ಐತಿಹಾಸಿಕ ತಾಣ ಗಂಗಾವತಿಯಲ್ಲಿ ಪರಮಾಣು ವಿದ್ಯುತ್ ಸ್ಥಾವರ: ಸ್ಥಳೀಯರಲ್ಲಿ ಆತಂಕ
ಸ್ಥಾವರಕ್ಕೆ 1,200 ಎಕರೆ ಭೂಮಿ ಗುರುತಿಸಿ ಡಿಸಿಗೆ ವರದಿ ಸಲ್ಲಿಸಿದ ತಹಶೀಲ್ದಾರ್
ಕೊಪ್ಪಳ: ಜಿಲ್ಲೆಯಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಕೇಂದ್ರ ಸರಕಾರ ರಾಜ್ಯದಲ್ಲಿ ಭೂಮಿ ಹುಡುಕುತ್ತಿದ್ದು ಕೊಪ್ಪಳ ಜಿಲ್ಲಾಧಿಕಾರಿ ಸೂಚನೆಯಂತೆ ಗಂಗಾವತಿ ತಹಶೀಲ್ದಾರ್ ತಾಲೂಕಿನ ’ಹಿರೇಬೆಣಕಲ್ ಗ್ರಾಮದ ಸುತ್ತಲು ಭೂಮಿ ಪರಿಶೀಲಿಸಿ ಒಂದೇ ಕಡೆ ಇರುವ 1200 ಎಕರೆ ಭೂಮಿಯನ್ನು ಗುರುತಿಸಿ ಜಿಲ್ಲಾಧಿಕಾರಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗುತ್ತಿದ್ದು, ಜಿಲ್ಲೆಯಲ್ಲಿ ಜಿಲ್ಲಾಡಳಿತ ಭೂಮಿ ಗುರುತಿಸಿರುವುದರಿಂದ ಜನರು ಮತ್ತಷ್ಟು ಆತಂಕ ಪಡುವಂತಾಗಿದೆ.
ಈ ಭೂಮಿಯು ಕಾಯ್ದಿಟ್ಟ ಅರಣ್ಯದ ವ್ಯಾಪ್ತಿಗೆ ಬರುತ್ತದೆ ಮತ್ತು ಇಲ್ಲಿನ ಸುತ್ತಮುತ್ತಲ ಭಾಗದಲ್ಲಿ ಅನೇಕ ಐತಿಹಾಸಿಕ ಸ್ಥಳಗಳಿವೆ. ಈ ಸ್ಥಳದಲ್ಲೆ ಶಿಲಾಯುಗದ ಗೋರಿಗಳು ಕೂಡ ಇವೆ, ಮತ್ತು ಇಲ್ಲಿದ ಕೆಲವೇ ಕಿ.ಮಿಗಳ ದೂರದಲ್ಲಿ ಐತಿಹಾಸಿಕ ತಾಣವಾದ ಹಂಪಿ ಕೂಡ ಇದೆ,ಇದರಿಂದ ಇಂತಹ ಸ್ಥಳದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡಿದರೆ ಇಂತಹ ಸ್ಥಳಗಳಿಗೆ ತೊಂದರೆ ಅಗುತ್ತೆ ಎಂದು ಸ್ಥಳೀಯ ವಿರೋಧಕ್ಕೆ ಕಾರಣವಾಗಿದೆ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ, ಇದರಿಂದ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ನಮ್ಮಲಿ ಸ್ಥಾಪನೆ ಮಾಡುವುದು ಬೇಡ ಎಂದು ತಹಶಿಲ್ದಾರರ ಭೂಮಿ ಹುಡುಕಾಟ ನಡೆಸುವ ಸಂದರ್ಭದಲ್ಲಿ ಅರಸಿನಕೇರೆ ಗ್ರಾಮಸ್ಥರು ಪ್ರತಿಭಟನೆ ವಿರೋಧ ವ್ಯಕ್ತಪಡಿಸಿರುವುದು ವರದಿಯಾಗಿತ್ತು.
ದೇಶದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆ ಮಾಡುವ ಯೋಜನೆ ಇದ್ದು, ಗೆ 1200 ಎಕರೆಯಷ್ಟು ಜಮೀನು ಗುರುತಿಸಿಕೊಡುವಂತೆ ಕೇಂದ್ರ ಸರಕಾರ ವಿವಿಧ ರಾಜ್ಯಗಳ ವಿವಿಧ ಜಿಲ್ಲೆಗಳಿ ಪತ್ರ ಬರೆದಿದೆ. ರಾಯಚೂರು, ಕೊಪ್ಪಳ ಜಿಲ್ಲೆಗಳಿಗೆ ಪತ್ರ ಬಂದಿದೆ. ಜಿಲ್ಲಾಧಿಕಾರಿಗ ತಾಲ್ಲೂಕುಗಳ ತಹಶೀಲ್ದಾರರಿಗೆ ಒಂದೇ ಕಡೆಗೆ 1200 ಎಕರೆ ಜಮೀನು ಹುಡುಕುವಂತೆ ಸೂಚಿಸಿದ್ದರು. ರಾಯಚೂರು ಜಿಲ್ಲಾಧಿಕಾರಿ ತಹಶೀಲ್ದಾರರಿಗೆ ಸೂಚಿಸಿದ್ದು ಅಲ್ಲಿ ಕೂಡ ಭೂಮಿಯ ಹುಡುಕಾಟ ನಡೆದಿದೆ ಎನ್ನಲಾಗುತ್ತಿದೆ.
ರಾಜ್ಯದಲ್ಲಿ ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಭೂಮಿ ಗುರುತಿಸಿ ಕೊಡುವಂತೆ ಸೂಚಿಸಲಾಗಿತ್ತು. ಅದರಂತೆ ನಾವು ಹಿರೇಬೆಣಕಲ್ ಬಳಿ ಒಂದೆಡೆಗೆ 1200 ಎಕರೆ ಅರಣ್ಯ ಭೂಮಿತನ್ನು ಗುರುತಿಸಿ ಜಿಲ್ಲಾಡಳಿತಕ್ಕೆ ಪ್ರಾಥಮಿಕ ವರದಿ ನೀಡಿದ್ದೇವೆ. ಸದ್ಯ ಯಾವುದೇ ಆದೇಶ ಬಂದಿಲ್ಲ. ಜನರು ಏಕೆ ವಿರೋಧ ವ್ಯಕ್ತಪಡಿಸುತ್ತಿರುವುದು ಗೊತ್ತಿಲ್ಲ.
- ನಾಗರಾಜ್, ತಹಶೀಲ್ದಾರ್ ಗಂಗಾವತಿ.
ಪರಮಾಣು ವಿದ್ಯುತ್ ಸ್ಥಾವರ ಸ್ಥಾಪನೆಗೆ ಗುರುತಿಸುವ ಪ್ರದೇಶದ ಸುತ್ತ ಮುತ್ತ ಫಲವತ್ತಾದ ಹೆಚ್ಚು ಭೂಮಿ ಇದೆ. ಸಣ್ಣ ಪುಟ್ಟ ರೈತರು ಕೃಷಿ ಮೇಲೆ ಅವಲಂಬಿಸಿದ್ದಾರೆ. ವಿದ್ಯುತ್ ಸ್ಥಾವರ ಸ್ಥಾಪನೆಯಾದರೆ ಅನೇಕ ಕುಟುಂಬಗಳು ಬೀದಿಪಾಲಾಗುತ್ತವೆ.- ಸಿದ್ದರಾಮ ರ‍್ಯಾವಾಳ
ತಾಲೂಕು ಅಧ್ಯಕ್ಷರು, ಅಖಿಲ ಭಾರತ ಅನ್ನದಾತರ ಸಂಘ,ಕಾರಟಗಿ.