ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಜಾತಿ ವಿನಾಶ ಅಗತ್ಯ :ಆರ್.ಮಾನಸಯ್ಯ
ರಾಯಚೂರು: ಸಮಾಜದಲ್ಲಿ ತಾರತಮ್ಯ ಹೋಗಲಾಡಿಸಲು ಜಾತಿ ವಿನಾಶ ಅಗತ್ಯವಾಗಿದೆ ಎಂದು ರಾಯಚೂರಿನ ಹೋರಾಟಗಾರ ಹಾಗೂ ಸಿಪಿಐ(ಎಂಎಲ್) ರೆಡ್‌ಸ್ಟಾರ್ ಪಾಲಿಟ್ ಬ್ಯೂರೋ ಸದಸ್ಯ ಆರ್ ಮಾನಸಯ್ಯ ತಿಳಿಸಿದರು.
ತಮಿಳುನಾಡಿನ ಅಖಿಲ ಭಾರತ ಜಾತಿ ವಿನಾಶ ಚಳವಳಿ (ಸಿಎಎಂ) ಚೆನ್ನೈ ಸಮಿತಿಯಿಂದ ಚೆನ್ನೈನ ವಡಪಳನಿಯಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಕಮ್ಯುನಿಸ್ಟ್ ಧೋರಣೆಯನ್ನು ಡಾ ಬಿ ಆರ್ ಅಂಬೇಡ್ಕರ್ ಮತ್ತು ಐತಿಹಾಸಿಕ ಘಟನೆಗಳೊಂದಿಗೆ ಜಾತಿ ವಿನಾಶವನ್ನು ಸ್ಪಷ್ಟವಾಗಿ ಮಂಡಿಸಿದರು.
ಕರ್ನಾಟಕದ ಸಿಪಿಐಎಂಎಲ್ ರೆಡ್ ಸ್ಟಾರ್ ಪಕ್ಷದ ಮುಖಂಡರು ನಡೆಸಿದ ಭೂ ಹೋರಾಟ, ದಲಿತ ಚಳವಳಿಗಳು ಮತ್ತು ಜಾತಿ ಪ್ರಶ್ನೆಗೆ ಸಂಬಂಧಿಸಿದ ಇತರ ಕ್ಷೇತ್ರದ ಅನುಭವಗಳನ್ನು ತಿಳಿಸಿದರು. ನಂತರ ಪ್ರೇಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದರು.
ಸಂಕಿರಣದ ಅಧ್ಯಕ್ಷ ಕಾಂ. ನಟರಾಜನ್ (ಸಿಎಎಂ) ಸದಸ್ಯ ಮೋದಿ ಸರ್ಕಾರದ ಜಾತಿ ಧ್ರುವೀಕರಣ ಚಟುವಟಿಕೆಗಳನ್ನು ಮತ್ತು ಪ್ರಸ್ತುತ ರಾಜಕೀಯ ಚಿಂತನೆಗಳೊಂದಿಗೆ ಜಾತಿ ವಿನಾಶದ ಆಂದೋಲನದ ಅಗತ್ಯವಾಗಿದೆ ಎಂದು ತಿಳಿಸಿದರು.
ಸಿಪಿಐಎಂಎಲ್ ರೆಡ್ ಸ್ಟಾರ್ ರಾಜ್ಯ ಕಾರ್ಯದರ್ಶಿ ಮನೋಹರನ್, "ಜಾತಿ ಗಣತಿ ಏಕೆ ಅಗತ್ಯ?" ಕುರಿತು ತಮ್ಮ ವಿಚಾರ ಮಂಡಿಸಿದರು ಮತ್ತು ಜಾತಿ ಗಣತಿ ನಡೆಸಲು ಪ್ರಸ್ತುತ ಪರಿಸ್ಥಿತಿಯನ್ನು ಸಮರ್ಥಿಸಿದರು.
ತಮಿಳ್ ಮುರಸು ಚೆನ್ನೈ ಜಿಲ್ಲಾ ಕಾರ್ಯದರ್ಶಿ ಸ್ವಾಗತಿಸಿದರು. ಎ.ಬಾಲಸುಬ್ರಮಣಿಯನ್ (ಆರ್‌ಸಿಎಫ್) ಮತ್ತು ಕಾಂ ಭವಾನಿ ಕ್ರಾಂತಿಗೀತೆಗಳನ್ನು ಹಾಡಿದರು.
ಸಿಪಿಐ(ಎಂಎಲ್) ರೆಡ್‌ಸ್ಟಾರ್ ಚೆನ್ನೈ ಜಿಲ್ಲಾ ಕಾರ್ಯದರ್ಶಿ ಕರ್ಕಿ ವೇಲನ್ ಮಾತನಾಡಿ,ತಮಿಳುನಾಡಿನ ತೇನಿ ಜಿಲ್ಲೆಯ ಪಂಚಮಿ ಭೂ ಸುಧಾರಣೆ ಆಂದೋಲನದ ಬಗ್ಗೆ ತಮ್ಮ ಸ್ವಂತ ಅನುಭವ ಮತ್ತು ಪಕ್ಷದ ನಿಲುವನ್ನು ಹಂಚಿಕೊಂಡರು.
ಸಿಎಎಂ ತಮಿಳುನಾಡಿನ ರಾಜ್ಯ ಅಧ್ಯಕ್ಷ ಇನಿಯವನ್, ವರ್ಗ ಮತ್ತು ಜಾತಿಯ ಕುರಿತು ಸಂಕ್ಷಿಪ್ತ ಟಿಪ್ಪಣಿಯನ್ನು ನೀಡಿದರು.
ವಿಚಾರ ಸಂಕಿರಣದಲ್ಲಿ ತಮಿಳುನಾಡು ರಾಜ್ಯದ ವಿವಿಧ ಸ್ಥಳಗಳಿಂದ ಎಂಎಲ್ ಮತ್ತು ಸಿಆರ್ ಗುಂಪುಗಳ ಬುದ್ಧಿಜೀವಿಗಳು ಭಾಗವಹಿಸಿದ್ದರು.