Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನಾಯಕರ ಸಾರ್ವಜನಿಕ ನಡವಳಿಕೆ ಹೀಗೇಕೆ?

ನಾಯಕರ ಸಾರ್ವಜನಿಕ ನಡವಳಿಕೆ ಹೀಗೇಕೆ?

ಹರೀಶ್ ಕುಮಾರ್ ಕುಡ್ತಡ್ಕಹರೀಶ್ ಕುಮಾರ್ ಕುಡ್ತಡ್ಕ22 Jan 2025 2:59 PM IST
share
ನಾಯಕರ ಸಾರ್ವಜನಿಕ ನಡವಳಿಕೆ ಹೀಗೇಕೆ?

ಭಾರತ ಪ್ರಜಾತಂತ್ರ ದೇಶ. ಇಲ್ಲಿ ರಾಜರು, ಸಾಮಂತರು, ಪಾಳೇಗಾರರ ಕಾಲ ಇತಿಹಾಸಕ್ಕೆ ಸರಿದು ಹೋಗಿದೆ. ಆದರೆ ಸರಕಾರಿ ಅಥವಾ ಸಾರ್ವಜನಿಕ ಹೊಣೆಗಾರಿಕೆ ನಿರ್ವಹಣೆಗಾಗಿ ಹಂತವಾರು ಹುದ್ದೆ, ಸ್ಥಾನಮಾನಗಳ ವ್ಯವಸ್ಥೆ ಇರುವುದು ನಿಜ. ಇದರಿಂದ ಹೊರಗೆ ಇಲ್ಲಿ ಯಾರೂ ಮೇಲಲ್ಲ, ಯಾರೂ ಕೆಳಗಲ್ಲ.

ಈ ವಿಚಾರ ರಾಜ್ಯದ ಮುಖ್ಯಮಂತ್ರಿಯವರಿಗೆ ಗೊತ್ತಿಲ್ಲದೇನಿಲ್ಲ. ಹಾಗಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯರವರು ವಿಜಯಪುರ ಜಿಲ್ಲೆಯ ಖಾಸಗಿ ಕಾರ್ಯಕ್ರಮವೊಂದರ ವೇದಿಕೆಯ ಮೇಲೆ ಮೊದಲನೇ ಸಾಲಿನಲ್ಲಿ ಕೂತಿದ್ದ ಜಿಲ್ಲಾಧಿಕಾರಿಯವರನ್ನು ಗಮನಿಸಿ ಹಿಂದಿನ ಸಾಲಿಗೆ ತೆರಳುವಂತೆ ಯಾಕೆ ಸೂಚಿಸಿದರು ಎಂದು ಅರ್ಥವಾಗುತ್ತಿಲ್ಲ. ಅಲ್ಲಿ ಅವರ ಅಸಹನೆ, ಮಾತುಗಳು ಸಾರ್ವಜನಿಕವಾಗಿ ಇರಿಸು ಮುರಿಸು ಉಂಟು ಮಾಡುವಂತಿದ್ದವು. ಸಾಮಾಜಿಕ ಸಮಾನತೆಯ ಮೇಲೆ ನಂಬಿಕೆ ಇಟ್ಟು ಕೊಂಡಿರುವ ಸಮಾಜವಾದಿ ಹಿನ್ನೆಲೆಯ ಮಾನ್ಯ ಮುಖ್ಯಮಂತ್ರಿಗಳು ಇಲ್ಲಿ ಎಡವಿದರೇ? ಕಳೆದ ಕೆಲವು ದಿನಗಳ ಹಿಂದೆ ವಿಜಯಪುರದಲ್ಲಿ ನಡೆದಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಡೆದ ಘಟನೆಯಿದು. ಇದು ಸರಕಾರಿ ಕಾರ್ಯಕ್ರಮವಲ್ಲವಾದ್ದರಿಂದ ಪ್ರೊಟೊಕಾಲ್ ಅನ್ವಯವಾಗುವುದಿಲ್ಲ. ಹಾಗೇನಾದರೂ ಇದ್ದಿದ್ದರೂ ಸಹ ಅದನ್ನು ಅಸಹನೆಯಿಂದ ಸರಿಪಡಿಸುವ ಬದಲು ಮುತ್ಸದ್ದಿತನದಿಂದ ನಿಭಾಯಿಸ ಬಹುದಿತ್ತು. ಒಟ್ಟಿನಲ್ಲಿ ಈ ಘಟನೆ ರಾಜ್ಯ ಮಾತ್ರವಲ್ಲ, ರಾಜ್ಯದ ಹೊರಗಡೆಯಲ್ಲೂ ಸುದ್ದಿ ಮಾಡಿದ್ದಲ್ಲದೆ ಕೆಟ್ಟ ಸಂದೇಶವನ್ನೂ ನೀಡಿತು ಎನ್ನ ಬಹುದು.

ಇಂತಹ ಅನೇಕ ಅನಪೇಕ್ಷಿತ ಘಟನೆಗಳು ಸಮಾಜದಲ್ಲಿ ಜರುಗತ್ತಲೇ ಇರುತ್ತವೆ. ಜನರು ರಾಜಕೀಯ ನಾಯಕರನ್ನು ಒಂದು ಮಾದರಿಯನ್ನಾಗಿ ಇಟ್ಟುಕೊಂಡು ನೋಡುವುದು ಸ್ವಾಭಾವಿಕ. ಈ ನಾಯಕರ ಬೆಂಬಲಿಗರು, ಅಭಿಮಾನಿಗಳೆನಿಸಿಕೊಂಡವರ ನಿಷ್ಠೆ, ಪ್ರೀತಿ, ವಿಶ್ವಾಸ ಬಹಳ ದೊಡ್ಡದು. ಮೂಲತ: ಭಾವನಾತ್ಮಕ ಜೀವಿಗಳಾಗಿರುವ ಈ ದೇಶದ ಜನರು ಸರಳತೆ, ಸಜ್ಜನಿಕೆಯುಳ್ಳ ನಾಯಕರನ್ನಂತೂ ತಮ್ಮ ಹೃದಯದಲ್ಲಿಟ್ಟು ಕೊಂಡು ಆರಾಧಿಸುತ್ತಾರೆ. ಇಂತಹ ನಾಯಕರ ವಿರುದ್ಧ ಬರುವಂತಹ ಆರೋಪ, ಟೀಕೆಗಳನ್ನೆಲ್ಲ ಲೆಕ್ಕಿಸದೆ ಸಮರ್ಥಿಸಿಕೊಳ್ಳುವುದನ್ನೂ ನಾವು ಕಾಣುತ್ತೇವೆ. ಆದ್ದರಿಂದ ಸೌಜನ್ಯಯುತ ಸಾರ್ವಜನಿಕ ನಡವಳಿಕೆಯೆಂಬುದು ನಾಯಕನೊಬ್ಬನ ಪ್ರಾಥಮಿಕ ಗುಣ ಲಕ್ಷಣವೆಂದೇ ಹೇಳಬಹುದು. ಇದೊಂದು ಸಾರ್ವಜನಿಕ ಮೌಲ್ಯವೂ ಹೌದು.

ಇತ್ತೀಚೆಗೆ ಬೆಂಗಳೂರಿನಲ್ಲಿ ಬಸ್ ಪ್ರಯಾಣ ದರ ಏರಿಕೆ ವಿರುದ್ಧ ಪ್ರತಿ ಪಕ್ಷದವರು ನಡೆಸಿದ್ದ ಪ್ರತಿಭಟನೆಯಲ್ಲಿ ವಿರೋಧ ಪಕ್ಷದ ನಾಯಕರಾದ ಆರ್. ಅಶೋಕ್‌ರವರು, ‘‘ನಾನು ಒಪೋಶಿಶನ್ ಲೀಡರ್. ನನ್ನ ಮೈ ಮುಟ್ಟಿದರೆ ಜಾಗ್ರತೆ’’ ಎಂದು ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಅಧಿಕಾರಿಯನ್ನು ಕಣ್ಣು ಕೆಂಪಗೆ ಮಾಡಿಕೊಂಡು ಗದರಿಸುತ್ತಿದ್ದನ್ನು ನೋಡುವಾಗ ಇದನ್ನು ಮುತ್ಸದ್ದಿತನದಿಂದ ನಿಭಾಯಿಸ ಬಹುದಿತ್ತಲ್ಲವೇ ಎಂದನಿಸಿತು. ಇಂತಹ ಅನಪೇಕ್ಷಿತವಾದ ನಡವಳಿಕೆ ಕೇವಲ ಕೆಲವೇ ಮಂದಿ ನಾಯಕರಿಗೆ ಮಾತ್ರ ಸೀಮಿತವಾದುದೇನಲ್ಲ. ಕೆಲವು ರಾಜಕಾರಣಿಗಳು ಜನರು ಮತ್ತು ಅಧಿಕಾರಿಗಳ ಮೇಲೆ ದೈಹಿಕ ಹಲ್ಲೆ ನಡೆಸುವಂತಹ ಚಾಳಿಯನ್ನು ಬೆಳೆಸಿ ಕೊಂಡಿರುವುದೂ ಇದೆ. ಇಂತಹ ಪ್ರಕರಣಗಳನ್ನು ನಾವು ಮಾಧ್ಯಮಗಳಲ್ಲಿ ಆಗಾ ನೋಡುತ್ತಿರುತ್ತೇವೆ. ಇನ್ನು ಕೆಲವೊಮ್ಮೆ ಇಂತಹ ಕೀಳು ಮಟ್ಟದ ವರ್ತನೆಗಳು ಬೆಳಕಿಗೆ ಬರದೇ ಅಲ್ಲಿಗೆ ಮುಚ್ಚಿ ಹೋಗುವುದಿದೆ. ರಾಜಕಾರಣಿಗಳ ಅವಾಚ್ಯ ಮತ್ತು ಅಶ್ಲೀಲ ಮಾತುಗಳ ದೊಡ್ಡ ಪುರಾಣವೇ ಇದೆ. ಬೆಳಗಾವಿ ವಿಧಾನ ಪರಿಷತ್ ಅಧಿವೇಶನದಲ್ಲಿ ಸಿ.ಟಿ. ರವಿಯವರು ಆಡಿದ್ದರು ಎನ್ನಲಾದ ಅವಾಚ್ಯ ಮಾತಿನ ಸುತ್ತ ಎದ್ದಿರುವ ವಿವಾದ ಇನ್ನೂ ಬಗೆಹರಿದಿಲ್ಲ. ರಾಜಕಾರಣಿ ಗಳ ಹೇಳಿಕೆಗಳು, ವಾಗ್ವಾದಗಳು ಸೃಷ್ಟಿಸುವ ವಿವಾದ ಹಾಗೂ ಬಳಿಕ ತಮ್ಮ ಮಾತನ್ನು ತಿರುಚಲಾಗಿದೆ ಎಂದು ನಿರಾಕರಿಸುವಂತಹ ಜಾಣತನದಂತಹ ವಿಚಾರವನ್ನು ಪ್ರತ್ಯೇಕವಾಗಿಯೇ ಚರ್ಚಿಸಬೇಕಾಗಿದೆ. ಅದು ಇಲ್ಲಿ ಅನಗತ್ಯ.

ಸಾರ್ವಜನಿಕ ಕರ್ತವ್ಯ ನಿರ್ವಹಿಸುವ ಸರಕಾರಿ ಅಧಿಕಾರಿಗಳು ರಾಜಕೀಯ ನಾಯಕರಿಂದ ಎದುರಿಸುವ ಅಪಮಾನ, ಹೀಯಾಳಿಕೆ ನಾಗರಿಕ ಸಮಾಜಕ್ಕೆ ತಕ್ಕುದಾದಲ್ಲ. ಹಾಗಂತ ಸರಕಾರಿ ಅಧಿಕಾರಿಗಳೆಲ್ಲ ಸಂಭಾವಿತರಾಗಿಯೇ ಉಳಿದಿದ್ದಾರೆ ಎಂದು ಭಾವಿಸ ಬೇಕಾಗಿಲ್ಲ. ಅವರು ಕೂಡ ದುರ್ಬಲರು, ಬಡವರನ್ನು ಕೀಳಾಗಿ ಕಂಡು ದರ್ಪದಿಂದ ನಡೆಸಿ ಕೊಳ್ಳುವುದು ಕಡಿಮೆಯೇನಿಲ್ಲ. ಜನಪ್ರತಿನಿಧಿಗಳು ವ್ಯವಸ್ಥೆಯ ಉನ್ನತ ಹಂತದಲ್ಲಿ ಇರುವುದರಿಂದ ಅವರ ನಡವಳಿಕೆ ಜನತೆ, ಅಧಿಕಾರಿಗಳ ಸಹಿತ ಎಲ್ಲರನ್ನೂ ಪ್ರಭಾವಿಸಬಲ್ಲದು. ಹೀಗಿರುವಾಗ ಸ್ವತ: ಅವರೇ ಕೆಟ್ಟ ನಡವಳಿಕೆ ಪ್ರದರ್ಶಿಸಿದರೆ ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನೆಡೆಸುವ ಕಾರ್ಯವನ್ನು ಯಾರು ಮಾಡಬೇಕು? ಏನೇ ಇರಲಿ, ಜನರಿಗೆ ಮಾದರಿಯಾಗ ಬೇಕಾದ ನಾಯಕರು ಪ್ರದರ್ಶಿಸುವ ದರ್ಪ, ಅಹಂಕಾರದ ನಡವಳಿಕೆ ಎಂದಿಗೂ ಸ್ವೀಕಾರಾರ್ಹವಲ್ಲ.

ಸಾರ್ವಜನಿಕ ಬದುಕಲ್ಲಿ ಟೀಕೆ, ಆರೋಪಗಳಿಗೆ ಗುರಿಯಾಗದ ಶಾಸಕ, ಸಚಿವ, ಮುಖ್ಯಮಂತ್ರಿ ಅಥವಾ ಪ್ರಧಾನಿ ಸಹಿತ ಯಾರೂ ಇರಲಾರರು. ಆದರೆ ಅವರು ತಮ್ಮ ನಡವಳಿಕೆ, ವರ್ತನೆಗಳಿಗೋಸ್ಕರ ಟೀಕೆಗೊಳಗಾಗುವುದನ್ನು ಖಂಡಿತವಾಗಿಯೂ ತಪ್ಪಿಸಬಹುದು. ಜೊತೆಗೆ ಇಂತಹ ಸನ್ನಡತೆ ಒಂದು ಮಾದರಿಯಾಗಲೂ ಬಹುದು. ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ, ಅಟಲ್ ಬಿಹಾರಿ ವಾಜಪೇಯಿ, ಮನ ಮೋಹನ್ ಸಿಂಗ್ ಮುಂತಾದವರ ಕಾರ್ಯವೈಖರಿ, ನಿರ್ಧಾರಗಳ ಬಗ್ಗೆ ತಕರಾರು ಇರಬಹುದು. ಆದರೆ ಅವರು ತಮ್ಮ ಸಜ್ಜನಿಕೆ, ಸೌಜನ್ಯದ ನಡವಳಿಕೆಯಿಂದಾಗಿ ನೆನಪಲ್ಲಿ ಉಳಿಯುವುದು ಮಾತ್ರ ನಿಜ. ಕರ್ನಾಟಕದ ಮುಖ್ಯಮಂತ್ರಿಗಳಾಗಿದ್ದ ರಾಮಕೃಷ್ಣ ಹೆಗಡೆ, ಎಸ್. ಎಂ. ಕೃಷ್ಣರಂಥವರೂ ಇದೇ ಮಾದರಿಯ ನಡವಳಿಕೆಗೆ ಹೆಸರಾದವರು. ವ್ಯಕ್ತಿಯೊಬ್ಬನ ಮುಖದ ಮೇಲಿನ ಮುಗುಳ್ನಗು, ದೇಹ ಭಾಷೆಗಳೇ ಸಾಕಷ್ಟು ತಿಳಿಸುವುದರಿಂದ ಅವುಗಳು ಜನರನ್ನು ಅವರತ್ತ ಸೆಳೆಯಲು ನೆರವಾಗುತ್ತದೆ. ಇದರೊಂದಿಗೆ ವಿನಯ, ಆತ್ಮೀಯತೆ ಸೇರಿ ಕೊಂಡರೆ ಅವರೊಂದಿಗೆ ಉಳಿದವರಿಗೆ ವ್ಯವಹರಿಸಲು ಸುಲಭವಾಗುತ್ತದೆ. ಇಂತಹ ಗುಣಗಳು ನಾಯಕರೆನಿಸಿ ಕೊಂಡವರಿಗೆ ಅಗತ್ಯ.

ಇಲ್ಲೊಬ್ಬ ಶಾಸಕರಿದ್ದಾರೆ. ಅವರದ್ದು ಯಾವುದೇ ಹಮ್ಮು ಬಿಮ್ಮು ಇಲ್ಲದಂತಹ ಸರಳ ವ್ಯಕ್ತಿತ್ವ. ಅವರ ಜೊತೆ ದೂರವಾಣಿ ಮೂಲಕವೂ ಮಾತನಾಡಬಹುದು. ಇನ್ನು ಅವರನ್ನು ಭೇಟಿ ಮಾಡುವುದು, ಅಹವಾಲು ಹೇಳಿಕೊಳ್ಳುವುದೂ ಕೂಡ ಸುಲಭ. ಆದರೆ ಇದಕ್ಕೆ ಅವರು ಅನುಸರಿಸುವಂತಹ ಕ್ರಮ ಮಾತ್ರ ಬೇಸರವನ್ನು ಉಂಟು ಮಾಡುತ್ತದೆ. ಅವರ ಭೇಟಿಗಾಗಿ ಸಹಾಯಕರ ಸೂಚನೆಯಂತೆ ಸಾರ್ವಜನಿಕರು ಯಾವುದೋ ಸಭೆ, ಕಾರ್ಯಕ್ರಮ, ಸಮಾರಂಭ ಇತ್ಯಾದಿ ನಡೆಯುವ ಸ್ಥಳಗಳಿಗೆ ತೆರಳ ಬೇಕು. ಅಲ್ಲಿ ಸಮಯಾವಕಾಶ ನೋಡಿಕೊಂಡು ಅವರು ಜನಜಂಗುಳಿಯ ನಡುವೆ ಸಮಸ್ಯೆಯನ್ನು ಆಲಿಸಿಯೋ ಮನವಿ ಸ್ವೀಕರಿಸಿಯೋ ಪರಿಹಾರ ಸೂಚಿಸುತ್ತಾರೆ. ಕೆಲವೊಮ್ಮೆ ಇತರ ಜನಪ್ರತಿನಿಧಿಗಳೂ ಈ ರೀತಿ ಮಾಡುತ್ತಾರೆ. ಆದರೆ ಇವರು ಬಹುತೇಕವಾಗಿ ಇದೇ ರೀತಿ ವ್ಯವಹರಿಸುವುದೇ ಹೆಚ್ಚು. ಶಾಸಕರ ಕಚೇರಿ ಅಥವಾ ಸರಕಾರಿ ಅತಿಥಿ ಗೃಹದಲ್ಲಿ ಕೂರಿಸಿ ಕೊಂಡು ಮಾತನಾಡುವುದು ತೀರಾ ವಿರಳವಾದುದರಿಂದ ಜನರು ಸಂಕೋಚ, ಮುಜುಗರಗಳಿಗೆ ಗುರಿಯಾಗುತ್ತಾರೆ. ಇದು ಜನರನ್ನು ಉದ್ದೇಶ ಪೂರ್ವಕವಾಗಿ ಕಡೆಗಣಿಸುವಂತಹ ನಡವಳಿಕೆಯಲ್ಲದಿದ್ದರೂ ಸದಭಿಪ್ರಾಯ ಮೂಡಿಸುವ ನಡವಳಿಕೆಯಂತೂ ಅಲ್ಲ.

ಜನಪ್ರತಿನಿಧಿಗಳಾದವರು ಅಧಿಕಾರ ದೊರೆತ ಪ್ರಾರಂಭದಲ್ಲಿ ಜನರು, ಅಧಿಕಾರಿಗಳು ಮತ್ತು ಸರಕಾರಿ ಸಿಬ್ಬಂದಿಯನ್ನು ಗೌರವಯುತವಾಗಿಯೇ ನಡೆಸಿಕೊಳ್ಳುತ್ತಾರೆ. ಅಧಿಕಾರದಲ್ಲಿ ಯಾವುದೇ ಅಡ್ಡಿ ಆತಂಕವಿಲ್ಲದೆ ಮುಂದುವರಿದಂತೆ ನಿಧಾನವಾಗಿ ಅವರ ನಡೆ ನುಡಿಗಳಲ್ಲಿ ದುರಹಂಕಾರ, ದರ್ಪಗಳು ತಲೆ ಹಾಕ ತೊಡುಗುತ್ತವೆ. ಅಧಿಕಾರದ ಅಮಲೇ ಹಾಗೆ. ಕೆಲವರಿಗೆ ಖಡಕ್ ಮಾತುಗಳು, ಒರಟು ನಡವಳಿಕೆಯಿಂದ ಜನತೆ ಮತ್ತು ಅಧಿಕಾರಿಗಳನ್ನು ನಿಯಂತ್ರಿಸಲು ಸಾಧ್ಯ ಎಂಬ ತಪ್ಪು ಗ್ರಹಿಕೆ ಬೆಳೆಯುವುದು ಇದೆ. ಇನ್ನು ಕೆಲವರಿಗೆ ಜನರ ಎದುರುಗಡೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ದಬಾಯಿಸಿದರೆ ಜನರು ಮೆಚ್ಚುತ್ತಾರೆ ಎಂಬ ಭ್ರಮೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇವೆಲ್ಲ ಸಲ್ಲದ ನಡವಳಿಕೆ. ಇಂತಹದ್ದೆಲ್ಲ ಈ ನಾಯಕರಿಗೆ ಅಲ್ಪಕಾಲೀನ ಪ್ರಯೋಜನವನ್ನು ತರಬಹುದು. ಆದರೆ ಭವಿಷ್ಯದಲ್ಲಿ ಸುಸಂಸ್ಕೃತ ನಡವಳಿಕೆ ಮಾತ್ರ ಪರಿಣಾಮಕಾರಿ ಹಾಗೂ ಪ್ರಭಾವಶಾಲಿಯಾಗಿರಲು ಸಾಧ್ಯ. ಇದನ್ನು ನಾಯಕರೆನಿಸಿ ಕೊಂಡವರು ಅರಿತು ಕೊಳ್ಳಬೇಕು.

share
ಹರೀಶ್ ಕುಮಾರ್ ಕುಡ್ತಡ್ಕ
ಹರೀಶ್ ಕುಮಾರ್ ಕುಡ್ತಡ್ಕ
Next Story
X