ಡಿ.27ರಂದು ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ರಾಯಚೂರಿನಲ್ಲಿ ಬೃಹತ್ ಪ್ರತಿಭಟನೆ : ಎಸ್.ಮಾರೆಪ್ಪ
ರಾಯಚೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿರುದ್ಧ ಅವಮಾನಕರ ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜೀನಾಮೆ ಆಗ್ರಹಿಸಿ ಡಿ.27 ರಂದು ದಲಿತರಪರ ಮತ್ತು ಅಲ್ಪಸಂಖ್ಯಾತರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ದಲಿತಪರ ಹೋರಾಟಗಾರ ಎಸ್.ಮಾರೆಪ್ಪ ವಕೀಲರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್ ಎಸ್ ಎಸ್ ಮತ್ತು ಮನುವಾದಿಗಳ ಮನಸ್ಥಿತಿ ಹೊಂದಿರುವ ಬಿಜೆಪಿ ಅವರಿಗೆ ಅಂಬೇಡ್ಕರ್ ಮತ್ತು ಸಂವಿಧಾನ ಮೇಲೆ ಕಿಂಚತ್ತೂ ಗೌರವ ಇಲ್ಲ. ಇಂತಹವರು ಸಂವಿಧಾನ ಮೇಲೆ ಪ್ರಮಾಣವಚನ ಮಾಡಬಾರದಿತ್ತು. ತಮ್ಮದೇ ಆದ ಮನಸ್ಮೃತಿ ಸಂವಿಧಾನ ರಚನೆ ಮಾಡಬೇಕು. 2025 ರೊಳಗೆ ಭಾರತ ದೇಶವನ್ನು ಹಿಂದೂ ರಾಷ್ಟ್ರ ಘೋಷಣೆ ಮಾಡುವ ಉದ್ದೇಶದಿಂದ ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ಚಟುವಟಿಕೆಯಾಗಿ ಬಿಜೆಪಿ ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರಸ್ತುತ ಕಾಲಘಟ್ಟದಲ್ಲಿ ರಾಜಕೀಯದಲ್ಲಿ ಅನೇಕ ಬದಲಾವಣೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್ ಮತ್ತು ಸಂವಿಧಾನ ವಿಚಾರಧಾರೆ ಅಗತ್ಯವಿದೆ ಎಂದರು.
ಅಂಬೇಡ್ಕರ್ ವಿರೋಧಿ ಚಟುವಟಿಕೆ ಅನುಸರಿಸುವ ಯಾವುದೇ ಪಕ್ಷ ಇರಲಿ ಅವರಿಗೆ ತಕ್ಕ ಪಾಠ ಕಳುಹಿಸಲು ಉತ್ತರ ಭಾರತ ಜನರು ಇಂದಿಗೂ ಮುಂಚೂಣಿತ್ವ ವಹಿಸಿಕೊಂಡಿದ್ದಾರೆ ಎಂದು ಎಚ್ಚರಿಕೆ ನೀಡಿದರು. ಅಂಬೇಡ್ಕರ್ ಅವಮಾನಕಾರ ಹೇಳಿಕೆ ನೀಡಿದ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಳುಹಿಸುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡ ರವೀಂದ್ರನಾಥ ಪಟ್ಟಿ, ಎಂ ಆರ್ ಭೇರಿ, ಜಾನ್ ವೆಸ್ಲಿ, ಹೇಮರಾಜ್ ಆಸ್ಕಿಹಾಳ್, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.