Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಈ ಹೊತ್ತಿನ ಹೊತ್ತಿಗೆ
      • ಜನಚರಿತೆ
      • ವಿಡಂಬನೆ
      • ಜನ ಜನಿತ
      • ರಂಗ ಪ್ರಸಂಗ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಜನಮನ
      • ರಂಗದೊಳಗಿಂದ
      • ಶಂಬೂಕ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಪ್ರಚಲಿತ
  5. ಆರೆಸ್ಸೆಸ್: ಶತಮಾನೋತ್ಸವ ಸಂಭ್ರಮ...

ಆರೆಸ್ಸೆಸ್: ಶತಮಾನೋತ್ಸವ ಸಂಭ್ರಮ ಮುಂದೇನು?

ಸನತ್ ಕುಮಾರ ಬೆಳಗಲಿಸನತ್ ಕುಮಾರ ಬೆಳಗಲಿ10 Feb 2025 12:06 PM IST
share
ಆರೆಸ್ಸೆಸ್: ಶತಮಾನೋತ್ಸವ ಸಂಭ್ರಮ ಮುಂದೇನು?
ಮಾಣಿಕ್ ಸರ್ಕಾರ್ ಅವರಂತಹ ಪ್ರಾಮಾಣಿಕ ಸರಳ ವ್ಯಕ್ತಿಯನ್ನು ತ್ರಿಪುರಾದ ಜನ ಏಕೆ ಮತ್ತೆ ಚುನಾಯಿಸಲಿಲ್ಲ ಎಂಬ ಮುಗ್ಧವಾದ ಆತಂಕ ಅನೇಕ ಗೆಳೆಯರಿಗಿದೆ. ಅಮಿತ್ ಶಾರಂತಹ ವ್ಯಾಪಾರಿಗಳು ರಾಜಕೀಯ ನಾಯಕರಾಗಿ ಮೆರೆಯುತ್ತಿರುವ ಇಂದಿನ ಕಾಲದಲ್ಲಿ ವಾಸಕ್ಕೊಂದು ಮನೆಯೂ ಇಲ್ಲದ,ಸ್ವಂತ ವಾಹನವಿಲ್ಲದ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಮಾಣಿಕ್ ಸರ್ಕಾರ್ ಜನತೆಯ ಸಹಜ ಆಯ್ಕೆ ಆಗಬೇಕಾಗಿತ್ತು.

ರಾಷ್ಟ್ರೀಯ ಸ್ವಯಂ ಸೇವಕ, ಸಂಘ (ಆರೆಸ್ಸೆಸ್) ನಾಗಪುರದಲ್ಲಿ ಜನ್ಮತಾಳಿ ಈ ವರ್ಷಕ್ಕೆ ಒಂದು ಶತಮಾನವಾಯಿತು (2025). ಸಂಘದ ಸೈದ್ಧಾಂತಿಕ ಎದುರಾಳಿಯಾದ ಭಾರತದ ಕಮ್ಯುನಿಸ್ಟ್ ಚಳವಳಿ ಕೂಡ ಅಸ್ತಿತ್ವಕ್ಕೆ ಬಂದು 100 ವರ್ಷಗಳಾದವು. ಇವೆರಡೂ ಬಲ ಮತ್ತು ಎಡಪಂಥೀಯ ಸಂಘಟನೆಗಳು ತಮ್ಮದೇ ಆದ ತಾತ್ವಿಕ ದಿಕ್ಕಿನಲ್ಲಿ ಸ್ವತಂತ್ರ ಭಾರತವನ್ನು ಕೊಂಡೊಯ್ಯುವ ಗುರಿಯನ್ನು ಇಟ್ಟುಕೊಂಡು ಶ್ರಮಿಸುತ್ತಲೇ ಬಂದಿವೆ.

ಜರ್ಮನಿಯ ಅಡಾಲ್ಫ್ ಹಿಟ್ಲರ್ ಮತ್ತು ಮುಸ್ಸೋಲಿನಿಯ ಇಟಲಿಗಳಿಂದ ಸೈದ್ಧಾಂತಿಕ ಸ್ಫೂರ್ತಿಯನ್ನು ಪಡೆದ ನಾಗಪುರದ ಕೆಲವು ಚಿತ್ಪಾವನ ಬ್ರಾಹ್ಮಣ ತರುಣರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಆರಂಭಿಸಿದರು. ಅದಕ್ಕೂ ಒಂದು ಹಿನ್ನೆಲೆಯಿದೆ. ಜ್ಯೋತಿಬಾ ಫುಲೆ ಮತ್ತು ಕೊಲ್ಲಾಪುರದ ಶಾಹು ಮಹಾರಾಜರು ಜಾತಿ ಪದ್ಧತಿಯ ವಿರುದ್ಧ ಮೂಡಿಸಿದ ಜನ ಜಾಗೃತಿ, ಅದಕ್ಕೂ ಮುನ್ನ ಭೀಮಾ ಕೋರೆಗಾಂವ್‌ನಲ್ಲಿ ಪುಣೆಯ ಪೇಶ್ವೆಗಳ ಸೋಲು ಮತ್ತು ನಂತರ ಬಾಬಾಸಾಹೇಬರ ಆಗಮನ ಇವೆಲ್ಲದರ ಪರಿಣಾಮವಾಗಿ ಇನ್ನು ಜಾತಿಪದ್ಧತಿಗೆ ಉಳಿಗಾಲವಿಲ್ಲ ಎಂದು ಸಾವರ್ಕರ್ ‘ಹಿಂದುತ್ವ’ದ ಜಪ ಆರಂಭಿಸಿದರು. ನಾಗಪುರದ ತರುಣರು ಅದಕ್ಕೆ ಜರ್ಮನಿ, ಇಟಲಿಗಳಿಂದ ತಂದ ಎರವಲು ಸಿದ್ಧಾಂತಗಳನ್ನು ಸೇರಿಸಿದರು.

ಅದೇ ರೀತಿ ದೇಶದ ಎಲ್ಲ ಜನ ಸಮುದಾಯಗಳ ಹೊಸ ತಲೆ ಮಾರಿನ ಯುವಕರು ಹಾಗೂ ಅವರೊಂದಿಗೆ ವಿದೇಶದಲ್ಲಿ ವ್ಯಾಸಂಗ ಮಾಡಿದ ಕೆಲ ಶ್ರೀಮಂತ ಮನೆತನಗಳ ವಿದ್ಯಾವಂತ ಯುವಕರು ಭಾರತದ ಕಮ್ಯುನಿಸ್ಟ್ ಚಳವಳಿಗೆ ಚಾಲನೆ ನೀಡಿದರು.

ಇನ್ನೊಂದೆಡೆ ಬ್ರಿಟಿಷ್ ಆಡಳಿತದ ವಿರುದ್ಧ ಜಾತ್ಯತೀತ, ಜನತಾಂತ್ರಿಕ ಸ್ವತಂತ್ರ ಭಾರತವನ್ನು ನಿರ್ಮಿಸುವ ಗುರಿ ಹೊಂದಿದ ಗಾಂಧಿ, ನೆಹರೂ, ಅಂಬೇಡ್ಕರ್, ಮೌಲಾನಾ ಆಝಾದ್, ಸುಭಾಸ್ ಚಂದ್ರ ಬೋಸ್, ಭಗತ್ ಸಿಂಗ್ ಇಂಥ ಉದಾರವಾದಿ , ಪ್ರಗತಿಪರ ಒಲವಿನ ಹೋರಾಟಗಾರರ ಪ್ರಭಾವದಿಂದ ಬಹುತ್ವ ಭಾರತ ಸಮತೆಯತ್ತ ಹೊರಳುತ್ತಿದ್ದ ಕಾಲಘಟ್ಟ ಅದು. ಆವಾಗ ಎಡಪಂಥೀಯರು ಮತ್ತು ಉದಾರವಾದಿಗಳು ತಮ್ಮ ಕನಸಿನ ಜಾತ್ಯತೀತ ಜನ ತಾಂತ್ರಿಕ ಭಾರತವನ್ನು ಕಟ್ಟುವ ಹಾಗೂ ಅದಕ್ಕೆ ಇನ್ನೊಂದೆಡೆ ತದ್ವಿರುದ್ಧವಾಗಿ ಮನುವಾದಿ ಸನಾತನ ಹಿಂದೂ ರಾಷ್ಟ್ರವನ್ನು ನಿರ್ಮಿಸುವ ಗುರಿಯೊಂದಿಗೆ ಸಂಘ ಪರಿವಾರ ನಿರಂತರವಾದ ಪ್ರಯತ್ನ ಮಾಡುತ್ತಲೇ ಬಂದಿದೆ.

ಈ ಹಿಂದೂ ರಾಷ್ಟ್ರದ ಗುರಿ ಸಾಧನೆಗಾಗಿ ಸಾವಿರಾರು ಕಾರ್ಯಕರ್ತರು ಮದುವೆಯಾಗಿ ಹಾಗೂ ಮದುವೆಯಾಗದೇ ದುಡಿಯುತ್ತಲೇ ಬಂದರು.ಅವರಿಗೆ ಊಟ, ಬಟ್ಟೆಗೆ ತೊಂದರೆಯಿರಲಿಲ್ಲ. ಯಾಕೆಂದರೆ ಭಾರತದ ಮೇಲ್ವರ್ಗಗಳ ಹಾಗೂ ಮೇಲ್ಜಾತಿಗಳ ಸಿರಿವಂತರು ಆಸರೆಯಾಗಿ ನಿಂತರು.ಇನ್ನೊಂದು ಕಡೆ ಸಮತೆಯ ಭಾರತದ ಸಾಕಾರಕ್ಕಾಗಿ ಸಾವಿರಾರು ಕಮ್ಯುನಿಸ್ಟ್ ಕಾರ್ಯಕರ್ತರು ಬೆವರಿಳಿಸುತ್ತಲೇ ಬಂದರು.

ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಎಂಬ ಉದಾರವಾದಿ ಸಂಘಟನೆಯ ನೇತೃತ್ವದಲ್ಲಿ ಧುಮುಕಿದ ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ಕಾರ್ಯಕರ್ತರಲ್ಲಿ ಅನೇಕರು ಬಲಿದಾನ ಮಾಡಿದರು.ಆಗ ಆರೆಸ್ಸೆಸ್ ಯಾರ ಪರವಾಗಿ ಇತ್ತೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಇವೆರಡು ಧಾರೆಗಳಲ್ಲದೇ ಸ್ವಾತಂತ್ರ್ಯ ಚಳವಳಿಯಲ್ಲಿ ಕಾಂಗ್ರೆಸ್ ಸ್ವಾಯತ್ತ ಹೋರಾಟದ ನಾಯಕತ್ವ ವಹಿಸಿತ್ತು. ಆಗ ಕಮ್ಯುನಿಸ್ಟ್ ಮತ್ತು ಸೋಷಲಿಸ್ಟ್ ಪಕ್ಷಗಳು ಕಾಂಗ್ರೆಸ್ ನೇತೃತ್ವದ ರಾಷ್ಟ್ರೀಯ ಚಳವಳಿಯ ಭಾಗವಾಗಿಯೇ ಸ್ವಾತಂತ್ರ್ಯ ಚಳವಳಿಯಲ್ಲಿ ಧುಮುಕಿದ್ದವು. ಭಾರತದ ಕೆಂಪು ಕೋಟೆಯನ್ನು ಗೆಲ್ಲಲು ಕೋಮುವಾದಿಗಳಿಗೆ ಕಾರ್ಪೊರೇಟ್ ಕಂಪೆನಿಗಳಿಂದ ನೂರಾರು ಕೋಟಿ ಹಣ ಹರಿದು ಬರುತ್ತಲೇ ಇದೆ. ಯಾವುದೇ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆದರೂ ಅಲ್ಲಿನ ಫಲಿತಾಂಶವನ್ನೇ ತನ್ನ ಪರವಾಗಿ ಬದಲಿಸಿಕೊಳ್ಳಲು ಬಿಜೆಪಿಗೆ ಸಾಧ್ಯವಾಗುತ್ತಿದೆ. ದಶಕಗಳಿಂದ ಕಮ್ಯುನಿಸ್ಟರ ಕೋಟೆಯಾಗಿದ್ದ ತ್ರಿಪುರಾ ಕೇಸರಿ ಪಡೆಯ ಕೈವಶವಾಯಿತು. ಪ್ರತ್ಯೇಕತಾವಾದಿ ಸಂಘಟನೆಯಾದ ತ್ರಿಪುರಾ ಮೂಲ ನಿವಾಸಿ ಜನಜಾತಿ ರಂಗದೊಂದಿಗೆ ಮಾಡಿಕೊಂಡ ಮೈತ್ರಿ ಬಿಜೆಪಿಯ ಗೆಲುವಿಗೆ ನೆರವಾಯಿತು. ಕಾಶ್ಮೀರದಲ್ಲಿ ತಾನೇ ದೇಶವಿರೋಧಿ ಎಂದು ಆರೋಪಿಸಿದ್ದ ಪಕ್ಷದೊಂದಿಗೆ ಅಧಿಕಾರಕ್ಕಾಗಿ ಮೈತ್ರಿ ಮಾಡಿಕೊಂಡವರಿಗೆ ತ್ರಿಪುರಾದಲ್ಲಿ ಪ್ರತ್ಯೇಕತಾವಾದಿಗಳೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಂಕೋಚವೆನಿಸಲಿಲ್ಲ

ತ್ರಿಪುರಾದಲ್ಲಿ ಕಾಲು ಶತಮಾನ ಕಾಲ ಆಳಿದ ಮಾರ್ಕ್ಸ್ ವಾದಿ ಕಮ್ಯುನಿಸ್ಟ್ ಪಕ್ಷದ ಸರಕಾರ ಯಾವ ಸಾಧನೆಯನ್ನು ಮಾಡಲೇ ಇಲ್ಲವೆಂದಲ್ಲ. ಹಿಂದೆಲ್ಲ ಹಿಂಸೆಯಿಂದ ತತ್ತರಿಸಿ ಹೋಗಿದ್ದ ಈ ಪುಟ್ಟ ರಾಜ್ಯ ಕಳೆದ ಎರಡು ದಶಕಗಳಿಂದ ನೆಮ್ಮದಿಯಾಗಿದೆ. ರಾಜ್ಯವನ್ನು ಜನಾಂಗೀಯ ಕಲಹ ಮತ್ತು ಪ್ರತ್ಯೇಕತಾವಾದಿಗಳ ದಳ್ಳುರಿ ಯಿಂದ ಮುಕ್ತಗೊಳಿಸಿರುವುದು ಸಾಮಾನ್ಯ ಸಂಗತಿಯಲ್ಲ. ಪ್ರಜಾಪ್ರಭುತ್ವಕ್ಕೆ ಕಳಂಕವಾದ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯನ್ನು ರದ್ದುಗೊಳಿಸಿದ್ದು ಸಣ್ಣ ಸಾಧನೆಯೇನಲ್ಲ. ಹಿಂದಿನ ಮುಖ್ಯಮಂತ್ರಿ ನೃಪೇನ್ ಚಕ್ರವರ್ತಿ ಹಾಗೂ ಈಗ ನಿರ್ಗಮಿಸಿರುವ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ಅವರ ಸರಳತೆ, ಪ್ರಾಮಾಣಿಕತೆಯ ಬಗ್ಗೆ ಎರಡು ಮಾತಿಲ್ಲ. ಅದನ್ನು ಇಡೀ ದೇಶವೇ ಕೊಂಡಾಡುತ್ತಿದೆ. ಆದರೂ ತ್ರಿಪುರಾವನ್ನು ಮತ್ತೆ ಗೆಲ್ಲಲು ಸಾಧ್ಯವಾಗಲೇ ಇಲ್ಲ. ಏಕೆ ಸಾಧ್ಯವಾಗಲಿಲ್ಲ ಎಂಬ ಬಗ್ಗೆ ಸಿಪಿಎಂ ಕೇಂದ್ರ ಸಮಿತಿ ಪರಾಮರ್ಶಿಸಿ ಹೇಳಿಕೆ ನೀಡಿದೆ. ಏನೇ ಹೇಳಿಕೆ ನೀಡಿದರೂ ಕಳೆದುಕೊಂಡದ್ದನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಪಶ್ಚಿಮ ಬಂಗಾಳದಂತೆ ತ್ರಿಪುರಾದಲ್ಲಿ ಕೂಡ ಸಿಪಿಎಂ ಇನ್ನು ಮುಂದೆ ವಿರೋಧ ಪಕ್ಷವಾಗಿಯೇ ಇರಬೇಕಾಗುತ್ತದೆ. ಮಾಣಿಕ್ ಸರ್ಕಾರ್ ಸ್ಥಾನದಲ್ಲಿ ಆರೆಸ್ಸೆಸ್ ಪ್ರಚಾರಕ ಬಿಪ್ಲವ್ ಕುಮಾರ್ ದೇಬ್ ರಾಜ್ಯದ ಮುಖ್ಯಮಂತ್ರಿಯಾದರು.

ದೇಶದಲ್ಲಿ ಜಾಗತೀಕರಣದ ಪ್ರವೇಶವಾದ ಆನಂತರ ಜನರ ಆಶೋತ್ತರಗಳು ಬದಲಾಗಿವೆ. ಅದರಲ್ಲೂ ಮೂವತ್ತರ ಒಳಗಿನ ಯುವಕರ ಕನಸುಗಳೇ ಭಿನ್ನವಾಗಿವೆ. ಈ ಹೊಸ ಪೀಳಿಗೆಗೆ ಹೋರಾಟದ ಹಿನ್ನೆಲೆಯಿಲ್ಲ. ಅವರ ಕಣ್ಣೆದುರಿಗೆ ಮಾರುಕಟ್ಟೆಯ ಥಳಕುಬಳುಕಿನ ಜಗತ್ತು ಅವರನ್ನು ವಿಚಲಿತರನ್ನಾಗಿ ಮಾಡಿದೆ. ಇಂತಹ ಮೂವತ್ತರೊಳಗಿನ ಯುವಕರು ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.60ರಷ್ಟಿದ್ದಾರೆ. ಯಾವುದೇ ಚುನಾವಣೆಯಲ್ಲಿ ಅವರು ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ.

ಮಾಣಿಕ್ ಸರ್ಕಾರ್ ಅವರಂತಹ ಪ್ರಾಮಾಣಿಕ ಸರಳ ವ್ಯಕ್ತಿಯನ್ನು ತ್ರಿಪುರಾದ ಜನ ಏಕೆ ಮತ್ತೆ ಚುನಾಯಿಸಲಿಲ್ಲ ಎಂಬ ಮುಗ್ಧವಾದ ಆತಂಕ ಅನೇಕ ಗೆಳೆಯರಿಗಿದೆ. ಅಮಿತ್ ಶಾರಂತಹ ವ್ಯಾಪಾರಿಗಳು ರಾಜಕೀಯ ನಾಯಕರಾಗಿ ಮೆರೆಯುತ್ತಿರುವ ಇಂದಿನ ಕಾಲದಲ್ಲಿ ವಾಸಕ್ಕೊಂದು ಮನೆಯೂ ಇಲ್ಲದ,ಸ್ವಂತ ವಾಹನವಿಲ್ಲದ, ಬ್ಯಾಂಕ್ ಬ್ಯಾಲೆನ್ಸ್ ಇಲ್ಲದ ಮಾಣಿಕ್ ಸರ್ಕಾರ್ ಜನತೆಯ ಸಹಜ ಆಯ್ಕೆ ಆಗಬೇಕಾಗಿತ್ತು. ಆದರೆ ಹಾಗಾಗಲಿಲ್ಲ.

ಈ ದೇಶದ ಕಮ್ಯುನಿಸ್ಟ್ ಚಳವಳಿಯಲ್ಲಿ ಇಂತಹ ಸರಳ,ಪ್ರಾಮಾಣಿಕ ನಾಯಕರಿಗೆ ಕೊರತೆಯಿಲ್ಲ. ಈಗ ಅಂಥವರ ಸಂಖ್ಯೆ ಕಡಿಮೆ ಆಗುತ್ತಿದ್ದರೂ ಹಿಂದಿನ ತಲೆಮಾರಿನಲ್ಲಿ ಇಂತಹ ಅನೇಕ ನಾಯಕರನ್ನು ನಾನು ನೋಡಿದ್ದೇನೆ. 1957ರಲ್ಲಿ ಕೇರಳದ ಮೊದಲ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಇಎಂಎಸ್ ನಂಬೂದಿರಿ ಪಾಡ್ ಸರಳತೆಗೆ ಹೆಸರಾಗಿದ್ದರು. ಅಧಿಕಾರ ವಹಿಸಿಕೊಂಡಾಗಲೂ ಕೂಡ ಅವರು ಮುಖ್ಯಮಂತ್ರಿಯ ಬಂಗಲೆಗೆ ಹೋಗಲಿಲ್ಲ. ಹಳೆಯ ಬಾಡಿಗೆ ಮನೆಯಲ್ಲಿದ್ದರು. ಅವರು ಸೈಕಲ್ ಮೇಲೆ ವಿಧಾನಸೌಧಕ್ಕೆ ಬರುತ್ತಿದ್ದರೆಂದು ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಒಂದೆಡೆ ಬರೆದಿದ್ದಾರೆ. ಇಂತಹ ಇಎಂಎಸ್ 1972ರಲ್ಲಿ ಬಾಗಲಕೋಟೆಯಲ್ಲಿ ಸಿಪಿಎಂ ಪರವಾಗಿ ಸ್ಪರ್ಧಿಸಿದ್ದ ಎನ್.ಕೆ. ಉಪಾಧ್ಯಾಯರ ಪ್ರಚಾರಕ್ಕೆ ಬಂದಿದ್ದಾಗ ಅವರ ಜೊತೆಗೆ ಓಡಾಡಿದ ನೆನಪು ನನ್ನಲ್ಲಿ ಇನ್ನೂ ಹಸಿರಾಗಿದೆ. ಆಗ ನನ್ನ ವಯಸ್ಸು ಇಪ್ಪತ್ತು ದಾಟಿರಲಿಲ್ಲ. ಇಎಂಎಸ್ ಅವರ ಸರಳ ವ್ಯಕ್ತಿತ್ವವನ್ನು ಕಣ್ಣಾರೆ ಕಂಡೆ. ಬಾಗಲಕೋಟೆಗೆ ಬಂದಿದ್ದ ಅವರು ಸಂಜೆ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಬೆಳಗ್ಗೆ ಬಾದಾಮಿ ಮತ್ತು ಐಹೊಳೆಗಳನ್ನು ನೋಡಿಕೊಂಡು ಬರಬೇಕೆಂದು ಕೇಳಿಕೊಂಡರು. ಅವರಿಗಾಗಿ ಅಲ್ಲಿನ ವೈದ್ಯರೊಬ್ಬರು ತಮ್ಮ ವಾಹನವನ್ನು ನೀಡಿದರು.

ಆ ವಾಹನದಲ್ಲಿ ಹತ್ತಿರದ ಬಾದಾಮಿ ಮತ್ತು ಐಹೊಳೆಗಳಿಗೆ ಇಎಂಎಸ್ ಅವರನ್ನು ಕರೆದುಕೊಂಡು ಹೋದೆವು. ಅಲ್ಲಿನ ಮೇಣ ಬಸದಿ ಮುಂತಾದ ಚಾಲುಕ್ಯರ ಶಿಲ್ಪಕಲೆ ವೈಭವವನ್ನು ನೋಡುತ್ತಲೇ ಅವುಗಳ ಇತಿಹಾಸವನ್ನು ಅವರು ನಮಗೆ ವಿವರಿಸಿದರು. ಸರಳತೆಗೆ ಹೆಸರಾದ ಇನ್ನೊಬ್ಬ ಕಮ್ಯುನಿಸ್ಟ್ ನಾಯಕ ಭೂಪೇಶ್ ಗುಪ್ತಾ ಮೂರು ದಶಕಗಳ ಕಾಲ ರಾಜ್ಯಸಭಾ ಸದಸ್ಯರಾಗಿದ್ದರು. ಅವರಿಗೆ ಮದುವೆಯಾಗಿರಲಿಲ್ಲ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು. ನಗರದಲ್ಲಿ ಓಡಾಡಲು ಸಿಟಿ ಬಸ್‌ಗಳನ್ನು ಬಳಸುತ್ತಿದ್ದರು. ದೇವೇಗೌಡರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಗೃಹಸಚಿವರಾಗಿದ್ದವರು ಇಂದ್ರಜಿತ್‌ಗುಪ್ತಾ. ಇಂದ್ರಜಿತ್ ಗುಪ್ತಾ ಆಗರ್ಭ ಶ್ರೀಮಂತ ಮನೆತನದಲ್ಲಿ ಹುಟ್ಟಿ ಬಂದವರು. ಲಂಡನ್‌ನಲ್ಲಿ ವ್ಯಾಸಂಗ ಮಾಡಿ ಬಂದಿದ್ದ ಅವರು ಗೃಹಮಂತ್ರಿಯಾಗಿದ್ದಾಗ ಸರಕಾರಿ ಬಂಗಲೆಗೆ ಹೋಗಲಿಲ್ಲ. ಲೋಕಸಭಾ ಸದಸ್ಯರಿಗೆ ನೀಡುವ ಒಂದು ರೂಮಿನ ಮನೆಯಲ್ಲಿಯೇ ಉಳಿದುಕೊಂಡಿದ್ದರು. ಅಂತಹ ಇಂದ್ರಜಿತ್ ಗುಪ್ತಾ 1983ರಲ್ಲಿ ಕರ್ನಾಟಕ ವಿಧಾನಸಭೆಯ ಚುನಾವಣೆ ಪ್ರಚಾರಕ್ಕೆ ಬಂದಾಗ ಅವರೊಂದಿಗೆ ಬೆಂಗಳೂರಿನಿಂದ ಹುಬ್ಬಳ್ಳಿಯವರೆಗೆ ಒಂದೇ ವಾಹನದಲ್ಲಿ ಪ್ರಯಾಣ ಮಾಡಿದ ನೆನಪನ್ನು ಮರೆಯಲು ಸಾಧ್ಯವಿಲ್ಲ. ದಾರಿಯುದ್ದಕ್ಕೂ ತಮಾಷೆಯ ಮಾತನ್ನಾಡುತ್ತ ಬಂದ ಗುಪ್ತಾ ಚಿತ್ರದುರ್ಗದ ಸಾಮಾನ್ಯ ದಾಬಾವೊಂದರ ಮುಂದೆ ವಾಹನ ನಿಲ್ಲಿಸಿ ಊಟ ಮಾಡಿದ್ದರು. ಮುಂದೆ ದಾವಣಗೆರೆಗೆ ಬಂದಾಗ ಅಲ್ಲಿನ ರಾಜನಹಳ್ಳಿಯ ಹನುಮಂತಪ್ಪ ಛತ್ರದ ಪಕ್ಕದ ಸುನಂದ ರಂಗಮಂಟಪದಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಗುಪ್ತಾ ಮಾತನಾಡಿದ್ದರು.

ಅಲ್ಲಿನ ಸಭೆ ಮುಗಿಸಿ ಹುಬ್ಬಳ್ಳಿ ತಲುಪಿದಾಗ ರಾತ್ರಿ 10 ಗಂಟೆ. ಅಲ್ಲಿನ ಸರಾಪ ಕಟ್ಟೆಯಲ್ಲಿ ಅವರ ಭಾಷಣ ಕೇಳಲು 10 ಸಾವಿರಕ್ಕೂ ಹೆಚ್ಚು ಜನ ಸೇರಿದ್ದರು. ಇಂತಹ ಅನೇಕ ಸರಳ ಮತ್ತು ಅರ್ಪಣಾ ಮನೋಭಾವದ ನಾಯಕರನ್ನು ನೀಡಿದ ಕಮ್ಯುನಿಸ್ಟ್ ಪಕ್ಷಗಳು ಈಗಿನ ಹೊಸಜಗತ್ತಿನ ಸವಾಲುಗಳಿಗೆ ಸ್ಪಂದಿಸಲು ಪ್ರಯಾಸ ಪಡುತ್ತಿವೆ. ಹೊಸ ಪೀಳಿಗೆಯ ಯುವಕರ ಮನಸ್ಸಿನ ಕದ ತಟ್ಟಿ ಬಾಗಿಲು ತೆರೆಯಲು ಸಾಧ್ಯವಾಗುತ್ತಿಲ್ಲ. ಕಾರ್ಮಿಕ ಚಳವಳಿಯಲ್ಲಿ ಬರುವ ಯುವಕರು ಆರ್ಥಿಕ ಬೇಡಿಕೆಗಳಿಗೆ ಸೀಮಿತಗೊಂಡಿರುತ್ತಾರೆ. ಒಮ್ಮೆ ಸಂಸದೀಯ ರಾಜಕಾರಣವನ್ನು ಒಪ್ಪಿಕೊಂಡ ಆನಂತರ ಅದಕ್ಕೆ ಪೂರಕವಾದ ಹೊಂದಾಣಿಕೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಇಂತಹ ಪ್ರತಿಕೂಲ ಸನ್ನಿವೇಶದಲ್ಲೂ ಭಾರತದ ಕಮ್ಯುನಿಸ್ಟ್ ಚಳವಳಿಗೆ ಒಮ್ಮೊಮ್ಮೆ ಅತ್ಯುತ್ತಮ ಅವಕಾಶಗಳು ಬಂದಿದ್ದೂ ಉಂಟು.

ಜ್ಯೋತಿ ಬಸು ಪ್ರಧಾನಿಯಾಗುವ ಅವಕಾಶ ಬಂದಾಗ ಪಕ್ಷ ಅದನ್ನು ತಿರಸ್ಕರಿಸಿತ್ತು. ಒಂದು ಕಾಲದಲ್ಲಿ ಹರ್‌ಕಿಶನ್ ಸಿಂಗ್ ಸುರ್ಜೀತ್, ಜ್ಯೋತಿ ಬಸು ಅಂತಹ ನಾಯಕರು ಪಕ್ಷಕ್ಕೆ ಸಮರ್ಥ ನಾಯಕತ್ವ ನೀಡಿ ಮುನ್ನಡೆಸಿದ್ದರು. 2004ರವರೆಗೆ ಲೋಕಸಭೆಯಲ್ಲಿ ಎಡಪಕ್ಷಗಳ ಸಂಖ್ಯಾಬಲ ಅರುವತ್ತರ ಅಂಕೆಯನ್ನು ದಾಟಿತ್ತು. ಆದರೆ ಸುರ್ಜೀತ್ ಅವರ ನಿರ್ಗಮನದ ಆನಂತರ ಎಡಪಕ್ಷಗಳಿಗೆ ಸಮರ್ಥ ನಾಯಕತ್ವ ಸಿಗಲಿಲ್ಲ. ಪ್ರಕಾಶ್ ಕಾರಟ್ ಕಾರ್ಯದರ್ಶಿಯಾಗಿದ್ದಾಗ ಅಮೆರಿಕದ ಜೊತೆಗೆ ಮಾಡಿಕೊಂಡ ಪರಮಾಣು ಒಪ್ಪಂದದ ನೆಪ ಮುಂದೆ ಮಾಡಿಕೊಂಡು ಯುಪಿಎ ಸರಕಾರಕ್ಕೆ ನೀಡಿದ ಬೆಂಬಲವನ್ನು ವಾಪಸ್ ಪಡೆದರು. ಆಗ ಮುಗ್ಗರಿಸಿದ ಕಮ್ಯುನಿಸ್ಟ್ ಚಳವಳಿ ಮತ್ತೆ ಚೇತರಿಸಲೇ ಇಲ್ಲ. ನಂತರ ಬಂದ ಸೀತಾರಾಮ್ ಯೆಚೂರಿಯವರಂತಹ ವರು ಇತ್ತೀಚೆಗೆ ನಿರ್ಗಮಿಸಿದರು. ನಾನಾ ಕಾರಣಗಳಿಂದ ಹಿನ್ನಡೆ ಅನುಭವಿಸಿದ ಈ ದೇಶದ ಕಮ್ಯುನಿಸ್ಟ್ ಚಳವಳಿ ಮತ್ತೆ ಚೇತರಿಸಿತೇ ಎಂಬುದು ಯಕ್ಷಪ್ರಶ್ನೆಯಾಗಿದೆ.

ಇನ್ನೊಂದೆಡೆ ಬದಲಾದ ಅಂತರ್‌ರಾಷ್ಟ್ರೀಯ ಪರಿಸ್ಥಿತಿಯನ್ನು ಬಳಸಿಕೊಂಡ ಕೋಮುವಾದಿ ಹಾಗೂ ಪ್ರಜಾಪ್ರಭುತ್ವ ವಿರೋಧಿ ಶಕ್ತಿಗಳು ತಮ್ಮ ಬಲವನ್ನು ಹೆಚ್ಚಿಸಿಕೊಂಡಿವೆ. ಇಂಥ ಗಂಭೀರ ಸನ್ನಿವೇಶದಲ್ಲಿ ಮುಂದೇನು ಎಂಬ ಪ್ರಶ್ನೆ ನಮ್ಮ ಎದುರಿಗೆ ಸಹಜವಾಗಿ ಬಂದು ನಿಲ್ಲುತ್ತದೆ. ನಾವೀಗ ಹೊಸ ದಾರಿಯನ್ನು ಹುಡುಕಬೇಕಾಗಿದೆ.

share
ಸನತ್ ಕುಮಾರ ಬೆಳಗಲಿ
ಸನತ್ ಕುಮಾರ ಬೆಳಗಲಿ
Next Story
X