ಸೋತರೂ ಅಧಿಕಾರ ಕಬಳಿಸುವ ಚಮತ್ಕಾರ
ಕೇಂದ್ರದಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ನಂತರ ಅಂದರೆ, 2014ರ ನಂತರ ಭಾರತದ ಪ್ರಜಾಪ್ರಭುತ್ವದ ಸ್ವರೂಪ ಬದಲಾಗಿದೆ. ಮುಂಚೆ ಚುನಾವಣೆಯಲ್ಲಿ ಸೋತವರು ಕಾಂಗ್ರೆಸ್ ಸೇರಿದಂತೆ ಯಾವುದೇ ಪಕ್ಷ ಅಥವಾ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಸೋಲನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿ ಜಯಶಾಲಿಯಾದ ಪಕ್ಷ ಅಥವಾ ಮೈತ್ರಿ ಕೂಟಕ್ಕೆ ಅಧಿಕಾರ ಬಿಟ್ಟು ಕೊಡುತ್ತಿದ್ದರು. ಮುಂದಿನ ಐದು ವರ್ಷಗಳ ಕಾಲ ಪ್ರತಿಪಕ್ಷ ಸ್ಥಾನದಲ್ಲಿ ಕೂತು ಆತ್ಮಾವಲೋಕನ ಮಾಡುತ್ತಿದ್ದರು. ಅಲ್ಲದೆ ಅಧಿಕಾರದಲ್ಲಿ ಇರುವ ಸರಕಾರದ ಲೋಪ ದೋಷಗಳನ್ನು ಬಯಲಿಗೆಳೆಯುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಜನಾದೇಶವಿಲ್ಲದಿದ್ದರೂ ಬಾರಾ ಬಾನಗಾಡಿ ಮಾಡಿ, ಮತ್ತೆ ಸರಕಾರದ ಸೂತ್ರ ಹಿಡಿಯುತ್ತದೆ.
ಕೇಂದ್ರದಲ್ಲಿ ಮಾತ್ರವಲ್ಲ ರಾಜ್ಯಗಳಲ್ಲೂ ತನ್ನದೇ ಸರಕಾರ ಇರಬೇಕು ಎಂಬ ಮಹತ್ವಾಕಾಂಕ್ಷೆ ಬಿಜೆಪಿ ಹೊಂದಿದೆ. ಆದರೆ ಬಹುತ್ವ ಭಾರತದಲ್ಲಿ ಯಾವುದೇ ಒಂದು ಪಕ್ಷದವರು, ಇಲ್ಲವೇ ಜಾತಿ, ಮತಗಳಿಗೆ ಸೇರಿದವರು ಯಾವುದೇ ಜನಾಂಗದವರು, ಯಾವುದೇ ಒಂದು ಜಾತಿಯವರು, ಇಲ್ಲವೇ ಒಂದು ಭಾಷೆಯವರು ಇಡೀ ದೇಶದ ಹಾಗೂ ಅಥವಾ ಎಲ್ಲಾ ರಾಜ್ಯಗಳಲ್ಲಿ ಅಧಿಕಾರ ಹಿಡಿಯಲು ಸಾಧ್ಯವಿಲ್ಲ, ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಬಿಜೆಪಿ, ಬಿಹಾರದಲ್ಲಿ ಸಂಯುಕ್ತ ಜನತಾ ದಳ ಮತ್ತು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಪ್ರಾಬಲ್ಯವನ್ನು ಹೊಂದಿದೆ. ದಕ್ಷಿಣ ಭಾರತಕ್ಕೆ ಬಂದರೆ ತಮಿಳುನಾಡು, ಕೇರಳಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ.ಇನ್ನು ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಿಂತ ಮೊದಲು ಬಿಜೆಪಿ ಸರಕಾರ ಇದ್ದರೂ ಹಾಗೂ ವಿಶ್ವಗುರು ಎಂದು ಬಿಂಬಿಸಲ್ಪಟ್ಟ ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕದಲ್ಲಿ ಇಪ್ಪತ್ತು ದಿನಗಳ ಕಾಲ ಹಳ್ಳಿ, ಪಟ್ಟಣಗಳಿಗೆ ಹೋಗಿ ತಲೆ ಬಗ್ಗಿಸಿ, ಕೈ ಮುಗಿದು ಮತ ಯಾಚನೆ ಮಾಡಿದ್ದರೂ ಬಿಜೆಪಿ ಎರಡಂಕಿ ದಾಟಲಿಲ್ಲ. ಮೋದಿಯವರಿಗಿಂತ ಅನ್ನ ಭಾಗ್ಯದಂಥ ಜನಪರ ಯೋಜನೆಗಳು ಹಾಗೂ ಮಹಿಳಾ ಪರ ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷಕ್ಕೆ ರಾಜ್ಯದ ಜನ ಅಧಿಕಾರ ಸೂತ್ರ ನೀಡಿದರು.
ಸಿದ್ದರಾಮಯ್ಯನವರ ನೇತೃತ್ವದ ಸರಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡಲಾಗುತ್ತಿದೆ. ಅದಾನಿ, ಅಂಬಾನಿಗಳಂಥ 15 ಲಕ್ಷ ರೂ.ಕೋಟಿ ಸಾಲವನ್ನು ಮನ್ನಾ ಮಾಡಿರುವ ಬಗ್ಗೆ ಉತ್ತರಿಸದೇ ಕರ್ನಾಟಕ ಸರ್ಕಾರ ಬಡವರಿಗೆ ಅನ್ನ ನೀಡುವ ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕಿಸುತ್ತ ಈ ಯೋಜನೆಗಳಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಡುತ್ತಿದೆ ಎಂದು ಬಿಜೆಪಿಯವರು ಹೋದಲ್ಲಿ - ಬಂದಲ್ಲಿ ಹೇಳುತ್ತಿದ್ದಾರೆ. ಅದಾನಿಯಂಥ ಬಹುದೊಡ್ಡ ಕಾರ್ಪೊರೇಟ್ ಕರೋಡ್‌ಪತಿಗಳ ಹದಿನೈದು ಲಕ್ಷ ಕೋಟಿ ರೂಪಾಯಿ ಮನ್ನಾ ಮಾಡಿ ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹಳ್ಳ ಹಿಡಿದಿರುವ ಬಗ್ಗೆ ಉತ್ತರಿಸದ ವಿಶ್ವಗುರು ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತ ಸುಳ್ಳಿನ ರೈಲನ್ನು ಬಿಡುತ್ತಿದ್ದಾರೆ.ಅವರಿಗೂ ವಿಧಾನ ಸಭಾ ಚುನಾವಣೆಯಲ್ಲಿ ಗೆಲ್ಲುವ ಸಾಧ್ಯತೆ ಇಲ್ಲ ಎಂಬುದು ಗೊತ್ತಿದ್ದರೂ ದಣಿವು ಮಾಡಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಹಿಂದಿನ ವಿಧಾಸಭಾ ಚುನಾವಣೆಯಲ್ಲಿ ಬಿಜೆಪಿ ಯನ್ನು ಸೋಲಿಸಿ ಶರದ್ ಪವಾರರ ರಾಷ್ಟ್ರವಾದಿ ಕಾಂಗ್ರೆಸ್ ಸರಕಾರ ಹಾಗೂ ಬಾಳಾ ಠಾಕ್ರೆಯವರ ಶಿವಸೇನೆ ಮತ್ತು ಕಾಂಗ್ರೆಸ್ ಪಕ್ಷಗಳು ಕೂಡಿ ಸರಕಾರ ರಚಿಸಿದವು. ಪ್ರಧಾನಿಯಂಥ ಉನ್ನತ ಸ್ಥಾನದಲ್ಲಿರುವ ಮೋದಿಯವರು ಶಿವಸೇನೆ ಮತ್ತು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷಗಳನ್ನು ಒಡೆದು ಅಧಿಕೃತ ಪಕ್ಷಗಳಿಂದ ಹೊರಗೆ ಬಂದವರ ಶಿವಸೇನೆ ಮತ್ತು ರಾಷ್ಟ್ರವಾದಿ ಕಾಂಗ್ರೆಸ್‌ಗಳಿಗೆ ಚುನಾವಣಾ ಆಯೋಗದಿಂದ ಪಕ್ಷಾಂತರ ಮಾಡಿದ ಏಕನಾಥ ಶಿಂದೆ ಹಾಗೂ ಅಜಿತ್ ಪವಾರರ ನಕಲಿ ಪಕ್ಷ ಗಳಿಗೆ ಮಾನ್ಯತೆ ಕೊಡಿಸಿ ತನ್ನ ಪಕ್ಷಕ್ಕೆ ಅಧಿಕಾರ ಸಿಕ್ಕಿತು ಎಂದು ಹಾರಾಡಿದರು. ಅಂದರೆ ಚುನಾವಣೆಯಲ್ಲಿ ಸೋತು ಅನೈತಿಕವಾಗಿ ಅಧಿಕಾರ ವಶ ಪಡಿಸಿಕೊಂಡರು.
ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶದಿಂದ ಹತಾಶರಾದ ಬಿಜೆಪಿಯ ರಾಜ್ಯ ನಾಯಕರು ಜನಾದೇಶವನ್ನು ಒಪ್ಪದೇ ಅತ್ಯಂತ ಅಸಭ್ಯವಾಗಿ ವರ್ತಿಸಿದರು.ರಾಜ್ಯ ನಾಯಕರು ಮಾತ್ರವಲ್ಲ ಪ್ರಧಾನಿ ತಮ್ಮ ಸ್ಥಾನದ ಘನತೆಯನ್ನು ಗಾಳಿಗೆ ತೂರಿ ಈಗ ನಡೆಯುತ್ತಿರುವ ಮಹಾರಾಷ್ಟ್ರ, ಜಾರ್ಖಂಡ್ ಮತ್ತಿತರ ರಾಜ್ಯಗಳ ವಿಧಾನ ಸಭಾ ಚುನಾವಣೆಯಲ್ಲಿ ಮಾತಾಡಲು, ಹೇಳಿಕೊಳ್ಳುವಂಥ ಸಾಧನೆಗಳಿಲ್ಲದೇ ಕರ್ನಾಟಕದ ಮೇಲೆ ಕೆಂಡ ಕಾರುತ್ತಿದ್ದಾರೆ. ಪ್ರತಿನಿತ್ಯ ಹಸಿ ಸುಳ್ಳು ಹೇಳುತ್ತಿದ್ದಾರೆ.
ಕರ್ನಾಟಕದ ಚುನಾವಣಾ ಫಲಿತಾಂಶವನ್ನು ಮರೆಯಲು ಹಾಗೂ ಒಪ್ಪಿಕೊಳ್ಳಲು ಮೋದಿ ಅಥವಾ ಅವರ ಪಕ್ಷವಾಗಲಿ ತಯಾರಿಲ್ಲ. ಅದಕ್ಕ್ಕೆ ಕರ್ನಾಟಕದ ಪಾಲಿನ ಅನುದಾನವನ್ನು ಕೊಡದೇ ಸತಾಯಿಸುತ್ತಿದೆ.ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಬಹುಮತವನ್ನು ಗಳಿಸುವುದಿಲ್ಲ. ಆವಾಗ ಬಿಜೆಪಿ ಮತ್ತು ಜೆಡಿಎಸ್ ಜೊತೆ ಸೇರಿ ಸರಕಾರ ರಚಿಸಬಹುದು ಎಂದು ಬಿಜೆಪಿ ನಾಯಕರು ಹಗಲು ಕನಸು ಕಂಡಿದ್ದರು. ಆದರೆ, ಕುಮಾರ ಸ್ವಾಮಿಯವರ ಲೆಕ್ಕಾಚಾರ ಬೇರೆ ಯಾಗಿತು.್ತ ಬಿಜೆಪಿಗೆ ಬಹುಮತ ಬರುವುದನ್ನು ಅವರೂ ಬಯಸಿರಲಿಲ್ಲ. ಬಿಜೆಪಿ ಕಡಿಮೆ ಸ್ಥಾನಗಳನ್ನು ಪಡೆದರೆ ಅದರ ಜೊತೆ ಕೈಗೂಡಿಸುವ, ಮತ್ತೆ ಮುಖ್ಯಮಂತ್ರಿಯಾಗುವ ಭ್ರಮೆಯಲ್ಲಿದ್ದರು. ಜನಾದೇಶದಿಂದ ತೀವ್ರ ಅಸಮಾಧಾನಗೊಂಡರು. ಬಳಿಕ ಕುಮಾರ ಸ್ವಾಮಿಯವರು ತಾವು ಕೇಂದ್ರ ಮಂತ್ರಿಯೆಂಬುದನ್ನು ಮರೆತು ಕರ್ನಾಟಕದ ಕಾಂಗ್ರೆಸ್ ಸರಕಾರದ ವಿರುದ್ಧ ನಿತ್ಯ ಟೀಕಿಸುವುದೇ ಅವರ ಚಾಳಿಯಾಗಿದೆ.
ಸದ್ಯ ಕರ್ನಾಟಕದ ಏಕೈಕ ಮಾಸ್ ಲೀಡರ್ ಎಂದು ಖ್ಯಾತಿ ಗಳಿಸಿರುವ ಸಿದ್ದರಾಮಯ್ಯನವರು ಮುಖ್ಯ ಮಂತ್ರಿಯಾಗಿರುವವರೆಗೆ ತಾವು ಅಧಿಕಾರಕ್ಕೆ ಬರಲು, ಹಣ ಮಾಡಿಕೊಳ್ಳಲು ಸಾಧ್ಯ ಆಗುವುದಿಲ್ಲ ಎಂಬುದನ್ನು ಅರಿತು, ಮೋದಿ ಮತ್ತು ಅಮಿತ್ ಶಾ ಸೂಚನೆ ಮೇರೆಗೆ ಹಾಗೂ ಅವರ ಶಾಮೀಲಿನೊಂದಿಗೆ ಅಕ್ರಮವಾಗಿ ಸರಕಾರ ಉರುಳಿಸಲು ಮಸಲತ್ತು ನಡೆಸುತ್ತಿದ್ದಾರೆ.ಈ ಸಂಚಿನ ಭಾಗವಾಗಿ ಮುಡಾ ಹಗರಣದಲ್ಲಿ ಸಿದ್ದರಾಮಯ್ಯನವರನ್ನು ಸಿಲುಕಿಸಿ ತಕ್ಷಣ ರಾಜೀನಾಮೆ ನೀಡಲು ಒತ್ತಾಯಿಸುತ್ತಿದ್ದಾರೆ. ಆದರೆ ಈ ಪ್ರಕರಣದಲ್ಲಿ ಹುರುಳಿಲ್ಲ ಹಾಗೂ ತನಿಖೆ ನಡೆದರೆ ಸಿದ್ದರಾಮಯ್ಯನವರು ದೋಷ ಮುಕ್ತರಾಗಿ ಹೊರಬರುತ್ತಾರೆ ಎಂಬುದು ಬಿಜೆಪಿ ನಾಯಕರು ಹಾಗೂ ಆ ಪಕ್ಷದ ಕಾನೂನು ಪಂಡಿತರಿಗೆ ಗೊತ್ತಿದೆ. ಅದಕ್ಕೆ ಸಿಬಿಐ, ಐಟಿ, ಐಡಿಗಳು ತನಿಖೆ ಆರಂಭಿಸುತ್ತಲೇ ಮುಖಮಂತ್ರಿಯವರು ರಾಜೀನಾಮೆ ಕೊಡಬೇಕೆಂದು ಒತ್ತಯಿಸುತ್ತಿದ್ದಾರೆ. ಬಿಜೆಪಿ, ಜೆಡಿಎಸ್ ನಾಯಕರು ತನಿಖೆಗಿಂತ ಸಿದ್ದರಾಮಯ್ಯನವರ ರಾಜೀನಾಮೆ ಕೊಡಿಸುವ ಬಗ್ಗೆ ಹೆಚ್ಚು ಆಸಕ್ತಿ ಹೊಂದಿದ್ದಾರೆ. ಅದಕ್ಕೆ ವಿಜಯೇಂದ್ರ ಸೇರಿದಂತೆ ಬಿಜೆಪಿ ನಾಯಕರು ಮೂರು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಮಾತನಾಡಲು ಯಾವ ವಿಷಯಗಳಿಲ್ಲದೇ ‘ಸಿದ್ದರಾಮಯ್ಯನವರು ಚುನಾವಣೆ ಫಲಿತಾಂಶ ಬಂದ ನಂತರ ರಾಜೀನಾಮೆ ಕೊಡುತ್ತಾರೆ’ ಹಾಗೂ ‘ಸಿದ್ದರಾಮಯ್ಯನವರ ರಾಜೀನಾಮೆಗೆ ಮುಹೂರ್ತ ನಿಗದಿಯಾಗಿದೆ’ಎಂದು ರೈಲು ಬಿಡುತ್ತಿದ್ದಾರೆ. ಕೋವಿಡ್ ಹಗರಣದ ವೇಳೆ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವರಾಗಿದ್ದ
ಶ್ರೀರಾಮುಲು ಮುಂತಾದವರು ಪ್ರಕರಣದಲ್ಲಿ ಸಿಲುಕಿದ್ದಾರೆ. ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ಅವರ ನೇತೃತ್ವದ ಆಯೋಗ ಖಚಿತ ಪಡಿಸಿ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆೆ.
ಮಾಜಿ ಪ್ರಧಾನಿ ದೇವೇಗೌಡರಿಗೆ ತನ್ನ ಮಗ ಮುಖ್ಯಮಂತ್ರಿಯಾಗಬೇಕು ಹಾಗೂ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮೊಮ್ಮಗ ಗೆಲ್ಲಬೇಕು ಇದಿಷ್ಟು ಬಿಟ್ಟರೆ ಬೇರೆ ಆಸೆಗಳಿಲ್ಲ.ಮನೆಯ ಆಸ್ತಿಯಂತೆ ರಾಜಕೀಯ ಅಧಿಕಾರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳಿಗೆ ವಂಶಪಾರಂಪರ್ಯವಾಗಿ ಸಿಗಬೇಕೆಂದು ದೊಡ್ಡ ಗೌಡರ ಬಯಕೆ. ಇದಕ್ಕಾಗಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಉರುಳಿಸುವರೆಗೆ ವಿರಮಿಸುವುದಿಲ್ಲ’ ಎಂದು ಹೇಳುತ್ತಾ ಪ್ರಚಾರ ಭಾಷಣ ಮಾಡುತ್ತಿದ್ದಾರೆ. ಇವರನ್ನು ಪ್ರಧಾನಿಯನ್ನಾಗಿ ಮಾಡಿದ ಕಮ್ಯುನಿಸ್ಟರು ಮತ್ತಿತರರು ‘ದೇವೇಗೌಡರು ಇಷ್ಟು ಸಣ್ಣವರೇ’ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ. ಮಾಜಿ ಪ್ರಧಾನಿ ದೇವೇಗೌಡರಿಗೆ ತನ್ನ ಮಗ ಮುಖ್ಯಮಂತ್ರಿಯಾಗಬೇಕು ಹಾಗೂ ಚನ್ನಪಟ್ಟಣ ವಿಧಾನಸಭಾ ಚುನಾವಣೆಯಲ್ಲಿ ತನ್ನ ಮೊಮ್ಮಗ ಗೆಲ್ಲಬೇಕು ಇದಿಷ್ಟು ಬಿಟ್ಟರೆ ಬೇರೆ ಆಸೆಗಳಿಲ್ಲ.ಮನೆಯ ಆಸ್ತಿಯಂತೆ ರಾಜಕೀಯ ಅಧಿಕಾರ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳಿಗೆ ವಂಶಪಾರಂಪರ್ಯವಾಗಿ ಸಿಗಬೇಕೆಂದು ದೊಡ್ಡ ಗೌಡರ ಬಯಕೆ. ಇದಕ್ಕಾಗಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಉರುಳಿಸುವರೆಗೆ ವಿರಮಿಸುವುದಿಲ್ಲ’ ಎಂದು ಹೇಳುತ್ತಾ ಪ್ರಚಾರ ಭಾಷಣ ಮಾಡುತ್ತಿದ್ದಾರೆ. ಇವರನ್ನು ಪ್ರಧಾನಿಯನ್ನಾಗಿ ಮಾಡಿದ ಕಮ್ಯುನಿಸ್ಟರು ಮತ್ತಿತರರು ‘ದೇವೇಗೌಡರು ಇಷ್ಟು ಸಣ್ಣವರೇ’ ಎಂದು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ. ಮೂರು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ.