ರಾಯಚೂರು: ಅಕ್ರಮ ಸೇಂದಿ ಮಾರಾಟ; ಇಬ್ಬರು ಆರೋಪಿಗಳ ಬಂಧನ
ರಾಯಚೂರು: ನಗರದ ಅಶೋಕ ನಗರದಲ್ಲಿ ಅಕ್ರಮ ಸೇಂದಿ ಮಾರಾಟ ಮಾಡುತ್ತಿದ್ದ ಮನೆ ಮೇಲೆ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳಾದ ರೇಣಮ್ಮ ಮತ್ತು ಈರಮ್ಮ ಎಂಬವರಿಂದ 284 ಕೆ.ಜಿ ಅಲ್ಫಾಜೋಲಮ್, 510 ಗ್ರಾಂ ಸಿ.ಹೆಚ್ ಪೌಡರ್, 96 ಗ್ರಾಮ್ ವೈಟ್ ಪೇಸ್ಟ್ ಮತ್ತು 454 ಗ್ರಾಂ ಸಿಟ್ರಕ್ ಆಸಿಡನ್ನು ವಶಪಡಿಸಿಕೊಳ್ಳಲಾಗಿದೆ.
ರಾಯಚೂರು ಅಬಕಾರಿ ಉಪ ಆಯುಕ್ತರು, ಉಪ ವಿಭಾಗ ಮತ್ತು ರಾಯಚೂರು ಡಿ.ಸಿ ಕಛೇರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
Next Story