ಕಲ್ಮಾಲದಿಂದ ತಿಂಥಣೆ ಬ್ರಿಜ್ಜ್ ವರಗೆ ರಾಜ್ಯ ಹೆದ್ದಾರಿಯ ಟೋಲ್ ಗೇಟ್ ಅಳವಡಿಕೆ ಸರಿಯಾದ ಕ್ರಮವಲ್ಲ : ಸಂಸದ ಜಿ ಕುಮಾರ ನಾಯಕ

ರಾಯಚೂರು: ರಾಯಚೂರು-ದೇವದುರ್ಗ ಮುಖ್ಯ ರಸ್ತೆಯಲ್ಲಿ ಕರ್ನಾಟಕ ರಾಜ ರೈತ ಸಂಘ ಜಿಲ್ಲಾ ಘಟಕದ ವತಿಯಿಂದ ರಸ್ತೆ ತಡೆದು ಪ್ರತಿಭಟನೆ ಮಾಡುತ್ತಿರುವ ಸ್ಥಳಕ್ಕೆ ಸಂಸದ ಜಿ ಕುಮಾರ ನಾಯಕರವರು ಭೇಟಿ ನೀಡಿ ರೈತರ ಮನವಿಯನ್ನು ಸ್ವೀಕರಿಸಿದರು.
ಬಳಿಕ ಅವರು ಮಾತನಾಡಿ, ಹೆದ್ದಾರಿಯಲ್ಲಿ ಟೋಲ್ ಗೇಟ್ ಅಳವಡಿಸುವುದು ಸರಿಯಾದ ಕ್ರಮವಲ್ಲ, ಔದ್ಯೋಗಿಕ ನಗರಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಅಲ್ಲ ಮೇಲಾಗಿ ಈ ರಸ್ತೆಯಲ್ಲಿ ಜನಸಾಮಾನ್ಯರು, ರೈತರು, ವ್ಯಾಪಾರಿಗಳು ದಿನನಿತ್ಯ ಓಡಾಡುವ ರಸ್ತೆ ಈ ರಸ್ತೆಯಲ್ಲಿ ಟೋಲ್ ಗೇಟ್ ನಿರ್ಮಾಣ ಅತ್ಯಂತ ಅವೈಜ್ಞಾನಿಕ ಕ್ರಮ ಎಂದು ಎಂದು ಹೇಳಿದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಈ ಟೋಲ್ ಗೇಟ್ ತೆರವುಗೊಳಿಸುವ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘಟನೆಯ ಅಧ್ಯಕ್ಷರು ಪದಾಧಿಕಾರಿಗಳು, ರೈತರು ಜನಸಾಮಾನ್ಯರು ಅನೇಕ ಸಂಘಟನೆ ಮುಖಂಡರು ಸೇರಿದಂತೆ ಅನೇಕರು ಹಾಜರಿದ್ದರು...
Next Story