷಯವೆಂದರೆ, ಭಾರತವನ್ನು ನಿರ್ವಹಿಸುವ ಮತ್ತು ನಡೆಸುವ ಜವಾ ಬ್ದಾರಿಯನ್ನು ಹೊಂದಿರುವ ನಾಯಕರ ಆಲೋಚನಾ ಕ್ರಮ ಮತ್ತು ಕೆಲಸದ ಶೈಲಿ ಅದಕ್ಕೆ ಪೂರಕವಾಗಿಲ್ಲ.

ಇದರ ಪರಿಣಾಮವಾಗಿ, ವಿಶ್ವದಲ್ಲೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ವಿಶ್ವದ 10 ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಸ್ಥಾನ ಪಡೆದಿಲ್ಲ.

ಒಂದು ಕೋಟಿ ಜನಸಂಖ್ಯೆಯೂ ಇಲ್ಲದ ಇಸ್ರೇಲ್ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತಕ್ಕಿಂತ ಮುಂದಿದೆ. ಅದು ಹತ್ತನೇ ಸ್ಥಾನದಲ್ಲಿದೆ.

ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಶ್ರೇಯಾಂಕ ಆಧರಿಸಿರುವ ಅಂಶಗಳೆಂದರೆ, ಆ ದೇಶದ ನಾಯಕರು ಹೇಗಿದ್ದಾರೆ? ಜಗತ್ತಿನಲ್ಲಿ ಆ ದೇಶದ ಆರ್ಥಿಕ ಪ್ರಭಾವ ಹೇಗಿದೆ? ದೇಶದ ರಾಜಕೀಯ ಪ್ರಭಾವ ಹೇಗಿದೆ? ದೇಶದ ಬಲವಾದ ಅಂತರ್‌ರಾಷ್ಟ್ರೀಯ ಮೈತ್ರಿಗಳು ಹೇಗಿವೆ? ಮಿಲಿಟರಿ ವಿಷಯದಲ್ಲಿ ಆ ದೇಶದ ಸ್ಥಿತಿ ಏನು?

ಈ ನೆಲೆಗಳನ್ನು ಒಂದು ವಿಧಾನವಾಗಿ ಬಳಸಿಕೊಂಡು ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.

ಈ ಪಟ್ಟಿಯ ಪ್ರಕಾರ,

ಅಮೆರಿಕ ಮೊದಲ ಸ್ಥಾನದಲ್ಲಿದೆ, ಚೀನಾ ಎರಡನೇ ಸ್ಥಾನದಲ್ಲಿದೆ. ರಶ್ಯ ಮೂರನೇ ಸ್ಥಾನದಲ್ಲಿದೆ. ನಾಲ್ಕನೇ ಸ್ಥಾನದಲ್ಲಿ ಬ್ರಿಟನ್ ಅಂದರೆ ಯುನೈಟೆಡ್ ಕಿಂಗ್ಡಮ್, ಐದನೇ ಸ್ಥಾನದಲ್ಲಿ ಜರ್ಮನಿ, ಆರನೇ ಸ್ಥಾನದಲ್ಲಿ ದಕ್ಷಿಣ ಕೊರಿಯಾ, ಏಳನೇ ಸ್ಥಾನದಲ್ಲಿ ಫ್ರಾನ್ಸ್, ಎಂಟ ನೇ ಸ್ಥಾನದಲ್ಲಿ ಜಪಾನ್, ಒಂಭತ್ತನೇ ಸ್ಥಾನದಲ್ಲಿ ಸೌದಿ ಅರೇಬಿಯ ಮತ್ತು ಹತ್ತನೇ ಸ್ಥಾನದಲ್ಲಿ ಇಸ್ರೇಲ್ ಇದೆ.

ಸೌದಿ ಅರೇಬಿಯದಂಥ ದೇಶ ಸುಮಾರು 3.5 ಕೋಟಿ ಜನಸಂಖ್ಯೆಯನ್ನು ಹೊಂದಿದೆ.

ಸುಮಾರು 7 ಕೋಟಿ ಜನಸಂಖ್ಯೆ ಹೊಂದಿರುವ ಫ್ರಾನ್ಸ್, ಸುಮಾರು 6 ಕೋಟಿ ಜನಸಂಖ್ಯೆ ಹೊಂದಿರುವ ದಕ್ಷಿಣ ಕೊರಿಯಾ, ಈ ಎಲ್ಲಾ ದೇಶಗಳು ಶಕ್ತಿಶಾಲಿ ದೇಶಗಳ ಸಾಲಿನಲ್ಲಿ ಭಾರತಕ್ಕಿಂತ ಮುಂದಿವೆ. ಅಂದರೆ ಈ ದೇಶಗಳು ಜಗತ್ತಿನಲ್ಲಿ ಭಾರತಕ್ಕಿಂತ ಹೆಚ್ಚಿನ ಪ್ರಭಾವವನ್ನು ಹೊಂದಿವೆ.

ಆದರೆ ಅರ್ಥಮಾಡಿಕೊಳ್ಳಬೇಕಾದ ಪ್ರಮುಖ ವಿಷಯವೆಂದರೆ, ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳಾಗಿರುವ ಅವುಗಳ ಎಲ್ಲಾ ನಡೆಗಳು, ಕಾರ್ಯಗಳು ತುಂಬಾ ಒಳ್ಳೆಯವುಗಳಲ್ಲ. ಅವು ತಮ್ಮ ಅಧಿಕಾರದ ಬಹಳಷ್ಟು ದುರ್ಲಾಭವನ್ನು ಪಡೆದಿವೆ. ಅವು ವಿಶ್ವದ ದುರ್ಬಲ ದೇಶಗಳೊಂದಿಗೆ ಬಹಳಷ್ಟು ತಪ್ಪಾಗಿ ನಡೆದುಕೊಂಡಿವೆ.

ಅಮೆರಿಕವನ್ನೇ ನೋಡಿ.

ಲೆಕ್ಕವಿಲ್ಲದಷ್ಟು ಉದಾಹರಣೆಗಳನ್ನು ಕಾಣಬಹುದು.

ಅದಕ್ಕಾಗಿಯೇ ಪ್ರಶ್ನೆಯೆಂದರೆ, ಭಾರತದಂಥ ದೇಶ ನಿಜವಾದ ಅರ್ಥದಲ್ಲಿ ಮತ್ತು ಸರಿಯಾದ ಸಂದರ್ಭದಲ್ಲಿ ಹೇಗೆ ಶಕ್ತಿಶಾಲಿಯಾಗಬಹುದು?

ಇದಕ್ಕೆ ಅತ್ಯಂತ ಮೂಲಭೂತ ಆಧಾರವೆಂದರೆ, ಭಾರತ ಸರಕಾರ ಭಾರತದ ಎಲ್ಲಾ ಜನರು ಗೌರವಾನ್ವಿತ ಜೀವನವನ್ನು ಪಡೆಯುವ ದಿಕ್ಕಿನಲ್ಲಿ ಕಾರ್ಯನಿರ್ವಹಿಸುತ್ತಿರುವುದನ್ನು ನೋಡಬೇಕು. ಭಾರತದ ಮಾನವ ಸಂಪನ್ಮೂಲ ಸರಿಯಾದ ದಿಕ್ಕಿನಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವುದನ್ನು ನೋಡಬೇಕು.

ವಿಶ್ವದ ಜನಸಂಖ್ಯೆಯ ಶೇ.16ರಷ್ಟು ಜನರು ಎಷ್ಟು ಚೆನ್ನಾಗಿ ಬದುಕುತ್ತಿದ್ದಾರೆ ಎಂಬುದಕ್ಕೆ ಜಗತ್ತಿಗೆ ಒಂದು ಉದಾಹರಣೆಯನ್ನು ನೀಡಬೇಕು.

ಅದರೊಂದಿಗೆ ಭಾರತ ವಿಶ್ವ ದರ್ಜೆಯ ರಾಷ್ಟ್ರವಾಗುವಂಥ ದೃಷ್ಟಿಕೋನವನ್ನು ಪ್ರಪಂಚದ ಬಗ್ಗೆ ಬೆಳೆಸಿಕೊಳ್ಳಬೇಕು.

ಇದನ್ನು ಶಾಂತಿ ಮತ್ತು ಸಹಬಾಳ್ವೆಯ ಆಧಾರದ ಮೇಲೆ ನಡೆಸಬಹುದು.

ಆದರೆ ಬಿಜೆಪಿ ಸಿದ್ಧಾಂತ ಈ ಸಂಪೂರ್ಣ ದೃಷ್ಟಿಕೋನಕ್ಕೆ ವಿರುದ್ಧವಾಗಿದೆ.

ಯಾವುದು ಸರಿ ಯಾವುದು ತಪ್ಪು ಎಂದು ಜನರು ಅರ್ಥವೇ ಮಾಡದಂತೆ ಇರುವುದು ಮೋದಿ ನೇತೃತ್ವದ 10 ವರ್ಷಗಳ ಸರಕಾರದ ಅಡಿಪಾಯ. ಜನರಿಗೆ ಬದುಕುವ ವಾತಾವರಣ ನೀಡಬಾರದು ಎಂಬ ಅಂಶವನ್ನು ಈ ಸರಕಾರ ಆಧರಿಸಿದೆ.

ಮೋದಿಯವರ ನಾಯಕತ್ವವನ್ನೇ ನೋಡಿ.

ಚುನಾವಣಾ ಪ್ರಚಾರದಿಂದ ಸಂಸತ್ತಿನವರೆಗೆ ಅವರು ನಾಚಿಕೆಯಿಲ್ಲದೆ ಸರಣಿ ಸುಳ್ಳು ಹೇಳುತ್ತಾರೆ. ಸುಳ್ಳಿನ ಮುಸುಕು ಬಹಿರಂಗಗೊಳ್ಳುತ್ತದೆ. ಅದಾದ ನಂತರವೂ ಅವರು ಸುಳ್ಳು ಹೇಳುತ್ತಲೇ ಇರುತ್ತಾರೆ.

ಅವರು ಪ್ರಧಾನಿ ಹುದ್ದೆಯ ಮಟ್ಟವನ್ನು ತುಂಬಾ ಕೆಳಮಟ್ಟಕ್ಕೆ ಇಳಿಸಿದ್ದಾರೆ. ಸತ್ಯಗಳನ್ನು ತಿರುಚುವ ಅವರ ಕಾಪಟ್ಯ ಮತ್ತೆ ಮತ್ತೆ ಕಾಣುತ್ತಲೇ ಇರುತ್ತದೆ.

ಉದಾಹರಣೆಯಾಗಿ, ಈ ವರ್ಷದ ಬಜೆಟ್ ಅನ್ನು ನೋಡಿ.

ಬಜೆಟ್‌ನಲ್ಲಿ ವಾರ್ಷಿಕವಾಗಿ 12 ಲಕ್ಷ ರೂ.ಗಳವರೆಗಿನ ಆದಾಯಕ್ಕೆ ತೆರಿಗೆ ಇಲ್ಲ ಎಂದು ಹೇಳಲಾಗಿದೆ. ಅದರಲ್ಲಿ ಪ್ರಚಾರ ಮಾಡಲು ಯೋಗ್ಯವಾದದ್ದೇನೂ ಇಲ್ಲ.

ಅದೇ ಸಮಯದಲ್ಲಿ ಒಂದು ದೊಡ್ಡ ಸುಳ್ಳನ್ನು ಸಹ ಹೇಳಲಾಗುತ್ತಿದೆ. ವಾರ್ಷಿಕ 7 ಲಕ್ಷ ರೂ.ವರೆಗಿನ ಆದಾಯ ತೆರಿಗೆ ಮುಕ್ತವಾಗಿದ್ದಾಗ, 2023-24ರಲ್ಲಿ ಕೇವಲ 2 ಕೋಟಿ 82 ಲಕ್ಷ ಜನರು ಆದಾಯ ತೆರಿಗೆ ಪಾವತಿಸಿದ್ದಾರೆ.

ಅದರಲ್ಲಿ 2.5 ಕೋಟಿ ಜನರು 1.5 ಲಕ್ಷಕ್ಕಿಂತ ಕಡಿಮೆ ತೆರಿಗೆ ಪಾವತಿಸಿದ್ದಾರೆ.

ಅಂದರೆ ವಾರ್ಷಿಕ 12 ಲಕ್ಷದವರೆಗೆ ತೆರಿಗೆ ಮುಕ್ತವಾಗಿ ಗಳಿಸುವುದರಿಂದ ಸರಕಾರದ ಆದಾಯ 1 ಲಕ್ಷ ಕೋಟಿಗಳಷ್ಟು ಕಡಿಮೆಯಾಗುತ್ತದೆ.

ಮತ್ತೊಂದೆಡೆ ಈಗಾಗಲೇ ಕಡಿಮೆ ಇರುವ ತೆರಿಗೆ ಕಟ್ಟುವವರ ಸಂಖ್ಯೆ ಸುಮಾರು 2.5 ಕೋಟಿಯಿದ್ದು, ಅದು ಕೂಡ ಕಡಿಮೆ ಇರುತ್ತದೆ. ಭಾರತದ 140 ಕೋಟಿ ಜನಸಂಖ್ಯೆಯಲ್ಲಿ, 1 ಕೋಟಿ ಜನರಿಗೆ ಸಹ ಪರಿಹಾರ ಸಿಗುವುದಿಲ್ಲ.

ಅಂತಹ ಪರಿಸ್ಥಿತಿಯಲ್ಲಿ ನರೇಂದ್ರ ಮೋದಿ ಮತ್ತು ಅವರ ಇಡೀ ತಂಡ ಈ ಒಂದು ವಿಷಯದ ಬಗ್ಗೆ ಅಬ್ಬರದ ಪ್ರಚಾರ ಮಾಡುತ್ತಿದೆ. ಸರಕಾರ ಮಧ್ಯಮ ವರ್ಗಕ್ಕಾಗಿ ಬಜೆಟ್ ಮಾಡಿರುವುದಾಗಿ ಹೇಳುತ್ತಿದೆ. ಆದರೆ ಆದಾಯದ ಆಧಾರದ ಮೇಲೆ ನೋಡಿದರೆ, ವಾಸ್ತವವಾಗಿ ಭಾರತದಲ್ಲಿ ಯಾವುದೇ ರೀತಿಯ ಮಧ್ಯಮ ವರ್ಗವಿಲ್ಲ.

ಜನಸಂಖ್ಯೆಯ ಶೇ.2ರಷ್ಟು ಮಂದಿ ಮಾತ್ರ ತಿಂಗಳಿಗೆ 1 ಲಕ್ಷಕ್ಕಿಂತ ಹೆಚ್ಚು ಗಳಿಸುತ್ತಾರೆ.

12 ಲಕ್ಷದವರೆಗಿನ ಆದಾಯವನ್ನು ತೆರಿಗೆ ಮುಕ್ತಗೊಳಿಸುವ ಮೂಲಕ ಸರಕಾರ 1 ಲಕ್ಷ ಕೋಟಿ ಆದಾಯವನ್ನು ಕಳೆದುಕೊಳ್ಳುತ್ತದೆ. ಅಂದರೆ ಸರಕಾರ ಕಡಿಮೆ ಖರ್ಚು ಮಾಡುತ್ತದೆ ಮತ್ತು ಶೇ.98ರಷ್ಟು ಜನಸಂಖ್ಯೆಗೆ ಯಾವುದೇ ಪ್ರಯೋಜನ ಸಿಗುವುದಿಲ್ಲ.

ಆದರೆ ನರೇಂದ್ರ ಮೋದಿ ಚುನಾವಣಾ ಪ್ರಚಾರ ಮಾಡುವಾಗ, ನೆಹರೂ ಅವರ ಕಾಲದಲ್ಲಿ ವಾರ್ಷಿಕ ಆದಾಯ 12 ಲಕ್ಷಗಳಿದ್ದವರು ನಾಲ್ಕನೇ ಒಂದು ಭಾಗವನ್ನು ತೆರಿಗೆಯಾಗಿ ಪಾವತಿಸಬೇಕಾಗಿತ್ತು ಎಂದು ಹೇಳಿದರು.

ಜನಸಮೂಹದ ಮುಂದೆ ಈ ರೀತಿ ಮಾತನಾಡು ವಾಗ, ಅದು ವಂಚನೆಯಲ್ಲದೆ ಮತ್ತಿನ್ನೇನು? ದೇಶದ ನಾಯಕರು ಹೀಗಿರುವಾಗ, ದೇಶ ಹೇಗೆ ಶಕ್ತಿಶಾಲಿಯಾಗುತ್ತದೆ?

ನೆಹರೂ ಅವರ ಕಾಲದಲ್ಲಿನ ಮಾಸಿಕ 1,500 ರೂ. ಸಂಬಳ ಇಂದಿನ 2,80,000 ರೂ.ಗಳಿಗೆ ಸಮವಾಗಿದೆ.

ಆರ್ಥಿಕ ಪ್ರಭಾವದ ವಿಷಯದಲ್ಲಿ ಭಾರತದ ಸ್ಥಿತಿಯನ್ನು ನೋಡಿದರೆ ಕಾಣುವುದು ಮೋದಿಯವರ ಬ್ರಾಂಡಿಂಗ್ ಮಾತ್ರ. ವಿಶ್ವದ ಐದನೇ ಅತಿ ದೊಡ್ಡ ಆರ್ಥಿಕತೆ ಎಂದು ಭಾರತವನ್ನು ಬಣ್ಣಿಸುತ್ತಲೇ ಇದ್ದಾರೆ.

ಭಾರತದ ತಲಾ ಆದಾಯ ತಿಂಗಳಿಗೆ 15,000 ರೂ. ಕೂಡ ಇಲ್ಲ. ಆದರೆ ಇಸ್ರೇಲ್ ಪ್ರಬಲ ರಾಷ್ಟ್ರಗಳ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ. ಅದರ ತಲಾ ಆದಾಯ ಭಾರತಕ್ಕಿಂತ ಸುಮಾರು 14 ಪಟ್ಟು ಹೆಚ್ಚು.

ಜಗತ್ತಿನಲ್ಲಿ ಭಾರತದ ಆರ್ಥಿಕ ಪ್ರಭಾವವನ್ನು ನಾವು ನೋಡಿದರೆ, ಭಾರತೀಯ ರೂಪಾಯಿ ಡಾಲರ್ ಎದುರು ನಿರಂತರವಾಗಿ ಕುಸಿಯುತ್ತಿದೆ. ಪ್ರತಿದಿನ ರೂಪಾಯಿ ಎಲ್ಲಾ ದಾಖಲೆಗಳನ್ನು ಮುರಿಯುತ್ತ ಪಾತಾಳಕ್ಕೆ ಮುಳುಗುತ್ತಿದೆ. ಈಗ ರೂಪಾಯಿ ತುಂಬಾ ದುರ್ಬಲಗೊಂಡಿದೆ. ಅಂದರೆ, ಪ್ರಪಂಚದ ಜನರ ದೃಷ್ಟಿಯಲ್ಲಿ ಭಾರತದ ಮೌಲ್ಯ ಹದಗೆಟ್ಟಿದೆ ಎಂದರ್ಥ.

ದೇಶದ ಆರ್ಥಿಕತೆ, ಜಗತ್ತಿನಲ್ಲಿ ಅತ್ಯಂತ ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿದೆ.

ಅಂತರ್‌ರಾಷ್ಟ್ರೀಯ ಪ್ರವಾಸಿಗರಲ್ಲಿ ಕೇವಲ ಶೇ.1ರಷ್ಟು ಜನರು ಮಾತ್ರ ಭಾರತಕ್ಕೆ ಬರುತ್ತಾರೆ.

ರಾಜತಾಂತ್ರಿಕತೆಯಲ್ಲಿ ಭಾರತ ಅತ್ಯಂತ ದುರ್ಬಲ ಸ್ಥಾನ ಹೊಂದಿದೆ.

ಬಾಲಿವುಡ್ ಚಲನಚಿತ್ರಗಳನ್ನು ಭಾರತದಲ್ಲಿ ಮಾತ್ರ ವೀಕ್ಷಿಸಲಾಗುತ್ತದೆ ಮತ್ತು ಹೊರಗೆ ಅವುಗಳ ಪ್ರಭಾವವಿಲ್ಲ ಇದ್ದರೂ ತುಂಬಾ ಕಡಿಮೆ ಮಟ್ಟದಲ್ಲಿ ವೀಕ್ಷಿಸಲಾಗುತ್ತದೆ. ಹಾಲಿವುಡ್ ಚಲನಚಿತ್ರಗಳನ್ನು ನೋಡಿದರೆ, ಅಲ್ಲಿಗೆ ಹೋಲಿಸಿದರೆ ಇಲ್ಲಿ ಅವುಗಳನ್ನು ಹೆಚ್ಚು ವೀಕ್ಷಿಸಲಾಗುತ್ತದೆ.

140 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಭಾರತದಲ್ಲಿ ಪ್ರತಿಭಾವಂತರಿದ್ದಾರೆ. ಆದರೆ ಅವರಾರಿಗೂ ಸರಕಾರದಿಂದ ಅನುಕೂಲಕರ ವಾತಾವರಣ ಸಿಗುವುದಿಲ್ಲ.

ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ವಿಶ್ವದ ಪ್ರಬಲ ದೇಶಗಳಿಗಿಂತ ಬಹಳ ಹಿಂದೆ ನಿಂತಿದೆ.

ಭಾರತ ನಾವೀನ್ಯತೆ ಮತ್ತು ಆವಿಷ್ಕಾರದ ಜಗತ್ತಿನಲ್ಲಿ ಬಹಳ ಹಿಂದಿದೆ ಮತ್ತು ದೇವಾಲಯಗಳನ್ನು ನಿರ್ಮಿಸುವ ವಿಚಾರದಲ್ಲಿ ಜಗತ್ತಿನಲ್ಲಿ ತುಂಬಾ ಮುಂದಿದೆ.

ಮಸೀದಿಗಳನ್ನು ಕೆಡವುವ ಮನಸ್ಥಿತಿಯಲ್ಲೇ ಇನ್ನೂ ಇರುವುದನ್ನು ನೋಡಿದರೆ ಮತ್ತು ಅಂತರ್‌ರಾಷ್ಟ್ರೀಯ ಸಂಪರ್ಕಗಳನ್ನು ಸಾಧಿಸುವ ವಿಷಯದಲ್ಲಿನ ಕೊರತೆ ಗಮನಿಸಿದರೆ, ಪ್ರಸಕ್ತ ಭಾರತೀಯ ನಾಯಕತ್ವ ಪ್ರಪಂಚದ ಬಗ್ಗೆ ಯಾವುದೇ ವಿಶೇಷ ದೃಷ್ಟಿಕೋನವನ್ನು ಹೊಂದಿಲ್ಲ.

ನೆಹರೂ ಕಾಲದಲ್ಲಿ, ವಿಶ್ವ ಶಾಂತಿ ಮತ್ತು ವಿಶ್ವ ಸಹಬಾಳ್ವೆಯನ್ನು ಗಮನದಲ್ಲಿಟ್ಟುಕೊಂಡು ಅಲಿಪ್ತ ನೀತಿಯನ್ನು ಅಳವಡಿಸಿಕೊಳ್ಳಲಾಯಿತು. ಅನ್ಯಾಯ ನಡೆದಲ್ಲೆಲ್ಲಾ ಭಾರತ ಅದರ ವಿರುದ್ಧ ಮಾತನಾಡಿತು.

ಆದರೆ ಪ್ರಸಕ್ತ ಕಾಲದಲ್ಲಿ, ವಿಶ್ವದ ಅತಿ ದೊಡ್ಡ ಮತ್ತು ಪ್ರಮುಖ ಸಮಸ್ಯೆಗಳನ್ನು ಎದುರಿಸುವಾಗ, ಮೋದಿಯವರ ನಾಯಕತ್ವದಲ್ಲಿ ಭಾರತ ನೈತಿಕವಾಗಿ ಬಲವಾದ ತಂಡವಾಗಿ ಕಾಣುತ್ತಿಲ್ಲ. ಹೆಚ್ಚಿನ ಸಂದರ್ಭಗಳಲ್ಲಿ, ಭಾರತ ಅಮೆರಿಕದ ಹಿಂದೆ ಕೈಗೊಂಬೆಯ ಹಾಗೆ ನಿಂತಿರುವಂತೆ ಕಾಣುತ್ತದೆ.

ಹೆಚ್ಚೆಂದರೆ, ಭಾರತವನ್ನು ಕೆಲವು ಅಂತರ್‌ರಾಷ್ಟ್ರೀಯ ವೇದಿಕೆಯ ಸದಸ್ಯ ಎಂದು ನೋಡಲಾಗುತ್ತದೆ. ಇದು ಕೇವಲ ಆತಿಥ್ಯದ ಸ್ಥಳವಾಗಿ ಉಳಿದಿದೆ. ಅಂತರ್‌ರಾಷ್ಟ್ರೀಯ ಜಗತ್ತಿನಲ್ಲಿ ಭಾರತಕ್ಕೆ ಯಾವುದೇ ಸ್ವತಂತ್ರ ದೃಷ್ಟಿಕೋನವಿಲ್ಲ.

ಅದಕ್ಕಾಗಿಯೇ ಹೆಚ್ಚಿನ ಶಕ್ತಿಶಾಲಿ ರಾಷ್ಟ್ರಗಳು ಭಾರತವನ್ನು ಅದರ ಜನಸಂಖ್ಯೆಯ ಕಾರಣದಿಂದಾಗಿ ಗಂಭೀರವಾಗಿ ಪರಿಗಣಿಸಬಹುದು. ಆದರೆ ಭಾರತದ ಪ್ರಸ್ತುತ ನಾಯಕತ್ವವನ್ನು ತುಂಬಾ ಗಂಭೀರವಾಗಿ ಪರಿಗಣಿಸುವುದಿಲ್ಲ.

ಭಾರತದ ಜನಸಂಖ್ಯೆ ವಿಶ್ವದ ಒಟ್ಟು ಜನಸಂಖ್ಯೆಯ ಸರಿಸುಮಾರು ಶೇ.17ರಷ್ಟಿದೆ. ಭಾರತ ಅದರ ಜನಸಂಖ್ಯೆಯಿಂದಾಗಿ ವಿಶ್ವದ ಅತಿ ದೊಡ್ಡ ಮಾರುಕಟ್ಟೆ ಯಾಗಿದೆ. ಆದರೆ ಜನಸಂಖ್ಯೆಯ ಇಷ್ಟೊಂದು ದೊಡ್ಡ ಪ್ರಯೋಜನವನ್ನು ಹೊಂದಿದ್ದರೂ, ಭಾರತ ವಿಶ್ವದ ಅತ್ಯಂತ ಶಕ್ತಿಶಾಲಿ ರಾಷ್ಟ್ರಗಳಲ್ಲಿ ಇಲ್ಲ.

ಭಾರತದ ಆರ್ಥಿಕ ನೀತಿಗಳು ಇನ್ನೂ ವಿಶ್ವ ಬ್ಯಾಂಕ್ ಮತ್ತು ಅಂತರ್‌ರಾಷ್ಟ್ರೀಯ ಹಣಕಾಸು ನಿಧಿಯಿಂದ ಮಾಡಲ್ಪಟ್ಟ ಆರ್ಥಿಕ ನೀತಿಗಳ ಅಡಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಭಾರತದಂಥ ತೀವ್ರ ನಿರುದ್ಯೋಗ ಇರುವ ದೇಶದಲ್ಲಿ, ಜನಸಂಖ್ಯೆಯ ಲಾಭವನ್ನು ಬಳಸಿಕೊಳ್ಳಲಾಗುತ್ತಿಲ್ಲ.

ಗುಣಮಟ್ಟದ ಶಿಕ್ಷಣದ ತೀವ್ರ ಕೊರತೆ ಇದೆ.

140 ಕೋಟಿ ಜನಸಂಖ್ಯೆಗೆ ವಾರ್ಷಿಕ ಬಜೆಟ್ ಕೇವಲ 50 ಲಕ್ಷ ಕೋಟಿ ರೂ.ಗಳಲ್ಲಿದೆ. ಅದರಲ್ಲಿ 12 ಲಕ್ಷ ಕೋಟಿ ಹಣ ಸಾಲದ ಮೇಲಿನ ಬಡ್ಡಿಗಾಗಿಯೇ ಹೋಗುತ್ತದೆ.

ಭಾರತದ ಮೇಲಿನ ಸಾಲ 196 ಲಕ್ಷ ಕೋಟಿ ರೂ. ತಲುಪುವ ಸಾಧ್ಯತೆ ಇರುವುದರಿಂದ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಭೀಕರ ನಿರುದ್ಯೋಗದ ಸಮಸ್ಯೆಯನ್ನು ಹೇಗೆ ಪರಿಹರಿಸಲಾಗುತ್ತದೆ? ಗುಣಮಟ್ಟದ ಶಿಕ್ಷಣವನ್ನು ಹೇಗೆ ಒದಗಿಸಲಾಗುತ್ತದೆ?

ಇದಕ್ಕಾಗಿ, ಭಾರತ ದೀರ್ಘಾವಧಿಯ ದೃಷ್ಟಿಯಿಂದ ಯೋಚಿಸಬೇಕು ಮತ್ತು ಆರ್ಥಿಕ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಆರ್ಥಿಕ ದೃಷ್ಟಿಕೋನವನ್ನು ರಚಿಸುವ ಅವಶ್ಯಕತೆಯಿದೆ. ತನ್ನದೇ ಆದ ಆರ್ಥಿಕ ದೃಷ್ಟಿಕೋನ ಇಲ್ಲದಿದ್ದರೆ, ದೇಶ ಹೇಗೆ ಪ್ರಬಲ ದೇಶವಾಗಬಹುದು?

ಭಾರತದಲ್ಲಿ, ಧರ್ಮ, ಜಾತಿ ಮತ್ತು ಲಿಂಗದ ಆಧಾರದ ಮೇಲಿನ ತಾರತಮ್ಯ ಒಂದು ದೊಡ್ಡ ಸವಾಲಾಗಿದೆ. ನಾಯಕರೇ ಬೇರೆಯವರಿಗಿಂತಲೂ ಹೆಚ್ಚಾಗಿ ಇದನ್ನು ಪ್ರಚಾರ ಮಾಡುತ್ತಿದ್ದಾರೆ.

ಭಾರತದ ಅಗಾಧ ಸಾಮರ್ಥ್ಯದ ಹೊರತಾಗಿಯೂ, ಭಾರತವನ್ನು ಅದರ ನಾಯಕರ ಕಾರಣದಿಂದಾಗಿ ವಿಶ್ವ ಗುರು ಎಂಬುದರ ಬದಲು ಕೆಳಮಟ್ಟದಲ್ಲಿಟ್ಟು ನೋಡಲಾಗುತ್ತಿದೆ ಎಂಬುದು ದುಃಖದ ಸಂಗತಿ.

share
ಪಿ.ಎಚ್. ಅರುಣ್
ಪಿ.ಎಚ್. ಅರುಣ್
Next Story
X