ರಾಯಚೂರು | ಹಣ ದುರ್ಬಳಕೆ ಅರೋಪ: ಅಮೀನಗಡ ಪ್ರಭಾರ ಪಿಡಿಓ ಅಮಾನತು
ರಾಯಚೂರು: ಸಿಬ್ಬಂದಿ ವೇತನ ಮತ್ತು ರಸ್ತೆ ದುರಸ್ತಿಗೆ ಹಣ ಪಾವತಿ ಮಾಡುವುದಾಗಿ ಹೇಳಿ ಡಿಜಿಟಲ್ ಸಹಿ ಪಡೆದು ಹಣ ದುರ್ಬಳಕೆ ಮತ್ತು ಅಧಿಕಾರ ದುರುಪಯೋಗ ಮಾಡಿಕೊಂಡಿರುವ ಆರೋಪದ ಹಿನ್ನೆಲೆಯಲ್ಲಿ ಅಮೀನಗಡ ಗ್ರಾಪಂ ಪ್ರಭಾರ ಪಿಡಿಒ ಅವರನ್ನು ಅಮಾನತು ಮಾಡಿ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಪಾಂಡ್ವೆ ಆದೇಶ ಹೊರಡಿಸಿದ್ದಾರೆ.
ಮಾನ್ವಿ ತಾಲೂಕಿನ ಅಮೀನಗಡ ಗ್ರಾಮ ಪಂಚಾಯತ್ ಪ್ರಭಾರ ಪಿಡಿಒ ರಾಮಪ್ಪ ನಡಗೇರಿ ಅಮಾನತುಗೊಂಡಿದ್ದಾರೆ. ಸಿಬ್ಬಂದಿ ವೇತನ ಮತ್ತು ರಸ್ತೆ ದುರಸ್ತಿಗೆ ಹಣ ಪಾವತಿ ಮಾಡುವುದಾಗಿ ಹೇಳಿ ತನ್ನ ಡಿಜಿಟಲ್ ಸಹಿ ಪಡೆದು 5 ಲಕ್ಷ ರೂ. ಹಣ ಡ್ರಾ ಮಾಡಿಕೊಂಡು ದುರ್ಬಳಕೆ ಮಾಡಿದ್ದಾರೆ ಎಂದು ಗ್ರಾಪಂ ಅಧ್ಯಕ್ಷೆ ಬಸಲಿಂಗಮ್ಮ ದೂರು ನೀಡಿದ್ದರು.
ಪಿಡಿಒ ರಾಮಪ್ಪ ಈ ಹಿಂದೆ ಹಾಲಾಪುರ ಗ್ರಾಮ ಪಂಚಾಯತ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆಯೂ ಅವರ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದಿದ್ದವು. ಆ ದೂರುಗಳಿಗೂ ಸಮಪರ್ಕ ಉತ್ತರ ನೀಡದ ಕಾರಣ ಅಮಾನತು ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಒ ಆದೇಶದಲ್ಲಿ ತಿಳಿಸಿದ್ದಾರೆ.
Next Story