Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಸುಶಾಂತ್ ಸಿಂಗ್ ರಾಜಪೂತ್ ಸಾವನ್ನು...

ಸುಶಾಂತ್ ಸಿಂಗ್ ರಾಜಪೂತ್ ಸಾವನ್ನು ಕೀಳುಮಟ್ಟದ ರಾಜಕೀಯಕ್ಕೆ ಬಳಸಿದ ಬಿಜೆಪಿ ಈಗ ಕ್ಷಮೆ ಯಾಚಿಸುತ್ತದೆಯೇ?

ವಿನಯ್ ಕೆ.ವಿನಯ್ ಕೆ.25 March 2025 12:20 PM IST
share
ಸುಶಾಂತ್ ಸಿಂಗ್ ರಾಜಪೂತ್ ಸಾವನ್ನು ಕೀಳುಮಟ್ಟದ ರಾಜಕೀಯಕ್ಕೆ ಬಳಸಿದ ಬಿಜೆಪಿ ಈಗ ಕ್ಷಮೆ ಯಾಚಿಸುತ್ತದೆಯೇ?

ಸುಶಾಂತ್ ಸಿಂಗ್ ರಾಜಪೂತ್ ಪ್ರಕರಣದ ತನಿಖೆಗೆ ಸಂಬಂಧಿಸಿ ಕ್ಲೋಸರ್ ರಿಪೋರ್ಟ್ ಸಲ್ಲಿಸಿರುವ ಸಿಬಿಐ ಎರಡು ವಿಷಯಗಳನ್ನು ಸ್ಪಷ್ಟಪಡಿಸಿದೆ.

ಮೊದಲನೆಯದಾಗಿ, ಅದು ಆತ್ಮಹತ್ಯೆಯಾಗಿತ್ತು ಎಂಬುದು.

ಎರಡನೆಯದಾಗಿ, ರಿಯಾ ಚಕ್ರವರ್ತಿ ಅಥವಾ ಆಕೆಯ ಕುಟುಂಬದ ಯಾವುದೇ ಸದಸ್ಯರು ತಪ್ಪಿತಸ್ಥರಲ್ಲ.

ನೆನಪು ಮಾಡಿಕೊಂಡರೆ, ಆಗ ಬಿಹಾರದಲ್ಲಿ ಚುನಾವಣೆ ಸಮಯವಾಗಿತ್ತು. ಕೋವಿಡ್ ನಡುವೆಯೇ ಸುಶಾಂತ್ ಸಿಂಗ್ ರಾಜಪೂತ್ ಪ್ರಕರಣ ಮುನ್ನೆಲೆಗೆ ಬಂತು. ಅದಕ್ಕೆ ಕಾರಣ, ಬಿಹಾರ ಚುನಾವಣೆಯಲ್ಲಿ ಒಂದು ಪಕ್ಷ ಲಾಭ ಪಡೆಯಲು ಬಯಸಿತ್ತು.

ಸುಶಾಂತ್ ಸಿಂಗ್ ರಾಜಪೂತ್ ತವರು ರಾಜ್ಯ ಬಿಹಾರ ಎಂಬ ಕಾರಣಕ್ಕೆ ಈ ಸಂಗತಿಯನ್ನು ಗಮನಿಸಬೇಕಾಗಿದೆ.

ಬಿಜೆಪಿ ತನ್ನ ತುತ್ತೂರಿಯಾಗಿರುವ ಮಡಿಲ ಮೀಡಿಯಾ ಮತ್ತು ಸಮೀರ್ ವಾಂಖೆಡೆ ಅಂತಹ ಅಧಿಕಾರಿಗಳ ಮೂಲಕ ಇಲ್ಲಿ ಆಟವಾಡಿತು. ಸಮೀರ್ ವಾಂಖೆಡೆ ಈ ಇಡೀ ಆಟದಲ್ಲಿ ಬಹಳ ಮುಖ್ಯವಾದ ಪಾತ್ರವನ್ನು ವಹಿಸಿದ್ದರೆಂಬುದು ಗುಟ್ಟಾಗಿ ಉಳಿದಿಲ್ಲ. ಅವರೇ ಇಡೀ ಪ್ರಕರಣವನ್ನು ಸೃಷ್ಟಿಸಿದ್ದರು.

ಈಗ ಅದೇ ಸಿಬಿಐ ಅದು ಆತ್ಮಹತ್ಯೆಯ ಪ್ರಕರಣವಷ್ಟೇ ಆಗಿತ್ತು ಮತ್ತು ಅದರಲ್ಲಿ ರಿಯಾ ಚಕ್ರವರ್ತಿ ತಪ್ಪಿಲ್ಲ ಎಂದು ಹೇಳುತ್ತಿದೆ.

ಹಾಗಾದರೆ ಈಗ ಬಿಜೆಪಿ ಕ್ಷಮೆ ಯಾಚಿಸುತ್ತದೆಯೇ? ಕೀಳುಮಟ್ಟದ ಆಟವಾಡಿದ, ತಿಂಗಳುಗಟ್ಟಲೆ ದ್ವೇಷ ಹರಡಿದ ಮಡಿಲ ಮೀಡಿಯಾ ಕ್ಷಮೆ ಯಾಚಿಸುತ್ತದೆಯೇ?

ಹೇಗೆಲ್ಲಾ ಈ ಮಡಿಲ ಮಿಡಿಯಾದವರು ಒಂದು ಕುಟುಂಬವನ್ನು ಸಂಪೂರ್ಣವಾಗಿ ಹಾಳುಮಾಡಲು ನಿಂತರು? ಹೇಗೆ ಒಬ್ಬ ಹೆಣ್ಣು ಮಗಳು ಮತ್ತು ಆಕೆಯ ಕುಟುಂಬದ ಚಾರಿತ್ರ್ಯವಧೆಗೆ ಇವರೆಲ್ಲ ಭಾರೀ ಶೂರರಂತೆ ನಿಂತು ಅರಚಾಡಿದರು?

ಆದರೆ ಈಗ ಇದೇ ಬಿಜೆಪಿ ಸರಕಾರದ ಅಡಿಯಲ್ಲಿ ಬರುವ ಸಿಬಿಐ ತನ್ನ ಕ್ಲೋಸರ್ ರಿಪೋರ್ಟ್‌ನಲ್ಲಿ ರಿಯಾ ತಪ್ಪಿಲ್ಲ ಎಂದು ಸ್ಪಷ್ಟಪಡಿಸಿದೆ.

ಈಗ ತಾವು ಮಾಡಿದ ಅತ್ಯಂತ ಹೀನ ಕೆಲಸಕ್ಕಾಗಿ, ಮಾನಗೇಡಿ ಕೆಲಸಕ್ಕಾಗಿ ಈ ಮಡಿಲ ಮೀಡಿಯಾಗಳು ಪಶ್ಚಾತ್ತಾಪ ಪಡುತ್ತವೆಯೇ? ನಿರಪರಾಧಿ ಹೆಣ್ಣುಮಗಳೊಬ್ಬಳ ಚಾರಿತ್ರ್ಯ ವಧೆ ಮಾಡಿದ್ದಕ್ಕಾಗಿ ಇವು ಇವತ್ತು ಮುಖ ಮುಚ್ಚಿಕೊಳ್ಳುತ್ತವೆಯೆ?

ಈ ಮಡಿಲ ಮೀಡಿಯಾಗಳು ತಮ್ಮ ಕುರುಡು ಭಕ್ತಿಯ ಕಾರಣದಿಂದ ಒಂದಿಡೀ ನಿರಪರಾಧಿ ಕುಟುಂಬದ ವಿರುದ್ಧ ನಿರಂತರ ಅಪ ಪ್ರಚಾರ ಮಾಡಿದವು. ಏಕೆಂದರೆ ಬಿಹಾರ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ಮಾಡಿಕೊಡುವುದಕ್ಕಾಗಿಯೇ ಅವು ನಿಂತಿದ್ದವು.

ಎರಡನೆಯ ರಾಜಕೀಯ ಕಾರಣವೆಂದರೆ, ಮಹಾರಾಷ್ಟ್ರದಲ್ಲಿ ಸರಕಾರ ನಡೆಸುತ್ತಿದ್ದ ಉದ್ಧವ್ ಠಾಕ್ರೆ ಮತ್ತು ಅವರ ಮಗ ಆದಿತ್ಯ ಠಾಕ್ರೆ, ಅವರ ವಿರುದ್ಧ ಅಪಪ್ರಚಾರ ಮಾಡುವುದು ಅವುಗಳ ಉದ್ದೇಶವಾಗಿತ್ತು.

ಸುಶಾಂತ್ ಸಿಂಗ್ ರಾಜಪೂತ್ 2020ರ ಜೂನ್ 14ರಂದು ನೇಣಿಗೆ ಶರಣಾಗಿದ್ದರು. ಆರಂಭದಲ್ಲಿ ತನಿಖೆ ನಡೆಸಿದ ಮುಂಬೈ ಪೊಲೀಸರು ಇದು ಆತ್ಮಹತ್ಯೆ ಪ್ರಕರಣವೆಂದು ವರದಿ ಸಲ್ಲಿಸಿದ್ದರು. ಪೋಸ್ಟ್ ಮಾರ್ಟಮ್ ವರದಿ ಕೂಡ ಅದನ್ನೇ ಹೇಳಿತ್ತು.

ಆದರೆ, ಅವರ ಅಭಿಮಾನಿಗಳು ಹಾಗೂ ಮಡಿಲ ಮಾಧ್ಯಮಗಳು ಅನುಮಾನ ವ್ಯಕ್ತಪಡಿಸಿದ್ದವು. ಈ ಹಿನ್ನೆಲೆಯಲ್ಲಿ ಸುಶಾಂತ್ ಸಾವು ವಿವಾದಕ್ಕೆ ಕಾರಣವಾಗಿತ್ತು.

ಸುಶಾಂತ್ ಸಿಂಗ್ ರಾಜಪೂತ್ ಮಾಜಿ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ತಂದೆ ಕೆ.ಕೆ. ಸಿಂಗ್ ಪಾಟ್ನಾದಲ್ಲಿ ದೂರು ದಾಖಲಿಸಿದ್ದರು. ಮಗನ ಸಾವಿಗೆ ಕುಮ್ಮಕ್ಕು ನೀಡಲಾಗಿದೆ ಎಂದು ದೂರಿನಲ್ಲಿ ಹೇಳಿದ್ದರು.

ಹಾಗೆಯೇ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬ ಸುಶಾಂತ್ ಬ್ಯಾಂಕ್ ಖಾತೆಯಿಂದ 15 ಕೋಟಿ ರೂ. ತೆಗೆದುಕೊಂಡಿರುವುದಾಗಿಯೂ ದೂರಿದ್ದರು.

ತಮ್ಮ ಮಗನಿಗೆ ವಿಷ ಉಣಿಸಿದ್ದಾರೆಂದು ಆರೋಪಿಸಿದ್ದರು.

ಸುಶಾಂತ್ ತಂದೆ ಮಾಡಿದ್ದ ಈ ಆರೋಪವನ್ನು ರಿಯಾ ಚಕ್ರವರ್ತಿ ತಿರಸ್ಕರಿಸಿದ್ದರು.

ಬಿಹಾರ ಪೊಲೀಸರಿಂದ ಸಿಬಿಐ ಕೇಸ್ ತೆಗೆದುಕೊಂಡು ತನಿಖೆ ನಡೆಸಿತ್ತು. ರಿಯಾ ಚಕ್ರವರ್ತಿಯ ಹೇಳಿಕೆಗಳನ್ನು ದಾಖಲಿಸಿತ್ತು.

ಇದೇ ವೇಳೆ ರಿಯಾ ಚಕ್ರವರ್ತಿ, ಸಹೋದರ ಶೌವಿಕ್ ಹಾಗೂ ಇನ್ನೂ ಕೆಲವರನ್ನು ಸುಶಾಂತ್ ಸಾವಿನ ಜೊತೆ ತಳುಕು ಹಾಕಿಕೊಂಡಿದ್ದ ಡ್ರಗ್ ಕೇಸ್‌ನಲ್ಲಿ ಬಂಧಿಸಲಾಗಿತ್ತು.

ರಿಯಾ ಚಕ್ರವರ್ತಿ ಈ ಕೇಸ್‌ನಲ್ಲಿ 28 ದಿನಗಳ ಕಾಲ ಜೈಲಿನಲ್ಲಿ ಕಳೆದಿದ್ದರು. ಬಳಿಕ ಜಾಮೀನಿನ ಮೇಲೆ ಹೊರಬಂದಿದ್ದರು.

ಇನ್ನೊಂದು ಕಡೆ ರಿಯಾ ಚಕ್ರವರ್ತಿ ಕೂಡ ಸುಶಾಂತ್ ಸಹೋದರಿ ಪ್ರಿಯಾಂಕಾ ಸಿಂಗ್ ಹಾಗೂ ದಿಲ್ಲಿಯ ವೈದ್ಯರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ಸುಶಾಂತ್ ಸಿಂಗ್ ಅವರ ಆರೋಗ್ಯ ಪರಿಸ್ಥಿತಿಯನ್ನು ಸರಿಯಾಗಿ ಅರಿಯದೆ ಔಷಧಿಗಳನ್ನು ನೀಡಲಾಗಿದೆ ಎಂದು ದೂರನ್ನು ದಾಖಲಿಸಿದ್ದರು.

ಈ ಕೇಸ್ ಅನ್ನು ಮುಂಬೈ ಪೊಲೀಸರು ದಾಖಲಿಸಿಕೊಂಡಿದ್ದರು. ಬಳಿಕ ಈ ಕೇಸ್ ಅನ್ನೂ ಸಿಬಿಐಗೆ ಹಸ್ತಾಂತರ ಮಾಡಲಾಗಿತ್ತು.

ಈ ಎರಡೂ ಪ್ರತ್ಯೇಕ ಕೇಸ್ ಅನ್ನು ತನಿಖೆ ನಡೆಸಿದ ಸಿಬಿಐ, ಸುಶಾಂತ್ ಆತ್ಮಹತ್ಯೆಗೆ ಯಾರಾದರೂ ಪ್ರೇರೇಪಿಸಿದ್ದಾರೆ ಎನ್ನುವ ಬಗ್ಗೆ ಸಾಕ್ಷಿಗಳು ಇಲ್ಲ ಎಂದಿದೆ. ಅಲ್ಲದೆ, ಈ ಕೇಸ್‌ನಲ್ಲಿ ರಿಯಾ ಚಕ್ರವರ್ತಿ ಪಾತ್ರ ಕಂಡುಬಂದಿಲ್ಲ ಎಂದು ಸಿಬಿಐ ವರದಿಯಲ್ಲಿದೆ ಎನ್ನಲಾಗಿದೆ.

ಆದರೆ ಅವತ್ತು, ಸುಶಾಂತ್ ಸಿಂಗ್ ರಾಜಪೂತ್ ಮೇಲೆ ಬ್ಲ್ಯಾಕ್ ಮ್ಯಾಜಿಕ್ ಮಾಡಿದ ಆರೋಪ ಹೊರಿಸಿ ರಿಯಾ ಚಕ್ರವರ್ತಿ ಅವರನ್ನು ಗುರಿ ಮಾಡಲಾಗಿತ್ತು. ಆಕೆಯನ್ನು ಮಾಟಗಾತಿ ಎಂದು ಬ್ರಾಂಡ್ ಮಾಡುವುದು ನಡೆದಿತ್ತು. ಆಕೆ ಡ್ರಗ್ಸ್ ವ್ಯಸನಿ, ಆಕೆ ಮಹಾ ವಂಚಕಿ ಎಂದೆಲ್ಲ ಬಣ್ಣಿಸಲಾಗಿತ್ತು.

ಆಕೆಯನ್ನು, ಆಕೆಯ ಕುಟುಂಬವನ್ನು ಟಿವಿ ಚಾನೆಲ್‌ಗಳು ಹೈರಾಣ ಮಾಡಿ ಬಿಟ್ಟವು. ಅವರ ಮಾನ ಮರ್ಯಾದೆಯನ್ನು ಚಾನೆಲ್‌ಗಳು ಬೀದಿಪಾಲು ಮಾಡಿದವು.

ಹಾಗಾದರೆ, ಅವತ್ತು ಆಕೆಯನ್ನು ಹಾಗೆಲ್ಲ ನಿಂದಿಸಿ, ಅವಹೇಳನ ಮಾಡಿ ಮಹಾ ಶೌರ್ಯ ಮೆರೆದಿದ್ದ ಈ ದೊಡ್ಡ ಜನರೆಲ್ಲ ಇವತ್ತು ಹೇಗೆ ಪ್ರತಿಕ್ರಿಯಿಸುತ್ತಾರೆ?

ಅವತ್ತು ರಿಯಾ ವಿರುದ್ಧ ಮೀಡಿಯಾ ಹೆಸರಲ್ಲಿ ಹರಿಹಾಯ್ದವರು ಬಿಜೆಪಿಗಾಗಿಯೇ ಮೀಡಿಯಾ ವೇಷದಲ್ಲಿ ಕೆಲಸ ಮಾಡುತ್ತಿದ್ದರು. ಅವರಲ್ಲಿ ಕೆಲವರು ಇವತ್ತು ಅಧಿಕೃತವಾಗಿಯೇ ಬಿಜೆಪಿಯ ವಕ್ತಾರರಾಗಿದ್ದಾರೆ.

ಪತ್ರಿಕೋದ್ಯಮ ಎಂಬುದು ಎಲ್ಲಿಗೆ ಹೋಗಿ ಮುಟ್ಟಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಎಲ್ಲಾ ರೀತಿಯ ಕೀಳು, ಮೂರ್ಖ ಮತ್ತು ಅಸಭ್ಯ ವ್ಯಕ್ತಿಗಳು ಬಿಜೆಪಿಯಲ್ಲಿ ಮತ್ತದರ ರಾಜಕೀಯದಲ್ಲಿ ಜಾಗ ಪಡೆಯುತ್ತಾರೆ.

ಸಮೀರ್ ವಾಂಖೆಡೆ ಎಂಬ ಅಧಿಕಾರಿ ಈ ಇಡೀ ಪ್ರಕರಣದಲ್ಲಿ ದೊಡ್ಡ ಬಲೆಯನ್ನು ಹೆಣೆದಿದ್ದರು.

ಅರ್ಧದಷ್ಟು ಬಾಲಿವುಡ್ ಅನ್ನು ಬಲೆಗೆ ಬೀಳಿಸಲು ಪ್ರಯತ್ನಿಸಲಾಯಿತು. ದೀಪಿಕಾ ಪಡುಕೋಣೆ, ರಾಕುಲ್ ಪ್ರೀತ್ ಸಿಂಗ್, ಶ್ರದ್ಧಾ ಕಪೂರ್ ಎಲ್ಲರನ್ನೂ ವಿಚಾರಣೆಗೆ ಕರೆಸಲಾಯಿತು. ಸುದ್ದಿ ಚಾನೆಲ್‌ಗಳು ಆಗ ದೀಪಿಕಾ ಪಡುಕೋಣೆ ಬಗ್ಗೆ ತಮಗಿದ್ದ ಅಸಹನೆಯನ್ನೆಲ್ಲ ಕಕ್ಕಿದ್ದವು.

ಸಮೀರ್ ವಾಂಖೆಡೆ ಆ ಸಮಯದಲ್ಲಿ ಸುದ್ದಿ ವಾಹಿನಿಗಳಲ್ಲಿ ಸಿಂಗಂ ಆಗಿದ್ದರು.

ರಿಯಾ ಮತ್ತು ಅವರ ಸಹೋದರ, ಅವರ ತಂದೆಯನ್ನು ಅವರೆಂದೂ ನಿರೀಕ್ಷಿಸಿಯೇ ಇರದ ಸಂಕಟದಲ್ಲಿ ಸಿಕ್ಕಿಸಲಾಗಿತ್ತು.

ಅವತ್ತು ಹೊರಿಸಿದ ಆರೋಪಗಳಿಂದಾಗಿ ಇವತ್ತಿಗೂ ರಿಯಾ ಕಷ್ಟಪಡುತ್ತಿದ್ದಾರೆ.

ರಿಯಾ ವೃತ್ತಿಜೀವನ ಹಳಿ ತಪ್ಪಿದೆ. ಅದನ್ನು ಮತ್ತೆ ಸರಿಪಡಿಸುವುದು ತುಂಬಾ ಕಷ್ಟವಾಗುತ್ತಿದೆ.

ಅವರ ವಕೀಲ ಸತೀಶ್ ಮಾನ್ ಶಿಂದೆ, ಈ ಪ್ರಕರಣದ ಪ್ರತಿಯೊಂದು ಕೋನವನ್ನು ತನಿಖೆ ಮಾಡಿ ರಿಯಾ ನಿರಪರಾಧಿ ಎಂದಿರುವುದಕ್ಕೆ ಸಿಬಿಐಗೆ ಧನ್ಯವಾದ ಹೇಳಿದ್ದಾರೆ.

ರಿಯಾ ಅವರ ಕುಟುಂಬಕ್ಕೆ, ತನಗೆ ಮತ್ತು ತನ್ನ ತಂಡಕ್ಕೆ ಕಿರುಕುಳ ನೀಡಲಾಗಿದೆ ಎಂದು ಕೂಡ ಅವರು ಹೇಳಿದ್ದಾರೆ. ರಿಯಾ ಹೇಳಲಾಗದ ತೊಂದರೆಗಳನ್ನು ಎದುರಿಸಬೇಕಾಯಿತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

ಮಾಧ್ಯಮದ ರಣಹದ್ದುಗಳು ರಿಯಾ ಅವರನ್ನು ಸುತ್ತುವರಿದಿದ್ದವು.

ರಿಯಾ ನರಕವನ್ನು ಅನುಭವಿಸುವ ಹಾಗಾಗಿತ್ತು.

ಇಷ್ಟೆಲ್ಲದರ ಹಿಂದಿನ ಉದ್ದೇಶ ಬಿಹಾರ ಚುನಾವಣೆ ಮಾತ್ರವಾಗಿರಲಿಲ್ಲ.

ದಿಶಾ ಸಾಲಿಯಾನ್ ಪ್ರಕರಣದಲ್ಲಿ ಆದಿತ್ಯ ಠಾಕ್ರೆಯನ್ನು ಸಹ ಗುರಿಯಾಗಿಸಲಾಗಿತ್ತು.

ದಿಶಾ ಸಾಲಿಯಾನ್ ಅವರು ಸುಶಾಂತ್ ಸಿಂಗ್ ರಾಜಪೂತ್ ತಂಡದಲ್ಲಿ ಪಿಆರ್ ಮ್ಯಾನೇಜರ್ ಆಗಿದ್ದರು.

ಆ ಸಮಯದಲ್ಲಿ ಗೃಹ ಸಚಿವರಾಗಿದ್ದ ಅನಿಲ್ ದೇಶ್‌ಮುಖ್ ಅವರನ್ನು ನಂತರ ಜೈಲಿಗೆ ಕಳಿಸಲಾಗಿತ್ತು.

ರಿಯಾ ಚಕ್ರವರ್ತಿ ಪ್ರಕರಣದಲ್ಲಿ ಆದಿತ್ಯ ಠಾಕ್ರೆ ಅವರ ಹೆಸರನ್ನು ಉಲ್ಲೇಖಿಸುವಂತೆ ದೇವೇಂದ್ರ ಫಡ್ನವೀಸ್ ಒತ್ತಡ ಹೇರಿದ್ದರೆಂದು ಅನಿಲ್ ದೇಶ್‌ಮುಖ್ ಅವರೇ ಸಂದರ್ಶನವೊಂದರಲ್ಲಿ ಆನಂತರ ಹೇಳಿದ್ದರು.

ಬಿಜೆಪಿ ಎಂಥ ಅಗ್ಗದ ಮಟ್ಟದ ಆಲೋಚನೆ ಹೊಂದಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ.

ತನ್ನ ರಾಜಕೀಯಕ್ಕಾಗಿ ಬಿಜೆಪಿ ಈ ದೇಶದಲ್ಲಿ ಹಿಂದೂ -ಮುಸ್ಲಿಮ್ ಸಮಸ್ಯೆಯನ್ನು ಸೃಷ್ಟಿಸುತ್ತದೆ.

ತನ್ನ ರಾಜಕೀಯಕ್ಕಾಗಿ ಸುಳ್ಳುಗಳನ್ನು ಸೃಷ್ಟಿಸುತ್ತದೆ. ತನ್ನ ಅಗ್ಗದ ಮತ್ತು ಕೀಳು ರಾಜಕೀಯಕ್ಕಾಗಿ ವಿರೋಧ ಪಕ್ಷದ ನಾಯಕರ ವಿರುದ್ಧ ಪ್ರಚಾರ ನಡೆಸುತ್ತದೆ.

ಅಂಥದೇ ನಡವಳಿಕೆಯನ್ನು ರಿಯಾ ಮತ್ತವರ ಇಡೀ ಕುಟುಂಬದ ವಿರುದ್ಧ ಮಾಡಲಾಯಿತು.

ರಿಯಾ ಚಕ್ರವರ್ತಿಯ ಬದುಕನ್ನೇ ನಾಶ ಮಾಡಲು ಅದು ಹಠ ಹಿಡಿದಂತಿತ್ತು. ಬಿಹಾರದಲ್ಲಿ ಗೆಲ್ಲಲು ಬಯಸಿದ್ದರಿಂದ, ಮಹಾರಾಷ್ಟ್ರದಲ್ಲಿ ಅರಾಜಕತೆ ಸೃಷ್ಟಿಸಲು ಬಯಸಿದ್ದರಿಂದ ಇಷ್ಟೆಲ್ಲ ಮಾಡಲಾಯಿತು.

ಇನ್ನೊಂದೆಡೆ ಮಡಿಲ ಮೀಡಿಯಾದವರು ವಿಷವನ್ನು ಹರಡುತ್ತಿದ್ದರು.

ಕಾಂಗ್ರೆಸ್ ಕೂಡ ಈಗ ಸಿಬಿಐ ಕ್ಲೋಸರ್ ರಿಪೋರ್ಟ್ ಸಲ್ಲಿಕೆ ಬಳಿಕ ಪ್ರತಿಕ್ರಿಯಿಸಿದೆ. ಬಿಜೆಪಿಯ ಕೊಳಕು ರಾಜಕೀಯ ಬಯಲಾಗಿದೆ ಎಂದು ಅದು ಹೇಳಿದೆ.

ಸಾವನ್ನು ಇಟ್ಟುಕೊಂಡು ರಾಜಕೀಯ ಲಾಭ ಗಳಿಸುವ ಬಿಜೆಪಿಯ ಕೊಳಕು ರಾಜಕೀಯ ಅದಕ್ಕೇ ತಿರುಗುಬಾಣವಾಗಿದೆ ಎಂದು ಮಹಾರಾಷ್ಟ್ರ ಕಾಂಗ್ರೆಸ್ ಘಟಕ ಹೇಳಿದೆ.

ಆದರೆ ರಿಯಾ ಚಕ್ರವರ್ತಿಯವರಿಗೆ ಹಲವಾರು ತಿಂಗಳುಗಳ ಕಾಲ ಮಾನಹಾನಿ ಮಾಡಲಾಗಿದೆ.ಈಗಲೂ ಅಂತಹವರೆಲ್ಲ ಆರಾಮಾಗಿ ಓಡಾಡುತ್ತಿದ್ದಾರೆ.

ಸಿಬಿಐನ ಕ್ಲೋಸರ್ ರಿಪೋರ್ಟ್ ನಲ್ಲಿರುವ ಅಂಶಗಳು ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

ಬಿಜೆಪಿ ಮತ್ತದರ ತುತ್ತೂರಿಯಾಗಿರುವ ಮಡಿಲ ಮೀಡಿಯಾದ ಬಣ್ಣವಂತೂ ಮತ್ತೊಮ್ಮೆ ಬಯಲಾಗಿದೆ.

ಪ್ರತಿದಿನವೂ ವಿಷವನ್ನು ಹರಡುವ, ಸುಳ್ಳುಗಳನ್ನು ಹರಡುವ ಇವರ ನೀಚತನ ಬಯಲಾಗಿದೆ. ಇವರ ಜೊತೆಗೆ ಸಮೀರ್ ವಾಂಖೆಡೆಯಂಥವರು ಬೇರೆ.

ಆತನಿಂದ ರಿಯಾ ಚಕ್ರವರ್ತಿಯ ಜೀವನ ಬಹುತೇಕ ಹಾಳಾಯಿತು. ನಂತರ ಆ ವ್ಯಕ್ತಿ ಶಾರುಕ್ ಖಾನ್ ಮಗ ಆರ್ಯನ್ ಖಾನ್ ಅವರನ್ನು ಕೂಡ ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದು ಗೊತ್ತೇ ಇದೆ.

ಆರ್ಯನ್ ಕೂಡ ಖುಲಾಸೆಗೊಂಡಿದ್ದಾರೆ. ಆದರೆ ಆರ್ಯನ್, ಶಾರುಕ್ ಖಾನ್ ಅವರ ಮಗನಾಗಿದ್ದರಿಂದ ಖುಲಾಸೆಗೊಳ್ಳುವುದು ಸಾಧ್ಯವಾಯಿತು. ಅದೇ ಆರ್ಯನ್ ಒಬ್ಬ ಸಾಮಾನ್ಯ ವ್ಯಕ್ತಿ, ಸಾಮಾನ್ಯ ಮುಸ್ಲಿಮ್ ಆಗಿದ್ದರೆ ಬಹುಶಃ ಇನ್ನೂ ಜೈಲಿನಲ್ಲಿಯೇ ಇರಬೇಕಾಗುತ್ತಿತ್ತು.

ಒಂದು ಚುನಾವಣೆಗಾಗಿ ಒಂದು ಪ್ರಕರಣದಲ್ಲೇ ಇಷ್ಟೆಲ್ಲಾ ಆಟ ಆಡಿದ ಬಿಜೆಪಿ ದೇಶಾದ್ಯಂತ ಇಂತಹ ಅದೆಷ್ಟು ಆಟಗಳನ್ನು ಆಡಿರಬಹುದು? ಹೇಗೆಲ್ಲ, ಎಲ್ಲೆಲ್ಲ ಹೀಗೇ ಸುಳ್ಳು ಹರಡಿ, ಮಡಿಲ ಮೀಡಿಯಾಗಳ ಮೂಲಕ ಅಪಪ್ರಚಾರ ಮಾಡಿರಬಹುದು?

ಮತ ಗಳಿಸುವುದಕ್ಕಾಗಿ ಏನು ಬೇಕಾದರೂ ಮಾಡಬಲ್ಲೆ ಎಂಬ ಬಿಜೆಪಿಯ ಈ ನಡೆ ಈ ದೇಶಕ್ಕೆ ಅದೆಷ್ಟು ಅಪಾಯಕಾರಿ?

share
ವಿನಯ್ ಕೆ.
ವಿನಯ್ ಕೆ.
Next Story
X